ಈಗ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಈಗ ದಶಕದ ಹಿಂದೆ ಇಂತಹದೊಂದು ಪರಿವರ್ತನೆ ಆಗಿರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಇಂದು ತಂತ್ರಜ್ಞಾನದ ಮೂಲಕ ಆಗದೆ ಇರುವ ಕೆಲಸವೇ ಇಲ್ಲ. ಅಡಿಗೆ ಮನೆಯಿಂದ ಹಿಡಿದು ಆಕಾಶದ ಎತ್ತರಕ್ಕೆ ಹಾರಿ ನಭವನ್ನು ದಾಟುವ ಉಪಗ್ರಹದ ವರೆಗೆ ಎಲ್ಲೆಡೆ ತಂತ್ರಜ್ಞಾನ ಬಳಕೆಯಾಗುತ್ತಿದೆ.
ಈ ರೀತಿ ನಮ್ಮ ಪ್ರತಿದಿನದ ಎಲ್ಲಾ ಚಟುವಟಿಕೆಗಳಿಗೂ ನಾವು ತಂತ್ರಜ್ಞಾನದ ಬಳಕೆಗೆ ಬದಲಾಗಿರುವುದರಿಂದ ಬದುಕು ಬಹಳ ಸರಳ ಎನಿಸುತ್ತಿದೆ ಜೊತೆಗೆ ಹಲವು ವಿಷಯಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ನಮಗೆ ಹಣ ಕೂಡ ಉಳಿತಾಯ ಆಗುತ್ತಿದೆ. ಹೀಗೆ ಇಷ್ಟೆಲ್ಲಾ ಉಪಯೋಗ ಆಗುತ್ತಿರುವ ಟೆಕ್ನಾಲಜಿಯನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಕೂಡ ಮುಂದುವರಿಯಬೇಕು ಎನ್ನುವುದು ತಂತ್ರಜ್ಞರ ಆಶಯ.
ಯಾರು ಎಷ್ಟೇ ಮುಂದುವರೆದರೂ ಕೂಡ ರೈತ ಮತ್ತು ಕೃಷಿ ಇಲ್ಲದೆ ಹೋದಲ್ಲಿ ಕ್ಷಣಮಾತ್ರದಲ್ಲಿ ಎಲ್ಲಾ ಶೂನ್ಯ ಎನಿಸುತ್ತದೆ. ಹಾಗಾಗಿ ರೈತ ಮಾಡುವ ಕೃಷಿ ಕೆಲಸಕ್ಕೂ ಕೂಡ ತಂತ್ರಜ್ಞಾನದ ಅಳವಡಿಕೆ ತಂದು ರೈತನ ಕಷ್ಟವನ್ನು ಕಡಿಮೆ ಆಗುವ ಹಾಗೆ ಮಾಡಬೇಕು ಮತ್ತು ಆತನಿಗೆ ಆಗುವ ನಷ್ಟವನ್ನು ತಪ್ಪಿಸಬೇಕು ಎಂದು ಹಲವಾರು ರೀತಿಯ ಹೊಸ ಪ್ರಯತ್ನಗಳು ನಡೆಯುತ್ತಿದೆ.
ಈಗಾಗಲೇ ಕೃಷಿ ಉಪಕರಣಗಳ ಬಳಕೆಯ ವಿಷಯದಲ್ಲಿ ಇಂಧನ ಚಾಲಿತ ವಾಹನಗಳ ಉಪಯೋಗ ಬಂದಿದ್ದು ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಇದರ ಜೊತೆಗೆ ಪ್ರತಿಯೊಂದು ವಿಷಯದಲ್ಲೂ ಕೂಡ ರೈತ ಸ್ನೇಹಿಯಾಗಿ ತಂತ್ರಜ್ಞಾನ ಬಳಕೆಗೆ ಆಗಬೇಕು ಎನ್ನುವುದೇ ಎಲ್ಲರ ಇಚ್ಛೆ. ಸತತ ಪ್ರಯತ್ನಗಳ ನಂತರ ಮತ್ತೊಂದು ಹೊಸ ಆವಿಷ್ಕಾರವನ್ನು ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಂಡುಹಿಡಿಯಲಾಗಿದೆ.
ದೇಶದಲ್ಲಿ ಮಳೆ ಆಶ್ರಿತ ಕೃಷಿ ಮಾಡುವವರು ಕಡಿಮೆ, ಬಾವಿ ಹಾಗೂ ಕೊಳವೆ ಬಾವಿಗಳ ನೀರು ಬಳಕೆ ಮಾಡಿ ತೋಟಗಾರಿಕೆ ಮಾಡಿ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು ಎನ್ನುವುದು ರೈತರ ಗುರಿ. ಆದರೆ ಕೊಳವೆ ಬಾವಿಗಳ ವಿಪರೀತ ಸಂಖ್ಯೆ ಏರಿಕೆ ಆಗಿರುವುದರಿಂದ ಎಲ್ಲ ಜಮೀನಿನಲ್ಲೂ ಈಗ ನೀರಿನ ಸೆಲೆ ಸಿಗುತ್ತಿಲ್ಲ. ಆದರೆ ಪದೇ ಪದೇ ರೈತರು ಹಣ ಹಾಕಿ ನಷ್ಟ ಹೊಂದುತ್ತಿದ್ದಾರೆ, ಸಾಲದ ಹೊರೆಯಲ್ಲಿ ಮುಳುಗುತ್ತಿದ್ದಾರೆ.
ಅವರಿಗೆಲ್ಲ ಅನುಕೂಲ ಮಾಡಿಕೊಡಲು ಹೊಸ ಟೆಕ್ನಾಲಜಿ ಮೂಲಕ ಹೊಸ ಆವಿಷ್ಕಾರವನ್ನು ಮಾಡಲಾಗಿದೆ. ಈ ರೀತಿ ವಿಧಾನವನ್ನು ನೀವು ಅನುಸರಿಸುವುದರಿಂದ ನಿಮ್ಮ ಜಮೀನಿನಲ್ಲಿ ನೀರು ಇದ್ದರೆ ಖಚಿತವಾಗಿ ನಿಮಗೆ ಇದರ ಮೂಲಕ ತಿಳಿಯುತ್ತದೆ. ಒಂದು ವೇಳೆ ನೀರು ಇಲ್ಲದೆ ಇದ್ದರೂ ಕೂಡ ಅದು ಸಹ ತಿಳಿಯುತ್ತದೆ. ಇದರಿಂದ ನೀವು ಅನವಶ್ಯಕವಾಗಿ ಕಷ್ಟಕ್ಕೆ ಸಿಲುಕುವುದು ತಪ್ಪುತ್ತದೆ.
ಈಗ ದೇಹದಲ್ಲಿ ಬಿಪಿ ಶುಗರ್ ಟೆಸ್ಟ್ ಮಾಡುವುದರಿಂದ ಹಿಡಿದು ಯೋಗ ಮಾಡುವುದನ್ನು ಕಲಿಸುವುದಕ್ಕೂ, ಮಳೆ ಬಿಸಿಲಿನ ಸೂಚನೆ ಕೊಡುವುದಕ್ಕೂ ಮೊಬೈಲ್ ಆಪ್ ಗಳು ಬಳಕೆ ಆಗುತ್ತಿದೆ. ಇಂತಹದೇ ಒಂದು ಆಪ್ ನ ಮೂಲಕ ನಿಮ್ಮ ಜಮೀನಿನಲ್ಲಿ ಕೊಳವೆಬಾವಿ ಹಾಕಿಸಿದರೆ ನೀರು ಬರುತ್ತದೆಯಾ ಎಂದು ನೀವು ತಿಳಿದುಕೊಳ್ಳಬಹುದು. ಈ ಒಂದು ಆಪ್ ಹೆಸರು ವಾಟರ್ ಡಿಟೆಕ್ಟರ್ ಆಪ್. ಮೊದಲಿಗೆ ಈ ಆಪ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಜಮೀನಿನಲ್ಲಿ ನೀರು ಇದೆಯೋ ಇಲ್ಲವೋ ಎನ್ನುವುದರ ಪರೀಕ್ಷೆ ಮಾಡಿ ನಂತರ ಮುಂದಿನ ಕೆಲಸಗಳಿಗೆ ಮುಂದುವರೆಯಬಹುದು.