ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದೇಶದ ಪ್ರಮುಖ ಆದಾಯ ಆದ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ನಾನು ಯೋಚನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಈಗಾಗಲೇ ದೇಶದಾದ್ಯಂತ 14 ಕೋಟಿ ರೈತರು ಫಲಾನುಭವಿಗಳಾಗಿರುವ ಕಿಸನ್ ಸಮ್ಮಾನ್ ಯೋಜನೆ, ದೇಶದ ಮತ್ತು ರಾಜ್ಯದ ರೈತರಿಗೆ ಎಷ್ಟು ಅನುಕೂಲಕ್ಕೆ ಬರುತ್ತಿದೆ ಎನ್ನುವ ಅರಿವು ಎಲ್ಲರಿಗೂ ಇದ್ದೇ ಇದೆ.
ನೀವು ಸಹ ರೈತ ಕುಟುಂಬದವರಾಗಿದ್ದರೆ ಅಥವಾ ನಿಮ್ಮ ಕುಟುಂಬದವರು ಸ್ನೇಹಿತರು ರೈತರಾಗಿದ್ದರೆ ಕೇಂದ್ರ ಸರ್ಕಾರದಿಂದ ಇರುವ ಮತ್ತೊಂದು ಉತ್ತಮವಾದ ಯೋಜನೆ ಆದ ಕಿಸಾನ್ ಫಸಲ್ ಭೀಮಾ ಯೋಜನೆ ಬಗ್ಗೆ ಕೂಡ ತಿಳಿಸಿ. ಅವರಿಗೆ ಈ ಯೋಜನೆ ಬಗ್ಗೆ ಮಾಹಿತಿ ನೀಡಿ.
ಯಾಕೆಂದರೆ ಫಸಲ್ ಭೀಮಾ ಯೋಜನೆ ಮಾಡಿಸುವುದರಿಂದ ರೈತರುಗಳಿಗೆ ಬೆಳೆ ಪರಿಹಾರದ ಹಣ ದೊರೆಯಲಿದೆ. ಇದು ಬೆಳೆಗಳಿಗೆ ವಿಮೆಯನ್ನು ನಿಮ್ಮ ಹತ್ತಿರದಲ್ಲಿರುವ ಗ್ರಾಮ ಒನ್ ಕೇಂದ್ರ ಗಳಿಗೆ ಹೋಗಿ ನೀವು ಅಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಮಾಡಿಸಬಹುದು. ಜೊತೆಗೆ ಯಾವ ಬೆಳೆ ಬೆಳೆಯುತ್ತಿದ್ದೀರಾ ಮತ್ತು ಆ ಬೆಳೆಗೆ ವಿಮೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ವಿಮೆಯ ಕಂತನ್ನು ಕೂಡ ನೀವು ಪಾವತಿಸಬೇಕು.
ಅಗತ್ಯ ದಾಖಲೆಗಳಾಗಿ ನಿಮ್ಮ ಜಮೀನಿನ ಪಹಣಿ ಪತ್ರ, ನಿಮ್ಮ ಬೆಳೆ ದೃಢೀಕರಣ ಪತ್ರ ಮತ್ತು ನಿಮ್ಮ ಆಧಾರ್ ಕಾರ್ಡ್, ಹಾಗೂ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಪುಸ್ತಕ ಇತ್ಯಾದಿಗಳನ್ನು ನೀಡಬೇಕು. ಇದೆಲ್ಲದರ ಜೊತೆ ನೀವು ಅರ್ಜಿ ಸಲ್ಲಿಸಿದಾಗ ಈ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳು ಆಗಬಹುದು. ಒಂದು ವೇಳೆ ನಿಮ್ಮ ಬೆಳೆ ಯಾವುದಾದರೂ ಕಾರಣಕ್ಕಾಗಿ ಹಾಳಾಗಿದ್ದರೆ ಆ ಹಣವನ್ನು ವಿಮೆ ಭರಿಸಲಿದೆ.
ಈಗಾಗಲೇ ಹಿಂಗಾರು ಬೆಳೆಗೆ ರಾಜ್ಯದ ರೈತರುಗಳು ಬೆಳೆ ವಿಮೆ ಮಾಡಿಸುತ್ತಿದ್ದಾರೆ. ನಿಮಗೂ ಸಹ ಬೆಳೆ ವಿಮೆ ಮಾಡಿಸಬೇಕು ಎನ್ನುವ ಇಚ್ಛೆ ಇದ್ದಲ್ಲಿ ಅಥವಾ ಮಾಹಿತಿ ಬೇಕಾಗಿದ್ದಲ್ಲಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. ಅಥವಾ ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಕೆಲಸ ಮಾಡುವವರನ್ನು ವಿಚಾರಿಸಿದರೆ ಈ ಯೋಚನೆ ಬಗ್ಗೆ ವಿಸ್ತಾರವಾದ ಮಾಹಿತಿ ಸಿಗುತ್ತದೆ.
ನಂತರ ನೀವು ಈ ಯೋಜನೆಗಳ ಬಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸಿ ಫಲಾನುಭವಿಗಳು ಆಗಬಹುದು. ಒಂದು ವೇಳೆ ನೀವು ಈಗಾಗಲೇ ಈ ಯೋಜನೆಯಲ್ಲಿ ವಿಮೆ ಕಟ್ಟಿ ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಖಾತೆಗೆ ಇನ್ನೂ ಸಹ ಬೆಳೆ ಪರಿಹಾರದ ಹಣ ಬಂದಿಲ್ಲ ಎನ್ನುವುದಾದರೆ ಅದನ್ನು ಸಹ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಂಡ ತಿಳಿದು ಕೊಳ್ಳಬಹುದು.
https://samrakshane.karnataka.gov. ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎನ್ನುವ ಮಾಹಿತಿ ಸಿಗುತ್ತದೆ. ನೀವು ಯಾವ ಬೆಳೆ ಹಾಗೂ ವಿಮೆ ಕಂಪನಿಗೆ ಹಣ ಕಟ್ಟಿದ್ದೀರಿ ಎನ್ನುವ ಮಾಹಿತಿ ಕೂಡ ಸಿಗುತ್ತದೆ. ಬೆಳೆ ಹಾನಿಯ ವಿಮೆ ಹಣ ಪಡೆಯಲು ಬೆಳೆ ವಿಮೆ ಸಿಬ್ಬಂದಿ ಮೊಬೈಲ್ ನಂಬರ್ 1800 180 1551 ಈ ನಂಬರಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.