ಶ್ರೀಮಂತರಾಗುವ ಅದೃಷ್ಟ ಹೊಂದಿರುವ ರಾಶಿಗಳು ಯಾವುದು ಅಂತ ನೋಡಿ. ಈ ರಾಶಿಯಲ್ಲಿ ನೀವೇನಾದರೂ ಜನಿಸಿದ್ದರೆ ರಾಜಯೋಗ‌.!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗೂ ಭವಿಷ್ಯದ ಕೇಳುವುದರಲ್ಲಿ ಜನರಿಗೆ ಬಹಳ ಆಸಕ್ತಿ. ಈ ರೀತಿ ಶಾಸ್ತ್ರ ಕೇಳುವುದು ಹಾಗೂ ನಂಬುವುದು ಬಹಳ ಹಿಂದಿನಲ್ಲೂ ನಮಗೆ ರೂಢಿಯಾಗಿ ಬಿಟ್ಟಿದೆ. ಮಗು ಹುಟ್ಟಿದ ದಿನದಂದಲೇ ಆ ಮಗುವಿನ ರಾಶಿ ನಕ್ಷತ್ರ ಹುಟ್ಟಿದ ಗಳಿಗೆ ಸಮಯ ತಿಥಿ ಕರಣ ಯೋಗ ಮುಂತಾದವುಗಳನ್ನು ನೋಡಿ ಆ ಮಗುವಿಗೆ ಭವಿಷ್ಯ ಹೇಗಿದೆ ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಹಾಗೂ ಯಾವುದೇ ಮನುಷ್ಯನೇ ಆದರೂ ಅವನ ವ್ಯಕ್ತಿತ್ವವನ್ನು ನೋಡಿ ಇವನು ಇಂಥ ರಾಶಿಯವನೇ ಅಥವಾ ಇಂತ ನಕ್ಷತ್ರದವನೇ ಎಂದು ಕೂಡ ಲೆಕ್ಕಾಚಾರ ಆಗಬಹುದು ಅಷ್ಟರಮಟ್ಟಿಗೆ ಈ ಜ್ಯೋತಿಷ್ಯ ಎನ್ನುವುದು ಮನುಷ್ಯನ ವ್ಯಕ್ತಿತ್ವದಲ್ಲಿ ತಾಳೆ ಆಗುತ್ತದೆ. ಇಂತಹ ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲು ಸಾಧ್ಯವಾಗದ ಮಟ್ಟಿಗೆ ಅನೇಕ ಅಚ್ಚರಿಯ ವಿಷಯಗಳು ಕೂಡ ಅಡಗಿವೆ ಅವುಗಳಲ್ಲಿ ಪ್ರಮುಖವಾಗಿ ಕೆಲವೊಂದು ರಾಶಿಗಳು ಮನುಷ್ಯನಿಗೆ ಶ್ರೀಮಂತನಾಗುವ ಸೂಚನೆಗಳನ್ನು ಕೊಡುತ್ತವೆ ಎನ್ನುವುದು.

ಪ್ರಮುಖವಾಗಿ ನಾಲ್ಕು ರಾಶಿಗಳು ಈ ರೀತಿ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ ಮೊದಲಿಗೆ ಮೇಷ ರಾಶಿ. ಮೇಷ ರಾಶಿಯವರು ಬಹಳ ಹಠ ಸ್ವಭಾವದವರಾಗಿದ್ದರೂ ಇವರಿಗೆ ಅಂದುಕೊಂಡಿದ್ದನ್ನು ದಕ್ಕಿಸಿಕೊಳ್ಳಲೇಬೇಕಾದ ಆಸೆ ಬಹಳಷ್ಟು ಇರುತ್ತದೆ. ಇವರ ನಿರೀಕ್ಷೆಗೆ ತಕ್ಕಹಾಗೆ ಎಲ್ಲಾ ಸುಖ ಸಂಪತ್ತು ಕೂಡ ಇವರ ಪಾಲಿಗೆ ಸಿಗುತ್ತದೆ. ಜೀವನದಲ್ಲಿ ಹೆಚ್ಚು ಪರಿಶ್ರಮ ಇಲ್ಲದೆ ಇವರು ಅದೃಷ್ಟದಿಂದಲೇ ಹೆಚ್ಚಿದನ್ನು ಗಳಿಸುತ್ತಾರೆ ಮತ್ತು ಯಾವಾಗಲೂ ಇವರಿಗೆ ಶುಭವೇ ಆಗುತ್ತಿರುತ್ತದೆ. ಇವರು ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ಸರಾಗವಾಗಿ ಅದರಲ್ಲಿ ಗೆಲ್ಲುತ್ತಾರೆ ಇವರು ಬಹಳಷ್ಟು ಬುದ್ಧಿವಂತರು ಕೂಡ ಆಗಿರುತ್ತಾರೆ ಹಾಗೂ ಕುಟುಂಬದವರು ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಒಟ್ಟಿನಲ್ಲಿ ಈ ರಾಶಿಯವರು ತುಂಬಾ ಅದೃಷ್ಟ ಮಾಡಿರುತ್ತಾರೆ ಎಂದು ಹೇಳಬಹುದು ಹಾಗಾಗಿ ಇವರಿಗೆ ಎಲ್ಲವೂ ತಾನಾಗೆ ಒಲಿದು ಬರುತ್ತಿರುತ್ತದೆ.

ವೃಷಭ ರಾಶಿಯವರು ಈ ರಾಶಿಯವರು ಸಹ ಅದೃಷ್ಟ ಶಾಲಿಗಳು ಯಾಕೆಂದರೆ ಇವರಿಗೂ ಸಹ ಜೀವನದಲ್ಲಿ ಬಹಳ ಮಹತ್ವಕಾಂಕ್ಷೆ ಇರುತ್ತದೆ. ಹಾಗೂ ಅವುಗಳನ್ನು ಸಾಧಿಸಲು ಇವರು ಬಹಳ ಕಷ್ಟ ಪಡುತ್ತಾರೆ ಆದರೂ ಕೂಡ ಇವರು ಅದೃಷ್ಟದಿಂದ ಕೆಲವೊಮ್ಮೆ ಪಡೆದರೆ ಕೆಲವೊಂದನ್ನು ಪ್ರಯತ್ನ ಮಾಡಿದರೆ ಪಡದೆ ಪಡೆಯುವ ಅದೃಷ್ಟ ಹೊಂದಿರುತ್ತಾರೆ, ಒಟ್ಟಿನಲ್ಲಿ ಇವರಿಗೂ ಕೂಡ ಇವರ ಜೀವನದ ಬಹುದೊಡ್ಡ ಆಸೆ ಕನಸು ಏನಿರುತ್ತದೆ ಅದನ್ನು ಬಿಟ್ಟು ಕೊಡುವ ಮನಸಿರುವುದಿಲ್ಲ ಹಾಗಾಗಿ ಇವರು ಕೂಡ ಇವರ ಲೆಕ್ಕಾಚಾರಗಳನ್ನು ಮೀರಿ ತಾವು ಅಂದುಕೊಂಡಿದ್ದನ್ನು ಸಾಧಿಸಿಯೇ ಸಾಧಿಸುತ್ತಾರೆ. ಇವರಿಗೂ ಸಹ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಕಾಣುವುದಿಲ್ಲ ಇವರಿಗೆ ಆಸ್ತಿಯ ವಿಚಾರವಾಗಲಿ ಸಂಪತ್ತಿನ ವಿಚಾರವಾಗಲಿ ಯಾವುದೇ ಸಮಸ್ಯೆ ನೀಡುವುದಿಲ್ಲ ಒಂದು ರೀತಿಯಲ್ಲಿ ಇವರು ಕೂಡ ಮೇಷ ರಾಶಿಯವರಂತೆಯೇ ಹುಟ್ಟಿನಿಂದಲೇ ಒಂದು ರೀತಿಯಲ್ಲಿ ಅದೃಷ್ಟ ಪಡೆದು ಹುಟ್ಟಿರುತ್ತಾರೆ ಎಂದು ಹೇಳಬಹುದು.

ಸಿಂಹ ರಾಶಿಯವರು ಕೂಡ ಹುಟ್ಟಿನಿಂದಲೇ ಬಹಳ ಅದೃಷ್ಟ ಶಾಲಿಗಳು ಯಾಕೆಂದರೆ ಇವರು ಕೂಡ ಉಳಿದ ಎಲ್ಲ ರಾಶಿಗಳಿಗಿಂತಲೂ ಹೆಚ್ಚು ಸಂತೋಷವಾಗಿರುತ್ತಾರೆ. ಇವರು ಬಹಳ ಧೈರ್ಯವಂತರು ಕೂಡ ಆಗಿರುತ್ತಾರೆ. ಯಾವುದೇ ಕೆಲಸಕ್ಕೂ ಕೂಡ ಹೆದರದೆ ಮುನ್ನುಗುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇದಕ್ಕೆ ತಕ್ಕ ಹಾಗೆ ಇವರಿಗೆ ಸುತ್ತಮುತ್ತಲಿನ ಎಲ್ಲರೂ ಕೂಡ ಸಹಕಾರವನ್ನು ಕೊಡುತ್ತಾರೆ. ವಿದ್ಯಾಭ್ಯಾಸದಲ್ಲೇ ಆಗಲಿ, ವಿದೇಶಗಳಿಗೆ ಹೋಗುವ ಆಸೆ ಆಗಲಿ, ವ್ಯಾಪಾರ ವ್ಯವಹಾರ ಆಗಲಿ ಅಥವಾ ಜೀವನವೇ ಆಗಲಿ ಎಲ್ಲದರಲ್ಲೂ ಕೂಡ ಇವರು ಇವರ ಲೆಕ್ಕಾಚಾರದ ಹಾಗೆ ಬದುಕುತ್ತಾರೆ ಇವರು ತುಂಬಾ ಸಂತೋಷವಾಗಿ ಜೀವನ ಕಳೆಯುತ್ತಾರೆ ಮತ್ತು ಇವರಿಗೂ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಭಾದಿಸುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಇವರು ಒಂದು ರೀತಿಯಲ್ಲಿ ಎಲ್ಲರೂ ಮೆಚ್ಚುವ ಜೀವನ ಶೈಲಿಯನ್ನು ಹೊಂದಿರುತ್ತಾರೆ ಎನ್ನಬಹುದು ಇವರು ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸುವುದರ ಜೊತೆಗೆ ಬಹಳಷ್ಟು ಜನರಿಗೆ ಆದರ್ಶವೂ ಕೂಡ ಆಗುತ್ತಾರೆ.

ಇನ್ನೂ ಕೊನೆಯದಾಗಿ ಮಕರ ರಾಶಿಯವರು, ಮಕರ ರಾಶಿಯವರು ಸಹ ಬಹಳ ಅದೃಷ್ಟಶಾಲಿ ರಾಶಿಯವರಾಗಿರುತ್ತಾರೆ, ಈ ರಾಶಿಯಲ್ಲಿ ಹುಟ್ಟಿದವರು ಸಹ ಜೀವದಲ್ಲೇ ಅಷ್ಟು ಸುಲಭವಾಗಿ ಸೋಲುಗಳನ್ನು ಒಪ್ಪಿಕೊಳ್ಳುವುದಿಲ್ಲ ಇವರಿಗೂ ಸಹ ಹೊಂದಾಣಿಕೆಯ ಅಥವಾ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬದುಕುವುದು ಇಷ್ಟವಿರುವುದಿಲ್ಲ ಇವರಿಗೆ ಇವರ ಆಸೆ ಏನಿರುತ್ತದೆ ಆ ರೀತಿ ಬದುಕಲು ಇಷ್ಟ. ಅದಕ್ಕಾಗಿ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನೆಲ್ಲ ಫೇಸ್ ಮಾಡುತ್ತಾರೆ. ಎಲ್ಲ ಕಷ್ಟಗಳ ನಡುವೆ ಇವರು ಆಸೆಪಟ್ಟಿದ್ದನ್ನು ಧಕ್ಕಿಸಿಕೊಂಡಾಗ ಮಾತ್ರ ಇವರಿಗೆ ಹೆಚ್ಚಿನ ಸಂತೋಷ ಸಿಗುವುದು ಮತ್ತು ಈ ರಾಶಿಯವರು ಬಹಳ ಸಮಯದವರೆಗೆ ಕಾದು ತಮ್ಮ ಸಾಧನೆ ಮಾಡಬೇಕಾಗುತ್ತದೆ ಆದರೂ ಕೂಡ ಅಂತಿಮವಾಗಿ ಗೆಲುವು ಇವರದ್ದೇ ಆಗಿರುತ್ತದೆ. ಇವರು ಅಷ್ಟೇ ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಇವರು ಬಹು ದೊಡ್ಡ ಕನಸುಗಳನ್ನು ಹೊಂದಿರುತ್ತಾರೆ ಹಾಗೂ ಆ ಕಡೆಗೆ ಯೋಚನೆ ಮಾಡುತ್ತಿರುತ್ತಾರೆ.

ಈ ನಾಲ್ಕು ರಾಶಿಗಳಲ್ಲಿ ಹುಟ್ಟಿದ ಹಲವಾರು ಜನರು ಈಗಾಗಲೇ ಸಕ್ಸಸ್ ಕೂಡ ಆಗಿದ್ದಾರೆ. ಅದಕ್ಕೆ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ನೀವು ಏನಾದರೂ ಇದೇ ರಾಶಿಯಲ್ಲಿ ಜನಿಸಿದವರು ಆಗಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಿ ಹಾಗೂ ನೀವು ಕೂಡ ಇದೇ ರೀತಿ ಯೋಚಿಸುತ್ತಿದ್ದೀರಾ ಎಂದರೆ ಅತಿ ಶೀಘ್ರದಲ್ಲೇ ನೀವು ಕೂಡ ನಿಮ್ಮೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳುತ್ತೀರಾ ಹಾಗೂ ನೀವು ಅಂದುಕೊಂಡಂತಹ ಅದೃಷ್ಟಕರವಾದ ಜೀವನ ನಡೆಸುತ್ತೀರಾ ಎಂದು ಅರ್ಥ ಆದರೆ ಅದರ ಜೊತೆಗೆ ನಿಮ್ಮ ಪ್ರಯತ್ನವೂ ಕೂಡ ಇರಬೇಕಾಗುತ್ತದೆ. ನಿಮಗಿರುವ ನಿರ್ದಿಷ್ಟ ಗುರಿ ಕಡೆಗೆ ಛಲ ಬಿಡದೆ ಸತತ ಪ್ರಯತ್ನ ಮಾಡಿದರೆ ಖಂಡಿತ ಭಗವಂತನ ಆಶೀರ್ವಾದದಿಂದ ನಿಮ್ಮೆಲ್ಲ ಕನಸುಗಳು ಸಾಕಾರಗೊಳ್ಳುತ್ತದೆ.

Leave a Comment

%d bloggers like this: