ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು (Farmers) ಕ’ಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ (as per Central Government guidlines) ಸರ್ವೆ ಕೈಕೊಂಡು 195 ತಾಲ್ಲೂಕುಗಳನ್ನು (drought Thaluk) ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಈ ರೀತಿ ಬರಘೋಷಿತವಾಗಿರುವ ತಾಲ್ಲೂಕುಗಳಲ್ಲಿ ರೈತರಿಗೆ ನೆರವಾಗಲು ಸರ್ಕಾರವು ಪರಿಹಾರ (Parihara) ಹಣ ನೀಡಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಪರಿಸ್ಥಿತಿಗೆ ಅನುಗುಣವಾಗಿ ಹಣವನ್ನು ಸಂದಾಯ ಮಾಡಲಿದೆ ಇದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಲು (Parihara Status check) ಅವಕಾಶವಿದೆ. ನಿಮ್ಮ ಕುಟುಂಬದಲ್ಲಿರುವ ರೈತನಿಗೆ ಎಷ್ಟು ಹಣ ಸಂದಾಯವಾಗಿದೆ ಎನ್ನುವ ಮಾಹಿತಿ ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
● ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ ಪರಿಹಾರ (Parihara) ಎಂದು ಟೈಪ್ ಮಾಡಿ.
● Parihara payment – Land records – ಕರ್ನಾಟಕ ಸರ್ಕಾರ ಎನ್ನುವ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ಈಗ ಪರಿಹಾರ ಹಣ ಸಂದಾಯ ವರದಿ ಎನ್ನುವ ಪೇಜ್ ಓಪನ್ ಆಗಿರುವುದು ಕಾಣುತ್ತದೆ, ಸ್ಕ್ರೀನ್ ಮೇಲೆ ಕೆಲವು ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
● ಪರಿಹಾರ ನಮೂದು ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಈ ಎರಡರಲ್ಲಿ ಯಾವುದರಿಂದ ಶೋಧನೆ ಮಾಡಲು ಬಯಸುತ್ತೀರಾ ಎನ್ನುವ ಆಪ್ಷನ್ ನೀಡಲಾಗಿರುತ್ತದೆ, ನೀವು ಆಧಾರ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಅಥವಾ ನಿಮಗೆ ನೀವು ಅರ್ಜಿ ಸಲ್ಲಿಸುವ ಅರ್ಜಿ ಸಂಖ್ಯೆ ಗೊತ್ತಿದ್ದರೆ ಅದರ ಮೂಲಕವೇ ಪರಿಶೋಧನೆ ಮಾಡಬಹುದು.
● Calamity type ಎಂದು ಕೇಳಲಾಗಿರುತ್ತದೆ ಅದರಲ್ಲಿ ಯಾವ ಕಾರಣದಿಂದ ಪರಿಹಾರಕ್ಕೆ ಅರ್ಜಿ ಹಾಕಿದ್ದೀರಾ ಎನ್ನುವುದರ ಕೆಲವು ಆಪ್ಷನ್ ಗಳು ಇರುತ್ತದೆ, ನೀವು ಬರ ಪರಿಹಾರದ ಕಾರಣ ಅರ್ಜಿ ಸಲ್ಲಿಸಿರುವುದರಿಂದ Drought ಎನ್ನುವುದನ್ನು ಸೆಲೆಕ್ಟ್ ಮಾಡಿ.
● ನಂತರ ಯಾವ ವರ್ಷ ಎನ್ನುವ ಆಪ್ಷನ್ ಇರುತ್ತದೆ, 2023-24ನೇ ಸಾಲಿನಲ್ಲಿ ಆಗಿರುವುದರಿಂದ ಈ ಆಯ್ಕೆಯನ್ನು ಆರಿಸಿ.
● ನಿಮ್ಮ 12 ಅಂಕೆಗಳ ಆಧಾರ ಸಂಖ್ಯೆ ಕೇಳಲಾಗಿರುತ್ತದೆ ನಿಮ್ಮ ಕುಟುಂಬದಲ್ಲಿ ಯಾರ ಹೆಸರಿನಲ್ಲಿ ಜಮೀನು ಇದೆ, ಆ ರೈತನ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರದಲ್ಲಿ ಕ್ಯಾಪ್ಚಾ ಕೋಡ್ ಬಂದಿರುತ್ತದೆ ಅದನ್ನು ಕೂಡ ಯಥವತ್ತಾಗಿ ಅದೇ ರೀತಿ ಹಾಕಿ ಸರ್ಚ್ ಕೊಡಿ.
● ಆಗ ಸ್ಕ್ರೀನ್ ಮೇಲೆ ಹಣ ಸಂದಾಯದ ವಿವರಗಳಾದ ನಿಮ್ಮ ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಸಂದಾಯವಾಗಿರುವ ಬರ ಪರಿಹಾರದ ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯದ ದಿನಾಂಕ, ಸಂದಾಯದ ವಿಪತ್ತಿನ ರೀತಿ, ಸಂದಾಯದ ವಿಪತ್ತಿನ ಕಾಲ, ಸಂದಾಯದ ವರ್ಷ ಇವುಗಳ ಡೀಟೇಲ್ಸ್ ಬರುತ್ತದೆ.
● ಅದರ ಕೆಳಗಿರುವ ಆಪ್ಷನ್ ನಲ್ಲಿ ಪರಿಹಾರ ನಮೂದಿನ ವಿವರಗಳ ಡೀಟೇಲ್ಸ್ ಬರುತ್ತದೆ. ಅರ್ಜಿ ಸಂಖ್ಯೆ, ಆಧಾರ್ ಸಂಖ್ಯೆ, ಜಿಲ್ಲೆಯ ಹೆಸರು, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಬೆಳೆ, ಹೆಸರು, ಬೆಳೆಯ ವಿಧ, ಬೆಳೆ ನಷ್ಟವಾದ ವಿಸ್ತೀರ್ಣ ಇತ್ಯಾದಿ ವಿವರಗಳು ಕೂಡ ಬರುತ್ತದೆ.
ಆದರೆ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು ಈ ವಿವರಗಳನ್ನು ವೆಬ್ಸೈಟ್ನಲ್ಲಿ ನಮೂದಿಸಿರಬೇಕು. ನಿಮ್ಮ ಗ್ರಾಮ ಪಂಚಾಯಿತಿಗೆ ಬರ ಪರಿಹಾರ ಮೊತ್ತ ವರ್ಗಾವಣೆ ಆದ ತಕ್ಷಣವೇ ಕೆಲವೇ ದಿನಗಳ ಅಪ್ಡೇಟ್ ಮಾಡಿರುತ್ತಾರೆ ಸದ್ಯಕ್ಕೆ ಈಗ ಕೆಲವೇ ಭಾಗಗಳಲ್ಲಿ ಬರ ಪರಿಹಾರದ ಹಣವನ್ನು ರೈತರು ಪಡೆಯುತ್ತಿದ್ದಾರೆ.
ಬರ ಪರಿಹಾರ ಮಾತ್ರವಲ್ಲದೆ ಬೇರೆ ಯಾವುದೇ ಸಂದರ್ಭದಲ್ಲಿ ಕೂಡ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಈ ಮೇಲೆ ತಿಳಿಸಿದ ವಿಧಾನದ ಮೂಲಕ ವಿವರ ತಿಳಿದುಕೊಳ್ಳಬಹುದು. ಆದರೆ ವರ್ಷ ಹಾಗೂ Calamity type ನಲ್ಲಿ ಆ ಸಂದರ್ಭದಕ್ಕೆ ತಕ್ಕ ಮಾಹಿತಿ ನಮೂದಿಸಬೇಕು.