Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರ ರೈತರಿಗಾಗಿ (Centre government Schemes for farmers) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಕೂಡ ಒಂದು. ಇದೊಂದು ವಿಮಾ ಯೋಜನೆಯಾಗಿತ್ತು, ನಿಗದಿಪಡಿಸಿರುವ ಮೊತ್ತದ ಹಣ ಮತ್ತು ಬೆಳೆ ಸೂಚಿಸಿ ರೈತರು ನಿಯಮದ ಪ್ರಕಾರ ನೋಂದಾಯಿಸಿಕೊಂಡರೆ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ರೈತನಿಗೆ ಕಂಪನಿ ಹಾಗೂ ಸರ್ಕಾರ ವಿಮೆ ಕಟ್ಟಿಕೊಡುತ್ತದೆ.
ಈ ವಿಮೆ ಮೊತ್ತವು DBT ಮೂಲಕ ನೇರವಾಗಿ ರೈತನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತದೆ. ಅಂತೆಯೇ 2023ರ ಸಾಲಿನಲ್ಲಿ ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ.
ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಫ್ರೀ ಕರೆಂಟ್ ಇಲ್ಲ.! 10 ಯೂನಿಟ್ ಮಾತ್ರ ಫ್ರೀ, ಸಿಎಂ ಕಡೆಯಿಂದ ವಿದ್ಯುತ್ ಶಾ’ಕ್…
ಕಳೆದ ವರ್ಷ ಮಳೆ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ 63,566 ಜನ ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳ ರೈತರಿಗೆ ಬೆಳೆವಿಮೆ ಪರಿಹಾರ ಹಣ ತಲುಪಿದ್ದು, ಶೀಘ್ರದಲ್ಲಿಯೇ ಉಳಿದ ಜಿಲ್ಲೆಗಳ ರೈತರಿಗೂ ಸಿಗಲಿದೆ.
ಬೆಳೆಗಳಿಗೆ ಬೆಳೆ ವಿಮೆ ಪ್ರಿಮಿಯಂ ಕಟ್ಟಿ ಬೆಳೆ ವಿಮೆ ಮಾಡಿಕೊಂಡಿದ್ದ ರೈತರು ತಾವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ? ಅಥವಾ ಸಲ್ಲಿಕೆಯಾದ ಅರ್ಜಿ ಯಾವ ಹಂತದಲ್ಲಿದೆ ಎಂದು ತಮ್ಮ ಮೊಬೈಲ್ ಮೂಲಕವೇ ತಿಳಿದು ಕೊಳ್ಳಬಹುದು. ರೈತರು ಸಂರಕ್ಷಣೆ ( Samrakshane – Website ) ವೆಬ್ ಸೈಟ್ ಗೆ ಭೇಟಿ ನೀಡಿ ತಾವು ಸಲ್ಲಿಸಿದ ಅರ್ಜಿ ಕುರಿತು ಅಥವಾ ಹಣ ಸಲ್ಲಿಕೆಯಾಗಿರುವ ಬಗ್ಗೆ ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಮಧ್ಯಂತರ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ :-
* ಮೊದಲಿಗೆ ಈ ಕಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ
https://samrakshane.karnataka.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ
* ನಂತರ ವರ್ಷವನ್ನು ಆಯ್ಕೆ ಮಾಡುವಾಗ 2023-24 ಮತ್ತು ಸೀಸನ್ kharif ಎಂದು ಆಯ್ಕೆ ಮಾಡಿ Go ಕ್ಲಿಕ್ ಮಾಡಿ.
* Farmer ಕಾಲಂನಲ್ಲಿ Check statusಮೇಲೆ ಕ್ಲಿಕ್ ಮಾಡಿ
* ಪ್ರೊಪೋಸಲ್ ಐಡಿ, ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ, ಕೊಟ್ಟಿರುವ ಕ್ಯಾಪ್ಚ ಎಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿ, ಸ್ಕ್ರೀನ್ ಮೇಲೆ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ. ಇದೇ ಪೇಜ್ ನಲ್ಲಿ GramaOne Payment Successful Approved by Bank and Forwarded to insurance Co. ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವಸಿಯಾಗಿ ಸಲ್ಲಿಕೆಯಾಗಿದೆ ಎಂದರ್ಥ.
ಒಂದು ವೇಳೆ ಬೆಳೆ ನೋಂದಣಿಯು ಪ್ರಗತಿಯಲ್ಲಿದೆ/Data Entry In Progress ಎಂದು ತೋರಿಸಿದರೆ ಸ್ವಲ್ಪ ದಿನ ಬಿಟ್ಟು ಚೆಕ್ ಮಾಡಿ ಅಥವಾ No date found ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ತೋರಿಸುತ್ತದೆ.
* Proposal ID ಯ ಕೊನೆಯಲ್ಲಿ ಕಾಣುವ select ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ view details ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ಮಾಹಿತಿ ತೋರಿಸುತ್ತದೆ ರೈತನ ಸರ್ವೆ ನಂಬರ್, ಒಟ್ಟೂ ಬೆಳೆ ವಿಮೆ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ.
* ವೆಬ್ ಸೈಟ್ ನ ಮೊದಲನೇ ಪುಟದ ಕೊನೆಯಲ್ಲಿ UTR details ಎಂದು ತೋರಿಸುತ್ತದೆ ಅಲ್ಲಿ ನೀಡಿದ ಬ್ಯಾಂಕ್ ವಿವರದ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆಯ ಎಷ್ಟು ಹಣ ಜಮಾ ಅಗಿದೆ ಮತ್ತು ಬ್ಯಾಂಕ್ ಖಾತೆ, ಜಮಾ ಅದ ದಿನಾಂಕದ ವಿವರವನ್ನು ತೋರಿಸುತ್ತದೆ.