ರೈತನಿಗೆ ಒಂದು ನಿಶ್ಚಿತ ಆದಾಯ ಎನ್ನುವುದೇ ಇರುವುದಿಲ್ಲ. ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿ ಲಾಭ ಬಂದರೆ ಮಾತ್ರ ಆತ ಬಂಡವಾಳವಾಗಿ ಬೆಳೆ ಹಾಕಲು ತೆಗೆದುಕೊಂಡಿದ್ದ ಸಾಲ ತೀರಿಸಿ ಉಳಿದ ಹಣವನ್ನು ಆತನ ಕುಟುಂಬ ನಿರ್ವಹಣೆಗಾಗಿ ಮಕ್ಕಳ ಮದುವೆಗೋ, ಓದಿನ ಖರ್ಚಿಗೋ ಅಥವಾ ಹಿರಿಯರ ಆರೋಗ್ಯದ ಖರ್ಚಿಗೋ ಅಥವಾ ದಿನನಿತ್ಯದ ಜೀವನ ಸಾಗಿಸುವುದಕ್ಕೋ ಮಾಡಿದ್ದ ಸಾಲ ತೀರಿಸಲು ವಿನಿಯೋಗ ಮಾಡಿ ಮತ್ತೆ ಕೃಷಿ ಮಾಡಲು ಬೇಕಾದ ಹಣಕ್ಕೆ ಸಾಲ ಮಾಡುತ್ತಾನೆ.
ಇದು ಇಂದು ನೆನೆಯದಲ್ಲ ಹಲವಾರು ವರ್ಷಗಳಿಂದ ಕಾಲ ಎಷ್ಟೇ ಬದಲಾಗಿದ್ದರು ದೇಶದ ಬಹುಪಾಲು ರೈತರ ಪರಿಸ್ಥಿತಿ ಮಾತ್ರ ಇದೇ ರೀತಿ ಇದೆ. ಇದನ್ನು ತಪ್ಪಿಸಲು ಸರ್ಕಾರ ಹಾಗೂ ಸರ್ಕಾರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುತ್ತಿವೆ.
ಈ ಸುದ್ದಿ ಓದಿ:-LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ಸರ್ಕಾರ ಸವಲತ್ತು ಕೊಟ್ಟರು ಕೂಡ ಎಷ್ಟೋ ರೈತರಿಗೆ ಅದನ್ನು ಪಡೆದುಕೊಳ್ಳಲು ತಾವು ನಿಜವಾದ ರೈತ ಎನ್ನುವುದನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಅಥವಾ ಬ್ಯಾಂಕ್ ಗಳಿಗೆ ಸಲ್ಲಿಸಲು ಸಾಲ ನೀಡುವುದಕ್ಕೆ ಕೇಳಲಾಗುವ ಪೂರಕವಾದ ದಾಖಲೆಗಳು ಇರುವುದಿಲ್ಲ.
ಹೀಗಾಗಿ ತನ್ನ ಹಣಕಾಸು ಅನುಕೂಲತೆಗೆ ಲೇವದೇವಿ ಮಾಡುವವರ ಬಳಿ ಕೈ ಚಾಚಾಲೇ ಬೇಕಾಗುತ್ತದೆ. ಹೀಗೆ ಹೆಚ್ಚಿನ ಬಡ್ಡಿ ಪೀಕುವವರ ಬಳಿ ಸಾಲದ ಸುಳಿಗೆ ಸಿಲುಕಿ ರೈತನ ಬದುಕು ಹೈರಾಣವಾಗುತ್ತಿದೆ. ಹಾಗಾಗಿ ರೈತನ ಇದಕ್ಕಿಂತ ಕೃಷಿ ಸಾಲ ಪಡೆಯುವುದೇ ಎಷ್ಟೋ ಉತ್ತಮ. ಈ ರೀತಿ ರೈತ ಏನಾದರೂ ತನ್ನ ಕೃಷಿ ಉದ್ದೇಶಕ್ಕಾಗಿ ಸಂಘಗಳಲ್ಲಿ ಅಥವಾ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರೆ ಅಂತಹ ರೈತರಿಗೆ ಈಗ ಸಿಹಿ ಸುದ್ದಿ ಇದೆ.
ಈ ಸುದ್ದಿ ಓದಿ:-ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
ಅದೇನೆಂದರೆ ಲೋಕಸಭಾ ಚುನಾವಣೆ ಕಾರ್ಯ ಭಾರಿ ಬರದಿಂದ ಸಾಗುತ್ತಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುತ್ತಿದ್ದು ಆಗಸ್ಟ್ 26ರಂದು ಮತ್ತು ಮೇ 7ರಂದು ಚುನಾವಣೆ ನಡೆಯುತ್ತಿದೆ. ಇದರ ನಡುವೆ ಎಲ್ಲಾ ಪಕ್ಷಗಳಿಂದಲೂ ಪ್ರಚಾರ ಜೋರಾಗಿದ್ದು, ದೆಹಲಿ ಗದ್ದಿಗೆ ಸಮರಕ್ಕೆ ಪ್ರಣಾಳಿಕೆಯಲ್ಲಿ ಯೋಜನೆಗಳ ಅಸ್ತ್ರಗಳು ಪ್ರಯೋಗವಾಗುತ್ತಿದೆ.
ಕರ್ನಾಟಕದ ಮಟ್ಟಿಗೆ ಈ ತಯಾರಿ ಬಗ್ಗೆ ಹೇಳುವುದಾದರೆ ಕಳೆದ ವರ್ಷ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದ್ದ ಐದು ಗ್ಯಾರಂಟಿ ಯೋಜನೆಗಳ ಭರವಸೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಿತ್ತು ಇದನ್ನೇ ಲೋಕಸಭೆಯಲ್ಲಿ ಅನ್ವಯಿಸುವುದಕ್ಕೆ ನಿರ್ಧಾರ ಮಾಡಿ ದೇಶದ ಎಲ್ಲಾ ಮಹಿಳೆಯರಿಗಾಗಿ ವಿಶೇಷವಾದ ಐದು ಮಹಿಳಾ ನ್ಯಾಯ ಖಾತರಿ ಯೋಜನೆಯನ್ನು ಘೋಷಿಸಿದ್ದಾರೆ.
ಈ ಸುದ್ದಿ ಓದಿ:-ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ
ಇದರ ನಡುವೆ ತಮ್ಮ ಪಕ್ಷ ಗೆದ್ದರೆ ರೈತರ ಕಷ್ಟ ಪಡಿಸುವವರಿಸುವುದಾಗಿ ಹೇಳಿಕೊಂಡು ಸಿದ್ದರಾಮಯ್ಯನವರು ಸಹ ಕಾಂಗ್ರೆಸ್ ಪಕ್ಷದ ಪರವಾಗಿ ಏಪ್ರಿಲ್ 28ರಂದು ಭರ್ಜರಿ ಪ್ರಚಾರ ನಡೆಸಿದ್ದಾರೆ. ನಗರದ ಶ್ರೀರಾಮ ಮಾರ್ಕೆಟ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯನವರು ಮಾತನಾಡಿ ದೇಶದ ಭವಿಷ್ಯ ರೂಪಿಸಲು ಜನರ ಮತದಾನದ ಸಹಕಾರವೂ ಕೂಡ ಬಹಳ ಮುಖ್ಯ ಪಾತ್ರವಹಿಸುತ್ತದೆ.
ಯಾವ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ದೇಶದ ಹಿತ ಕಾಪಾಡುತ್ತದೆ ಎಂಬುದನ್ನು ಜನತೆ ನಿರ್ಧರಿಸಬೇಕು, ಈ ದೇಶದಲ್ಲಿ ಮೊದಲಿನಿಂದಲೂ ಬಡವರಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಮೋದಿ ಸರಕಾರ ಯಾವತ್ತೂ ಕೆಲಸ ಮಾಡಲೇ ಇಲ್ಲ ಎಂದು ವಿರೋಧ ಪಕ್ಷದ ವಿರುದ್ಧ ನೇರವಾಗಿ ವಾಗ್ದಾಳಿ ಕೂಡ ನಡೆಸಿದ್ದಾರೆ. ಮಾತಿನ ನಡುವೆ ತಮ್ಮ ಪಕ್ಷಕ್ಕೆ ಅಧಿಕಾರ ಬಂದರೆ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಕೂಡ ನೀಡುತ್ತಾರೆ. ಮುಂದೆನಾಗುತ್ತದೆ ಕಾದು ನೋಡೋಣ.