BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸಿಹಿ ಸುದ್ದಿ. 10,000 ಹಣ ಸಿಗುತ್ತೆ. ಈಗಲೇ ಅರ್ಜಿ ಸಲ್ಲಿಸಿ ವಾರದೊಳಗೆ ಹಣ ನಿಮ್ಮ ಖಾತೆಗೆ ಜಮೆ ಆಗುತ್ತೆ.

 

WhatsApp Group Join Now
Telegram Group Join Now

ಸರ್ಕಾರ ಹಾಗೂ ಕೆಲವು ನಿಗಮಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳ ಉದ್ದೇಶ ಮಹಿಳೆಯರನ್ನು ಕೂಡ ಆರ್ಥಿಕವಾಗಿ ಸಧೃಡವಾಗಿಸುವುದು. ಮಹಿಳೆಯರಿಗೆ ಸಣ್ಣಪುಟ್ಟ ವ್ಯಾಪಾರಕ್ಕೆ ಅನುಕೂಲವಾಗಲು ಅಲ್ಪ ಪ್ರಮಾಣದ ಹೂಡಿಕೆಗೆ ಸಾಲ ಕೊಡುವ ಮೂಲಕ ಅವರಿಗೆ ಆರ್ಥಿಕವಾಗಿ ಸಹಾಯಕ ನಿಲ್ಲುತ್ತಿದೆ. ಆದರೆ ಕೋವಿಡ್ ಬಂದ ನಂತರ ಕೆಲವು ನಿಗಮಗಳಿಂದ ಯಾವುದೇ ರೀತಿ ಯೋಚನೆ ಬಿಡುಗಡೆ ಆಗಿರಲಿಲ್ಲ ಅದಕ್ಕಾಗಿ ಕಾದು ಕುಳಿತಿದ್ದ ಮಹಿಳೆಯರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಅಲ್ಪಸಂಖ್ಯಾತರ ನಿಗಮದಿಂದ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ ಒಂದು ಯೋಜನೆಯನ್ನು ರೂಪಿಸಲಾಗಿದ್ದು ಇದರ ಮೂಲಕ ಅವರಿಗೆ ಅಲ್ಪಾವಧಿ ಸಾಲ ಯೋಜನೆ ಅಡಿಯಲ್ಲಿ ಹತ್ತು ಸಾವಿರ ರೂಗಳನ್ನು ಸಾಲವಾಗಿ ನೀಡುತ್ತಿದೆ.

ಇದರಲ್ಲಿ ಸಬ್ಸಿಡಿಯ ವಿನಾಯಿತಿಯು ಸಹ ಇರುತ್ತದೆ ಆದರೆ ಈ ಯೋಜನೆಗೆ ಫಲಿನುಭವಿಗಳಾಗಲು ಕೆಲವು ಷರತ್ತುಗಳು ಮತ್ತು ದಾಖಲೆಗಳು ಕಡ್ಡಾಯವಾಗಿವೆ. ಈ ಮೈಕ್ರೋ ಸಾಲಾ ಯೋಜನೆ ಅಡಿಯಲ್ಲಿ ಸಾಲ ಸಿಗಬೇಕು ಎಂದರೆ ನೀವು ಅಲ್ಪಸಖ್ಯಾತ ವರ್ಗಕ್ಕೆ ಸೇರಿದ ಮಹಿಳೆ ಆಗಿರಬೇಕು, ನೀವು ಬಿಪಿಎಲ್ ಕಾರ್ಡ್ ಹೊಂದಿರಬೇಕು, ಮುಖ್ಯವಾಗಿ ಕರ್ನಾಟಕಕ್ಕೆ ಸೇರಿದವರಾಗಿರಬೇಕು ಮತ್ತು ನಿಮ್ಮ ವಯಸ್ಸು 50 ವರ್ಷಗಳನ್ನು ಮೀರಿರಬಾರದು.

ಮತ್ತು ಅಗತ್ಯ ದಾಖಲೆಗಳಾಗಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸದ ಪುರಾವೆಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಬಿಪಿಎಲ್ ಕಾರ್ಡ್ ಇವುಗಳ ನಕಲುಗಳನ್ನು ಕೊಡಬೇಕು. ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ. ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ನಂತರ ಅಲ್ಪಸಂಖ್ಯಾತರ ಸಹಾಯಧನ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿಯಲ್ಲಿ ಕೇಳಲಾದ ವಿಷಯಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಸುವಿಕೆ ಪೂರ್ತಿ ಆಗುತ್ತದೆ. ಈ ಸಾಲದ ಹಣದ ಮೊತ್ತವು ನೀವು ದಾಖಲೆಯಾಗಿ ಕೊಟ್ಟಿರುವ ಬ್ಯಾಂಕ್ ಖಾತೆಗೆ ಬರುತ್ತದೆ. ಇದರಿಂದ ಮಹಿಳೆಯರಿಗೆ ಏನೆಲ್ಲಾ ಉಪಯೋಗ ಆಗುತ್ತದೆ ಎಂದು ನೋಡುವುದಾದರೆ.

10,000 ಮೊತ್ತಕ್ಕೆ ನೀವು ಅರ್ಜಿ ಸಲ್ಲಿಸುತ್ತಿರಿ, ಅದರಂತೇ ನಿಮಗೆ 10,000 ಹಣವು ಕೂಡ ಖಾತೆಗೆ ಬರುತ್ತದೆ. ಆದರೆ ನೀವು ಹಿಂದಿರುಗಿಸುವಾಗ 8,000ಗಳನ್ನು ಮಾತ್ರ ಹಿಂದಿರುಗಿಸುತ್ತೀರಿ. ಯಾಕೆಂದರೆ ನಿಮಗೆ ಸಬ್ಸಿಡಿ ಆಗಿ 2000ಗಳನ್ನು ಬಿಟ್ಟು ಕೊಡಲಾಗುತ್ತದೆ. ಜೊತೆಗೆ 10,000 ಈ ಸಹಾಯ ಧನವನ್ನು ಬಳಸಿಕೊಂಡು ಕೆಲ ವ್ಯಾಪಾರಗಳಿಗೆ ನೀವು ಆರಂಭಿಕ ಹೂಡಿಕೆಯನ್ನು ಮಾಡಬಹುದು.

ಕಾಫಿ ಟೀ ಅಂಗಡಿ, ಹೂ ಮಾರುವುದು, ರಸ್ತೆ ಬದಿ ವ್ಯಾಪಾರ, ಕಿರಾಣಿ ಅಂಗಡಿ, ಸಣ್ಣ ಟಿಫನ್ ಸೆಂಟರ್, ಹಣ್ಣು ತರಕಾರಿ ವ್ಯಾಪಾರ, ತಳ್ಳುಗಾಡಿಯಲ್ಲಿ ಮಾಡುವ ವ್ಯಾಪಾರ ಇವುಗಳಿಗೆ ಹೂಡಿಕೆ ಮಾಡಲು ಈ ಮೊತ್ತ ಸಹಾಯಕವಾಗುತ್ತದೆ. ಈ ಕೂಡಲೇ ನೀವು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಲ್ಲಿ ಈ ಯೋಜನೆಯ ಉಪಯೋಗವನ್ನು ತಿಳಿಸಿ, ಅಲ್ಪಸಂಖ್ಯಾತ ಮಹಿಳೆಯರಿಗೆ ಸಹಾಯ ಮಾಡಿಕೊಡಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now