ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ ಈ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ.!

 

WhatsApp Group Join Now
Telegram Group Join Now

ಇತ್ತೀಚೆಗೆ ಜನ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವುದನ್ನು ಹೆಚ್ಚಿಗೆ ಇಷ್ಟ ಪಡುತ್ತಾರೆ. ಅಮೆಜಾನ್, ಫ್ಲಿಪ್ಕಾರ್ಟ್, ಮೀಶೋ ಇತ್ಯಾದಿ ಇತ್ಯಾದಿ ಪ್ಲಾಟ್ ಫಾರ್ಮ್ ಗಳಲ್ಲಿ ತಮಗೆ ಬೇಕಾದನ್ನು ಹುಡುಕಾಡಿ ಕೊಂಡುಕೊಳ್ಳುತ್ತಾರೆ. ಕೆಲವೊಮ್ಮೆ ನಮಗೆ ಬೇಕಾದಕ್ಕಾಗಿ ಇವುಗಳನ್ನು ಬಳಸುವುದಕ್ಕಿಂತ ಆಫರ್ ಕೊಟ್ಟಿದ್ದಾರೆ ಎಂದೇ ನಾವು ಜೋತು ಬೀಳುವುದು ಹೆಚ್ಚು.

ಅದರಲ್ಲೂ ಹಬ್ಬಗಳ ಸೀಸನ್ ಬಂದರಂತೂ ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ , 50% ಆಫರ್ , 25% ಡಿಸ್ಕೌಂಟ್ ಎಲ್ಲರನ್ನು ಸೆಳೆದು ಬಿಡುತ್ತವೆ. ತಮಗೆ ಬೇಕೋ ಬೇಡವೋ ಆಫರ್ ಇದಿಯಲ್ಲ ಕಡಿಮೆ ಬೆಲೆಗೆ ತೆಗೆದುಕೊಳ್ಳೋಣ ಎನ್ನುವ ಆಸೆಯಾಗುತ್ತದೆ.

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತದೆ.! ಬಾಡಿಗೆ ಮನೆ ಅಥವಾ ಸ್ವಂತ ಮನೆಗೆ ಹೋಗುವ ಮುನ್ನ ಇದನ್ನು ನೋಡಿ.!

ಆದರೆ ಇದು ಕೂಡ ಒಂದು ರೀತಿಯ ಬಿಸ್ನೆಸ್ ಟ್ರಿಕ್ ಆಗಿರುತ್ತದೆ ಇವುಗಳಲ್ಲಿ ಶಾಪಿಂಗ್ ಮಾಡುವುದು ತಪ್ಪು ಎಂದು ಅಲ್ಲ ಆದರೆ ಅದಕ್ಕೂ ಮುನ್ನ ಕೆಲ ವಿಚಾರಗಳ ಬಗ್ಗೆ ನೀವು ಎಚ್ಚರವಾಗಿರಬೇಕು. ಅದರ ಬಗ್ಗೆ ಕೆಲ ಟಿಪ್ಸ್ ಗಳನ್ನು ಈ ಅಂಕಣದಲ್ಲಿ ನೀಡುತ್ತಿದ್ದೇವೆ.

● ನೀವು ಈ ರೀತಿಯ ಆನ್ಲೈನಲ್ಲಿ ಯಾವುದೇ ಪ್ರಾಡಕ್ಟ್ ಕೊಂಡುಕೊಳ್ಳುವ ಮುನ್ನ ಅದರಲ್ಲಿರುವ Review ತಪ್ಪದೆ ಓದಿ. ಯಾಕೆಂದರೆ ಈಗಾಗಲೇ ಆ ಪ್ರಾಡಕ್ಟ್ ಬಳಸಿದವರು ಅಥವಾ ಆ ಪ್ಲಾಟ್ಫಾರ್ಮ್ ನಲ್ಲಿ ಶಾಪಿಂಗ್ ಮಾಡಿದವರು ಆ ಪ್ರಾಡಕ್ಟ್ ಅಥವಾ ಶಾಪಿಂಗ್ ಎಕ್ಸ್ಪೀರಿಯನ್ಸ್ ಬಗ್ಗೆ ಶೇರ್ ಮಾಡಿರುತ್ತಾರೆ. ಇದರ ಮೇಲೆ ಕಣ್ಣಾಡಿಸುವುದರಿಂದ ನಿಮಗೆ ಆ ಪ್ರಾಡಕ್ಟ್ ಬೇಕೋ ಬೇಡವೋ ಅಥವಾ ಈ ಶಾಪಿಂಗ್ ಎಷ್ಟು ಸಲೀಸಾಗಿದೆ ಅಥವಾ ರಿಸ್ಕ್ ಎಷ್ಟಿದೆ ಎನ್ನುವ ಒಂದು ಐಡಿಯಾ ಬರುತ್ತದೆ.

ಸರ್ಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವವರು ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ಗುಡ್ ನ್ಯೂಸ್.!

● ನೀವು ಯಾವುದೇ ಪ್ರಾಡಕ್ಟ್ ಕೊಂಡುಕೊಂಡಾಗ ಅದರ ಬಿಲ್ ಪಾವತಿಸುವುದಕ್ಕೆ ಮೂರು ಆಪ್ಷನ್ಗಳು ಇರುತ್ತವೆ. Cash on delivery ಅಥವಾ UPI Net banking ಅಥವಾ Credit / Debit card ಇದರಲ್ಲಿ ನೀವು ಮೊದಲನೇ ಆಯ್ಕೆಯನ್ನು ಉಪಯೋಗಿಸುವುದು ಒಳ್ಳೆಯದು. ಯಾಕೆಂದರೆ ನೀವು ನೆಟ್ ಬ್ಯಾಂಕಿಂಗ್ ಬಳಸಿದಾಗ ನಿಮ್ಮ ಖಾತೆಯಿಂದ ಹಣ ಕಟ್ಟಾದ ಮೇಲೆ ಪ್ರಾಡಕ್ಟ್ ನಿಮಗೆ ತಲುಪದೇ ಇದ್ದರೆ ಸಮಸ್ಯೆ ಆಗಬಹುದು ಆದ್ದರಿಂದ ಈ ತಲೆನೋವು ತಪ್ಪುತ್ತದೆ. ಒಂದು ವೇಳೆ ಕಾರ್ಡ್ ಬಳಸಲೇಬೇಕಾದ ಅನಿವಾರ್ಯತೆ ಇದ್ದರೆ ಡೆಬಿಟ್ ಕಾರ್ಡ್ ಬದಲು ಕ್ರೆಡಿಟ್ ಕಾರ್ಡ್ ಬಳಸಿ.

● ನೀವು ಯಾವುದೇ ಪ್ರಾಡಕ್ಟ್ ಕೊಂಡುಕೊಂಡಾಗ ಅದರ ಪ್ಯಾಕ್ ಓಪನ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಿ. ಯಾಕೆಂದರೆ ನಿಮಗೆ ಅದು ಡೆಲಿವರಿ ಆಗುವ ಮುನ್ನ ಡ್ಯಾಮೇಜ್ ಆಗಿದ್ದರೆ ಅಥವಾ ನೀವು ಅಂದುಕೊಂಡ ವಸ್ತುವಿನ ಬದಲು ಬೇರೆ ವಸ್ತು ಬಂದು ನಿಮಗೆ ಮೋಸ ಆಗಿದ್ದರೆ ನೀವು ಕಂಪ್ಲೇಂಟ್ ಮಾಡಲು ಅಥವಾ ಕೇಸ್ ಹಾಕಲು ಪ್ರೂಫ್ ಸಿಗುತ್ತದೆ.

ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!

● ನೀವು ಯಾವುದೇ ಪ್ರಾಡಕ್ಟ್ ಕೊಂಡುಕೊಳ್ಳಬೇಕು ಎಂದು ಅದರ ಬಗ್ಗೆ ಸರ್ಚ್ ಮಾಡಿದಾಗಲೂ ದೊಡ್ಡ ರಾಶಿಯೇ ಕಾಣುತ್ತದೆ. ಅದನ್ನೆಲ್ಲ ನೋಡಲು ನಿಮಗೆ ಸಮಯ ಇರದೇ ಇರಬಹುದು ಅಥವಾ ಕನ್ಫ್ಯೂಸ್ ಆಗಬಹುದು. ಅದರ ಬದಲು ನಿಮ್ಮ ಇಷ್ಟದ ಕವರ್ ಅಥವಾ ಸೈಜ್ ಅಥವಾ ರೇಟ್ ನಲ್ಲಿ ಫಿಲ್ಟರ್ (Use filter) ಮಾಡುವುದರಿಂದ ನಿಮಗೆ ಬೇಕಾದ ಆಯ್ಕೆಯ ಕೆಲವೇ ಕೆಲವು ಆಪ್ಷನ್ಗಳು ಮಾತ್ರ ಬರುತ್ತವೆ.

● ಆನ್ಲೈನ್ ಶಾಪಿಂಗ್ ಮಾಡುವವರು ತಪ್ಪದೆ BYHATKE Big billion sale ವೆಬ್ ಸೈಟ್ ಗೆ ಭೇಟಿ ಕೊಡಿ. ಯಾಕೆಂದರೆ ಇದರಲ್ಲಿ ಪ್ರೈಸ್ ಗ್ರಾಫ್ ಇರುತ್ತದೆ ಅಂದರೆ ಪ್ರಾಡಕ್ಟ್ ಈವರೆಗೆ ಯಾವ ರೇಟ್ ಗೆ ಸೇಲ್ ಆಗಿದೆ ಮತ್ತು ಪ್ರೈಸ್ ಕಂಪೇರ್ ಗ್ರಾಫ್ ಕೂಡ ನೋಡಬಹುದು ಅಂದರೆ ಬೇರೆ ಯಾವ ಯಾವ ಕಂಪನಿಯಲ್ಲಿ ಎಷ್ಟು ಬೆಲೆಗಿದೆ ಎಂದು ನೋಡಬಹುದು. ನಿಮಗೆ ಅನುಕೂಲಕರವಾದ ಬೆಲೆಗೆ ನೀವು ಅಲ್ಲೇ ಇದನ್ನು ಆರ್ಡರ್ ಮಾಡಬಹುದು ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದಲ್ಲಿ ಪ್ರೈಸ್ ಅಲರ್ಟ್ ಕೂಡ ಚೂಸ್ ಮಾಡಬಹುದು ಆಗ ಆ ಬೆಲೆಗೆ ಆ ಪ್ರಾಡಕ್ಟ್ ಸೇಲ್ ನಲ್ಲಿ ಇದ್ದಾಗ ನಿಮಗೆ ನೋಟಿಫಿಕೇಶನ್ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now