ಈ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವರ ಬದುಕು, ಒಂದು ರೀತಿ ನೀರಿನ ಮೇಲಿರುವ ಗುಳ್ಳೆಯ ಹಾಗೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಕ್ಕಿಂತಲೂ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಂಧಗಳು ಹೆಚ್ಚು ವಿವಾದಕ್ಕೆ ಈಡಾಗುತ್ತವೆ ಹಾಗೂ ಸಂಸಾರದಲ್ಲೂ ಸಹ ಯಾವಾಗಲೂ ಅಪಸ್ವರಗಳು ಇದ್ದೇ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ಈಗಾಗಲೇ ಸಾಕಷ್ಟು ನಟರ ಜೀವನ ಹಾಗೂ ನಟಿಯರ ಬದುಕಲ್ಲಿ ಈ ರೀತಿ ಬಿರುಗಾಳಿಗಳು ಎದ್ದಿರುವ ವಿಷಯವನ್ನು ಕೇಳಿದ್ದೇವೆ ಹಾಗೂ ಓದಿದ್ದೇವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮದುವೆಯಾಗುವ ಜೋಡಿಗಳು ಅಂದರೆ ನಟ ನಟಿಯರು ವಿವಾಹವಾದಾಗ ಅಥವಾ ನಿರ್ಮಾಪಕರು ಮತ್ತು ನಟಿ ಮದುವೆ ಆದಾಗ ಅಥವಾ ನಿರ್ದೇಶಕರು ಹಾಗೂ ನಟಿ ಮದುವೆಯಾದಾಗ ಈ ಸಂಬಂಧಗಳು ಅತಿ ಬೇಗನೆ ಮುರಿದು ಬಿದ್ದಿರುವ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇದಕ್ಕೆಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಅವರು ತೊಡಗಿಕೊಂಡಿರುವುದೇ ಒಂದು ಪ್ರಮುಖ ಕಾರಣ ಆಗಿರಲೂ ಬಹುದು.
ತಮ್ಮ ಕೆರಿಯರ್ ಬೆಳೆಯಲು ಎಲ್ಲಿ ಮದುವೆ ವಿಷಯ ಅಡ್ಡಿಯಾಗುತ್ತದೆ ಎಂದು ಹೆಚ್ಚಿನ ನಟಿಮಣಿಯರು ಹಲವು ವರ್ಷಗಳವರೆಗೆ ಮದುವೆಯಿಂದ ದೂರ ಉಳಿಯುತ್ತಾರೆ ಹಾಗೂ ಎಷ್ಟೋ ಜನ ಡೈರೆಕ್ಟರ್ಗಳು ಸಹ ಮದುವೆಯ ಸಹವಾಸವೇ ಬೇಡ ನಾವು ಇಲ್ಲೇ ಸಾಧನೆ ಮಾಡುತ್ತಾ ಬದುಕು ಕಳೆದು ಬಿಡೋಣ ಎಂದು ಯೋಚನೆ ಕೂಡ ಮಾಡುತ್ತಾರೆ. ಆದರೂ ಕೂಡ ಎಷ್ಟೇ ಅರ್ಥಮಾಡಿಕೊಂಡಿದ್ದರು ಪ್ರೀತಿಸಿ ವಿವಾಹವಾಗಿದ್ದರೂ ಕೂಡ ಅಂತಹ ಜೋಡಿಗಳ ಬಂಧವೇ ಕೆಲವೇ ವರ್ಷಗಳಲ್ಲಿ ಮುರಿದು ಬಿದ್ದಿರುವುದನ್ನು ಕಂಡಿದ್ದೇವೆ ಮತ್ತು ಹಲವು ದಶಕಗಳ ವರೆಗೆ ದಾಂಪತ್ಯ ನಡೆಸಿದವರು ಕೂಡ ನಂತರ ವಿವಾಹ ವಿ.ಚ್ಛೇ.ದ.ನ.ಕ್ಕೆ ಕೋರ್ಟ್ ಮೆಟ್ಟಿಲು ಏರುತ್ತಿರುವುದು ಇನ್ನೂ ಹೆಚ್ಚಿನ ಆಶ್ಚರ್ಯವನ್ನು ತಂದೊಡ್ಡುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹು ಭಾಷಾ ನಟಿ ರಮ್ಯಾ ಕೃಷ್ಣ ಅವರ ವಿಚ್ಛೇದನದ ವಿಷಯ ಬಹಳ ಚರ್ಚೆಯಾಗುತ್ತಿದೆ.
ನಟಿ ರಮ್ಯಕೃಷ್ಣ ಅವರು ಕನ್ನಡ ಸೇರಿದಂತೆ ತಮಿಳು ತೆಲುಗು ಮಲಯಾಳಂ ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ. ಇಂದಿಗೂ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಉಳಿಸಿಕೊಂಡಿರುವ ನಟಿ. ಬಾಲ್ಯದಲ್ಲಿಯೇ ಭರತನಾಟ್ಯ ಹಾಗೂ ಕುಚುಪುಡಿ ಯಲ್ಲಿ ಪ್ರವೀಣತೆ ಪಡೆದಿದ್ದ ಇವರು ಇದೇ ಕಾರಣದಿಂದಾಗಿ ತಮ್ಮ 13ನೇ ವಯಸ್ಸಿಗೆ ಮಲಯಾಳಂ ಸಿನಿಮಾ ಒಂದರ ಮೂಲಕ ಸಿನಿ ಪಯಣವನ್ನು ಶುರು ಮಾಡಿದರು. ಅಂದಿನಿಂದಲೂ ಕೂಡ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ನಟಿ ರಮ್ಯಕೃಷ್ಣ ಅವರು ಕನ್ನಡದಲ್ಲೂ ಕೂಡ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ಜೋಡಿಯಾಗಿ ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಅವರು ಕನ್ನಡದಲ್ಲಿ ನೀಲಾಂಬರಿ, ಗಡಿಬಿಡಿ ಗಂಡ, ಸ್ನೇಹ, ಮಾಂಗಲ್ಯಂ ತಂತು ನಾನೇನಾ, ಯಾರೇ ನೀ ಅಭಿಮಾನಿ, ರಕ್ತ ಕಣ್ಣೀರು, ಬಾ ಬಾರೋ ರಸಿಕ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು ತಮ್ಮ ವೃತ್ತಿ ಜೀವನದ ಯಶಸ್ಸಿನಲ್ಲಿ ಇದ್ದಾಗಲೇ ಅಂದರೆ ತಮ್ಮ 33ನೇ ವಯಸ್ಸಿಗೆ ತೆಲುಗಿನ ಖ್ಯಾತ ನಿರ್ದೇಶಕರಾದ ಕೃಷ್ಣ ವಂಶಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ಇವರ ಮದುವೆಯ ಬಗ್ಗೆ ಸಾಕಷ್ಟು ಗಾಸಿಪ್ ಗಳು ಕೂಡ ಹರಿದಾಡಿದ್ದವು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು ನಿಜ ಆದರೆ ರಮ್ಯಕೃಷ್ಣ ಅವರು ಕುಟುಂಬದ ಒಪ್ಪಿಗೆ ಇಲ್ಲದಿದ್ದರೂ ಕೂಡ ಹಠ ಮಾಡಿ ಕೃಷ್ಣವಂಶಿ ಅವರನ್ನೇ ವರಿಸುವುದಕ್ಕಾಗಿ ಕಾದಿದ್ದು ಅವರನ್ನು ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೂಡ ಆ ಸಮಯದಲ್ಲಿ ಹರಿದಾಡಿದ್ದವು. ಹಲವು ವರ್ಷಗಳವರೆಗೆ ಇವರ ದಾಂಪತ್ಯ ತುಂಬಾ ಚೆನ್ನಾಗಿತ್ತು. ಕೃಷ್ಣವಂಶಿ ಅವರು ತೆಲುಗಿನಲ್ಲಿ ಖಡ್ಗಂ ಮುರಾರಿ ಇನ್ನು ಮುಂತಾದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ ಅವರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಹೀಗಾಗಿ ಅವರಿಬ್ಬರ ನಡುವೆ ಸ್ನೇಹವಾಗಿ ನಂತರ ಆ ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ಮದುವೆಯ ನಿರ್ಧಾರ ಮಾಡಿದರು. ಇವರ ಇಬ್ಬರ ವಿವಾಹಕ್ಕೆ ಸಾಕ್ಷಿಯಾಗಿ ಒಬ್ಬ ಗಂಡು ಮಗು ಕೂಡ ಇವರಿಗೆ ಇದ್ದಾರೆ.
ರಮ್ಯಕೃಷ್ಣ ಅವರು ಈಗ ತಮ್ಮ ವೃತ್ತಿ ಜೀವನದ ಸೆಕೆಂಡ್ ಇನ್ನಿಂಗ್ ಶುರು ಮಾಡಿದ್ದಾರೆ ಎನ್ನಬಹುದು. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ರಮ್ಯಕೃಷ್ಣ ಅವರು ಕನ್ನಡದಲ್ಲಿ ಮಾಣಿಕ್ಯ ಮತ್ತು ಅಂಜನಿಪುತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಎನ್ನುವ ಸಿನಿಮಾದಲ್ಲಿ ಅವರು ಅಭಿನಯ ಮಾಡಿದ ಶಿವಗಾಮಿ ಪಾತ್ರವೂ ಮತ್ತೊಮ್ಮೆ ಅವರೊಬ್ಬರು ಎಂತಹ ಅದ್ಭುತ ನಟಿ ಎನ್ನುವುದಕ್ಕೆ ಸಾಕ್ಷಿ ಆಗಿದೆ. ಈಗಲೂ ಸಹ ಕೋಟಿ ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗೆ ಗುರಿ ಆಗಿರುವ ಇವರ ವೈವಾಹಿಕ ಬದುಕು ಮಾತ್ರ ಹಳಿ ತಪ್ಪಿದೆ ಎಂದು ಸಿನಿಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಕೃಷ್ಣವಂಶಿ ಹಾಗೂ ರಮ್ಯಾ ಕೃಷ್ಣ ಅವರ ನಡುವೆ ಹಲವಾರು ವಿಷಯಗಳಿಗೆ ಮನಸ್ತಾಪಗಳು ಇದ್ದು ಈ ಕಾರಣದಿಂದ ಕೃಷ್ಣ ವಂಶಿ ಅವರು ಸಿನಿಮಾ ನಿರ್ದೇಶನದಿಂದ ದೂರ ಉಳಿದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಆದರೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಕೃಷ್ಣ ವಂಶಿ ಅವರು ಮಾತ್ರ ನಾನು ಮದುವೆ ಆಗುವುದೇ ಬೇಡ ಎನ್ನುವ ನಿರ್ಧಾರದಲ್ಲಿ ಇದ್ದೆ ಆದರೆ ರಮ್ಯಾ ಕೃಷ್ಣ ಅವರು ನನ್ನ ಬದುಕಿಗೆ ಬಂದ ಮೇಲೆ ನಾನು ಹಿಂದಿನ ಜೀವನಕ್ಕಿಂತ ಹೆಚ್ಚು ಖುಷಿಯಾಗಿದ್ದೆ. ಈಗ ಹರಿದಾಡುತ್ತಿರುವ ಮಾತುಗಳ ಬಗ್ಗೆ ನನಗೂ ಗಮನವಿದೆ ಆದರೆ ನಾವಿಬ್ಬರು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವುದರಿಂದ ನಮ್ಮ ನಡುವೆ ಯಾವುದೇ ಸಣ್ಣಪುಟ್ಟ ವಿಚಾರ ಆದರೂ ಕೂಡ ಅದು ಬಹು ದೊಡ್ಡ ಮಟ್ಟಿಗೆ ಸುದ್ದಿ ಆಗುತ್ತದೆ. ಈ ವಿಷಯದ ಬಗ್ಗೆ ನಾನು ಈಗಲೇ ಎಲ್ಲವನ್ನು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿ ಸುಮ್ಮನಾಗಿದ್ದಾರೆ. ಆದರೆ ರಮ್ಯಾ ಕೃಷ್ಣ ಅವರು ಮಾತ್ರ ತಮ್ಮ ಆಪ್ತರೊಂದಿಗೆ ನಾನು ನನ್ನ ಪತಿಯಿಂದ ದೂರಾಗುತ್ತಿದ್ದೇನೆ ವಿ.ಚ್ಛೇ.ದ.ನ ಪಡೆಯುವುದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಮ್ಯಕೃಷ್ಣ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ