ಬಿಗ್ ಬಾಸ್ ಮನೆಗೆ ಕಳಿಸಿಕೊಡಿ ಅಂತ ಕಣ್ಣೀರು ಹಾಕ್ತಿರೋ ಕಾಫಿ ನಾಡು ಚಂದು.

ಮೊದಲೆಲ್ಲ ಕಾಫಿ ನಾಡು ಎಂದ ತಕ್ಷಣ ನಮಗೆ ನೆನಪಿಗೆ ಬರುತ್ತಿದ್ದ ಹೆಸರು ಎಂದರೆ ಅದು ಚಿಕ್ಕಮಗಳೂರು ಆದರೆ ಇದೀಗ ಕಾಫಿ ನಾಡು ಎಂದ ಕೂಡಲೇ ನಮಗೆ ಬಾಯಿಗೆ ಬರುವುದು ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವಂತಹ ಕಾಫಿ ನಾಡು ಚಂದು ಅಷ್ಟರ ಮಟ್ಟಿಗೆ ಈ ಒಂದು ವ್ಯಕ್ತಿ ಫೇಮಸ್ ಆಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಎನ್ನುವಂತಹದ್ದು ಒಂದು ಮ್ಯಾಜಿಕ್ ಇದ್ದಂತೆ ಇಲ್ಲಿ ಯಾರು ಯಾವಾಗ ಬೇಕಾದರೂ ಸ್ಟಾರ್ ಆಗಬಹುದು ಹಾಗೆಯೇ ಫೇಮಸ್ ಆಗಬಹುದು ಒಬ್ಬ ಮನುಷ್ಯನ ಹೆಸರನ್ನು ಎಷ್ಟು ಫೇಮಸ್ ಮಾಡುತ್ತದೆಯೋ ಅಷ್ಟೇ ಆ ವ್ಯಕ್ತಿ ಆ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಶಕ್ತಿ ಈ ಒಂದು ಸೋಶಿಯಲ್ ಮೀಡಿಯಾಗೆ ಇದೆ ಎಂದು ಹೇಳಿದರೆ ತಪ್ಪಾಗಲಾರದು.

ಯಾವುದೇ ಒಂದು ವಿಷಯ ವೈರಲಾಗಲು ಹೆಚ್ಚಿನ ಸಮಯ ಏನು ಬೇಕಾಗಿಲ್ಲ ಎಲ್ಲರ ಕೈಗಳಲ್ಲಿ ಮೊಬೈಲ್ ಇರುವುದರಿಂದ ಇದು ಅತಿ ವೇಗವಾಗಿ ಜನರನ್ನು ತಲುಪುವಂತಹ ಕೆಲಸ ಮಾಡುತ್ತದೆ. ಸದ್ಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡುತ್ತಿರುವಂತಹ ವ್ಯಕ್ತಿ ಎಂದರೆ ಅದು ಕಾಫಿನಾಡು ಚಂದು ಇವರು ಮೂಲತಃ ಚಿಕ್ಕಮಗಳೂರಿನ ಜಿಲ್ಲೆಯ ಮಲ್ಲಂದೂರಿನ ಭಾಗಮನೆ ಗ್ರಾಮದ ವಾಸಿ ಇವರು ಓದಿರುವುದು ಕೇವಲ 9ನೇ ತರಗತಿ ಆದರೆ ಸಾಮಾಜಿಕ ಕಳಕಳಿ, ಮುಗ್ಧ ಮನಸ್ಸಿನ ಯುವಕ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ ಹವಾ ಸೃಷ್ಟಿ ಮಾಡುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಇದೀಗ ಬಿಗ್ ಬಾಸ್ ಓಟಿಟ ಶುರುವಾಗಿದ್ದು ಎಲ್ಲರೂ ಸಹ ವೀಕ್ಷಣೆಯನ್ನು ಮಾಡುತ್ತಿದ್ದಾರೆ.

https://www.instagram.com/reel/ChACeKrhzMF/?igshid=YmMyMTA2M2Y=

ಆದರೆ ಬಿಗ್ ಬಾಸ್ ಓಟಿಟಿ ಪ್ರಾರಂಭವಾಗುವ ಮೊದಲೇ ಯಾರೆಲ್ಲಾ ಸ್ಪರ್ಧಿಗಳು ಹೋಗುತ್ತಾರೆ ಎನ್ನುವಂತಹ ಕುತೂಹಲ ಇತ್ತು ಅದರಲ್ಲಿ ಕಾಫಿನಾಡು ಚಂದು ಹೋಗಲಿದ್ದಾರೆ ಎನ್ನುವಂತಹ ಹಲವಾರು ಸುದ್ದಿಗಳು ಸಹ ಹರಿದಾಡಿತ್ತು. ಆದರೆ ಬಿಗ್ ಬಾಸ್ ಗ್ರಾಂಡ್ ಲಾಂಚ್ ಆದ ಬಳಿಕ ಕಾಫಿನಾಡು ಚಂದು ಅಭಿಮಾನಿಗಳಿಗೆ ಸ್ವಲ್ಪ ಬೇಸರವನ್ನು ತಂದುಕೊಟ್ಟಿದೆ, ಅಲ್ಲದೆ ಕಾಫಿನಾಡು ಚಂದು ಅವರು ಸಹ ಸಾಕಷ್ಟು ಬಾರಿ ಹೇಳಿಕೊಂಡಿದ್ದರು ನಾನು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದು ಆದರೆ ಅವರ ಆಸೆಯೂ ನೆರವೇರಲಿಲ್ಲ. ಇನ್ನು ಈ ಸಾಲಿನಲ್ಲಿ ಕಾಫಿ ನಾಡು ಚಂದು ಅವರು ಬಿಗ್ ಬಾಸ್ ಮನೆಗೆ ಹೋಗಲು ಸಾಕಷ್ಟು ರೀತಿಯಾದಂತಹ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಂದರೆ ಜನರ ಬಳಿಗೆ ಹೋಗಿ ಚಂದು ಅವರನ್ನು ಬಿಗ್ ಬಾಸ್ ಮನೆಗೆ ಕಳಿಸುವಂತೆ ಒತ್ತಾಯಿಸುವ ವಿಡಿಯೋಗಳನ್ನು ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಸುತ್ತಿದ್ದಾರಂತೆ.

ಇದರಿಂದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಸಿಗಬಹುದು ಎನ್ನುವಂತಹ ಒಂದು ಆಸೆ ಕಾಫಿ ನಾಡು ಚಂದು ಅವರಲ್ಲಿ ಇದೆ ಎಂದು ಎಲ್ಲರೂ ಸಹ ಹೇಳುತ್ತಿದ್ದಾರೆ. ಇವರು ಅಪ್ಲೋಡ್ ಮಾಡುತ್ತಿರುವಂತಹ ಈ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿವೆ. ತಾವು ಅಪ್ಪು ಮತ್ತು ಶಿವಣ್ಣ ಅವರ ಅಭಿಮಾನಿ ಅಭಿಮಾನಿ ಎಂದು ಹೇಳಿಕೊಂಡು ಹ್ಯಾಪಿ ಬರ್ತಡೆ ಹಾಡಿನ ಮೂಲಕ ದೇವರು ಆರೋಗ್ಯ, ಆಯುಷ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಸಾಂಗ್ ಮಾಡುವ ಮೂಲಕ ಇವರು ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಗೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ ನಿಮ್ಮ ಪ್ರಕಾರ ಕಾಫಿ ನಾಡು ಚಂದು ಬಿಗ್ ಬಾಸ್ ಮೆನೆಗೆ ಹೋಗುವುದು ಸೂಕ್ತನಾ ಅಥವಾ ಬೇಡವಾ.? ಕಾಮೆಂಟ್ ಮಾಡಿ.

https://www.instagram.com/reel/ChGvYFLhdLp/?igshid=YmMyMTA2M2Y=

Leave a Comment

%d bloggers like this: