Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರವು ರಾಷ್ಟ್ರದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಹಾಗೂ ಹಿರಿಯ ನಾಗರಿಕರಿಗಾಗಿಯೇ ಕೆಲವು ಯೋಜನೆಗಳನ್ನು ವಿಶೇಷವಾಗಿ ಏರ್ಪಡಿಸಲಾಗಿದೆ ಅದನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳು ಸಾಕಷ್ಟಿವೆ.
ಅಂತವುಗಳ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಕೂಡ ಒಂದು. ಈ ಯೋಜನೆಯಡಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಮಿತಿ 80CC ವಿನಾಯಿತಿಗಿಂತ ಹೆಚ್ಚಿನ ಅನುಕೂಲತೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಏನೆಲ್ಲಾ ಲಾಭಗಳಿವೆ, ಎಷ್ಟು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎನ್ನುವುದರ ಪೂರ್ತಿ ವಿವರಣೆ ತಿಳಿದುಕೊಳ್ಳಲು ಈ ಅಂಕಣವನ್ನು ಕೊನೆಯವರೆಗೂ ಓದಿ.
ನಾವು ಎಷ್ಟೇ ಯೋಜನೆಗಳಲ್ಲಿ ಹೂಡಿಕೆ ಮಾಡಿದರೂ ಕೂಡ ಆದಾಯ ತೆರಿಗೆ ನೀತಿ 80CC ಅಡಿಯಲ್ಲಿ 1,50,000 ರವರೆಗೆ ಮಾತ್ರ ವಿನಾಯತಿಯನ್ನು ಪಡೆಯುತ್ತೇವೆ. ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಮೂಲಕ ಪ್ರಕಾರ ಹೆಚ್ಚುವರಿಯಾಗಿ ರೂ.50,000 ವಿನಾಯಿತಿ ಸಾಧ್ಯ.
ಈಗಾಗಲೇ ಸೆಕ್ಷನ್ 80CC ಅಡಿಯಲ್ಲಿ ರೂ.1,50,000 ಮಿತಿಯನ್ನು ಮೀರಿದವರು ಸಹಾ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ರೂ.50,000 ವರೆಗೆ ಹೆಚ್ಚುವರಿಯಾಗಿ ಹಣವನ್ನು ಉಳಿಸಬಹುದಾಗಿದೆ. ಈ ಹೆಚ್ಚುವರಿ ತೆರಿಗೆ ವಿನಾಯಿತಿಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD (1B) ಅಡಿಯಲ್ಲಿ ಸಾಧ್ಯವಿದೆ.
ಈ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಗ್ರಾಹಕನು ಠೇವಣಿ ಮಾಡಿದ ಕೆಲ ಮೊತ್ತದ ಹಣವು ಈಕ್ವಿಟಿ ಮತ್ತು ಸಾಲ ನಿಧಿಗಳಿಗೆ ಹೋಗುತ್ತದೆ. ಈಕ್ವಿಟಿ ಮತ್ತು ಸಾಲಕ್ಕೆ ಎಷ್ಟು ಪರ್ಸೆಂಟ್ ಹಣ ಹೋಗಬೇಕು ಎಂಬುದು ಗ್ರಾಹಕ ನದ್ದೇ ನಿರ್ಧಾರವಾಗಿರುತ್ತದೆ. ಆದರೆ 75:25, 50:50, 40:60 ಆಯ್ಕೆಗಳ ಸ್ಟ್ಯಾಂಡರ್ಡ್ ಆಪ್ಶನ್ ಇರುತ್ತದೆ.
ಅವರವರ ಇಚ್ಛೆಯ ಅಥವಾ ಅಪಾಯದ ಪ್ರೊಫೈಲ್‌ಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಆಪ್ಷನ್ ಗೆ ಅನ್ವಯವಾಗುವ ಬಡ್ಡಿಯ ಆಧಾರದ ಮೇಲೆ ಅವಲಂಬಿಸಿ ಲಾಭವು ನಿರ್ಧಾರವಾಗುತ್ತದೆ ಮತ್ತು ಅದರ ಮೂಲಕ ನಿಮ್ಮ ಆದಾಯವು ಬದಲಾಗುತ್ತದೆ.
ಈ ಯೋಜನೆಯಲ್ಲಿ ದೀರ್ಘಾವಧಿಯ ಉಳಿತಾಯವು ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ನಮ್ಮ ದೇಶದಲ್ಲಿ ಈ ದೀರ್ಘಾವಧಿಯ ಉಳಿತಾಯವು ಹೆಚ್ಚು ಪ್ರಚಲಿತದಲ್ಲಿ ಇದೆ. ಉದಾಹರಣೆ ಜೊತೆಗೆ ಇದನ್ನು ಸುಲಭವಾಗಿ ವಿವರಿಸುವುದಾದರೆ ಇವರ ಈ ರೀತಿ ಇದೆ ನೋಡಿ ಅರ್ಥೈಸಿಕೊಳ್ಳಿ.
ಉದಾಹರಣೆಗೆ ಓರ್ವ ವ್ಯಕ್ತಿಯು ತನ್ನ 25ನೇ ವಯಸ್ಸಿನಲ್ಲಿ ಈ ಯೋಜನೆ ಖರೀದಿಸಿ ಉಳಿತಾಯವನ್ನು ಪ್ರಾರಂಭಿಸುತ್ತಾನೆ ಎಂದು ಅಂದುಕೊಳ್ಳೋಣ, ಆತ ತಿಂಗಳಿಗೆ ರೂ.4,000 ಪ್ರೀಮಿಯನಂತೆ ಈ ಯೋಜನೆಗೆ ಹಣ ಹೂಡಿಕೆ ಮಾಡಿದರೆ ಇದು ನಿವೃತ್ತಿ ಯೋಜನೆ ಆಗಿರುವುದರಿಂದ 60 ವರ್ಷದವರೆಗೆ ಅಂದರೆ 45 ವರ್ಷಗಳವರೆಗೆ 4000 ದಂತೆ ಪ್ರತಿ ತಿಂಗಳು ಹಣ ಉಳಿಸಿದ್ದಾರೆ ಎಂದುಕೊಳ್ಳೋಣ.
ಈ ಉಳಿತಾಯದ ಮೊತ್ತ 16,80,000 ರೂಪಾಯಿ ಆಗಿರುತ್ತದೆ. ಪ್ರಸ್ತುತವಾಗಿ ಯೋಜನೆಗೆ 9% ಬಡ್ಡಿದರ ಇರುವುದರಿಂದ ಬಡ್ಡಿ 99 ಲಕ್ಷ ರೂಪಾಯಿ ಸೇರಿ ಒಟ್ಟು 1,16,57,803 ರೂಪಾಯಿ ರಿಟರ್ನ್ಸ್ ಸಿಗುತ್ತದೆ ನೀವು ಠೇವಣಿ ಮಾಡಿದ ಮೊತ್ತದ 35% ರಷ್ಟು ಅಂದರೆ ರೂ.40 ಲಕ್ಷಗಳನ್ನು ಹಿಂತೆಗೆದುಕೊಂಡು.
ಉಳಿದ 75 ಲಕ್ಷಗಳನ್ನು 8% ಬಡ್ಡಿ ಗಳಿಸುವ ಊಳಿದ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ ತಿಂಗಳಿಗೆ ರೂ.50,000 ಪಿಂಚಣಿ ಸಿಗುತ್ತದೆ. ಹಣ ಹಿಂಪಡೆಯದೆ ಸಂಪೂರ್ಣ ಹೂಡಿಕೆ ಮಾಡಿದರೆ ರೂ.77,000 ವರೆಗೂ ಪಿಂಚಣಿ ಸಿಗುತ್ತದೆ. ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯಲು ಇಚ್ಛಿಸುವವರು ಈಗಲೇ ಈ ಯೋಜನೆಯಲ್ಲಿ ಉಳಿತಾಯ ಉತ್ತಮ.