ಡೆಲಿವರಿ ನಂತರ ಹೊಟ್ಟೆ ಜಾಸ್ತಿ ಆಗಿದ್ರೆ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು ಹೊಟ್ಟೆಲಿ ಇರೋ ಬೊಜ್ಜು ಸಂಪೂರ್ಣ ಮಾಯವಾಗುತ್ತೆ.

ಕೆಲವರಿಗೆ ಸಿಸೇರಿಯನ್ ಆದಾಗ ಕೆಲವರು ತೀರ ಸಣ್ಣ ಆಗುತ್ತಾರೆ, ಕೆಲವರು ತೀರ ದಪ್ಪ ಆಗುತ್ತಾರೆ ಅಂತವರಿಗೆ ಹೊಲಿಗೆ ಹಾಕಿರುವುದರಿಂದ ಹೆಚ್ಚಾಗಿ ಎಕ್ಸಸೈಜ್ ಮಾಡಲು ಆಗುವುದಿಲ್ಲ ಏನಾದರೂ ಡ್ರಿಂಕ್ಸ್ ನ ರೂಪದಲ್ಲಿ ಕುಡಿಯುವ ಬೇಕಾದರೆ ತುಂಬಾ ಭಯಪಡುತ್ತಾರೆ. ಯಾಕೆಂದರೆ ಮಗುವನ್ನು ಆಚೆ ತೆಗೆದಿರುತ್ತಾರೆ ಅದರಲ್ಲಿಯೂ ಸಿಸೇರಿಯನ್ ಆಗಿದ್ದರೆ ಹೊಟ್ಟೆಯಲ್ಲಿ ಹೊಲಿಗೆಗಳು ಇರುವುದರಿಂದ ಬೊಜ್ಜು ಹೆಚ್ಚಾಗಿ ಹೊಲಿಗೆ ಹಾಕಿರುವಂತಹ ಜಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತುಂಬಾ ಹೊತ್ತು ಓಡಾಡಲು ಆಗುವುದಿಲ್ಲ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಅಂತಹವರು ನಾವಿಲ್ಲಿ ತಿಳಿಸುವಂತಹ ಒಂದು ಮನೆ ಮದ್ದನ್ನು ಬಳಸಿದರೆ ನೀವು ತುಂಬಾ ಸಣ್ಣ ಆಗಬಹುದು ಅಂದರೆ ನೀವು ಮೊದಲು ಇದ್ದ ದೇಹ ಸ್ಥಿತಿಯನ್ನು ಹೊಂದಬಹುದು.

ಯಾವುದೇ ಮನೆ ಮದ್ದು ಅಥವಾ ಸಣ್ಣ ಆಗಲಿ ಯಾವುದೇ ಒಂದು ಕ್ರಮವನ್ನು ಕೈಗೊಂಡರು ಸಹ ಮೊದಲಿಗೆ ನಮ್ಮ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕು ಹೆಚ್ಚಾಗಿ ಫ್ಯಾಟ್ ಇರುವಂತಹ ಆಹಾರ ಪದಾರ್ಥಗಳನ್ನ ನೀವು ತಿನ್ನಬಾರದು ಅಂದರೆ ಮಾಂಸ ಪದಾರ್ಥಗಳು ಹಾಗೆಯೇ ಜಂಗ್ ಫುಡ್ ಈ ರೀತಿಯಾದಂತಹ ಆಹಾರ ಪದಾರ್ಥಗಳನ್ನ ಕಡಿಮೆ ಮಾಡಿ ಆರೋಗ್ಯಕರವಾದಂತಹ ಆಹಾರ ಸೇವನೆಯ ಕಡೆ ನಿಮ್ಮ ಗಮನವನ್ನು ಹರಿಸಬೇಕು. ನಾವಿಲ್ಲಿ ತಿಳಿಸುವಂತಹ ರೆಮಿಡಿಯನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆ ಹಾಗೆಯೆ ಒಂದು ಟೇಬಲ್ ಸ್ಪೂನ್ ನಷ್ಟು ಓಂ ಕಾಳು, ಓಂ ಕಾಳು ನಮ್ಮ ದೇಹವನ್ನು ಕಾಪಾಡುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ ಇದರಲ್ಲಿ ನಮ್ಮ ದೇಹದ ಡೈಜೆಸ್ಟಿವ್ ಸಿಸ್ಟಮ್ ಅನ್ನು ಇಂಪ್ರೂ ಮಾಡುವಂತಹ ಶಕ್ತಿಯನ್ನು ಹೊಂದಿದೆ.

ಹಾಗೆಯೇ ಜೀರಿಗೆಯು ಸಹ ನಮ್ಮ ತೂಕವನ್ನು ಇಳಿಸಿಕೊಳ್ಳುವಲ್ಲಿ ತುಂಬಾ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ನಂತರ ಕಡಿಮೆ ಉರಿಯಲ್ಲಿ ಇಟ್ಟು ಆ ಪಾತ್ರೆಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆ ಹಾಗೆ ಒಂದು ಟೇಬಲ್ ಸ್ಪೂನ್ ನಷ್ಟು ಓಂ ಕಾಳು ಹಾಕಿ ಚಿಟಪಟ ಸಿಡಿದು ಸ್ವಲ್ಪ ಗಮ ಬರುವ ತನಕ ಹುರಿದುಕೊಳ್ಳಬೇಕು. ನಂತರ ಒಂದು ಸಣ್ಣ ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ, ನಂತರ ನೀವು ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಒಂದು ಸ್ಪೂನ್ ನಷ್ಟು ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನೀವು ಇದನ್ನು ಬಿಸಿ ಇರುವಾಗಲೇ ಈ ಡ್ರಿಂಕ್ ಅನ್ನು ಕುಡಿಯಬೇಕು.

ರಾತ್ರಿ ಮಲಗುವ ಮುನ್ನ ಊಟ ಎಲ್ಲಾ ಆದನಂತರ ಇದನ್ನು ನೀವು ಕುಡಿದು ನಂತರ ಮಲಗುವುದರಿಂದ ನಿಮಗೆ ಬೊಜ್ಜಿನ ಸಮಸ್ಯೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ನಿಮಗೆ ಎಷ್ಟೇ ಬೊಜ್ಜಿದ್ದರು ಸಹ ಈ ಒಂದು ಹೋಂ ರೆಮಿಡಿಯನ್ನು ನೀವು ಫಾಲೋ ಮಾಡಿದರೆ ಸಾಕು ನಿಮ್ಮ ಬುಜ್ಜಿನ ಸಮಸ್ಯೆ ಅದರಲ್ಲಿಯೂ ಹೊಟ್ಟೆ ಸುತ್ತ ಇರುವಂತಹ ಬೊಜ್ಜಿನ ಸಮಸ್ಯೆ ಕಡಿಮೆಯಾಗುತ್ತದೆ. ಅದರಲ್ಲಿಯೂ ಮಹಿಳೆಯರಿಗೆ ಆಫೀಸ್ ಗಳಲ್ಲಿ ಒಂದೇ ಕಡೆ ಕೂತು ಕೆಲಸ ಮಾಡುವವರಿಗೆ ಹಾಗೆಯೇ ದೈಹಿಕವಾಗಿ ಯಾವುದೇ ಕೆಲಸಗಳನ್ನು ಮಾಡದೆ ಇರುವವರಿಗೆ ಈ ಮನೆ ಮದ್ದು ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ.

Leave a Comment

%d bloggers like this: