ನಮಗೆ ಹಣದ ಅವಶ್ಯಕತೆ ನಾನಾ ಕಾರಣಗಳಿಂದ ಬರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ನಮ್ಮ ಬಳಿಯ ಹಣ ಇರುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ನಾವು ಬೇರೆಯವರ ಬಳಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಸ್ನೇಹಿತರು ಹಾಗೂ ಸಂಬಂಧಿಕರ ಹತ್ತಿರ ಬಾಯಿ ಮಾತಿನಲ್ಲಿ ಕೇಳಿ ಸಾಲ ಪಡೆಯುತ್ತೇವೆ ಆದರೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕು ಎಂದರೆ ನಾವು ಅದಕ್ಕೆ ಪೂರಕ ದಾಖಲೆಯನ್ನು ಒದಗಿಸಲೇಬೇಕು.
ನಮ್ಮ ಬಳಿ ಇರುವ ಬೆಲೆಬಾಳುವ ವಸ್ತುಗಳಾದ ಮನೆ, ಜಮೀನು ಅಥವಾ ಬಂಗಾರ ಇವುಗಳನ್ನು ಅಡಮಾನ ಇಡಬೇಕಾಗುತ್ತದೆ. ಇದು ಇಷ್ಟಕ್ಕೆ ಮುಗಿಯದೆ ಇನ್ನು ಕೆಲ ಕಂಡಿಶನ್ ಗಳಿರುತ್ತವೆ. ನೀವು ಮನೆ ಅಥವಾ ಜಮೀನಿನ ಮೇಲೆ ಸಾಲ ತೆಗೆದುಕೊಳ್ಳ ಬೇಕಿದ್ದರೆ ಆ ದಾಖಲೆ ಪತ್ರಗಳೆಲ್ಲಾ ನಿಮ್ಮ ಹೆಸರಿನಲ್ಲಿ ಇದೆಯೇ ಎಂದು ಪರಿಶೀಲಿಸಿ ಸರಿ ಇದ್ದರೆ ಮಾತ್ರ ಸಾಲಕ್ಕೆ ಅನುಮೋದಿಸಲಾಗುತ್ತದೆ.
ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ ಈ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ.!
ಹಾಗಾದರೆ ನೀವು ಯಾವುದಾದರೂ ಆಸ್ತಿಯನ್ನು ಭೋಗ್ಯಕ್ಕೆ ಪಡೆದು ಮಾಲೀಕರಾಗಿದ್ದರೆ, ಆ ದಾಖಲೆ ಆಧಾರದ ಮೇಲೂ ಸಾಲ ಸಿಗುತ್ತದೆಯೇ ಎನ್ನುವುದು ಕೆಲವರ ಅನುಮಾನ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಒಂದು ಆಸ್ತಿಯ ಮೇಲೆ ಸಾಲ ತೆಗೆದುಕೊಳ್ಳಬೇಕು ಎಂದರೆ ನಾವು ಅದರ ಪೂರ್ಣವಧಿ ಮಾಲೀಕರಾಗಿರಬೇಕಾಗುತ್ತದೆ. ನಮ್ಮ ಹೆಸರಿನಲ್ಲಿ ಎಲ್ಲಾ ದಾಖಲೆ ಪತ್ರಗಳು ಇದ್ದಾಗ ನಾವು ಅದಕ್ಕೆ ಪೂರ್ಣಪ್ರಮಾಣದ ಮಾಲೀಕರಾಗಿರುತ್ತೇವೆ.
ನಮ್ಮ ನಂತರ ಯಾರಿಗೆ ಸೇರಬೇಕು ಎನ್ನುವುದು ಕೂಡ ಕಾನೂನಿನ ಪ್ರಕಾರ ನಿರ್ಧಾರವಾಗಿರುತ್ತದೆ. ಅಂತಹ ಆಸ್ತಿಗಳ ಮೇಲೆ ಸಾಲ ತೆಗೆದುಕೊಳ್ಳುವಾಗ ಹೆಚ್ಚಿಗೆ ಸಮಸ್ಯೆ ಆಗುವುದಿಲ್ಲ. ಆದರೆ ಈ ರೀತಿ ಲೀಸ್ ಗೆ ಪಡೆದ ಆಸ್ತಿಗಳಿಗೆ ನಾವು ಪೂರ್ಣಾವಧಿ ಮಾಲೀಕರಾಗಿರುವುದಿಲ್ಲ.
ಯಾಕೆಂದರೆ ಅದನ್ನು ಹೊಂದಿರುವ ವ್ಯಕ್ತಿ ಬಳಿ ನಾವು ಕೆಲವು ವರ್ಷಗಳಿಗೆ ಮಾತ್ರ ಒಪ್ಪಂದದ ಮೇಲೆ ಪಡೆದಿರುತ್ತೇವೆ ಹಾಗಾಗಿ ನಾವು ಅಲ್ಪಾವಧಿಯ ಮಾಲೀಕರಾಗಿರುತ್ತೇವೆ. ನಮ್ಮ ಮತ್ತು ಅವರ ನಡುವೆ ಆಗಿರುವ ಒಪ್ಪಂದವು ಭೋಗ್ಯ ಪತ್ತೆ ಎಂದು ಕರೆಸಿಕೊಳ್ಳುತ್ತದೆ. ಹೀಗೆ ಭೋಗ್ಯಕ್ಕೆ ಪಡೆದ ಆಸ್ತಿಗಳನ್ನು ನಾವು ಬೇರೆಯವರಿಗೆ ಬಾಡಿಗೆ ಕೊಡಬಹುದು.
ಆದರೆ ಮನೆ ಹಾಗೂ ಜಮೀನಿನ ವಿಷಯದಲ್ಲಿ ನೀವು ಮಾಡಿಕೊಂಡಿರುವ ಕರಾರುಗಳ ಮೇಲೆ ಇದು ನಿರ್ಧಾರವಾಗುತ್ತದೆ. ಕೆಲವು ಮಾಲೀಕರು ಸ್ವಂತ ಉಪಯೋಗಕ್ಕೆ ಮಾತ್ರ ಎಂದು ಕಂಡಿಷನ್ ಹಾಕಿರುತ್ತಾರೆ. ಇನ್ನು ಸಾಲದ ವಿಚಾರ ಹೇಳುವುದಾದರೆ ಭೋಗ್ಯ ಪತ್ರದ ಮೂಲಕ ಹೊಂದಿರುವ ಆಸ್ತಿಗಳ ಮೇಲೆ ಸಾಲ ಸಿಗೋದು ಸ್ವಲ್ಪ ಕ’ಷ್ಟವೇ.
ಬ್ಯಾಂಕ್ ಗಳು ಈ ಬಗ್ಗೆ ಏನು ಹೇಳುತ್ತವೆ ಎಂದರೆ ಒಬ್ಬ ವ್ಯಕ್ತಿ ಒಂದು ಆಸ್ತಿಯನ್ನು 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪಡೆದಿದ್ದರೆ ಮಾತ್ರ ಅವನು ಆ ಆಸ್ತಿಯ ಮೇಲೆ ಸಾಲ ಪಡೆಯಬಹುದು ಎಂದು ಹೇಳುತ್ತದೆ ಮತ್ತು ನೀವೇನಾದರೂ 30 ವರ್ಷಕ್ಕೆ ಲೀಸ್ ಗೆ ಪಡೆದಿದ್ದರೂ ಕೂಡ ನೀವು ಈ ಅವಧಿ ಮುಗಿಯುವ ಸಮೀಪದಲ್ಲಿ ಇದ್ದೀರಾ ಎಂದರೆ ಆಗಲು ಕೂಡ ಹಣಕಾಸು ಸಂಸ್ಥೆಗಳು ನಿಮಗೆ ಸಾಲ ನೀಡಲು ನಿರಾಕರಿಸಬಹುದು.
ಹಾಗಾಗಿ ಹಣಕಾಸು ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂದರೆ ನೀವು ದೀರ್ಘಾವಧಿಗೆ ಈ ಆಸ್ತಿಗಳನ್ನು ಗುತ್ತಿಗೆ ಪಡೆಯುವುದರ ಬದಲು ನೀವೇ ಖರೀದಿಸಿದರೆ ಹೆಚ್ಚಿನ ಲಾಭ ಉಂಟಾಗುತ್ತದೆ ಎಂದು ತಿಳಿಸುತ್ತಾರೆ. ಅಂತಹ ಆಸ್ತಿಗಳು ನಿಮಗೆ ಇಂತಹ ಕ’ಷ್ಟದ ಸಮಯದಲ್ಲೂ ಕೂಡ ಕೈ ಹಿಡಿಯುತ್ತವೆ.