ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದ ಕಾಂತಾರ ಸಿನಿಮಾ ಇದೀಗ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ಜನಮನಣೆಯನ್ನು ಪಡೆದುಕೊಳ್ಳುತ್ತಿದೆ. ನಮ್ಮ ಭಾರತೀಯ ಸಿನಿಮಾರಂಗದ ಅನೇಕ ಕಲಾವಿದರು ಈ ಒಂದು ಸಿನಿಮಾವನ್ನು ವೀಕ್ಷಣೆ ಮಾಡಿ ತಮ್ಮ ಅನಿಸಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಧನುಷ್, ಪ್ರಭಾಸ್, ಕೀರ್ತಿ, ಅನುಷ್ಕಾ ಶೆಟ್ಟಿ ಸೇರಿದಂತೆ ಇನ್ನೂ ಅನೇಕ ಕಲಾವಿದರು ಕಾಂತಾರ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ ಹಾಗೆಯೇ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ನೋಡಿ ಶುಭಕೋರಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರುಗಳು ಸಹ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ ತಮ್ಮದೇ ಆದ ರೀತಿಯಲ್ಲಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.
ಶಿಲ್ಪ ಶೆಟ್ಟಿ ಅವರು ಇಂದೆಂದೂ ನೋಡಿರದಂತಹ ಒಂದು ವಿಭಿನ್ನವಾದ ಸಿನಿಮಾವನ್ನು ನೋಡಿ ಓ ಮೈ ಗಾಡ್ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕೊನೆಯಲ್ಲಿ ಇವರಿಗೆ ಮೈ ರೋಮಾಂಚನವಾಗಿ ಸುವಂತಹ ದೃಶ್ಯಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಇದೊಂದು ವಿಭಿನ್ನವಾದ ಅಂತಹ ಕಥೆಯನ್ನು ಹೊಂದಿರುವಂತಹ ಸಿನಿಮಾ ಆಗಿದ್ದು ಕಾಂತಾರ ಚಿತ್ರವನ್ನು ಇದೀಗ ಎಲ್ಲ ಸ್ಟಾರ್ ಗಳು ಸಹ ಚಿತ್ರಮಂದಿರದಲ್ಲಿಯೇ ಹೋಗಿ ವೀಕ್ಷಣೆ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದ ಬಗ್ಗೆ ಯಾರೂ ಕೂಡ ನೆಗೆಟಿವ್ ಆದಂತಹ ಮಾತುಗಳನ್ನು ಹೇಳುತ್ತಿಲ್ಲ ಬದಲಿಗೆ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡುಗಳಿದ್ದಾರೆ. ಈ ಸಿನಿಮಾ ನಮ್ಮೆಲ್ಲರನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ ಎಂದು ಶಿಲ್ಪ ಶೆಟ್ಟಿ ಹೇಳಿದ್ದು ನಂತರ ನಾನು ಮೂಲತಃ ಅದೇ ನಾಡಿನವಳು ಆಗಿದ್ದರಿಂದ ನಾನು ನನ್ನ ತಾಯಿಯ ನಾಡಿಗೆ ಮತ್ತೆ ಹೋದಂತೆ ಆಯಿತು ಹಾಗೆ ನನ್ನ ಬಾಲ್ಯದ ನೆನಪುಗಳು ಸಹ ಈ ಸಿನಿಮಾವನ್ನು ನೋಡಿದ ನಂತರ ಕಣ್ಣು ಮುಂದೆ ಬಂದಂತಾಯಿತು ಎಂದು ಹೇಳಿದ್ದಾರೆ.
ಇನ್ನು ಕನ್ನಡ ಚಿತ್ರರಂಗ ಹಿಂದೆಂದು ನೋಡಿರದಂತಹ ಒಂದು ವಿಭಿನ್ನವಾದ ಕಥೆ ಉಳ್ಳ ಸಿನಿಮಾ ವನ್ನು ಹೊಂಬಾಳೆ ಫಿಲಂಸ್ ನಿರ್ಮಾಣದ ಮುಖಾಂತರ ಹೊರ ಬಂದಿದೆ. ಹೊಂಬಾಳೆ ಬ್ಯಾನರ್ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಬಿಡುಗಡೆಯಾದ 16 ದಿನಕ್ಕೆ 15 ಕೋಟಿ ಸಂಗ್ರಹವಾಗುವ ಮೂಲಕ ಅತಿ ಹೆಚ್ಚು ಗಳಿಕೆಯನ್ನು ಪಡೆದುಕೊಂಡಿದೆ ಹಾಗೆ ಈ ಒಂದು ಕಾಂತರಾ ಸಿನಿಮಾ ಇತರ ಭಾಷೆಗಳಲ್ಲಿಯೂ ತೆರೆಕಂಡಿದ್ದು ದಿನಕ್ಕೆ 10 ಕೋಟಿಗಳಷ್ಟು ಆದಾಯ ಈ ಒಂದು ಸಿನಿಮಾದಿಂದ ಬರುತ್ತಿದೆ.
ಇಡೀ ಜಗತ್ತೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವ ಹಾಗೆ ಕಾಂತಾರ ಸಿನಿಮಾ ಮಾಡಿದೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳಲ್ಲಿ ಸಹ ಕಾಂತಾರ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ಎಷ್ಟು ಅದ್ಭುತ ನಟ ಎಂದು ತೋರಿಸುವಂತಹ ಸಿನಿಮಾ ಇದಾಗಿದ್ದು ರಿಷಬ್ ಶೆಟ್ಟಿ ಅವರಿಗೆ ಒಂದು ದೊಡ್ಡ ಬ್ರೇಕ್ ಕೊಟ್ಟಂತಹ ಸಿನಿಮಾವು ಸಹ ಆಗಿದೆ. ಈ ಒಂದು ಸಿನಿಮಾದ ನಂತರ ಇವರಿಗೆ ಸಾಕಷ್ಟು ಆಫರ್ ಗಳು ಬಂದಿದೆ. ಕಾಂತರಾ ಸಿನಿಮಾದ ಬಗ್ಗೆ ಹಾಗೆ ರಿಷಬ್ ಶೆಟ್ಟಿ ಅವರ ಅಭಿನಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.