ಪ್ರತಿಯೊಬ್ಬರೂ ಕೂಡ ಹೊಸ ಆಸ್ತಿಯನ್ನು ( Property) ಖರೀದಿಸುವ ಮುನ್ನ ಯಾವುದೆಲ್ಲ ರೀತಿಯ ನಿಯಮಗಳನ್ನು ಅನುಸರಿಸಿ ಆಸ್ತಿಯನ್ನು ಖರೀದಿ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅಂದರೆ ಕೆಲವೊಂದು ದಾಖಲಾತಿಗಳನ್ನು ಪರಿ ಶೀಲಿಸಿಕೊಂಡು ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ ಏಕೆಂದರೆ ಮುಂದಿನ ದಿನದಲ್ಲಿ ಅದರಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರೆ ಅದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಭೂಮಿ ಹಾಗೂ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಾ ಹೋದಂತೆಯೇ ಮೋಸ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ. ಆದ್ದರಿಂದ ನಾವು ಈ ವಿಷಯವಾಗಿ ಮೋಸ ಹೋಗಬಾರದು ಎಂದರೆ ಇಂತಹ ನಿಯಮಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಒಂದು ಆಸ್ತಿಯನ್ನು ನೀವು ಖರೀದಿ ಮಾಡಬೇಕು ಎಂದರೆ ಅದನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು.
ಆ ವಿಚಾರವಾಗಿ ಸಂಬಂಧಿಸಿದ ಹಾಗೂ ಆ ವಿಷಯ ಗೊತ್ತಿರುವಂತಹ ವ್ಯಕ್ತಿಗಳಲ್ಲಿ ಈ ವಿಷಯಗಳನ್ನು ಹೇಳಿ ಅವರಿಂದ ಉತ್ತರವನ್ನು ಪಡೆದುಕೊಂಡು ನಂತರ ನೀವು ಯಾವುದೇ ಬೆಲೆ ಬಾಳುವಂತಹ ಆಸ್ತಿ ಯಾಗಿರಬಹುದು ಅಥವಾ ಬೆಲೆ ಬಾಳುವಂತಹ ಯಾವುದೇ ಪದಾರ್ಥವಾಗಿರಬಹುದು ಅವುಗಳನ್ನು ಖರೀದಿ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮೋಸ ಮಾಡುವವರು ಕೂಡ ಹೆಚ್ಚಾಗುತ್ತಾರೆ ಇದರಿಂದ ಮೋಸಗೊಳ್ಳುವವರು ಕೂಡ ಹೆಚ್ಚಾಗುತ್ತಿದ್ದಾರೆ.
ಆಸ್ತಿಯನ್ನು ಖರೀದಿ ಮಾಡುವುದು ಬಟ್ಟೆ ಚಪ್ಪಲಿಯನ್ನು ಖರೀದಿ ಮಾಡುವಷ್ಟು ಸುಲಭದ ಮಾತಲ್ಲ, ಅದಕ್ಕಾಗಿ ಕೆಲವೊಂದು ದಾಖಲಾತಿಗಳು ಕೆಲವೊಂದು ನಿಯಮಗಳು ಇರುತ್ತದೆ ಅವುಗಳನ್ನು ಪಾಲಿಸಿ ನಂತರ ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ. ಹಾಗಾದರೆ ಈ ದಿನ ನೀವು ಹೊಸ ಆಸ್ತಿಯನ್ನು ಖರೀದಿ ಮಾಡುತ್ತಿದ್ದರೆ ಯಾವುದೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ಆಸ್ತಿಯನ್ನು ತೆಗೆದುಕೊಳ್ಳಬೇಕು ಈ ವಿಷಯವಾಗಿ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಸಾಲದ ಪತ್ರ, ಮೊದಲನೆಯದಾಗಿ ನೀವು ಆಸ್ತಿ ಖರೀದಿಸುವ ಮುನ್ನ ಸಾಲದ ಪತ್ರವನ್ನು ಪರಿಶೀಲಿಸಬೇಕು, ಹಾಗೂ ಖರೀದಿಸುತ್ತಿರುವ ಆಸ್ತಿಯ ಮೇಲೆ ಯಾವ ರೀತಿಯ ಸಾಲವಿದೆ, ಅಥವಾ ಸಾಲ ಇದೆಯಾ ಅಥವಾ ಸಾಲ ಇಲ್ಲವ ಎಂಬುದನ್ನು ನೀವು ಪರಿಶೀಲಿಸಬೇಕು ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲವಿದ್ದರೆ ಮುಂದೆ ಅದು ನಿಮಗೆ ಹೆಚ್ಚು ಸಮಸ್ಯೆ ಆಗಬಹುದು. ಹಾಗಾಗಿ ಸಾಲದೊಂದಿಗೆ ಆಸ್ತಿಯನ್ನು ಖರೀದಿ ಮಾಡುತ್ತೀರಿ ಎಂದಾದರೆ ಆ ಸಾಲ ಪತ್ರವನ್ನು ನೀವು ಜೋಪಾನವಾಗಿ ಇಟ್ಟುಕೊಳ್ಳುವುದು ಉತ್ತಮ.
ಲೇಔಟ್ ಪೇಪರ್ ಮತ್ತು ರಿಜಿಸ್ಟರ್ ಪೇಪರ್ ಪರಿಶೀಲನೆ, ಆಸ್ತಿಯ ಲೇಔಟ್ ಪೇಪರ್ ಅನ್ನು ಪರಿಶೀಲಿಸಬೇಕು ಇಲ್ಲವಾದರೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆದಿಲ್ಲ ಎಂದೇ ಅರ್ಥ ವಾಗುತ್ತದೆ. ಹಾಗಾಗಿ ಲೇಔಟ್ ಪೇಪರ್ ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಜೊತೆಗೆ ನೋಂದಾವಣೆ ಕಾಗದವನ್ನು ಕೂಡ ಸರಿಯಾಗಿ ಪರಿಶೀಲಿಸಬೇಕು, ಆಸ್ತಿ ಕಾನೂನು ಬದ್ಧವಾಗಿದೆಯೇ ಎಂಬುದನ್ನು ಇಲ್ಲಿ ತಿಳಿಯಬಹುದು.
ನಿಮಗೆ ಕಾಗದ ಪತ್ರದ ಸರಿಯಾದ ಜ್ಞಾನ ಇಲ್ಲದೆ ಹೋದರೆ ನೀವು ಜಿಲ್ಲೆಯ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು. ಕನ್ಸ್ಟ್ರಕ್ಷನ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಆಸ್ತಿಯ ಮೇಲೆ ಯಾವುದಾದರು ಆಕ್ಷೇಪಣೆ ಇದೆಯಾ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ, ಹಾಗು ಆಸ್ತಿಯನ್ನು ಖರೀದಿಸುವಾಗ ಕನ್ಸ್ಟ್ರಕ್ಷನ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ಸರಿಯಾಗಿ ಗಮನಿಸಲಿ ಇದ್ದರೆ ಮುಂದೆ ಅದಕ್ಕಾಗಿ ಹೆಚ್ಚು ದಂಡ ತರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.