ರೈತರಿಗೆ ಕೃಷಿ ಚಟುವಟಿಕೆಗೆ ನೀರು ಬಹಳ ಮುಖ್ಯ. ಆದರೆ ಮಳೆ ಆಶ್ರಿತ ಕೃಷಿಯಿಂದ ಹೆಚ್ಚೇನೂ ಲಾಭ ಸಿಗದ ಕಾರಣ ರೈತರು ಕೊಳವೆಬಾವಿಗಳನ್ನು ಕೊರೆಸಿ, ತೋಟಗಾರಿಕೆ ಕೃಷಿ ಅಳವಡಿಸಿಕೊಳ್ಳಲು ಬಯಸುತ್ತಾರೆ. ಇಂತಹ ಕೊಳವೆ ಬಾವಿ ಕೊರೆಸುವ ರೈತರಿಗೆಲ್ಲಾ ಬಹಳ ಇಂಪಾರ್ಟೆಂಟ್ ಆದ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಬಯಸುತ್ತಿದ್ದೇವೆ.
ಬೋರ್ವೆಲ್ ಕೊರೆಸುವುದು ಮಾತ್ರವಲ್ಲದೆ ಅದಕ್ಕೆ ಹಾಕುವ ಕೇಸಿಂಗ್ ಪೈಪ್ ಆಯ್ಕೆ ಮಾಡಿಕೊಳ್ಳುವ ಮತ್ತು ಅದನ್ನು ಇನ್ಸ್ಟಾಲೇಷನ್ ಮಾಡುವ ಸಮಯದಲ್ಲೂ ಕೂಡ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಬೋರ್ ವೆಲ್ ಕೊಲಾಪ್ಸ್ ಆಗುತ್ತದೆ. ಹಾಗಾಗಿ ಕೇಸಿಂಗ್ ಪೈಪ್ ಬಗ್ಗೆ ನಿಗಾ ವಹಿಸಬೇಕಾದ ವಿಷಯಗಳ ಪಟ್ಟಿ ಹೀಗಿದೆ.
ಈ ಸುದ್ದಿ ಓದಿ:- ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದವರಿಗೆ ಗುಡ್ ನ್ಯೂಸ್
* ಬೋರ್ವೆಲ್ ಕೊರೆಸುವ ಸಮಯದಲ್ಲಿ ಕೇಸಿಂಗ್ ಪೈಪ್ ಅನ್ನು ಹಾಕುತ್ತಾರೆ ಆದರೆ ಕೆಲವೊಮ್ಮೆ ಹಾಕುವುದು ಕಟ್ ಆಗಿ ಹೋಗಿರುತ್ತದೆ ಇದರಿಂದ ಸಮಸ್ಯೆ ರೈತನಿಗೆ ಹಾಗಾಗಿ ಬ್ರಾಂಡೆಡ್ ಕೇಸಿಂಗ್ ಪೈಪ್ ನ್ನೇ ಆರಿಸಿ.
* ಔಟರ್ ಕೇಸಿಂಗ್ ಎಂಬುದನ್ನು ಕೂಡ ಹಾಕಿದರೆ ಉತ್ತಮ, ಕೇಸಿಂಗ್ ಪೈಪ್ 7-8 ಇಂಚು ಇದ್ದರೆ ಔಟರ್ ಕೇಸಿಂಗ್ 10 ಇಂಚು ಇರುತ್ತದೆ ಹೆಚ್ಚು ಗ್ರಿಪ್ ಇರುತ್ತದೆ.
* ಕೇಸಿಂಗ್ ಪೈಪ್ ಹಾಕುವಾಗ ಸಾಮಾನ್ಯವಾಗಿ 6-10 KG ಪ್ರೆಶರ್ ಇರುತ್ತದೆ, ಹಾಗಾಗಿ PVC ಕೇಸಿಂಗ್ ಪೈಪ್ ಹಾಕುವಾಗ ಬಹಳ ಎಚ್ಚರಿಕೆಯಿಂದ ಹಾಕಬೇಕ, ಹೊಡೆದು ಹೋಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ PVC ಕೇಸಿಂಗ್ ಪೈಪ್ ಹಾಕುತ್ತಾರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ GI ಕೇಸಿಂಗ್ ಪೈಪ್ ಹಾಕಲಾಗುತ್ತದೆ, ಬೆಂಗಳೂರು, ಕೋಲಾರ ಭಾಗಗಳಲ್ಲಿ MS ಕೇಸಿಂಗ್ ಪೈಪ್ ಹಾಕುತ್ತಾರೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
* ಕೇಸಿಂಗ್ ಪೈಪ್ ಹಾಕುವುದು ಇಷ್ಟು ಇಂಪಾರ್ಟೆಂಟ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಫೇಲ್ಯೂರ್ ಆಗಿ ಹೋದರೆ ಬೋರ್ವೆಲ್ ನಲ್ಲಿ ನೀರು ಇದ್ದರೂ ಪ್ರಯೋಜನವಿಲ್ಲ.
* ಕೇಸಿಂಗ್ ಪೈಪ್ ಇನ್ಸ್ಟಾಲೇಷನ್ ನಲ್ಲಿ ಫೇಲ್ಯೂರ್ ಆದರೆ ಬೋರ್ವೆಲ್ ಕೊಲಾಪ್ಸ್ ಆಗುತ್ತದೆ. ಜೊತೆಗೆ ಬೋರ್ವೆಲ್ ರಾಡ್ ಗಳು ಜಾಮ್ ಆಗುತ್ತದೆ. ಕೇಸಿಂಗ್ ಪೈಪ್ ಕಟ್ ಆದರಂತೂ ಪಂಪ್ ಗೂ ಸಮಸ್ಯೆಯಾಗಿ ಮಡ್ಡಿ ವಾಟರ್ ಬರುತ್ತದೆ. ಬೋರ್ವೆಲ್ ನಲ್ಲಿ ವಾಟರ್ ಕ್ಲಿಯರ್ ಆಗಿ ಬರಬೇಕು, ಬಿಳಿ ಬಣ್ಣದ ನೀರು ಬಂದರೆ ಕೇಸಿಂಗ್ ಪೈಪ್ ಇನ್ಸ್ಟಾಲೇಷನ್ ಸರಿಯಾಗಿ ಮಾಡಿದ್ದಾರೆ ಎಂದರ್ಥ.
* ಕೆಲವೊಂದು ಭಾಗದಲ್ಲಿ 100-200 ಅಡಿ ಕೇಸಿಂಗ್ ಪೈಪ್ ಹೋಗುವ ಸಮಯದಲ್ಲಿ ಇನ್ನರ್ ಕೇಸಿಂಗ್ ಪೈಪ್ ಹಾಗೂ ಔಟರ್ ಕೇಸಿಂಗ್ ಪೈಪ್ ಹಾಕಿದರೂ ಮಡ್ಡಿ ವಾಟರ್ ಬರುತ್ತದೆ. ಆಗ ಫಿಲ್ಟರ್ ಕೇಸಿಂಗ್ ಪೈಪ್ ಹಾಕಬೇಕಾಗುತ್ತದೆ. ಬೋರ್ ಕೊರೆಯುವ ಸಮಯದಲ್ಲಿ ಈ ಫಿಲ್ಟರ್ ಕೇಸಿಂಗ್ ಪೈಪ್ ಗಳನ್ನು ತಂದುಕೊಟ್ಟರೆ ಮಾತ್ರ ಫಿಕ್ಸ್ ಮಾಡಲು ಸಾಧ್ಯ.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
* ಬೋರ್ವೆಲ್ ಲಾರಿಗಳವರೇ ಕೇಸಿಂಗ್ ಪೈಪ್ ಇಟ್ಟುಕೊಂಡಿರುತ್ತಾರೆ. ಆದರೆ ಇದು ಬ್ರಾಂಡೆಡ್ ಆಗಿರುವುದಿಲ್ಲ, 2.5 ಕೆಜಿ ಫ್ರೆಶರ್ ಇರುವ ಕೇಸಿಂಗ್ ಪೈಪ್ ಗಳನ್ನು ಇಟ್ಟುಕೊಳ್ಳುತ್ತಾರೆ. ಸರಿಯಾಗಿ ಫಿಕ್ಸ್ ಆಗದೆ ಲೂಸ್ ಬಂದರೆ ಬ್ರಾಂಡೆಡ್ ಕೇಸಿಂಗ್ ಪೈಪ್ ಗಳನ್ನು ಹಾಕಬೇಕಾಗುತ್ತದೆ.
* ನಾರ್ಮಲ್ ಕೇಸಿಂಗ್ ಪೈಪ್ ಹಾಕಿದರೆ ನೀರಿನ ಫೋರ್ಸ್ ಗೆ ಒಡೆದು ಹೋಗುತ್ತದೆ. ಬೋರ್ವೆಲ್ ಹಾಕುವ ಮೊದಲು ಬೋರ್ವೆಲ್ ಹಾಕುವ ಭೂಮಿಯ ಒಳಭಾಗ ಗಟ್ಟಿ ಶಿಲಾವಲಯವೊ ಮೃದು ಶಿಲಾವಲಯವೋ ತಿಳಿದುಕೊಂಡು ನಂತರ ಕೇಸಿಂಗ್ ಪೈಪ್ ನ್ನು ಅಚ್ಚುಕಟ್ಟಾಗಿ ಇನ್ಸ್ಟಾಲೇಷನ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!