ಭೂ ಸಿರಿ ಯೋಜನೆಯ ಮೂಲಕ ರೈತರ ಖಾತೆಗೆ 10,000 ಜಮಾ.

WhatsApp Group Join Now
Telegram Group Join Now

 

2023 ಹಾಗೂ 2024ರ ಬಜೆಟ್ ಮಂಡನೆಯ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದಂತಹ ಬಸವರಾಜ್ ಬೊಮ್ಮಾಯಿ ಅವರು ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ಯೋಜನೆಗಳಲ್ಲಿ ರೈತ ಬಾಂಧವರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಅದ್ಯಾವುದೆಂದರೆ ಭೂ ಸಿರಿ ಯೋಜನೆ, ಈ ಹೊಸ ಯೋಜನೆಯಲ್ಲಿ ರೈತರು ತುರ್ತು ಸಂದರ್ಭ ಗಳಲ್ಲಿ ರೈತರಿಗೆ ಅನುಕೂಲವಾಗಲು ವರ್ಷಕ್ಕೆ ಹತ್ತು ಸಾವಿರ ರೂಪಾಯಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಈ ಹೊಸ ಯೋಜನೆಯ ಮುಖ್ಯ ಅಂಶಗಳನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹೊಸದಾಗಿ ಬಜೆಟ್ ಮಂಡನೆ ಸಮಯದಲ್ಲಿ ರೈತರಿಗೆ ಭೂ ಸಿರಿ ಯೋಜನೆಯ ಮೂಲಕ ಅವರಿಗೆ ಉಪಯೋಗಕ್ಕೆ ಆಗುವಂತೆ. ವರ್ಷಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಭೂ ಸಿರಿ ಯೋಜನೆ 2023 ಹಾಗೂ 2024 ಕರ್ನಾಟಕ ಸರ್ಕಾರದಲ್ಲಿ ಈ ಬಾರಿ ಬಜೆಟ್ ಮಂಡನೆಯ ಸಮಯದಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ. ಇಂತಹ ಯೋಜನೆಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದಲೂ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ. 2023 ಹಾಗೂ 24ನೇ ಸಾಲಿನಿಂದ ಈ ಕಾರ್ಡ್ ಹೊಂದಿರುವ ರೈತರಿಗೆ ಅವರ ಖಾತೆಗೆ 10 ಸಾವಿರ ಹಣವನ್ನು ಸಹಾಯಧನವಾಗಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದ್ದಾರೆ.

ಇಂತಹ ತುರ್ತು ಸಂದರ್ಭಗಳಲ್ಲಿ ರೈತರಿಗೆ ಬಿತ್ತನೆ ಬೀಜ, ರಸ ಗೊಬ್ಬರ, ಕ್ರಿಮಿನಾಶಕ, ಹೀಗೆ ಕೃಷಿಗೆ ಬೇಕಾದಂತಹ ಕೆಲವೊಂದು ಪದಾರ್ಥಗಳನ್ನು ತೆಗೆದುಕೊಳ್ಳಲು ಅವರಿಗೆ ಕೆಲವೊಮ್ಮೆ ಸರಿಯಾದ ಸಮಯಕ್ಕೆ ಹಣ ಗಳು ಸಿಗುವುದಿಲ್ಲ ಹಾಗೂ ಇಂತಹ ಸಂದರ್ಭದಲ್ಲಿ ಅವರು ಹಣ ಇಲ್ಲದಿದ್ದಾಗ ಬೇರೆಯವರ ಬಳಿ ಬಡ್ಡಿಗೆ ಹಣವನ್ನು ಪಡೆಯುತ್ತಾರೆ. ಆದರೆ ಅದನ್ನು ತೀರಿಸಲಾಗದೆ ಕೆಲವೊಮ್ಮೆ ಹಲವಾರು ರೈತರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.

ಆದ್ದರಿಂದ ಈ ಎಲ್ಲ ಉದ್ದೇಶ ಗಳನ್ನು ಮನಸ್ಸಿನಲ್ಲಿಟ್ಟುಕೊಂಡು. ಸರ್ಕಾರ ಈ ರೀತಿಯಾಗಿ ರೈತರಿಗೆ ಸಹಾಯವನ್ನು ಮಾಡುವುದರ ಮೂಲಕ ಈ ಒಂದು ಹೊಸ ಯೋಜನೆ ಯನ್ನು 2023 ಹಾಗೂ 2024ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಬಹುದು. ಹಾಗೂ ಈ ಯೋಜನೆ ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲ ವಾಗುವಂತಹ ವಿಷಯಗಳನ್ನು ಒಳಗೊಂಡಿದ್ದು.

ಪ್ರತಿಯೊಬ್ಬರೂ ಕೂಡ ಈ ಯೋಜನೆಯನ್ನು ಉಪಯೋಗಿಸಿಕೊಳ್ಳ ಬಹುದು ಹಾಗೂ ಮೇಲೆ ಹೇಳಿದಂತೆ ಕೃಷಿಗೆ ಬೇಕಾದಂತಹ ಪದಾರ್ಥ ಗಳನ್ನು ತೆಗೆದುಕೊಳ್ಳಲು ಈ ಹಣ ಅವರಿಗೆ ಸರಿಯಾದ ಸಮಯಕ್ಕೆ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಸರ್ಕಾರವು ಕೊಡುತ್ತಿರುವಂತಹ ಹತ್ತು ಸಾವಿರ ಅವರಿಗೆ ಸಮಯಕ್ಕೆ ಉಪಯೋಗ ವಾಗುವುದಷ್ಟೇ ಅಲ್ಲದೆ ಅವರಿಗೆ ಸಾಲದ ಹೊರೆಯಿಂದ ತಪ್ಪಿಸುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯ ಸದುಪಯೋಗ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಬೇರೆಯವರಿಗೂ ಕೂಡ ಈ ಮಾಹಿತಿ ಗಳನ್ನು ತಿಳಿಸಿ, ಅವರು ಕೂಡ ಈ ಯೋಜನೆಯನ್ನು ಉಪಯೋಗ ಮಾಡಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ. ಒಟ್ಟಾರೆಯಾಗಿ ನಮ್ಮ ಸರ್ಕಾರವು ರೈತರಿಗೆ ಹಲವಾರು ರೀತಿಯ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವರ ಅಭಿವೃದ್ಧಿಯತ್ತ ತಮ್ಮ ಗುರಿ ಯನ್ನು ಇಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now