ಕಳೆದ 10-15 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯ ಬಗ್ಗೆ ನೆನೆಯುವುದಾದರೆ ಆ ಕಾಲದಲ್ಲಿ ಶ್ರೀಮಂತರು ಅನುಕೂಲಸ್ಥರಿಗಷ್ಟೇ ಮನೆಯಲ್ಲಿ ಸಿಲಿಂಡರ್ (Gas Cylinder) ಬಳಸಿ ಅಡುಗೆ ಮಾಡುವ ಸೌಲಭ್ಯ ಇತ್ತು, ಮತ್ತು ನಗರ ಪ್ರದೇಶದಲ್ಲಿ ಇದ್ದವರು ಅಲ್ಲಿ ಕಟ್ಟಿಗೆ ಸೌಲತ್ತು ಇಲ್ಲ ಎನ್ನುವ ಕಾರಣಕ್ಕೆ ದುಬಾರಿಯಾದರೂ ಸಿಲೆಂಡರ್ ಕನೆಕ್ಷನ್ ಪಡೆಯುತ್ತಿದ್ದರು.
ಇದಾದ ಬಳಿಕ ಗೋಬರ್ ಗ್ಯಾಸ್ ಬಂದ ಬಳಿಕ ಕೆಲವೊಂದು ರೈತ ಕುಟುಂಬಗಳು ಗೋಬರ್ ಗ್ಯಾಸ್ ಬಗ್ಗೆ ಆಸಕ್ತಿ ವಹಿಸಿದವಾದರೂ ಬದಲಾಗಿದ್ದು ಬೆರಳೆಣಿಕೆಯಷ್ಟು ಜನರ ಮನಸ್ಥಿತಿ ಮಾತ್ರ. ಆದರೆ ಕಳೆದ ಈ ಒಂದು ದಶಕದಲ್ಲಿ ಅಡುಗೆ ಅನಿಲ ಬಳಕೆ ವಿಚಾರದಲ್ಲಿ ಒಂದು ದೊಡ್ಡ ಕ್ರಾಂತಿಯ ನಡೆದು ಹೋಗಿದೆ ಎಂದು ಹೇಳಬಹುದು ಯಾವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದರು ಈ ಯೋಜನೆ ಮೂಲಕ ದೇಶದ ಲಕ್ಷಾಂತರ ಕುಟುಂಬಗಳ ಅಡುಗೆಮನೆ ಚಿತ್ರಣವೇ ಬದಲಾಯಿತು ಎನ್ನುವುದು ಸುಳ್ಳಲ್ಲ.
ಈ ಸುದ್ದಿ ಓದಿ:-ಪ್ರತಿದಿನ ಹೀಗೆ ಮಾಡಿದರೆ ಒಂದು ತಿಂಗಳಿನಲ್ಲಿ ಡಯಾಬಿಟಿಸ್ ಸಂಪೂರ್ಣವಾಗಿ ಮಾಯವಾಗುತ್ತದೆ.! ಪರೀಕ್ಷೆ ಮಾಡಿ ನೋಡಿ.!
ದೇಶದ ಪ್ರತಿಯೊಂದು ವರ್ಗದಹಿತ ದೃಷ್ಟಿಯಿಂದ ಆಯಾ ವರ್ಗಕ್ಕೆ ತಕ್ಕಂತೆ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಪ್ರಧಾನಿಗಳು ದೇಶದ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಕೂಡ ಒಂದು. ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಕೂಡ ಸಿಲಿಂಡರ್ ಬಳಸಿ ಅಡುಗೆ ಮಾಡುವಂತೆ ಆಗಿದೆ.
ಈ ಯೋಜನೆಗೆ ನೋಂದಾಯಿಸಿಕೊಂಡ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜೊತೆಗೆ ಗ್ಯಾಸ್ ರೆಗ್ಯುಲೇಟರ್, ಗ್ಯಾಸ್ ಸ್ಟೌವ್, ಗ್ಯಾಸ್ ಲೈಟರ್ ಮತ್ತು ಒಂದು ಸಿಲಿಂಡರ್ ಉಚಿತವಾಗಿ ನೀಡಿ ವರ್ಷಕ್ಕೆ 12 ಸಿಲಿಂಡರ್ ಬುಕ್ಕಿಂಗ್ ಮೇಲೆ ಪ್ರತಿ ಬುಕ್ಕಿಂಗ್ ಗೆ ರೂ.300 ಸಬ್ಸಿಡಿ ನೆರವು ನೀಡಲಾಗುತ್ತಿದೆ.
ಸೌದೆ ಬಳಸಿ ಅಡುಗೆ ಮಾಡುವುದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣವನ್ನು ಇಟ್ಟುಕೊಂಡು ಹೆಣ್ಣು ಮಕ್ಕಳಿಗೆ ಹೊಗೆಮುಕ್ತ ಶುದ್ಧ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ನೆಮ್ಮದಿ ವಾತಾವರಣ ಮತ್ತು ಕಟ್ಟಿಗೆಗಾಗಿ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮಾಡುವ ತಪ್ಪನ್ನು ತಿದ್ದುವ ಉದ್ದೇಶದಿಂದಾಗಿ ಇಂತಹ ಒಂದು ವಿಶೇಷ ಯೋಜನೆ ಬಗ್ಗೆ ಪ್ರಧಾನಿಗಳು ಚಿಂತಿಸಿದ್ದರು.
ಈ ಸುದ್ದಿ ಓದಿ:-ಗೋಡೆಗಳಿಗೆ ಈಗ ಟ್ರೆಂಡಿಂಗ್ ನಲ್ಲಿರುವ WPC ಲೂವರ್ಸ್ ಹಾಕಿಸಲು ತಗಲುವ ವೆಚ್ಚ ಎಷ್ಟು ನೋಡಿ.!
ಹೀಗಾಗಿ ಇಂದು 90% ಕ್ಕಿಂತ ಹೆಚ್ಚು ಕುಟುಂಬಗಳು ಗ್ಯಾಸ್ ಬಳಸಿಯೇ ಅಡುಗೆ ಮಾಡುತ್ತಿವೆ. ಇವರಿಗೆಲ್ಲ ಒಂದು ಸುರಕ್ಷಿತ ವಿಧಾನದ ಬಗ್ಗೆ ತಿಳಿದೇ ಇರಬೇಕು. ಯಾಕೆಂದರೆ, ಗ್ಯಾಸ್ ಬಳಕೆ ಮೂಲಕ ಅಡುಗೆ ಮಾಡುವುದು ಎಷ್ಟು ಸರಾಗವೋ ಹಾಗೆಯೇ ಕೊಂಚ ವ್ಯತ್ಯಾಸವಾದರೂ ಇದರಿಂದ ಅಪಾಯ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಇರುತ್ತದೆ.
ಆ ಮನೆ ಮಾತ್ರವಲ್ಲದೆ ಅಕ್ಕ ಪಕ್ಕದ ಮನೆ ಆಸ್ತಿಪಾಸ್ತಿಗೂ ಪ್ರಾಣ ಹಾನಿ ಆಗುವ ಸಂಭವ ಇರುವುದರಿಂದ ಜಾಗ್ರತೆಯಿಂದ ಇರಲೇಬೇಕು. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಒಂದು ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ.
ನಿಮ್ಮ ಮನೆಗೆ ಬರುವ LPG ಸಿಲಿಂಡರ್ ನಲ್ಲಿ A-23, B-25 ಎನ್ನುವ ರೀತಿಯಲ್ಲಿ ಸಂಕೇತಗಳನ್ನು ಬರೆದಿರುತ್ತಾರೆ. ಅದನ್ನು ಗಮನಿಸಿದ್ದೀರಾ? ಈ ವಿಚಾರ ಪ್ರತಿ ಗೃಹಿಣಿಗೂ ಕೂಡ ತಿಳಿದಿರಬೇಕು. ಇಲ್ಲಿ ಅಲ್ಫಬೇಟಿಕ್ ಸಂಕೇತ ತಿಂಗಳನ್ನು ಹಾಗೂ ಸಂಖ್ಯೆಯಲ್ಲಿ ಬರೆದಿರುವ ಸಂಕೇತವು ವರ್ಷವನ್ನು ಸೂಚಿಸುತ್ತದೆ.
ಈ ಸುದ್ದಿ ಓದಿ:-ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
* A ಅಂದರೆ ಜನವರಿಯಿಂದ ಮಾರ್ಚ್ ತಿಂಗಳು ಎಂಬುದಾಗಿ ಅರ್ಥ
* B ಎಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ವರೆಗೆ ಎಂಬುದಾಗಿ ಅರ್ಥ
* C ಎಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳು ಎಂಬುದಾಗಿ ಅರ್ಥವಾಗಿದೆ
* D ಎಂದರೆ ಅಕ್ಟೋಬರ್ ದಿಂದ ಡಿಸೆಂಬರ್ ತಿಂಗಳು ಎಂಬುದಾಗಿದೆ.
ಉದಾಹರಣೆಗೆ ನಿಮ್ಮ ಗ್ಯಾಸ್ ಸಿಲಿಂಡರ್ ನಲ್ಲಿ B -25 ಎಂಬುದಾಗಿ ಬರೆದಿದೆ ಅಂದರೆ ನಿಮ್ಮ LPG ಗ್ಯಾಸ್ ಸಿಲಿಂಡರ್ ನ್ನು 2025ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಮಾತ್ರ ಬಳಸಲು ಯೋಗ್ಯ, ನಂತರ ಎಕ್ಸ್ಪೈರಿ ಆಗುತ್ತದೆ ಎಂದು ಅರ್ಥವಾಗಿದೆ. ದಯವಿಟ್ಟು ಈಗ ಉಪಯುಕ್ತ ಮಾಹಿತಿಯನ್ನು ಎಲ್ಲಾ ಕುಟುಂಬಗಳಿಗೂ ತಲುಪಿಸುವ ಉದ್ದೇಶದಿಂದ ಶೇರ್ ಮಾಡಿ.