ಈ ವರ್ಷದ ಬೆಳೆವಿಮೆಗೆ ಅರ್ಜಿ ಆಹ್ವಾನ… ಬೆಳೆವಿಮೆ ಎಷ್ಟು ಬಂದಿದೆ ಅಂತ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ಮಾರ್ಗ ಇಲ್ಲಿದೆ.!

 

WhatsApp Group Join Now
Telegram Group Join Now

ರೈತರಿಗೆ ಇಲ್ಲಿದೆ ಪ್ರಮುಖ ಮಾಹಿತಿ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಭಂಧಿಸಿದಂತೆ ನೋಂದಣಿ ಮಾಡಲು ಗ್ರಾಮ ಒನ್ ಕೇಂದ್ರಗಳಲ್ಲಿ ಅವಕಾಶ ನೀಡಿರುವ ಮತ್ತು ಕಳೆದ ವರ್ಷದ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನದ ಕುರಿತು ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಈ ಲೇಖನವನ್ನು ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ…

ರೈತ ಬಾಂಧವರೇ ಮೊದಲು ಕಳೆದ ವರ್ಷದ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳೋಣ ನಂತರ ಈ ವರ್ಷದ ಬೆಳೆ ವಿಮೆ ಅರ್ಜಿಗೆ ಹಾಕುವ ಸಂಪೂರ್ಣ ಮಾಹಿತಿಯನ್ನು ನೋಡೋಣ.

ಬೆಳೆವಿಮೆ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಹೀಗೆ ಮಾಡಿ

* ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.samrakshane.karnataka.gov.in/

ನಂತರ ವರ್ಷದ ಆಯ್ಕೆ “2022-23” ಮತ್ತು ಋುತು “kharif” ಎಂದು select ಮಾಡಿ, “Go” ಮೇಲೆ click ಮಾಡಿ

* ನಂತ್ರ Farmer ಕಾಲಂನಲ್ಲಿ “Check status” ಮೇಲೆ ಕ್ಲಿಕ್ ಮಾಡಿ.
* ನಂತರ Mobile number ಮೇಲೆ ಕ್ಲಿಕ್ ಮಾಡಿ, Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ
* ಈಗ ಇಲ್ಲಿ ಕಾಣುವ ಪ್ರಪೋಸಲ್ ನಂಬರನ್ನ ಬರೆದಿಟ್ಟುಕೊಂಡು ಮತ್ತೆ ಪ್ರಪೋಸಲ್ ನಂಬರ್ ಮೂಲಕ ಸರ್ಚ್ ಮಾಡಿ. ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.

ಈಗ ಗ್ರಾಮ ಒನ್‌ನಲ್ಲಿ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ (pradhan mantri fasal bima yojana) ಯ ಬೆಳೆ ವಿಮೆಯನ್ನು ನೋಂದಾಯಿಸಿ

ಬೆಂಗಳೂರು ಗ್ರಾಮಾಂತರ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಡೆಸಲ್ಪಟ್ಟ ಗ್ರಾಮ ಒನ್‌ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಗಿಸಲಾಗಿದ್ದು, ಈ ಸಂಧರ್ಭದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ರೇವಣಪ್ಪಯವರು ಗ್ರಾಮ ಒನ್‌ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆಯನ್ನು ನೋಂದಾಯಿಸಬಹುದು ಎಂದು ಹೇಳೆಕೆ ನೀಡಿದ್ದಾರೆ.

ಈ ಹಿಂದೆ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯ ನೋಂದಣಿಕೆ ಮಾಡಲು ಬ್ಯಾಂಕುಗಳಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾತ್ರ ಸಾಧ್ಯವಾಗುತ್ತಿತ್ತು. ಪ್ರಸ್ತುತ ವರ್ಷದಿಂದ ಪ್ರತಿ ಜಿಲ್ಲೆಯ ಗ್ರಾಮ ಒನ್‌ ಕೇಂದ್ರಗಳಲ್ಲೂ ಬೆಳೆ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ 99 ಗ್ರಾಮ ಒನ್‌ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಬೆಳೆ ವಿಮೆ ಯೋಜನೆಯ ಮಾಹಿತಿ ಹಾಗೂ ನೋಂದಣಿ ಮಾಡಿಕೊಳ್ಳುವ ಕ್ರಮಗಳಿಗೆ ಸೇರಿದಂತೆ ತರಬೇತಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಿದ್ದಾರೆ.

ಈ ಗ್ರಾಮ ಒನ್‌ ಸಿಬ್ಬಂದಿ ತರಬೇತಿ ಪಡೆಯುವ ಕಾರ್ಯಕ್ರಮದ ಮೂಲಕ ಬೆಳೆ ವಿಮೆ ಯೋಜನೆಯ ಕುರಿತು ರೈತರಲ್ಲಿ ತಿಳುವಳಿಕೆಯನ್ನು ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆ ವಿಮೆ ನೋಂದಣಿ ಮಾಡಿಸಬೇಕೆನ್ನುವ ಉದ್ದೇಶ ಈ ಕಾರ್ಯಕ್ರಮದಾಗಿರುತ್ತದೆ.

2022-23 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ 10 ಬೆಳೆಗಳನ್ನು ಗುರುತಿಸಿ, ಆಯಾ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ನೋಂದಣಿ ಮಾಡಿಕೊಂಡು ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್‌, ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ್‌, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಹಾಗೂ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now