ಕರ್ನಾಟಕ ಜನತೆ ಸಂಭ್ರಮ ಪಡುವ ವಿಚಾರ ಮಿಸ್ಸೆಸ್ ಇಂಡಿಯಾ 2022 ಅವಾರ್ಡ್ ಮುಡಿಗೇರಿಸಿಕೊಂಡ ನಿವೇದಿತ ಗೌಡ.

ನಿವೇದಿತ ಗೌಡ ಅವರು ಅವರ ನಿಜವಾದ ಹೆಸರಿಗಿಂತ ಗೊಂಬೆ ಎಂದೆ ಕರ್ನಾಟಕದಾದ್ಯಂತ ಹೆಚ್ಚು ಪರಿಚಿತ. ಹೆಸರಿಗೆ ತಕ್ಕ ಹಾಗೆ ಹೋಲುವ ಅವರ ಪರ್ಸನಾಲಿಟಿ ಹಾಗೂ ಹೇರ್ ಸ್ಟೈಲ್ ಕೂಡ ಒಂದು ಬೇಬಿ ಡಾಲ್ ರೀತಿಯ ಇದೆ. ಹಾಗಾಗಿ ಇವರನ್ನು ಎಲ್ಲರೂ ಕೂಡ ಗೊಂಬೆ ಎಂದೇ ಕರೆಯುತ್ತಾರೆ. ಸದ್ಯ ಇದೇ ಹೆಸರಿನ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ಇವರು ಮೊದಮೊದಲು ಡಬ್ಸ್ಮ್ಯಾಶ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ನಂತರ ಬಿಗ್ ಬಾಸ್ ಸೀಸನ್ ಐದರ ಆವೃತ್ತಿಯಲ್ಲಿ ಕಾಮನ್ ಮ್ಯಾನ್ ಕೋಟಾದಡಿ ದೊಡ್ಮನೆ ಸೇರಿದ ಇವರು ಹೊರಗೆ ಬರುವಷ್ಟರಲ್ಲಿ ಸೆಲೆಬ್ರಿಟಿ ಆಗಿ ಹೋದರು ಎನ್ನಬಹುದು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ನಿವೇದಿತ ಅವರ ಬದುಕೇ ಬದಲಾಗಿ ಹೋಯಿತು ಮನೆಯಲ್ಲಿ ಇರುವಷ್ಟು ದಿನ ಕನ್ನಡಿಗರಿಗೆ ನಿವೇದಿತ ಅವರು ತುಂಬಾ ಆಪ್ತರಾಗಿ ಹೋಗಿದ್ದರು.

ಹಾಗಾಗಿ ನಿವೇದಿತ ಗೌಡ ಅವರು ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಕನ್ನಡಿಗರು ಇವರ ಮೇಲೆ ಬಹಳ ಪ್ರೀತಿಯನ್ನು ಇಟ್ಟುಕೊಂಡರು ಹಾಗೂ ಇವರ ವ್ಯಕ್ತಿತ್ವ ಹಾಸ್ಯಪ್ರಜ್ಞೆ ಮತ್ತು ಮಕ್ಕಳಂತಹ ಮುಗ್ಧ ಹೃದಯ ಎಲ್ಲರಿಗೂ ಇಷ್ಟವಾಗಿ ಹೋಗಿತ್ತು. ಹೀಗಾಗಿ ಪ್ರತಿಯೊಬ್ಬರೂ ಕೂಡ ನಿವೇದಿತ ಗೌಡ ಅವರನ್ನು ತಮ್ಮ ಮನೆಮಗಳು ಎಂದು ಭಾವಿಸಿದ್ದರು. ಅಲ್ಲದೆ ನಿವೇದಿತ ಗೌಡ ಅವರು ಬಿಗ್ ಬಾಸ್ ಸೀಸನ್ ಐದರ ಕೊನೆಯ ದಿನಗಳವರೆಗೂ ಮನೆಯಲ್ಲಿದ್ದು ಎಲ್ಲರಿಗೂ ಮನರಂಜನೆ ನೀಡಿದ್ದರು ಮತ್ತು ಇದೇ ಸೀಸನ್ ಅಲ್ಲಿ ವಿಜೇತರಾದ ರ್ಯಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದು ವೈವಾಹಿಕ ಜೀವನ ಶುರು ಮಾಡಿದರು. ಇವರಿಬ್ಬರ ಮುದ್ದಾದ ಜೋಡಿ ಕರ್ನಾಟಕದಲ್ಲಿ ಮೋಸ್ಟ್ ಫೇಮಸ್ ಜೋಡಿ ಆಗಿದೆ ಇವರಿಬ್ಬರ ಜೋಡಿಯನ್ನು ಕರ್ನಾಟಕದ ಜನತೆ ಬಹಳ ಮೆಚ್ಚಿಕೊಂಡಿದ್ದಾರೆ.

ಇವರಿಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು ಆಗಾಗ tik tok ಮತ್ತು ರೀಲ್ಸ್ ಇಂತಹ ವಿಡಿಯೋಗಳಿಂದ ಕನ್ನಡಿಗರಿಗೆ ಮನೋರಂಜನೆ ನೀಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾ ಖಾತೆಗಳಿಂದ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಹಾಗೂ ಫಾಲೋವರ್ಸ್ ಕೂಡ ಗಳಿಸಿರುವ ಇವರು ಎಷ್ಟೇ ಬ್ಯುಸಿ ಇದ್ದರೂ ಕೂಡ ವಿಡಿಯೋ ಮಾಡುವುದನ್ನು ನಿಲ್ಲಿಸುವುದಿಲ್ಲ. ಇವರ ಈ ಗುಣವೇ ಎಲ್ಲರಿಗೂ ಅಚ್ಚು ಮೆಚ್ಚು. ಯಾವಾಗಲೂ ಸೋಶಿಯಲ್ ಬದುಕಿನೊಂದಿಗೆ ತುಂಬಾ ಹಚ್ಚಿಕೊಂಡಿರುವ ಇವರು ಸದಾ ಜನರೊಂದಿಗೆ ಸೋಶಿಯಲ್ ಮೀಡಿಯಾಗಳ ಮೂಲಕ ಬೆರೆತಿರಲು ಆಸೆ ಪಡುತ್ತಾರೆ. ಅಲ್ಲದೆ ನಿವೇದಿತ ಗೌಡ ಅವರು ತಮ್ಮದೇ ಆದ ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಹೋಂ ಟೂರ್ ಮಾಡುವುದು ಅವರ ಬಳಿ ಇರುವ ಬ್ಯಾಗ್ ಮತ್ತು ಡ್ರೆಸ್ ಕಲೆಕ್ಷನ್ ತೋರಿಸುವುದು, ಈ ರೀತಿ ಹಲವಾರು ಜನರಿಗೆ ಇಷ್ಟವಾಗುವ ಹೆಲ್ತ್ ಟಿಪ್ಸ್ ಗಳು ಮತ್ತು ವಿಡಿಯೋಗಳನ್ನು ಮಾಡಿ ಅಲ್ಲೂ ಕೂಡ ಫೇಮಸ್ ಆಗಿದ್ದಾರೆ.

ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಕಲರ್ಸ್ ಕನ್ನಡ ವಾಹಿನಿಯಲು ಪ್ರಸಾರವಾಗುತ್ತಿದ್ದ ರಾಜರಾಣಿ ಎನ್ನುವ ರಿಯಾಲಿಟಿ ಶೋ ಸೀಸನ್ ಒಂದರಲ್ಲಿ ಕಂಟೆಸ್ಟೆಂಟ್ಗಳಾಗಿ ಕೂಡ ಭಾಗವಹಿಸಿದ್ದರು. ಇವರಿಬ್ಬರ ನಡುವಿನ ಅನ್ಯೋನ್ಯತೆ ಹಾಗೂ ಇವರಿಬ್ಬರ ಮುದ್ದಿನ ಜೋಡಿಯನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡಾಡಿತ್ತು. ಈಗಲೂ ಸಹ ನಿವೇದಿತ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯ ಪ್ರಸಾರವಾಗುತ್ತಿರುವ ಗಿಚ್ಚ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸುತ್ತಿದ್ದಾರೆ ಇದೊಂದು ಹಾಸ್ಯಮಯ ಕಾರ್ಯಕ್ರಮ ಆಗಿರುವುದರಿಂದ ಹಾಸ್ಯ ಗೊತ್ತಿಲ್ಲದಿದ್ದರೂ ನಿವೇದಿತ ಗೌಡ ಅವರು ತಕ್ಕಮಟ್ಟಿಗೆ ಅಭಿನಯಿಸಿ ಜನರನ್ನು ಮೆಚ್ಚಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಅಲ್ಲದೆ ಪ್ರತಿ ವಾರದಿಂದ ವಾರಕ್ಕೆ ಅವರು ಅಭಿನಯದಲ್ಲಿ ಪಳಗುತ್ತಿದ್ದು ಈಗ ಅವರ ನಟನೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತಿದೆ. ಎಷ್ಟೋ ಜನ ನಿವೇದಿತ ಗೌಡ ಅವರ ಸಲುವಾಗಿಯೇ ಈ ಕಾರ್ಯಕ್ರಮವನ್ನು ನೋಡುವಂತಹ ಅಭಿಮಾನಿಗಳು ಕೂಡ ಇದ್ದಾರೆ.

ಕರ್ನಾಟಕದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿ ಕನ್ನಡಿಗರಿಗೆ ಹತ್ತಿರವಾಗಿರುವ ಇವರು ಈಗ ಕರ್ನಾಟಕದ ಹೆಸರನ್ನು ದೇಶದ ಮಟ್ಟಕ್ಕೆ ಗುರುತಿಸಿಕೊಳ್ಳುವಂತಹ ಕೆಲಸ ಒಂದಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ 2022ರ ಮಿಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ನಿವೇದಿತಾ ಅವರು ಪಾರ್ಟಿಸಿಪೇಟ್ ಮಾಡುವ ಆಸಕ್ತಿ ತೋರಿದರು ಅದರ ಸಲುವಾಗಿಯೇ ಮುಂಬೈಗೆ ಹೋಗಿ ಹಲವಾರು ತರಬೇತಿಗಳನ್ನು ಮತ್ತು ಕ್ಲಾಸ್ ಗಳನ್ನು ಕೂಡ ಅಟೆಂಡ್ ಮಾಡಿ ಬಂದಿದ್ದರು. ಇವರ ತರಬೇತಿಗೆ ಸಂಬಂಧಪಟ್ಟ ಹಲವಾರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ನಿವೇದಿತ ಗೌಡ ಅವರಿಗೆ ಇಡೀ ಕರ್ನಾಟಕದ ಜನತೆ ಹರಸಿದ್ದರು. ನಮ್ಮ ಕನ್ನಡದ ಹುಡುಗಿ ಮಿಸಸ್ ಇಂಡಿಯಾ ಆಗಲಿ ಎನ್ನುವುದು ಎಲ್ಲರಿಗೂ ಆಸೆಯಾಗಿತ್ತು. ನಿವೇದಿತ ಗೌಡ ಅವರು ಕೂಡ ಇಷ್ಟೆಲ್ಲ ಬಿಜಿ ಇದ್ದರೂ ಈ ಕಾಂಪಿಟೇಶನ್ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದರು.

ಡಯಟ್ ಹಾಗೂ ಬಾಡಿ ಲ್ಯಾಂಗ್ವೇಜ್, ವಾಕಿಂಗ್ ಸ್ಟೈಲ್ ಇವೆಲ್ಲವನ್ನು ಟ್ರೈನಿಂಗ್ ಪಡೆಯುತ್ತಿದ್ದ ನಿವೇದಿತ ಗೌಡ ಅವರು ಒಮ್ಮೆ ಸಂದರ್ಶನದಲ್ಲಿ ನನಗೆ ಈ ಕಾಂಪಿಟೇಶನ್ ಅಲ್ಲಿ ಭಾಗವಹಿಸಲು ಐಶ್ವರ್ಯ ರೈ ಅವರ ಸ್ಪೂರ್ತಿ ಎಂದು ಕೂಡ ಹೇಳಿಕೊಂಡಿದ್ದರು. ಈಗ ನಮ್ಮ ಈ ಕನ್ನಡತಿ ಮಿಸಸ್ ಇಂಡಿಯಾ ಇಂಕ್ ನ ಪೀಪಲ್ ಚಾಯ್ಸ್ ಅವಾರ್ಡ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಧಿಕೃತ ವರದಿಯನ್ನು ಸಂಸ್ಥೆಯೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ನಿವೇದಿತ ಗೌಡ ಅವರಿಗೆ ನೀವು ಕೋಟ್ಯಾಂತರ ಹೃದಯಗಳನ್ನು ಗೆದ್ದಿದ್ದೀರಿ, ಎಲ್ಲರಿಗೂ ನೀವು ಇಷ್ಟವಾಗಿದ್ದೀರಿ ಅದೇ ನಿಜವಾದ ಸಾಧನೆ ಎಂದು ಅಭಿನಂದಿಸಿ ಶುಭಾಶಯ ಕೋರಿದೆ. ಭಾರತದ ಹಲವಾರು ರಾಜ್ಯಗಳಿಂದ ಈ ಮಿಸಸ್ ಇಂಡಿಯಾ ಅವಾರ್ಡ್ ಕಾಂಪಿಟೇಶನ್ ಗೆ ಸ್ಪರ್ಧಿಸಿದ್ದರು ಆದರೆ ಅವರೆಲ್ಲರನ್ನೂ ಕೂಡ ಹಿಂದಿಕ್ಕಿ ನಮ್ಮ ಕನ್ನಡ ಮಿಸಸ್ ಇಂಡಿಯಾ ಅವಾರ್ಡ್ ಗಳಿಸಿಕೊಂಡಿರುವುದು ನಿಜಕ್ಕೂ ಕೂಡ ಮೆಚ್ಚುವಂತಹ ವಿಚಾರವೇ ಹಾಗಾಗಿ ದಯವಿಟ್ಟು ಎಲ್ಲರೂ ನಿವೇದಿತಾ ಗೌಡ ಅವರಿಗೆ ಶುಭಾಶಯವನ್ನು ಸಲ್ಲಿಸಿ ಹಾಗೂ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಹೆಚ್ಚು ಜನಕ್ಕೆ ಶೇರ್ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

Leave a Comment

%d bloggers like this: