ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಪಂಚ ಖಾತ್ರಿ ಗ್ಯಾರಂಟಿ ಯೋಜನೆ ಭರವಸೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು.
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆ ಖಾತೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ಒದಗಿಸಿ ಲಿಂಗ ಸಮಾನತೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸುದ್ದಿ ಓದಿ:-ಕೇವಲ 12,500 ಹೂಡಿಕೆ ಮಾಡಿ ಸಾಕು 1 ಕೋಟಿ ಸಿಗುತ್ತೆ ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್ ಇದು.!
ಇಂದು ಕರ್ನಾಟಕದಲ್ಲಿ ಪ್ರತಿನಿತ್ಯವೂ ಚರ್ಚೆಯಲ್ಲಿರುವ ವಿಷಯಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತಾದ ಸುದ್ದಿಯು ಇರುತ್ತದೆ. ಪ್ರತಿ ಬಾರಿ ಗೃಹಲಕ್ಷ್ಮಿ ಹಣ ತಲುಪಿಲ್ಲ ಎಂದು ಕಂಪ್ಲೇಂಟ್ ಹೇಳುತ್ತಿದ್ದ ಮಹಿಳೆಯರು ಈ ಬಾರಿ ಮೇ ತಿಂಗಳಿಗೊ ಮುಂಚೆ ಮೇ ತಿಂಗಳ ಗೃಹಲಕ್ಷ್ಮಿ ಹಣ ಪಡೆದ ಸಂತೋಷದಲ್ಲಿದ್ದಾರೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಆಗಸ್ಟ್ 30, 2023ರಲ್ಲಿ ಮೊದಲನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಯಾಯ್ತು. ನಂತರ ಪ್ರತಿ ತಿಂಗಳ 20ನೇ ತಾರೀಖಿನ ಒಳಗಡೆ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ಆಯಾ ತಿಂಗಳ ಗೃಹಲಕ್ಷ್ಮಿ ಹಣವನ್ನು ತಲುಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಈ ಸುದ್ದಿ ಓದಿ:-HDFC ಬ್ಯಾಂಕಿನಿಂದ ಬಂಪರ್ ಆಫರ್, ಕೇವಲ 10 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ಸಾಲ.!
ಪ್ರಸ್ತುತವಾಗಿ ರಾಜ್ಯದ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದಾರೆ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುತ್ತಿದೆ ಹಾಗೂ ಸುಮಾರು 3000 ಕೋಟಿಗಿಂತ ಅಧಿಕ ಹಣವನ್ನು ಗೃಹಲಕ್ಷ್ಮಿ ಯೋಜನೆಗಾಗಿ ಪ್ರತಿ ತಿಂಗಳ ಖರ್ಚು ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಆರ್ಥಿಕ ಇಲಾಖೆ ನೀಡುತ್ತಿದೆ.
ಇದರ ನಡುವೆ ಲಕ್ಷಾಂತರ ಮಹಿಳೆಯರು ಇನ್ನೂ ಸಹ ತಾವು ಅರ್ಹರಾಗಿದ್ದರು ಹಣ ಬರುತ್ತಿಲ್ಲ ಒಂದೆರಡು ತಿಂಗಳು ಬಂದು ಹಣ ನಿಂತು ಹೋಗಿದೆ ಎನ್ನುವ ದೂರು ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು (CM) ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆ ನಡೆಸಿ ಕುಂದು ಕೊರತೆಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp) ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಡಲು ಪ್ರಯತ್ನಿಸಲಾಗಿದೆ.
ಈ ಸುದ್ದಿ ಓದಿ:-LPG ಗ್ಯಾಸ್ ಬಳಸುವವರಿಗೆ ಪ್ರಮುಖ ಸುದ್ದಿ.! ಈ ರೀತಿ ಸಿಲಿಂಡರ್ ಬಳಸುವ ಮುನ್ನ ಎಚ್ಚರ.!
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರ ಸಮಸ್ಯೆ ಪರಿಹಾರವಾಗಿದೆ ಮತ್ತು ಈಗಲೂ ಯಾವ ರೀತಿ ಸಮಸ್ಯೆ ಇದ್ದವರಿಗೆ ಹಣ ತಲುಪುವುದಿಲ್ಲ ಇದಕ್ಕಾಗಿ ಏನು ಪರಿಹಾರ ಕೈಗೊಳ್ಳಬೇಕು ಎನ್ನುವ ಎಲ್ಲ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಿ ಪ್ರತಿ ಹಂತದಲ್ಲೂ ಮಹಿಳೆ ಹಣ ಪಡೆಯಲು ಅಣುವಾಗುವ ರೀತಿ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಇಷ್ಟೆಲ್ಲಾ ಸುದ್ದಿಯಲ್ಲಿದ್ದ ವಿಚಾರದಲ್ಲಿ ಈ ಬಾರಿಯ ಸಿಹಿ ಸಂಗತಿ ಏನೆಂದರೆ ಏಪ್ರಿಲ್ ತಿಂಗಳಿನ ಗೃಹಲಕ್ಷ್ಮಿ ಯೋಜನೆ ಕಂತಿನ ಹಣವು ಏಪ್ರಿಲ್ ಮೊದಲನೇ ವಾರದಲ್ಲಿ ಅನೇಕರ ಖಾತೆಗೆ ವರ್ಗಾವಣೆ ಆಗಿತ್ತು ಈಗ ಏಪ್ರಿಲ್ 24ರ ನಂತರ ಮತ್ತೊಮ್ಮೆ ರೂ.2000 ಹಣ ಜಮೆ ಆಗಿದೆ ಹೀಗಾಗಿ ಅನೇಕ ಫಲಾನುಭವಿಗಳು ಕನ್ಫ್ಯೂಸ್ ಆಗಿದ್ದಾರೆ.
ಈ ಸುದ್ದಿ ಓದಿ:-ಕೇವಲ 14 ಲಕ್ಷದಲ್ಲಿ ಕಟ್ಟಿರೋ ಹಳ್ಳಿ ಶೈಲಿಯ ಟ್ರೆಂಡಿಂಗ್ ತೊಟ್ಟಿ ಮನೆ.! ಆರೋಗ್ಯಕ್ಕೂ ಹಿತ ಖರ್ಚಿನಲ್ಲೂ ಮಿತ.! ಕಡಿಮೆ ಬಡ್ಜೆಟ್ ನಲ್ಲಿ ಸುಂದರವಾದ ಮನೆ
ಲಕ್ಷಾಂತರ ಮಹಿಳೆಯರ ಖಾತೆಗೆ ಮೇ ತಿಂಗಳ ಗೃಹಲಕ್ಷ್ಮಿ ಹಣವು ಮುಂಚಿತವಾಗಿಯೇ ಜಮೆ ಆಗಿದೆ ಹೀಗಾಗಿ ಏಪ್ರಿಲ್ ತಿಂಗಳಿನಲ್ಲಿ ಎರಡೆರಡು ಬಾರಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿದೆ. ನಿಮಗೂ ಕೂಡ ಈ ರೀತಿ ಹಣ ಎರಡು ಬಾರಿ ಬಂದಿದೆಯೇ ಎಂದು ತಿಳಿದುಕೊಳ್ಳುವ ಆಸಕ್ತಿ ಇದ್ದರೆ.
ಅಥವಾ ಇದುವರೆಗೂ ಎಷ್ಟು ಕಂತಿನ ಹಣ ಬಂದಿದೆ ಯಾವ ದಿನಾಂಕದಲ್ಲಿ ಯಾವ ಬ್ಯಾಂಕ್ ಖಾತೆಗೆ ಬಂದಿದೆ ಒಂದು ವೇಳೆ ಮಿಸ್ ಆಗಿದ್ದರೆ ಯಾವ ಕಾರಣದಿಂದ ಹಣ ಬಂದಿಲ್ಲ ಇತ್ಯಾದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು. ರ್ನಾಟಕ ಸರ್ಕಾರ ದ ಮಾಹಿತಿ ಕಣಜ ಎನ್ನುವ ವೆಬ್ಸೈಟ್ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.