ಬ್ಯಾಂಕ್ ಗಳಿಂದ (Bank) ಅಥವಾ NBFC ಗಳಿಂದ ನಮ್ಮ ಅನಿವಾರ್ಯ ಸಂದರ್ಭಗಳಲ್ಲಿ ಸಾಲ (loan) ಪಡೆದುಕೊಳ್ಳುತ್ತೇವೆ ಇಂತಹ ಸಂದರ್ಭಗಳಲ್ಲಿ ಶ್ಯೂರಿಟಿ ಯಾಗಿ ನಮ್ಮ ಆಸ್ತಿ ದಾಖಲೆ (Property documents) ಪತ್ರಗಳನ್ನು ಕೊಟ್ಟಿರುತ್ತೇವೆ. ಕಾನೂನಿನ ಪ್ರಕಾರ ನಾವು ನಮ್ಮ ಸಾಲವನ್ನು ಪೂರ್ತಿಯಾಗಿ ಹಿಂತಿರುಗಿಸಿದ ಮೇಲೆ ಬ್ಯಾಂಕ್ ಗಳು ನಮ್ಮ ದಾಖಲೆಗಳನ್ನು ವಾಪಸ್ ಮಾಡಬೇಕು ಆದರೆ ಇತ್ತೀಚೆಗೆ ಬ್ಯಾಂಕ್ ಗಳು ಈ ವಿಷಯದಲ್ಲಿ ಬಹಳ ನಿರ್ಲಕ್ಷ ತೋರುತ್ತಿವೆ.
ಇದರಿಂದ ಬೇಸತ್ತ ಗ್ರಾಹಕರು RBI ನ ಮೊರೆ ಹೋಗಿದ್ದಾರೆ. ಇದೇ ಸಂಬಂಧಪಟ್ಟ ಗ್ರಾಹಕರ ದೂರುಗಳನ್ನು ಸ್ವೀಕರಿಸಿದ್ದ RBI ಈ ವಿಚಾರಕ್ಕೆ ಬ್ಯಾಂಕ್ ಗಳಿಗೆ ಹಾಗೂ NBFC ಗಳಿಗೆ ಮಹತ್ವದ ಸೂಚನೆಯನ್ನು ಕೊಟ್ಟಿದೆ. ಇದು ಹೊಸ ನಿಯಮವಾಗಿ ಆಸ್ತಿ ಪತ್ರಗಳ ಆಧಾರದ ಸಾಲದ ಕುರಿತ ನಿಯಮವಾಗಿ ಡಿಸೆಂಬರ್ 1ರಿಂದಲೇ ಜಾರಿಗೆ ಬರಲಿದೆ.
ಈ ಬಗ್ಗೆ RBI ತನ್ನ ಅಧೀನದಲ್ಲಿರುವ ಬ್ಯಾಂಕ್ ಗಳು ಹಾಗೂ NBFCಗಳಿಗೆ ಸೂಚನೆ ನೀಡುವುದರ ಜೊತೆಗೆ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದೆ. ಅದರ ಪ್ರಕಾರ ಇನ್ನು ಮುಂದೆ ಬ್ಯಾಂಕ್ ಮತ್ತು NBFCಗಳು ಗ್ರಾಹಕನಿಗೆ ಆತನ ಆಸ್ತಿಪತ್ರಗಳನ್ನು ಹಿಂತಿರುಗಿಸುವಾಗ ಸತಾಯಿಸಿದರೆ ಗ್ರಾಹಕರಿಗೆ ದಂಡ ಕಟ್ಟಬೇಕಾಗುತ್ತದೆ ಎಂದು ರೂಲ್ಸ್ ಮಾಡಿದೆ.
ಸಾಲ ಮರುಪಾವತಿಯ ನಂತರ ಗ್ರಾಹಕರು ತಾವು ಅಡಮಾನ ಇಟ್ಟಿದ್ದ ಆಸ್ತಿ ದಾಖಲೆಗಳನ್ನು ಮರಳಿ ಪಡೆದುಕೊಳ್ಳಲು ತಿಂಗಳುಗಟ್ಟಲೆ ಸುತ್ತಾಡಬೇಕಾದ ಪರಿಸ್ಥಿತಿ ಇದೆ. ಕೆಲವು ಪ್ರಕರಣಗಳಲ್ಲಿ ವಿನಾಕಾರಣ ಅಲೆಸಿದರೆ ಇನ್ನು ಕೆಲವು ಪ್ರಕರಣಗಳಲ್ಲಿ ಆಸ್ತಿ ದಾಖಲೆಗಳು ನಾಪತ್ತೆಯಾಗಿವೆ ಎಂದೂ ಆ ಜವಾಬ್ದಾರಿಯಾಗಿ ಬ್ಯಾಂಕ್ ಗಳು ಹೇಳಿಕೆ ಕೊಡುತ್ತಿವೆ. ಬ್ಯಾಂಕ್‌ನ ಇಂತಹ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಈ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ.
ಗ್ರಾಹಕರು ಸಾಲವನ್ನು ಮರುಪಾವತಿ ಮಾಡಿದ ನಂತರ ಅವರ ಆಸ್ತಿಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಬ್ಯಾಂಕ್ ಗಳು ನಿಯಮದ ಪ್ರಕಾರವಾಗಿ ಸರಿಯಾದ ಸಮಯಕ್ಕೆ ಆತನಿಗೆ ಅನಾನುಕೂಲ ಉಂಟಾಗದಂತೆ ನಿಗಾವಹಿಸಿ ಹಿಂತಿರುಗಿಸಬೇಕು. ಆದರೆ, ಬ್ಯಾಂಕ್‌ಗಳ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಗ್ರಾಹಕರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ RBI ಈ ನಿಯಮವನ್ನು ಮಾಡಿದೆ.
ಈ ನಿಯಮ ಜಾರಿಯಾದ ನಂತರ ಗ್ರಾಹಕರಿಗಾಗುತ್ತಿದ್ದ ಅವ್ಯವಸ್ಥೆಗೆ ಹಾಗೂ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಊಹಿಸಲಾಗಿದೆ. ಬ್ಯಾಂಕ್‌ಗಳು ಮತ್ತು NBFC ಗಳು ಗ್ರಾಹಕರಿಗೆ ಅವರು ತಮ್ಮ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ 30 ದಿನಗಳಲ್ಲಿ ಒಳಗಾಗಿ ಅವರ ಆಸ್ತಿಯ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು RBI ತನ್ನ ಸುತ್ತೋಲೆಯಲ್ಲಿ (RBI Notification) ಹೇಳಿದೆ.
ಇನ್ನು ಮುಂದೆ 30 ದಿನಗಳಿಗಿಂತ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ಬ್ಯಾಂಕ್ ಅಥವಾ NBFC ದಾಖಲೆ ಬಿಡುಗಡೆ ಮಾಡಿದರೆ, ಹೊಸ ನಿಯಮದ ಅನುಸಾರ ಸೂಚಿಸಿರುವ ಮೊತ್ತದ ದಂಡವನ್ನು (Fine) ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ. ದಿನಕ್ಕೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಇನ್ನು ಮುಂದೆ ಇಂತಹ ಘಟನೆಗಳು ನಡೆದಲ್ಲಿ ಕಡ್ಡಾಯವಾಗಿ RBI ಸೂಚಿಸಿದಂತೆ ದಂಡದ ಮೊತ್ತವನ್ನು ಬ್ಯಾಂಕ್ ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ನೀಡಬೇಕಾಗುತ್ತದೆ. ಇದರ ಜೊತೆಗೆ ಮತ್ತೊಂದು ವಿಷಯವನ್ನು ಕೂಡ RBI ಇದರಲ್ಲಿ ಸೇರಿಸಿದೆ. ಅದೇನೆಂದರೆ, ಸಾಲಗಾರನ ಆಸ್ತಿ ದಾಖಲೆಗಳು ಕಳೆದುಹೋದರೆ ಆ ಸಂದರ್ಭದಲ್ಲೂ ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ಗ್ರಾಹಕರಿಗೆ ಬ್ಯಾಂಕ್ ಸಹಾಯ ಮಾಡಬೇಕಾಗುತ್ತದೆ ಎಂದು RBI ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.