ಈ ದಿನಾಂಕದಂದು ನೀವೇನಾದರೂ ಜನಿಸಿದ್ದರೆ ಅದೃಷ್ಟವೋ ಅದೃಷ್ಟ, 25 ವರ್ಷದ ನಂತರ ಯಶಸ್ಸು ಎಂಬುದು ನಿಮ್ಮ ಬೆನ್ನಟ್ಟಿ ಬರುತ್ತದೆ.

ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿ ಒಬ್ಬನ ವ್ಯಕ್ತಿತ್ವ ಹಾಗೂ ಅವನ ಭವಿಷ್ಯವನ್ನು ಅಳೆಯಬಹುದು ಎನ್ನುತ್ತಾರೆ. ಇದರಲ್ಲಿ ನಮ್ಮ ಭಾರತೀಯರು ಬಹಳಷ್ಟು ನಂಬಿಕೆ ಕೂಡ ಇಟ್ಟಿದ್ದಾರೆ. ಇದು ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಫೇಮಸ್ ಆಗಿರುವ ಒಂದು ಜ್ಯೋತಿಷ್ಯ ಶಾಸ್ತ್ರವಾಗಿದೆ. ಸಂಖ್ಯಾಶಾಸ್ತ್ರವನ್ನು ಜಗತ್ತಿನ ಅನೇಕ ಜನರು ನಂಬುತ್ತಾರೆ ಯಾಕೆಂದರೆ ಇದನ್ನು ಹುಟ್ಟಿದ ದಿನಾಂಕದ ಆಧಾರದ ಮೇಲೆ ಹಾಗೂ ಹುಟ್ಟಿದ ದಿನದ ಜೊತೆ ಹುಟ್ಟಿದ ತಿಂಗಳು ಮತ್ತು ವರ್ಷವನ್ನು ಕೂಡಿಸುವುದರಿಂದ ಬರುವ ಭಾಗ್ಯ ಸಂಖ್ಯೆಯ ಮೂಲಕ ಹೇಳುವುದರಿಂದ ಹೆಚ್ಚಿನ ಜನಕ್ಕೆ ಇದರ ಮೇಲೆ ನಂಬಿಕೆ ಜಾಸ್ತಿ ಮತ್ತು ಯಾವುದೇ ಧರ್ಮದವರಾದರೂ ಯಾವುದೇ ದೇಶದವರಾದರು ಇದು ಎಲ್ಲರಿಗೂ ತುಂಬಾ ಕಾಮನ್ ಆಗಿರುವ ವಿಷಯ ಆಗಿರುವುದರಿಂದ ಎಲ್ಲರೂ ಕೂಡ ಈ ರೀತಿ ನಂಬರ್ ಗಳ ಮೇಲೆ ಅಥವಾ ಹುಟ್ಟಿದ ದಿನಾಂಕದ ಮೇಲೆ ಅಥವಾ ಹೆಸರಿಗೆ ಸಂಬಂಧಪಟ್ಟ ಹಾಗೆ ಹೇಳುವ ಶಾಸ್ತ್ರವನ್ನು ತುಂಬಾ ನಂಬಿಕೆಯಿಂದ ಕೇಳುತ್ತಾರೆ.

ಇಂತಹ ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಗೂ ಕೂಡ ತನ್ನದೇ ಆದ ವಿಶೇಷ ಶಕ್ತಿ ಇದೆ ಹಾಗೂ ಪ್ರತಿಯೊಂದು ಸಂಖ್ಯೆಗೂ ಕೂಡ ತನಗೆ ಹೊಂದುವ ಸಂಖ್ಯೆ ಹಾಗೂ ತನಗೆ ತೊಂದರೆ ಕೊಡುವ ಸಂಖ್ಯೆ ಎನ್ನುವ ಕಾಂಬಿನೇಷನ್ ಕೂಡ ಇದೆ. ಇವುಗಳನ್ನೇ ಲಕ್ಕಿ ನಂಬರ್ ಹಾಗೂ ಎನಿಮಿ ನಂಬರ್ ಎಂದು ಕರೆಯುತ್ತಾರೆ. ಯಾವ ಯಾವ ಸಂಖ್ಯೆಯಲ್ಲಿ ಜನಿಸಿದವರು ಯಾರನ್ನು ಮದುವೆಯಾದರೆ ಚೆನ್ನಾಗಿರುತ್ತಾರೆ. ಹಾಗೂ ಯಾವ್ಯಾವ ದಿನಾಂಕದವರು ಯಾವ ದಿನಾಂಕದಲ್ಲಿ ತಮ್ಮ ಹೊಸ ಕೆಲಸಗಳನ್ನು ಶುರು ಮಾಡಿದರೆ ಫಲ ಕಾಣುತ್ತಾರೆ ಮತ್ತು ಯಾವ ದಿನಾಂಕಗಳಂದು ತಾವು ಯಾವುದೇ ಹೊಸ ಕೆಲಸಗಳನ್ನು ಶುರು ಮಾಡುವುದು ಒಳಿತಲ್ಲ ಅಥವಾ ಯಾವುದೇ ಶುಭ ಕಾರ್ಯವನ್ನು ಮಾಡದೆ ಇರುವುದು ಒಳ್ಳೆಯದು ಈ ರೀತಿ ಎಲ್ಲ ಸೂಚನೆಗಳು ಕೂಡ ಸಂಖ್ಯಾಶಾಸ್ತ್ರವನ್ನು ನೋಡುವುದರಿಂದ ಹಾಗೂ ತಿಳಿದುಕೊಳ್ಳುವುದರಿಂದ ಗೊತ್ತಾಗುತ್ತದೆ.

ಮತ್ತು ಸಂಖ್ಯಾಶಾಸ್ತ್ರದಲ್ಲಿ ವಿಶೇಷವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಅಳೆಯಬಹುದು ಅದಕ್ಕೆ ಸಂಬಂಧಪಟ್ಟ ಹಾಗೆ ರಾಡಿಕ್ ಸಂಖ್ಯೆ ಎಂದು ಕರೆಯಲಾಗುವ 8ನೇ ಸಂಖ್ಯೆಯ ವ್ಯಕ್ತಿತ್ವವನ್ನು ನಾವಿಲ್ಲಿ ವಿವರಿಸಿದ್ದೇವೆ. ರಾಡಿಕ್ಸ್ ಸಂಖ್ಯೆ ಎಂದರೆ 8. ಎಂಟು ಎಂದರೆ ಇದರಲ್ಲಿ 8,17 ಹಾಗೂ 26 ಈ ಮೂರು ಸಂಖ್ಯೆಗಳನ್ನು ಜನಿಸಿದವರನ್ನು ಕೂಡ ರಾಡಿಕ್ಸ್ ಸಂಖ್ಯೆಗಳಲ್ಲಿ ಜನಿಸಿದವರು ಎಂದು ಕರೆಯುತ್ತಾರೆ. ಯಾವುದೇ ತಿಂಗಳ ಎಂಟನೇ ತಾರೀಕು ಅಥವಾ 17ನೇ ತಾರೀಕು ಮತ್ತು 26 ನೇ ತಾರೀಕು ಜನಿಸಿದವರು ಇಂತಹ ಗುಣಲಕ್ಷಣಗಳನ್ನು ಸಾಮಾನ್ಯವಾಗಿ ಹೊಂದಿರುತ್ತಾರೆ. ಮೊದಲನೆಯದಾಗಿ ಇವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಕುಟುಂಬಕ್ಕಾಗಿ ಮತ್ತು ಸಂಸಾರ ನಿರ್ವಹಣೆಗಾಗಿ ಎಂತಹದೇ ಕಷ್ಟ ಕೆಲಸಗಳನ್ನು ಕೂಡ ಮಾಡಲು ತಯಾರಾಗಿರುತ್ತಾರೆ. ಇವರು ಹೆಚ್ಚಾಗಿ ಶ್ರಮ ವಿನಿಯೋಗಿಸಿ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.

ಇವರು ದೇವರ ಮೇಲೆ ತುಂಬಾ ನಂಬಿಕೆ ಹೊಂದಿರುತ್ತಾರೆ ಮತ್ತು ಎಲ್ಲ ಮನುಷ್ಯರ ಮೇಲೆ ತುಂಬಾ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯನ್ನು ಇಟ್ಟಿರುತ್ತಾರೆ, ಇವರು ಹೆಚ್ಚಾಗಿ ಜನರ ಜೊತೆ ಬೆರೆಯಲು ಇಷ್ಟಪಡುತ್ತಾರೆ ಮತ್ತು ಸ್ನೇಹಿತರು ಹಾಗೂ ಸಂಬಂಧಿಕರಿಗಾಗಿ ಎಂತಹ ಸಹಾಯವನ್ನು ಮಾಡಲು ಕೂಡ ಸಿದ್ದರಾಗಿರುತ್ತಾರೆ. ಮನುಷ್ಯರ ಹಾಗೂ ಸಂಬಂಧಿಕರ ಮತ್ತು ಸ್ನೇಹಿತರ ಕಷ್ಟದ ದಿನಗಳಲ್ಲಿ ಇವರು ಅವರ ಕೈ ಹಿಡಿಯುತ್ತಾರೆ. ಇವರಿಗೆ ಹಣದ ಬೆಲೆ ಹಾಗೂ ಸಂಬಂಧಗಳ ಮತ್ತು ಭಾವನೆಗಳ ಬೆಲೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ ಹಾಗಾಗಿ ಪ್ರತಿಯೊಬ್ಬರ ಭಾವನೆಗಳಿಗೂ ಕೂಡ ಬೆಲೆ ನೀಡುತ್ತಾರೆ. ಯಾರು ಏನನ್ನೇ ಹೇಳಿದರು ಕೂಡ ನಂಬುವ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರಿಗೆ ಇವರ ಕಣ್ಣ ಮುಂದೆ ನಡೆಯುವ ಮೋಸ ತುಂಬಾ ಚೆನ್ನಾಗಿ ಅರವಿಗೆ ಬರುತ್ತದೆ ಆದರೂ ಯಾರನ್ನು ಕೂಡ ನೇರ ನುಡಿಗಳಿಂದ ನಿಂದಿಸದೆ ಎಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ.

ಹೆಚ್ಚಾಗಿ ಇವರು ಬಾಲ್ಯದಿಂದಲೂ ಕೂಡ ತುಂಬಾ ಕಷ್ಟವನ್ನು ನೋಡಿರುವ ಜೀವಿಗಳಾಗಿರುತ್ತಾರೆ. ಹೆಚ್ಚಾಗಿ ಇವರು ಯಾರ ಸಹಾಯವಿಲ್ಲದೆ ತಾವೇ ಬೆಳೆಯುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಬೆಳೆದ ನಂತರ ಹಲವರಿಗೆ ಇವರು ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ಈ ರೀತಿ ರಾಡಿಕ್ ಸಂಖ್ಯೆಯಲ್ಲಿ ಜನಿಸಿದವರು 35 ವರ್ಷದ ನಂತರ ಜೀವನದಲ್ಲಿ ಯಶಸ್ಸನ್ನು ಕಾಣಲು ಶುರು ಮಾಡುತ್ತಾರೆ ಆದರೆ ಇವರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ ಇವರು ಹೆಚ್ಚಾಗಿ ಬೆಂಕಿ ಅಪಘಾತಗಳಿಗೆ ಒಳಗಾಗುವುದು ರಸ್ತೆ ಅಪಘಾತಗಳಿಗೆ ಒಳಗಾಗೋದು ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವಾಗ ಅಪಘಾತ ಮಾಡಿಕೊಳ್ಳುವುದು ಇಂತಹ ಅಪಘಾತದ ಸಮಸ್ಯೆಗಳಿಂದ ತುಂಬಾ ನೋವುಗಳನ್ನು ಅನುಭವಿಸುತ್ತಾರೆ. ಇವರು ಬಹಳ ಜಾಣ್ಮೆ ಹೊಂದಿರುತ್ತಾರೆ ಹಾಗೂ ಅದನ್ನು ಎಂದಿಗೂ ಪ್ರದರ್ಶನ ಮಾಡುವುದಿಲ್ಲ. ಜೀವನದಲ್ಲಿ ಅರ್ಧ ಜೀವನದ ಬಳಿಕ ಇವರು ತುಂಬಾ ಯಶಸ್ಸಿನ ಉತ್ತುಂಗವನ್ನು ಏರುತ್ತಾರೆ ಹಾಗೂ ಅದನ್ನು ಕೊನೆಯವರೆಗೂ ಕೂಡ ಕಾಯ್ದುಕೊಳ್ಳುತ್ತಾರೆ.

ಇವರು ಎಲ್ಲರಿಗೂ ಹೊಂದಿಕೊಂಡು ಹೋಗುವ ಗುಣ ಹೊಂದಿರುವುದರಿಂದ ವೈವಾಹಿಕ ಜೀವನ ಕೂಡ ತುಂಬಾ ಸುಂದರವಾಗಿರುತ್ತದೆ. ಇವರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ ಹಾಗೂ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೆ. ಇವರು ವ್ಯಕ್ತಿಯ ಮೇಲೆ ನಂಬಿಕೆ ಇಟ್ಟು ಸ್ನೇಹಿತರು ಎಂದು ಒಪ್ಪಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ ಆದರೆ ಒಮ್ಮೆ ಇವರು ಯಾರನ್ನಾದರೂ ನಂಬಿದರೆ ಪ್ರಾಮಾಣಿಕತೆಯನ್ನು ಕೊನೆಯವರೆಗೂ ಕೂಡ ಕಾಯ್ದುಕೊಳ್ಳುತ್ತಾರೆ. ಹಾಗಾಗಿ ಇವರು ಎಲ್ಲರನ್ನೂ ಅರ್ಥ ಮಾಡಿಕೊಂಡರೂ ಇವರನ್ನು ಅರ್ಥ ಮಾಡಿಕೊಳ್ಳುವ ಜನರು ಬಹಳ ಕಡಿಮೆಯೇ ಇರುತ್ತಾರೆ. ಇವರು ಬಿಜಿನೆಸ್ ಮಾಡುವ ಹಂಬಲ ಇದ್ದರೆ ರಿಯಲ್ ಎಸ್ಟೇಟ್ ಕಬ್ಬಿಣ ಅಥವಾ ನಿರ್ಮಾಣದ ಕೆಲಸಗಳಲ್ಲಿ ತೊಡಗಿಕೊಂಡರೆ ಅವುಗಳಿಂದ ಹೆಚ್ಚಾಗಿ ಲಾಭಗಳನ್ನು ಗಳಿಸುತ್ತಾರೆ. ಹಾಗೂ ಇವರು ಅಧಿಕಾರಿಗಳಾಗಿಯೂ ಕೂಡ ಉತ್ತಮ ಆಡಳಿತ ಮಾಡಬಲ್ಲರು. ಇವರ ಮೇಲೆ ದೈವಾನುಗ್ರಹ ಸದಾ ಇದ್ದೇ ಇರುತ್ತದೆ.

Leave a Comment

%d bloggers like this: