ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಫ್ರೀ ಕರೆಂಟ್ ಇಲ್ಲ.! 10 ಯೂನಿಟ್ ಮಾತ್ರ ಫ್ರೀ, ಸಿಎಂ ಕಡೆಯಿಂದ ವಿದ್ಯುತ್ ಶಾ’ಕ್…

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ (Karnataka Government Guarantee Scheme) ಪೈಕಿ ಗೃಹ ಜ್ಯೋತಿ ಯೋಜನೆ (Gruhalakshmi Scheme) ಮೊದಲ ಆದ್ಯತೆಯಾಗಿತ್ತು. ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ 200 ಯೂನಿಟ್‌ ವರೆಗೆ (200 Unit free Current) ವಿದ್ಯುತ್ ಉಚಿತವಾಗಿ ನೀಡಲಾಗುತ್ತಿತ್ತು.

WhatsApp Group Join Now
Telegram Group Join Now

ಈ ಯೋಜನೆಯು ಜುಲೈ ತಿಂಗಳಿನಿಂದ (July Month) ಜಾರಿಗೆ ಬಂತು, ಜುಲೈ ತಿಂಗಳಲ್ಲಿ ಬಳಕೆ ಮಾಡಿದ್ದ ವಿದ್ಯುತ್ ಬಳಕೆಗೆ ಕೋಟ್ಯಂತರ ಕುಟುಂಬಗಳು ಶೂನ್ಯತರ ಟಿಕೆಟ್ ಪಡೆದಿದ್ದವು. ಆದರೆ ಈ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಒಂದು ಕಂಡೀಶನ್ (Condition) ಕೂಡ ಇತ್ತು.

ಅದೇನೆಂದರೆ ಗ್ರಾಹಕರು ತಾವು ಕಳೆದ 12 ತಿಂಗಳಿನಲ್ಲಿ ಬಳಕೆ ಮಾಡಿದ ವಿದ್ಯುತ್ ಬಳಕೆಗೆ ಸರಾಸರಿಯ ಹೆಚ್ಚುವರಿ 10% ರಷ್ಟು ಮಾತ್ರ ಉಚಿತವಾಗಿ ಪಡೆಯಲು ಸಾಧ್ಯವಿತ್ತು ಈಗ ಮತ್ತೊಮ್ಮೆ ಇದಕ್ಕೆ ತಿದ್ದುಪಡಿ ತರಲಾಗುತ್ತಿದೆ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ರೆ ಈ ವಿಧಾನದ ಮೂಲಕ ಮತ್ತೆ ಪಡೆದುಕೊಳ್ಳಿ.!

ಜನವರಿ 18ರಂದು ಸಿಎಂ ಸಿದ್ದರಾಮಯ್ಯ (CM Siddaramaih) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ವಿಚಾರವನ್ನು ಚರ್ಚಿಸಿ ನಿರ್ಧಾರವನ್ನು ಕೈಗೊಂಡಿದ್ದಾರೆ, ಗುರುವಾರ ನಡೆದ ಸಭೆಯಲ್ಲಿ ಈವರೆಗೆ ನೀಡಲಾಗುತ್ತಿದ್ದ ಸರಾಸರಿ ಬಳಕೆಯ ಮೇಲೆ 10% ಬದಲಾಗಿ 10 ಯೂನಿಟ್‌ ವಿದ್ಯುತ್ ರಿಯಾಯಿತಿ ನೀಡಲು ನಿರ್ಧಾರವಾಗಿದೆ.

ಇದರಿಂದ ಅತಿ ಕಡಿಮೆ ವಿದ್ಯುತ್ ಬಳಕೆದಾರನಿಗೆ ಹೆಚ್ಚು ಲಾಭ, 200 ಯೂನಿಟ್ ಹತ್ತಿರದವರೆಗೂ ವಿದ್ಯುತ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಕರೆಂಟ್ ಬಿಲ್ ಕೈ ಸುಡುವ ಸಾಧ್ಯತೆ ಇದೆ. ಇನ್ನು ಮುಂದೆ ತಿಂಗಳಿಗೆ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ 10% ರಷ್ಟು ಹೆಚ್ಚುವರಿ ವಿದ್ಯುತ್‌ ಉಚಿತ ನೀಡುವ ಬದಲಿಗೆ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಉಚಿತವಾಗಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಮತ್ತು ಅನೇಕ ಪತ್ರಿಕೆಗಳಲ್ಲಿ ಈ ವಿಚಾರ ಇಂದು ಪ್ರಸ್ತಾಪವಾಗಿ ವಿಷಯ ದೃಢವಾಗಿದೆ ಸರ್ಕಾರದ ಈ ಹೊಸ ನಿರ್ಧಾರದಿಂದ ಒಂದು ತಿಂಗಳಿಗೆ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ LT- 2 ಗ್ರಾಹಕರಿಗೆ ಸರಾಸರಿ ಬಳಕೆಯ ಶೇ. 10ರಷ್ಟು ಹೆಚ್ಚುವರಿ ಸಿಗುತ್ತಿರುವುದು ಲಾಭ ಹೇಗೆಂದರೆ ಈವರೆಗೂ ಇದ್ದ ನಿಯಮದ ಪ್ರಕಾರ ಸರಾಸರಿಗಿಂತ 10% ಹೆಚ್ಚುವರಿ ಯೂನಿಟ್‌ ನೀಡಿದ್ದರೆ 53% ಯೂನಿಟ್‌ ಉಚಿತವಾಗಿತ್ತು.

1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ.! PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!

ಆದರೀಗ ಈ ಕುಟುಂಬಗಳಿಗೆ 10 ಯೂನಿಟ್ ಘೋಷಿಸಿರುವುದರಿಂದ ಇನ್ನು ಮುಂದೆ 58 ಯೂನಿಟ್‌ ಉಚಿತವಾಗಿ ಸಿಗಲಿದೆ ಆದರೆ ಗ್ರಾಹಕನೊಬ್ಬ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಪ್ರಕಾರ 10% ಸೇರಿಸಿ ಉಚಿತ ಕೊಡುವುದರಿಂದ 165 ಯೂನಿಟ್‌ ವಿದ್ಯುತ್ ಬಳಕೆಗೆ ಅವಕಾಶ ಇತ್ತು.

ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್‌ ನೀಡುತ್ತಿರುವುದರಿಂದ 160 ಯೂನಿಟ್ ಮಾತ್ರ ಬಳಕೆ ಮಾಡಬಹುದುದಾಗಿದೆ. 5 ಯೂನಿಟ್‌ ಹೆಚ್ಚುವರಿಯಾಗಿ ಬಳಸುವ ಅವಕಾಶ ತಪ್ಪಲಿದೆ, 200 ಯೂನಿಟ್ ವರೆಗೂ ಬಳಕೆ ಮಾಡುತ್ತಿದ್ದವರಿಗೆ ಇನ್ನೂ ಹೆಚ್ಚಿನ ನಷ್ಟವಾಗುತ್ತಿದೆ. ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಪ್ಪಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ, ಸರ್ಕಾರದ ಈ ತೀರ್ಮಾನಕ್ಕೆ ಜನಸಾಮಾನ್ಯರಿಂದ ಅಸಮಾಧಾನವೂ ಕೂಡ ವ್ಯಕ್ತವಾಗುತ್ತಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now