ಅದ್ಯಾಕೋ ಏನೋ ನಮ್ಮ ಜನ ಊಟದ ಬಗ್ಗೆ ಬಹಳ ತಪ್ಪಾದ ಜ್ಞಾನ ಹೊಂದಿದ್ದಾರೆ. ಅದರಲ್ಲೂ ತೀರ ಇತ್ತೀಚೆಗಂತೂ ನಾಲಿಗೆಗೆ ರುಚಿಯಾದದ್ದನ್ನು ತಿನ್ನುತ್ತಿದ್ದಾರೆ ಹೊರತು ಊಟದ ಪದ್ಧತಿಯನ್ನೇ ಮರೆತಿದ್ದಾರೆ ಎನ್ನಬಹುದು. ಹಿಂದಿನ ಕಾಲದಲ್ಲಿ ಊಟಕ್ಕೂ ಮೊದಲು ಸಿಹಿಯನ್ನು ಪಂತಿಯಲ್ಲಿ ಬಳಸುತ್ತಿದ್ದರು, ಇದರ ಅರ್ಥ ಮೊದಲ ಸಿಹಿ ತಿಂದರೆ ಉಳಿದ ಎಲ್ಲಾ ರುಚಿಗಳು ಕೂಡ ನಾಲಿಗೆಗೆ ಸರಿಯಾಗಿ ಗೊತ್ತಾಗುತ್ತದೆ.
ಮತ್ತು ಸಿಹಿ ಬಾಯಿಗೆ ಹೋದಾಗ ಸಲೈವಗಳು ಉತ್ಪಾದನೆರಾಗಿ ಆಹಾರ ಜೀರ್ಣವಾಗಲು, ತಿಂದ ಆಹಾರವು ದೇಹಕ್ಕೆ ಹಿಡಿಯಲು ಅದು ಅನುಕೂಲಕರವಾಗಿರುತ್ತಿತ್ತು. ಆದರೆ ಈಗ ಸಂಪೂರ್ಣವಾಗಿ ವಿರುದ್ಧವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ ಅದರಲ್ಲೂ ವಿರುದ್ಧ ಆಹಾರಗಳ ಸೇವನೆ ಹೆಚ್ಚಾಗಿದೆ ಮತ್ತು ಹಣ್ಣುಗಳನ್ನು ಸೇವನೆ ಬಗ್ಗೆ ಕೂಡ ಸರಿಯಾದ ಮಾಹಿತಿ ಇಲ್ಲ ಇದರ ಬಗ್ಗೆ ಕೆಲ ವಿಚಾರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ.
ಅದೇನೆಂದರೆ ಮೊದಲಿಗೆ ಹಣ್ಣುಗಳನ್ನು ಯಾವಾಗ ಸೇವನೆ ಮಾಡಬೇಕು ಯಾವ ಹಣ್ಣುಗಳನ್ನು ಸೇವನೆ ಮಾಡಬೇಕು ಮತ್ತು ಬಾಳೆಹಣ್ಣನ್ನು ಎಲ್ಲರೂ ಕೂಡ ಊಟ ಆದಮೇಲೆ ಸೇವಿಸುತ್ತಾರೆ ಅದು ಸರಿನಾ? ತಪ್ಪಾ? ಈ ವಿಚಾರದ ಬಗ್ಗೆ ಹೇಳಲು ಬಯಸುತ್ತಿದ್ದೇನೆ. ಈಗ ಜನ ಗಾದೆ ಮಾತನ್ನು ತಿರುಚಿ ಹೇಳುತ್ತಿದ್ದಾರೆ ಎಂದೇ ಹೇಳಬಹುದು. ಹಸಿವಿದ್ದಾಗ ಹಲಸು ತಿನ್ನು ಊಟ ಆದಮೇಲೆ ಬಾಳೆಹಣ್ಣು ತಿನ್ನು ಎನ್ನುವ ಗಾದೆ ಮಾಡಿಕೊಂಡಿದ್ದಾರೆ.
ಆದರೆ ಇದು ಅವರವರ ಅನುಕೂಲಕ್ಕೆ ಬದಲಾಗಿದೆ ಊಟ ಆದ ಮೇಲೆ ಕಬ್ಬು ತಿನ್ನು ಎನ್ನುವ ಮಾತು ಕೂಡ ಇದೆ. ಕಬ್ಬು ತಿನ್ನುವುದರಿಂದ ಸ್ವಲ್ಪ ಸ್ವಲ್ಪವೇ ಸಿಹಿಯಾದ ಅಂಶ ದೇಹದ ಒಳಗಡೆ ಹೋಗುತ್ತದೆ ಆಗಲು ಕೂಡ ಜೀರ್ಣಕ್ರಿಯೆಗೆ ಬೇಕಾದ ಕಿಣ್ವಗಳು ಉತ್ಪತ್ತಿ ಆಗುತ್ತವೆ. ಜೊತೆಡೆ ಕಬ್ಬಿನ ನಾವು ಕಬ್ಬನ್ನು ಹೆಚ್ಚು ಹೊತ್ತು ಆಗಿಯುತ್ತೇವೆ. ಆಗ ಮೆದುಳು ಹೆಚ್ಚಿನ ಆಹಾರ ಹೋಗುತ್ತಿದೆ ಎನ್ನುವ ರೀತಿ ಸಂದೇಶ ತೆಗೆದುಕೊಂಡು ಅದರ ಜೀರ್ಣಕ್ರಿಯೆಗೆ ಬೇಕಾದಷ್ಟು ಸಲೈವಗಳನ್ನು ಬಿಡುಗಡೆ ಮಾಡಲು ಸಂದೇಶ ಕೊಡುತ್ತದೆ.
ಆದರೆ ಬಾಳೆಹಣ್ಣಿಗೆ ಆ ರೀತಿಯ ಗುಣ ಇಲ್ಲ. ಬಾಳೆಹಣ್ಣು ಹೊಟ್ಟೆಯಲ್ಲಿ ಇರುವುದನ್ನು ಬೇಗ ಖಾಲಿ ಮಾಡುತ್ತದೆ ಎಂದೇ ಹೇಳಬಹುದು. ಯಾರಿಗಾದರೂ ಅಜೀರ್ಣ ಆಗಿ ಹೊಟ್ಟೆ ನೋವು ಬಂದಾಗ ಬಾಳೆಹಣ್ಣು ತಿನ್ನು ಸರಿ ಹೋಗುತ್ತದೆ ಎಂದು ಹೇಳುವುದನ್ನು ಕೇಳಿಯೇ ಇರುತ್ತೇವೆ. ಬಾಳೆಹಣ್ಣು ತಿನ್ನುವುದರಿಂದ ಸಲೀಸಾಗಿ ಕರುಳಿನಿಂದ ಆಹಾರವು ಆಚೆ ಹೋಗುತ್ತದೆ.
ಈ ರೀತಿ ಹೊಟ್ಟೆ ಕ್ಲೀನ್ ಆಗುವುದಕ್ಕೆ ಬಾಳೆಹಣ್ಣು ತಿನ್ನಬಹುದು ಆದರೆ ನಾವು ಪ್ರತಿನಿತ್ಯವೂ ಊಟ ತಿಂದ ತಕ್ಷಣವೇ ಬಾಳೆಹಣ್ಣು ತಿಂದರೆ ಅದಕ್ಕೆ ಅರ್ಥವೇ ಇಲ್ಲ ಆ ಆಹಾರವು ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶ ದೇಹಕ್ಕೆ ಸೇರಲು ಬಹಳ ಸಮಯ ಬೇಕು. ಅದಕ್ಕೆ ಸಮಯ ಕೊಡದೆ ಹೊಟ್ಟೆ ಕ್ಲೀನ್ ಮಾಡಲು ಬಾಳೆಹಣ್ಣು ತಿಂದರೆ ಅದು ಖಂಡಿತ ತಪ್ಪು.
ಹಾಗೆಯೇ ಯಾವ ಹಣ್ಣು ತಿನ್ನಬೇಕು ಎನ್ನುವುದು ಬಹಳ ಗಂಭೀರವಾದ ಪ್ರಶ್ನೆಯಾಗಿ ಹೋಗಿದೆ ಎಂದು ಸಹ ಹೇಳಬಹುದು. ಯಾಕೆಂದರೆ, ಈಗ ಎಲ್ಲಾ ಕಡೆ ಕೂಡ ಜೆನೆಟಿಕಲಿ ಮಾಡಿಫೈ ಆದ ಹಣ್ಣುಗಳು ಮತ್ತು ಫಾರಂ ಹಣ್ಣುಗಳು ಸಿಗುತ್ತಿವೆ. ಈ ಎಲ್ಲಾದರಲ್ಲೂ ಕೂಡ ಸಿಹಿ ರುಚಿ ಇದೆ ಹೊರತು ಯಾವ ಹಣ್ಣುಗಳಲ್ಲಿ ಯಾವ ರುಚಿ ಇರಬೇಕು ಅದೇ ಇಲ್ಲವಾಗಿದೆ. ಎಲ್ಲಾ ಹಣ್ಣುಗಳು ಒಂದೇ ರೀತಿ ಗುಣ ಮತ್ತು ರುಚಿ ಹೊಂದಿರುವುದಿಲ್ಲ.
ಕಿತ್ತಳೆ ಹಣ್ಣು ಎಂದ ಕೂಡಲೇ ಸಿಟ್ರಿಕ್ ಆಸಿಡ್ ಅದು ಕೂಡ ಸ್ವೀಟ್ ಆಗಿರಬೇಕು ಎಂದುಕೊಳ್ಳುವುದು ತಪ್ಪು. ಹಾಗೆ ಆಪಲ್ ರುಚಿ ಬೇರೆ ಪಪ್ಪಾಯಿ ರುಚಿಯೇ ಬೇರೆ. ಯಾವ ರೀತಿ ಹಣ್ಣುಗಳನ್ನು ತಿನ್ನಬೇಕು ಎಂದರೆ ಆಯಾ ಸೀಸನ್ ಗೆ ತಕ್ಕ ಹಣ್ಣು ತಿನ್ನಬೇಕು ಮತ್ತು ನ್ಯಾಚುರಲ್ ಆಗಿಯೇ ತಯಾರಾದ ಹಣ್ಣನ್ನು ತಿನ್ನಬೇಕು ಬಾಳೆಹಣ್ಣು ಕೂಡ ಈಗ ಬರುತ್ತಿರುವುದು ಜನಟಿಕಲಿ ಮಾಡಿಫೈ ಎಂದು ಹೇಳಲಾಗುತ್ತಿದೆ.
ಆದರೆ ಹಿಂದೆಲ್ಲ ಮನೆ ಹಿತ್ತಲಲ್ಲೇ ಬಾಳೆ ಗಿಡ ಇತ್ತು, ಪ್ರತಿಯೊಬ್ಬರೂ ತಮಗೆ ಬೇಕಾದ ಬಾಳೆಹಣ್ಣನ್ನು ಮನೆಯಲ್ಲಿ ಬೆಳೆದುಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ ಆಹಾರ ವಿ’ಷಯುಕ್ತವಾಗಿದೆ ಕೊನೆ ಪಕ್ಷ ನಾವು ತಿನ್ನುವ ಕ್ರಮವನ್ನಾದರೂ ಸರಿಯಾಗಿ ರೆಡಿ ಮಾಡಿಕೊಳ್ಳಬೇಕು.
ಊಟ ಆದ ಮೇಲೆ ಹಣ್ಣುಗಳನ್ನು ತಿನ್ನುವುದಕ್ಕಿಂತ ಹಣ್ಣುಗಳನ್ನು ಊಟವಾಗಿ ತಿನ್ನುವುದು ಇನ್ನೂ ಉತ್ತಮ. ಊಟ ಆದ ನಂತರ ಅಥವಾ ಹಣ್ಣನ್ನು ತಿಂದ ನಂತರ ಅದರ ವಿರುದ್ಧ ಆಹಾರಗಳನ್ನು ತಕ್ಷಣ ತಿಂದರೆ ಏನು ಪ್ರಯೋಜನವಿಲ್ಲ. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.