ಒಂದು ಸಮಯದಲ್ಲಿ ಸರ್ಕಾರಿ ಹುದ್ದೆಗಿಂತ ಜನ ಖಾಸಗಿ ಹುದ್ದೆಯಲ್ಲಿ ಹೆಚ್ಚು ಹಣ ಗಳಿಸಬಹುದು ಎನ್ನುವ ಕಾರಣಕ್ಕಾಗಿ ಖಾಸಗಿ ಹುದ್ದೆಗಳನ್ನು ಇಚ್ಚಿಸುತ್ತಿದ್ದರು. ಆದರೆ ಕೋವಿಡ್ ಬಂದಾಗ ಎಲ್ಲರೂ ಸರ್ಕಾರಿ ಹುದ್ದೆಗಳ ನೀಡುವ ಭದ್ರತೆ ಬಗ್ಗೆ ಆಯ್ದುಕೊಂಡರು ಹಾಗಾಗಿ ಮತ್ತೆ ಈಗ ಸರ್ಕಾರಿ ಹುದ್ದೆಗಳ ಕಡೆ ಗಮನ ಕೊಟ್ಟು, ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಕಾಂಪಿಟೇಶನ್ ಗೆ ಇಳಿದಿದ್ದಾರೆ. ನೀವು ಸಹ ಸರ್ಕಾರಿ ನೌಕರಿ ಗಳಿಸಿಕೊಳ್ಳುವ ರೇಸ್ ಅಲ್ಲಿ ಇದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಬಹುದು.
ಅಂದೇನೆಂದರೆ ಕರ್ನಾಟಕ ಹೈಕೋರ್ಟ್ ಅಲ್ಲಿ ನೇಮಕಾತಿ ಆರಂಭವಾಗಿದೆ, ಕೆಲ ಪೋಸ್ಟ್ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಆನ್ಲೈನ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಕ್ಲರ್ಕ್ ಹಾಗೂ ಸಂಶೋಧನಾ ಸಹಾಯಕ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಈ ಕೂಡಲೇ ಅರ್ಜಿ ಹಾಕಿ, ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಪೂರ್ತಿ ಓದಿ.
ಕರ್ನಾಟಕ ಹೈಕೋರ್ಟ್ ಅಲ್ಲಿ 13 ಹುದ್ದೆಗಳು ಖಾಲಿ ಇವೆ. ಕ್ಲರ್ಕ್ ಹಾಗೂ ಸಂಶೋಧನಾ ಸಹಾಯಕ ವಿಭಾಗ ಸೇರಿ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 13 ಆಗಿದ್ದು, ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಸ್ಥಳ ಬೆಂಗಳೂರಿನ ಹೈಕೋರ್ಟ್ ಆಗಿದೆ. ಆನ್ಲೈನ್ ಮೋಡ್ ಅಲ್ಲಿ ಅಪ್ಲಿಕೇಶನ್ ಕರೆಯಲಾಗಿದ್ದು ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅಪ್ಲಿಕೇಶನ್ ಹಾಕಬಹುದು.
ಇದಕ್ಕೆ ಕೇಳಿರುವ ಶೈಕ್ಷಣಿಕ ಅರ್ಹತೆಗಳು ಏನೆಂದರೆ ಕರ್ನಾಟಕ ಹೈ ಕೋರ್ಟ್ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಾಸ್ ಆಗಿರಬೇಕು. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ದಾಖಲಾಗಿರಬೇಕು ಜೊತೆಗೆ ಕಂಪ್ಯೂಟರ್ ಬಗ್ಗೆ ಜ್ಞಾನ ಹೊಂದಿರಬೇಕು.
ಇನ್ನು ಈ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯನ್ನು ಕೂಡ ಸೂಚಿಸಲಾಗಿದ್ದು. ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ದಿನಾಂಕ 25.2.2023ಕ್ಕೆ 30 ವರ್ಷಗಳನ್ನು ಮೀರಿರಬಾರದು. ಕೆಲ ವರ್ಗಗಳ ಅಭ್ಯರ್ಥಿಗಳಿಗೆ ಇದರಲ್ಲಿ ವಿನಾಯಿತಿ ಸಹ ನೀಡಲಾಗಿದ್ದು ಒಬಿಸಿ ಅವರಿಗೆ ಮೂರು ವರ್ಷ ಮತ್ತು ಎಸ್ಸಿ ಎಸ್ಟಿ ಅವರಿಗೆ ಐದು ವರ್ಷ ವಯೋಮಿತಿ ಸಡಲಿಕ್ಕೆ ಇರುತ್ತದೆ. ಸಂಬಳದ ವಿವರವನ್ನು ಸಹ ತಿಳಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ 25,000ಗಳನ್ನು ಪ್ರತಿ ತಿಂಗಳಿಗೆ ಸಂಬಳವಾಗಿ ನೀಡಲಾಗುವುದು. ಈ ಅರ್ಜಿ ಸಲ್ಲಿಸುವುದಕ್ಕೆ ಅರ್ಜಿ ಶುಲ್ಕಗಳ ವಿವರ ಈ ರೀತಿ ಇದೆ. ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಸಿಹಿ ಸುದ್ದಿ ಇದೆ. ಯಾಕೆಂದರೆ ಈ ಅರ್ಜಿ ಸಲ್ಲಿಕೆಗೆ ಯಾವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೀಡಬೇಕಿಲ್ಲ.
ಆಯ್ಕೆ ಪ್ರಕ್ರಿಯೆ ಈ ರೀತಿ ನಡೆಯಲಿದೆ. ಶೈಕ್ಷಣಿಕ ದಾಖಲೆಗಳ ಪರಿಶೀಲನೆ, ಪ್ರಮಾಣಿಕರಣ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಕೆಯು ಈಗಾಗಲೇ 3-2-2023 ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-3-2023 ಆಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಹಂಚಿಕೊಳ್ಳಿ ಈ ಮೂಲಕ ಆಸಕ್ತಿ ಇರುವವರಿಗೆ ಈ ಮಾಹಿತಿ ತಲುಪುವಂತೆ ಮಾಡಿ.