ಒಂದೇ ಕುಟುಂಬದಲ್ಲಿ 2-3 ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಬಿಗ್ ಶಾ’ಕ್

ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (State Government) ಚುನಾವಣೆ ಪೂರ್ಣವಾಗಿ ನೀಡಿದ್ದ ವಚನದಂತೆ 5 ಗ್ಯಾರಂಟಿ ಯೋಜನೆಗಳನ್ನು (Gyarantee Schemes) ಜಾರಿಗೆ ತಂದಿದೆ. ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯು ರೇಷನ್ ಕಾರ್ಡ್ ಆಧಾರಿತವಾಗಿ (Annabhagya and Gruhalakshmi) ರೂಪಿಸಿರುವ ಯೋಜನೆಯಾಗಿದೆ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ದಾಸ್ತಾನು ಕೊರತೆಯಿಂದ ಸದ್ಯಕ್ಕೆ ಅಕ್ಕಿ ಲಭ್ಯವಾಗುವವರೆಗೂ 5Kg ಅಕ್ಕಿ ಮತ್ತು ಉಳಿದ 5Kg ಬದಲಿಗೆ 170ರೂ. ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ.

ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ಪಡೆಯಲಿದ್ದಾರೆ. ಈ ಎರಡು ಯೋಜನೆಗಳಿಂದ ವಾರ್ಷಿಕವಾಗಿ 55,000 ಕೋಟಿ ಬಜೆಟ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರದ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ರಾಜ್ಯದ 1.2 ಕೋಟಿ ಪಡಿತರ ಚೀಟಿದಾರರು ಅರ್ಹರಾಗಿದ್ದಾರೆ. 4.4 ಕೋಟಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿದ್ದಾರೆ. ಈ ಎರಡು ಯೋಜನೆಗಳ ಜಾರಿಗೆ ಸರ್ಕಾರಕ್ಕೆ ವಾರ್ಷಿಕವಾಗಿ 55,000 ಕೋಟಿ ಬಜೆಟ್ ಬೇಕಾಗುತ್ತದೆ ಎಂದು ಹಣಕಾಸು ಇಲಾಖೆ (Financial department) ಅಂದಾಜಿಸಿದೆ.

ಹಾಗೆಯೇ ಈ ಸಮಯದಲ್ಲಿ ಆಹಾರ ಇಲಾಖೆಗೆ ( Food and Civil Supply department) ಆರ್ಥಿಕ ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಎಫೆಕ್ಟ್ ಮಾಡುವ ಒಂದು ಎಚ್ಚರಿಕೆ ಸಹ ನೀಡಿದೆ. ಅದೇನೆಂದರೆಗೆ ಗ್ರಾಮೀಣ ಭಾಗಗಳಲ್ಲಿ ಒಂದೇ ಕುಟುಂಬದಲ್ಲಿ 2-3 ಪಡಿತರ ಚೀಟಿ ಇರುವುದು ಕಂಡು ಬಂದಿದೆ.

ಒಂದು ಕುಟುಂಬದಲ್ಲಿ ಒಬ್ಬ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರೆ, ಆ ಇಬ್ಬರು ಮಕ್ಕಳಿಗೂ ಮದುವೆಯಾದ ಮೇಲೆ ಅವರು ಒಗ್ಗಟ್ಟಾಗಿ ಅವಿಭಕ್ತ ಕುಟುಂಬದಲ್ಲಿ ಜೀವಿಸುತ್ತಿದ್ದರೂ ಕೂಡ ಸರ್ಕಾರಕ್ಕೆ ಸತ್ಯಾಂಶ ಮರೆಮಾಚಿ ದಂಪತಿಗಳು ಪ್ರತ್ಯೇಕ ಕಾರ್ಡ್ ಹಾಗೂ ಎರಡು ಮಕ್ಕಳ ಕುಟುಂಬಕ್ಕೂ ಪ್ರತ್ಯೇಕ ಕಾಡುಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ.

ಇದರಿಂದ ಒಂದೇ ಕುಟುಂಬದಲ್ಲಿ ಮೂರು ಪ್ರತ್ಯೇಕ ಪಡಿತರ ಚೀಟಿ ಮಾಡಿಸಿಕೊಂಡ ರೀತಿ ಆಯ್ತು. ಆದರೆ ಈ ಮೂರು ಕುಟುಂಬಗಳು ಒಂದೇ ಸೂರಿನಡಿ ಜೀವಿಸುತ್ತಿದ್ದು ಒಂದೇ ವಿಳಾಸವನ್ನು ಹೊಂದಿದೆ ಹಾಗೂ ಅವರು ವಿಭಾಗವಾಗದೆ ಒಪ್ಪಿಗಿದ್ದಾರೆ ಇಂತಹ ಸಂದರ್ಭಗಳಲ್ಲಿ ಪ್ರತ್ಯೇಕ ಕಾರ್ಡ್ ಗಳನ್ನು ಹೊಂದುವ ಅವಶ್ಯಕತೆ ಇರುವುದಿಲ್ಲ.

ಈ ರೀತಿ ಮಾಡುವುದರಿಂದ ಗೃಹಲಕ್ಷ್ಮಿ ಯೋಜನೆಯಂತಹ ಯೋಜನೆಗಳ ಸಂದರ್ಭದಲ್ಲಿ ಸರ್ಕಾರಕ್ಕೆ ಬಜೆಟ್ ಹೊರೆ ಹೆಚ್ಚಾಗಲಿದೆ. ಉದಾಹರಣೆಯೊಂದಿಗೆ ಹೇಳುವುದಾದರೆ ಈ ಕುಟುಂಬವೂ ಒಟ್ಟಿಗೆ ಇರುವುದರಿಂದ ಒಂದೇ ಪಡಿತರ ಚೀಟಿ ಇದ್ದಿದ್ದರೆ ಆ ಕುಟುಂಬದ ಹಿರಿಮಹಿಳೆ ಒಬ್ಬರಿಗೆ ಗೃಹಲಕ್ಷ್ಮಿ ಯೋಜನೆ ಹಣ ಹೋಗುತ್ತಿತ್ತು

ಆದರೆ ಈಗ ಮೂರು ಕಾರ್ಡುಗಳನ್ನು ಹೊಂದಿರುವುದರಿಂದ 2000ರೂ. ಬದಲು ಮೂರು ಪಟ್ಟು 6,000ರೂ. ಹಣ ಹೋಗುತ್ತಿದೆ. ಇದು ಪರೋಕ್ಷವಾಗಿ ಸರ್ಕಾರವನ್ನು ವಂಚಿಸುವ ರೀತಿಯ ಆಗಿದೆ. ಹಾಗಾಗಿ ಸರ್ಕಾರದ ಹೊರೆ ಇಳಿಸುವ ಉದ್ದೇಶದಿಂದ ಆಹಾರ ಇಲಾಖೆಯು ಈ ಒಂದು ಪ್ರಮುಖವಾದ ನಿರ್ಧಾರಕ್ಕೆ ಬಂದಿದೆ.

ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವ ಎಚ್.ಕೆ ಮುನಿಯಪ್ಪರವರೂ (Minister H.K Muniyappa) ಈ ವಿಷಯದ ಬಗ್ಗೆ ಕೂಡ ಪ್ರಸ್ತಾಪ ನಡೆಸಿ ಈ ರೀತಿ ಸರ್ಕಾರಕ್ಕೆ ವಂಚಿಸಿರುವುದು ಇಲಾಖೆ ಗಮನಕ್ಕೆ ಬಂದಿದೆ ಶೀಘ್ರವಾಗಿ ಇದಕ್ಕೆ ಕಡಿವಾಳ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎನ್ನುವ ಸೂಚನೆಯನ್ನು ಕೂಡ ಕೊಟ್ಟಿದ್ದಾರೆ.

ಆ ಪ್ರಕಾರವಾಗಿ ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದರೆ ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ ಮತ್ತು ಈಗಾಗಲೇ ಈ ರೀತಿ ಕಾರ್ಡ್ ಗಳು ಹೊಂದಿದ್ದರೂ ಮತ್ತೊಮ್ಮೆ ಸರ್ವೆ ನಡೆಸಿ ಇದಕ್ಕೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಯು ಮುಂದಾಗಲಿದೆ ಎಂದು ತಿಳಿದು ಬಂದಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now