ನೆಗಡಿ, ಶೀತ, ಜ್ವರ ಎನ್ನುವುದು ಸಾಮಾನ್ಯ ಕಾಯಿಲೆ ಎನ್ನಬಹುದು. ಹವಮಾನ ವೈಪರೀತ್ಯಗಳಾದಾಗ ಖಂಡಿತವಾಗಿಯೂ ದೇಹಕ್ಕೆ ಕೆಲವು ವೈರಸ್ ಗಳ ಇನ್ಫೆಕ್ಷನ್ ಆಗಿ ಇವು ಖಂಡಿತವಾಗಿ ಬರುತ್ತದೆ, ಈ ವೈರಸ್ ಗಳಿಂದ ದೇಹದಲ್ಲಾಗುವ ಡ್ಯಾಮೇಜ್ ಕಾರಣದಿಂದಾಗಿ ಕೆಮ್ಮು ಕಫ ಆಗುತ್ತದೆ. ನಮಗಾಗಿರುವ ನೆಗಡಿ, ಶೀತ, ಜ್ವರ ಬೇಗ ಗುಣವಾದರೂ ಈ ಕೆಮ್ಮು, ಕಫ ತಿಂಗಳಗಟ್ಟಲೇ ಕಾಡುತ್ತದೆ.
ಈ ರೀತಿ ಇದ್ದವರು ಬಹಳ ಸಮಸ್ಯೆ ಪಡುತ್ತಾರೆ, ಅದಕ್ಕಾಗಿ ಎಷ್ಟೇ ಮಾತ್ರೆಗಳನ್ನು ಸೇವಿಸಿದರು ಪ್ರಯೋಜನ ಆಗುವುದಿಲ್ಲ. ಈಗಂತೂ ಎಲ್ಲೆಡೆ ಕೇಳಿ ಬರುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆ ಇದಾಗಿದೆ. ಈ ರೀತಿ ಇದ್ದರೆ ಪರ್ಮನೆಂಟ್ ಸೊಲ್ಯೂಷನ್ ಏನು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.
ಸಾಮಾನ್ಯವಾಗಿ ಪ್ರತಿ ಜೂನ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಹಲವು ವೈರಸ್ ಗಳು ತಮ್ಮ ಸ್ಟ್ರಕ್ಚರ್ ಬದಲಾಯಿಸಿಕೊಳ್ಳುತ್ತವೆ, ಇದನ್ನು ಮ್ಯೂಟೇಷನ್ ಎನ್ನುತ್ತಾರೆ. ಆಗ ಎಲ್ಲರಿಗೂ ಒಂದು ಸುತ್ತು ವೈರಲ್ ಜ್ವರಗಳು ಬರುತ್ತವೆ ಮನೆಯಲ್ಲಿ ಒಬ್ಬರಿಗೆ ಬಂದಿದ್ದರೆ ಎಲ್ಲರಿಗೂ ಹರಡುತ್ತದೆ.
ಕೆಮ್ಮು, ಕಫ, ಶೀತ, ನೆಗಡಿ, ಗಂಟಲು ನೋವು ಕಾಮನ್ ಆಗಿರುತ್ತದೆ. ಈ ಇನ್ಫೆಕ್ಷನ್ ನಿಂದ ಒಂದು ದಿನದ ಜ್ವರ ಸುಸ್ತು ಮೈ ಭಾರ ಇತ್ಯಾದಿ ಲಕ್ಷಣಗಳು ಬರುತ್ತವೆ. ಅವೆಲ್ಲವೂ ಕೂಡ ಔಷಧಿ ತೆಗೆದುಕೊಂಡ ತಕ್ಷಣ ಗುಣವಾಗುತ್ತದೆ ಆದರೆ ಇನ್ಫೆಕ್ಷನ್ ಇಂದ ಬಂದ ಕೆಮ್ಮು, ಗಂಟಲಲ್ಲಿ ಕಿಚಕಿಚ, ಹಳದಿ ಹಸಿರು ಅಥವಾ ಬಿಳಿರೂಪದ ಕಫ ಮಾತ್ರ ಗುಣವಾಗುವುದಿಲ್ಲ. ಮೆಡಿಕಲ್ ಭಾಷೆಯಲ್ಲಿ ಇದನ್ನು post viral fever and cough treatment ಎನ್ನುತ್ತಾರೆ.
ನಿಮ್ಮ ಮೊದಲನೇ ದಿನದ ಇನ್ಫೆಕ್ಷನ್ ನಿಂದ ಡ್ರೇಕಿಯ ಮತ್ತು ಬ್ರಾಂಕಸ್ ನಲ್ಲಿ ಹೋಗಿ ಮ್ಯೂಕೊಸ ಪದರವನ್ನು ಡ್ಯಾಮೇಜ್ ಮಾಡಿರುತ್ತದೆ. ನಂತರ ನೀವು ತೆಗೆದುಕೊಂಡ ಔಷಧೀಯ ಪರಿಣಾಮ ಆ ವೈರಸ್ ಸತ್ತು ಹೋಗುತ್ತದೆ. ಆದರೆ ಅದರಿಂದ ಆದ ಡ್ಯಾಮೇಜ್ 15 ದಿನಗಳಿಗಿಂತ ಹೆಚ್ಚಿಗೆ ಸಮಯ ಇರುತ್ತದೆ ಆ ಡ್ಯಾಮೇಜ್ ನಿಂದ ಸೆಕ್ರೆಶನ್ ಕೂಡ ಆಗುತ್ತದೆ ಅದೇ ನಿಮಗೆ ಕಫ ಆಗಿ ಕಾಡುವುದು ಅದರಿಂದ ಕೆಲವೊಮ್ಮೆ ಒಳಗಿನಿಂದ ಗುರು ಗುರು ಶಬ್ದ ಕೂಡ ಬರುತ್ತದೆ ಕಫ ಕಟ್ಟುತ್ತದೆ, ಆದರೆ ಆಚೆ ಬರುವುದಿಲ್ಲ.
ಈ ರೀತಿ ಇದ್ದಾಗ ಲಂಗ್ಸ್ ಇನ್ಫೆಕ್ಷನ್ ಟೆಸ್ಟ್ ಅಥವಾ ರಕ್ತಪರಿಕ್ಷೆ ಮೂಲಕ ಅಥವಾ ವೈದ್ಯರು ಆಸ್ಕಲ್ಟೇಟ್ ಮಾಡಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಈ ರೀತಿ ಸಮಸ್ಯೆಗೆ inhale medicine, nebulization, pump inhaler ಮುಂತಾದ ಚಿಕಿತ್ಸೆಗಳನ್ನು ಹೇಳಲಾಗುತ್ತದೆ. ಈ ರೀತಿಯ ಮೆಡಿಸನ್ಗಳು ನೇರವಾಗಿ ನಿಮ್ಮ air ways ಗೆ ಹೋಗಿ ಆಗಿರುವ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಆದರೆ ಇವುಗಳಿಗೆ ಮಾತ್ರೆಗಳನ್ನು ನೀಡಿದರೆ ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ.
ನೀವು ತಿಂದ ಮಾತ್ರೆ ಹೊಟ್ಟೆಗೆ ಹೋಗಿ, ಹೊಟ್ಟೆಯಿಂದ ಲಿವರ್ ಗೆ ಹೋಗಿ ಲಂಗ್ಸ್ ಗೆ ಹೋಗುವಷ್ಟರಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಈ ಮೇಲೆ ತಿಳಿಸಿದ ಚಿಕಿತ್ಸೆಗಳನ್ನೇ ಸೂಚಿಸಲಾಗುತ್ತದೆ ಮತ್ತು ಮಾತ್ರೆಗಳಲ್ಲಿ ಒಂದು ಮಿಲಿ ಗ್ರಾಂ ನಷ್ಟು ಮೆಡಿಸನ್ ಇದ್ದರೆ ಇನ್ಹೇಲರ್ ನಲ್ಲಿ ಮೈಕ್ರೋ ಗ್ರಿಂ ನಷ್ಟಿರುತ್ತದೆ ಹಾಗಾಗಿ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ.
ಈ ಚಿಕಿತ್ಸೆಗೆ ಒಳಪಟ್ಟರೆ ಒಂದು ವಾರದಲ್ಲಿ ನಿಮಗೆ ರಿಸಲ್ಟ್ ಕಾಣುತ್ತದೆ, 15 ದಿನಗಳಲ್ಲಿ ಸಂಪೂರ್ಣ ಗುಣವಾಗುತ್ತಿರಿ. ಇದರ ಜೊತೆಗೆ ಮನೆಯಲ್ಲಿ ಇನ್ಫೆಕ್ಷನ್ ಆಗದ ರೀತಿ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು, ಎಲ್ಲ ರೀತಿಯ ಟೆಸ್ಟ್ ಗಳಿಂದ ಮತ್ತೆ ಮನೆಯಲ್ಲೇ ಸಾಕಿರುವ ಪೆಟ್ ಗಳಿಂದ ದೂರ ಇರಬೇಕು. ಆದಷ್ಟು ಶೀತವಾದ ಪದಾರ್ಥಗಳನ್ನು ಸೇವಿಸದೆ ಇರುವುದು ಒಳ್ಳೆಯದು.