ಈರುಳ್ಳಿ ಹಾಕದೆ ಇದ್ದರೆ ಯಾವುದೇ ಮಸಾಲೆ ಪದಾರ್ಥವು ಕೂಡ ಟೇಸ್ಟ್ ನೀಡುವುದಿಲ್ಲ ಎಂದೇ ಹೇಳಬಹುದು ಹಾಗೂ ಈರುಳ್ಳಿ ಮನೆಯಲ್ಲಿ ಇಲ್ಲ ಎಂದರೆ ಯಾವುದೇ ಟಿಫನ್ ಆಗಲಿ ಸಾಂಬಾರ್ ಆಗಲಿ ರೆಡಿ ಮಾಡಲು ಕೂಡ ಆಗುವುದಿಲ್ಲ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಕಾರಿಗಳಲ್ಲಿ ಮೊದಲ ಹೆಸರು ಈರುಳ್ಳಿಗೆ ಸಲ್ಲುತ್ತದೆ. ಮತ್ತು ದಿನನಿತ್ಯ ನಾವು ಆಹಾರದಲ್ಲಿ ಬಳಸುವ ಪದಾರ್ಥಗಳಲ್ಲಿ ಈರುಳ್ಳಿ ಪ್ರಮಾಣವು ಹೆಚ್ಚಿಗೆ ಇರುತ್ತದೆ ಹೀಗಾಗಿ ಪ್ರತಿ ಅಡುಗೆ ಮನೆಗಳ ರಾಜ ಈರುಳ್ಳಿ ಎನ್ನಬಹುದು. ಈರುಳ್ಳಿ ಹಾಗೂ ಟೊಮೇಟೊ ಕಾಂಬಿನೇಷನ್ ಅಂದರೆ ಮತ್ತು ಈರುಳ್ಳಿ ಆಲೂಗಡ್ಡೆ ಕಾಂಬಿನೇಷನ್ ಕೂಡ ಎಲ್ಲಾ ಆಹಾರ ಪ್ರಿಯರ ಫೇವರೆಟ್. ಹೀಗೆ ಈರುಳ್ಳಿ ಎನ್ನುವುದು ಸದ್ಯಕ್ಕೆ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ ಅನ್ನಬಹುದು. ಪ್ರತಿದಿನ ನಾವು ಆಹಾರದಲ್ಲಿ ಈರುಳ್ಳಿ ಬಳಸುತ್ತಿದ್ದರೂ ಕೂಡ ಅದರ ಪ್ರಾಮುಖ್ಯತೆ ಅಷ್ಟೊಂದು ತಿಳಿದುಕೊಂಡೇ ಇಲ್ಲ ಎನಿಸುತ್ತದೆ.
ಈರುಳ್ಳಿಯೂ ಆಹಾರದ ರುಚಿ ಹೆಚ್ಚಿಸುವುದರಲ್ಲಿ ಎಷ್ಟು ಮಹತ್ವದ ಸ್ಥಾನ ಹೊಂದಿದೆಯೋ ಹಾಗೆ ಪ್ರತಿಯೊಬ್ಬರ ಆರೋಗ್ಯ ಕಾಪಾಡುವಲ್ಲೂ ಕೂಡ ಈರುಳ್ಳಿ ಎನ್ನುವುದು ಬಹಳ ಮುಖ್ಯಸ್ಥಾನ ವಹಿಸಿದೆ. ಹಾಗೆ ಆಯುರ್ವೇದದಲ್ಲೂ ಕೂಡ ಬಿಳಿ ಈರುಳ್ಳಿಯನ್ನು ಅನಾರೋಗ್ಯದ ಸಮಯದಲ್ಲಿ ಹಲವಾರು ಔಷಧಿಗಳನ್ನು ಮಾಡಲು ಉಪಯೋಗಿಸುತ್ತಾರೆ ಈಗ ಸಾಮಾನ್ಯವಾಗಿ ದಿನಬಳಕೆಯಲ್ಲಿ ನಾವು ಬಳಸುವ ಈರುಳ್ಳಿಯಲ್ಲೂ ನಮಗೆ ಇದುವರೆಗೆ ತಿಳಿಯದ ಹಲವಾರು ಅಂಶಗಳನ್ನು ಒಳಗೊಂಡಿದೆ. ಅವು ಯಾವುದೆಂದರೆ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಸ್ನೇಹಿತ ಈರುಳ್ಳಿ ಎನ್ನಬಹುದು. ಯಾಕೆಂದರೆ ಆಹಾರದಲ್ಲಿ ಈರುಳ್ಳಿಯ ಸರಿಯಾದ ಬಳಕೆ ಮಾಡುವುದರಿಂದ ನಮ್ಮ ದೇಹದ ಹೆಚ್ಚಿನ ಪ್ರಮಾಣದ ತೂಕ ಇಳಿಸಿಕೊಳ್ಳಲು ಅದು ಸಹಾಯ ಮಾಡುತ್ತದೆ ಈ ವಿಷಯ ಆಶ್ಚರ್ಯ ಎಂದು ಅನಿಸಬಹುದು ಆದರೆ ಇದು ಖಂಡಿತವಾಗಿಯೂ ಸತ್ಯ. ಹಲವಾರು ವರದಿಗಳು ಈಗಾಗಲೇ ಇದನ್ನು ಸಾಬೀತು ಕೂಡ ಮಾಡಿದೆ.
ಈರುಳ್ಳಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುತ್ತದೆ ಹೀಗಾಗಿ ಅದು ತೂಕ ಹೆಚ್ಚಾಗುತ್ತದೆ ಎನ್ನುವ ಆತಂಕವನ್ನು ಕಡಿಮೆ ಮಾಡುತ್ತದೆ. ಕ್ಯಾಲೋರಿ ಬದಲಾಗಿ ಇದು ಉತ್ತಮ ಪ್ರೊಟೀನ್ ಅಂಶವನ್ನು ಒಳಗೊಂಡಿದೆ ಹಾಗೂ ಸುಲಭವಾಗಿ ಕರಗಬಲ್ಲ ಫೈಬರ್ ಅಂಶಗಳನ್ನು ಕೂಡ ಇದು ಒಳಗೊಂಡಿದೆ. ಹಾಗಾಗಿ ನಮ್ಮ ಆಹಾರದಲ್ಲಿ ಉತ್ತಮ ಪೋಷಕಾಂಶವಾಗಿ ದೇಹಕ್ಕೆ ಅವಶ್ಯವಿರುವ ಮ್ಯಾಂಗನೀಸ್ ಕ್ಯಾಲ್ಸಿಯಂ ಕಬ್ಬಿಣ ಮ್ಯಾಂಗನೀಸ್ ರಂಜಕ ಪೊಟ್ಯಾಶಿಯಂ ಇವೆಲ್ಲವನ್ನು ಹೇರಳವಾಗಿ ಹೊಂದಿದೆ. ಅಲ್ಲದೆ ವಿಟಮಿನ್ ಸಿ ಈರುಳ್ಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದರೊಂದಿಗೆ ದೇಹಕ್ಕೆ ಅಗತ್ಯವಾದ ಪಿಷ್ಟಾ ಸಕ್ಕರೆ ಕೊಬ್ಬಿನ ಅಂಶವನ್ನು ಕೂಡ ಇದು ಒಳಗೊಂಡಿದೆ. ಹಾಗೂ ಈರುಳ್ಳಿ ನೀರಿನಂಶ ಅಧಿಕವಾಗಿರುವ ಆಹಾರ ಪದಾರ್ಥವು ಕೂಡ ಆಗಿದೆ ಇದು ದೇಹಕ್ಕೆ ಜೀರ್ಣಕ್ರಿಯೆಗೆ ಬಹಳ ಸಹಾಯ ಮಾಡುತ್ತದೆ.
ಈರುಳ್ಳಿಯನ್ನು ನಾವು ಸಾಮಾನ್ಯವಾಗಿ ಬೆಳಗಿನ ಉಪಹಾರ ಹಾಗೂ ಎಲ್ಲಾ ರೀತಿಯ ಗ್ರೇವಿಗಳು ಪಲ್ಯಗಳು ಸಾಂಬಾರ್ ಕರಿ ಹೀಗೆ ಎಲ್ಲದಕ್ಕೂ ಕೂಡ ಬಳಸುತ್ತೇವೆ. ಇದರೊಂದಿಗೆ ಪ್ರತಿನಿತ್ಯ ಕೂಡ ನಾವು ಆಹಾರ ಸೇವಿಸುವಾಗ ಸೈಡ್ ಡಿಶ್ ಆಗಿ ಬರಿ ಹಸಿ ಈರುಳ್ಳಿಯನ್ನೇ ಕಟ್ ಮಾಡಿ ಇಟ್ಟುಕೊಂಡು ಪ್ರತಿ ಬಾರಿ ಎರಡು ಪೀಸ್ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುವುದರ ಜೊತೆಗೆ ಹಸಿವು ಕೂಡ ಹೆಚ್ಚಾಗುವಂತೆ ಮಾಡುತ್ತದೆ ಮತ್ತು ದೇಹದ ತೂಕ ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಈ ರೀತಿ ಕಟ್ ಮಾಡಿದ ಈರುಳ್ಳಿ ಜೊತೆಗೆ ಪೆಪ್ಪರ್ ಪೌಡರ್ ಹಾಗೂ ನಿಂಬೆರಸ ಹಾಕಿ ಸ್ಲ್ಯಾಶ್ ಮಾಡಿ ಕೂಡ ಉಪಯೋಗಿಸಬಹುದು. ಇದು ಹಸಿ ಈರುಳ್ಳಿ ತಿನ್ನುವುದು ಕಷ್ಟಪಡುವವರಿಗೆ ಸ್ವಲ್ಪ ರುಚಿಯಾಗಿರುವಂತೆ ಮಾಡುತ್ತದೆ ಹಾಗೂ ಊಟದೊಂದಿಗೆ ಇದನ್ನು ಸೇವಿಸುವುದರಿಂದ ನಾವು ತಿನ್ನುತ್ತಿರುವ ಊಟಕ್ಕೆ ಹೆಚ್ಚಿನ ರುಚಿ ಕೂಡ ದೊರಕುತ್ತದೆ.
ಮತ್ತು ಈರುಳ್ಳಿಯನ್ನು ತರಕಾರಿಗಳ ಜೊತೆ ಫ್ರೈ ಮಾಡಿ ಕೂಡ ತಿನ್ನಬಹುದು. ಬಿಸಿ ಎಣ್ಣೆಗೆ ಸಾಸಿವೆ ಹಾಕಿ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಈರುಳ್ಳಿಯನ್ನು ಹಾಕಿ ಹುರಿದು ಕೆಂಪಗಾದ ಮೇಲೆ ತರಕಾರಿಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಚಿಲ್ಲಿ ಪೌಡರ್ ಹಾಗೂ ರುಚಿ ಹಾಕಿ ಬೆರೆಸಿ ಇದನ್ನು ಬಿಸಿ ಅನ್ನದ ಜೊತೆ ಮತ್ತು ಚಪಾತಿಯ ಜೊತೆ ಸೇವಿಸಬಹುದು. ಈ ರೀತಿ ಕೂಡ ಹೆಚ್ಚು ಈರುಳ್ಳಿ ಪದಾರ್ಥವು ನಮ್ಮ ದೇಹಕ್ಕೆ ಸೇರುವ ರೀತಿ ಮಾಡಬಹುದು. ಇವುಗಳ ಜೊತೆ ಇನ್ನೂ ಬೆಸ್ಟ್ ಟಿಪ್ಸ್ ಏನೆಂದರೆ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಹೆಚ್ಚಿದ ಈರುಳ್ಳಿಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಸೋಸಿಕೊಂಡು ಕುಡಿಯುವುದರಿಂದ ಕೂಡ ಬೇಗನೆ ನಮ್ಮ ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಕರಗುತ್ತದೆ.
ಇದರ ಜೊತೆಗೆ ದೇಹದ ಇತರ ಬೇಡವಾದ ಕೊಬ್ಬಿನ ಅಂಶವು ಕೂಡ ಕರಗಿ ನಾವು ಸ್ಲಿಮ್ ಆಗಲು ಇದು ತುಂಬಾ ಸಹಾಯ ಮಾಡುತ್ತದೆ. ಇದರ ಜೊತೆಗೆ ಕೂದಲಿನ ಆರೋಗ್ಯಕ್ಕೂ ಕೂಡ ಈರುಳ್ಳಿ ತುಂಬಾ ಸಹಾಯಕಾರಿ ಸಣ್ಣ ಈರುಳ್ಳಿಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಕೂದಲನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ ಹಾಗೂ ಡ್ಯಾಂಡ್ರಫ್ ನಿವಾರಣೆ ಆಗುವುದರ ಜೊತೆಗೆ ಕೂದಲ ಬೆಳವಣಿಗೆಗೆ ಇದು ಉತ್ತಮ ಪೋಷಕಾಂಶವಾಗಿ ಕೆಲಸ ಮಾಡುತ್ತದೆ. ಇಷ್ಟೆಲ್ಲಾ ಉಪಯೋಗ ಇರುವ ಈರುಳ್ಳಿಯನ್ನು ತರುವುದರಕ್ಕಿಂತ ಇದನ್ನು ತಂದು ಹೆಚ್ಚುವಾಗ ಹೆಣ್ಣು ಮಕ್ಕಳು ಕಣ್ಣೀರು ಸುರಿಸುವುದೇ ಒಂದು ಸಮಸ್ಯೆ ಆಗಿದೆ. ಆದರೂ ಕೂಡ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಾರದು ಎಂದರೆ ಅದಕ್ಕೂ ಕೂಡ ಕೆಲವು ಟಿಪ್ಸ್ ಗಳು ಇವೆ ಅವುಗಳನ್ನು ಫಾಲೋ ಮಾಡಿ ಈರುಳ್ಳಿಗೆ ಇನ್ನಷ್ಟು ಹತ್ತಿರವಾಗಿ.