ಬಹಳ ದಿನಗಳಿಂದಲೂ ಕೂಡ ನಮ್ಮ ಸರ್ಕಾರದಲ್ಲಿ ಹಲವಾರು ರೀತಿಯ ಹಗರಣಗಳು ನಡೆಯುತ್ತಿದ್ದು. ಯಾವುದನ್ನು ಕೂಡ ಜನರು ಹಾಗೂ ಅಲ್ಲಿನ ಅಧಿಕಾರಿಗಳು ಕೂಡ ಪ್ರಶ್ನಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಎಲ್ಲರೂ ಕೂಡ ಅವರ ಅನುಕೂಲವನ್ನು ನೋಡಿಕೊಂಡು ಅಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಅದೇ ರೀತಿಯಾಗಿ ನಾವೇನಾದರೂ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹೋದರೆ ನಮಗೆಲ್ಲಿ ಮುಂದಿನ ದಿನದಲ್ಲಿ ತೊಂದರೆ ಉಂಟಾಗಬಹುದು ಎನ್ನುವ ಉದ್ದೇಶ ದಿಂದ ಯಾರು ಕೂಡ ಹೆಚ್ಚಿನ ಸಮಸ್ಯೆಗಳನ್ನು ತಂದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ.
ಹಾಗೂ ಯಾರಾದರೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರು ಅವರಿಗೆ ಒಂದು ಪ್ರಶ್ನೆಯನ್ನು ಹಾಕಿದರೆ ಸಾಕು ಅವರು ಎಲ್ಲಾ ಕೆಲಸವನ್ನು ಕೂಡ ಮಾಡಿಕೊಡಬೇಕಾಗುವಂತಹ ಪರಿಸ್ಥಿತಿಗಳು ಈಗಿನ ಕಾಲದಲ್ಲಿ ನಡೆಯುತ್ತಿದೆ. ಅಂತಹ ಸಮಯದಲ್ಲಿ ಕೆಳಗಿನ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೂಡ ಅದನ್ನು ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ, ಬದಲಿಗೆ ಅವರ ಕೆಲಸವನ್ನು ಅವರು ಉಳಿಸಿಕೊಳ್ಳಬೇಕು ಅವರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂದರೆ ಅವರು ಯಾವುದೇ ಕೆಟ್ಟ ಕೆಲಸವಾಗಲಿ, ಒಳ್ಳೆಯ ಕೆಲಸವಾಗಲಿ ಎಲ್ಲವನ್ನು ಕೂಡ ಅಧಿಕಾರಿ ಮಾಡಲೇಬೇಕಾಗಿರುತ್ತದೆ.
ಇಲ್ಲವಾದಲ್ಲಿ ಅವನ ಕೆಲಸಕ್ಕೆ ತೊಂದರೆ ಉಂಟಾಗುತ್ತದೆ ಅಂತಹ ಸಮಯದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಒಂದು ಹಳ್ಳಿಯನ್ನು ತೆಗೆದು ಕೊಂಡರು ಆ ಹಳ್ಳಿಯಲ್ಲಿ ಒಬ್ಬ ರೈತನಿಗೆ ಅಥವಾ ಯಾವುದೇ ವ್ಯಕ್ತಿಗೆ ಅವನು ಯಾವುದೇ ರೀತಿಯ ಆಸ್ತಿಯನ್ನು ಹೊಂದಿರದೆ ಜಮೀನನ್ನು ಹೊಂದಿರದೆ ಇದ್ದರೆ ಅವನಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಎಂದು ಜಮೀನು ಕೊಡುತ್ತಾರೆ.
ಅದರಲ್ಲೂ ಯಾವ ಜಾತಿಯವರಿಗೆ ಎಷ್ಟು ಮೀಸಲಿರುತ್ತದೆಯೋ ಅಷ್ಟು ಮಾತ್ರ ಆ ವ್ಯಕ್ತಿಗೆ ಕೊಡುತ್ತಾರೆ. ಆದರೆ ಕೆಲವೊಮ್ಮೆ ಗ್ರಾಮ ಪಂಚಾಯಿತಿಗಳಲ್ಲಿ ರೆವಿನ್ಯೂ ಡಿಪಾರ್ಟ್ಮೆಂಟ್ ಅಂದರೆ ಭೂಮಿಯನ್ನು ಪ್ರತಿಯೊಂದು ಹಳ್ಳಿಗೂ ಕೂಡ ಹಂಚಿಕೆ ಮಾಡುವಂಥವರು ಅದನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು ಹಾಗೂ ಉದಾಹರಣೆಗೆ ಒಂದು ಗ್ರಾಮದಲ್ಲಿ ಒಬ್ಬ ರೈತನಿಗೆ ಇಂತಿಷ್ಟು ಎಂಬ ಜಾಗವನ್ನು ಕೊಟ್ಟರೆ ಆ ರೈತನಿಗೆ ಆ ಜಮೀನಿನ ಅಳತೆಯಾಗಿ ಒಂದು ದಾಖಲಾತಿ ಪತ್ರವನ್ನು ಕೊಡಬೇಕು ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಅದನ್ನು ಈ ರೈತನಿಗೆ ಕೊಡಲಾಗಿದೆ ಎನ್ನುವ ದಾಖಲಾತಿಗಳನ್ನು ಕೂಡ ಇಟ್ಟಿರಬೇಕು.
ಆದರೆ ಈ ರೀತಿಯಾದಂತಹ ಕ್ರಮವನ್ನು ಅವರು ಅನುಸರಿಸದೇ ಇದ್ದಂತಹ ಸಮಯದಲ್ಲಿ ಆ ಜಮೀನನ್ನು ಬೇರೆಯವರಿಗೂ ಕೂಡ ಕೊಡುತ್ತಿದ್ದಾರೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಯಾವುದೇ ಒಂದು ಜಮೀನನ್ನು ಒಬ್ಬ ರೈತನಿಗೆ ಕೊಟ್ಟರೆ ರೆವಿನ್ಯೂ ಡಿಪಾರ್ಟ್ಮೆಂಟ್ ನವರು ಈ ಜಾಗವನ್ನು ಈ ಗ್ರಾಮದಲ್ಲಿ ಈ ರೈತನಿಗೆ ಕೊಡಲಾಗಿದೆ ಎನ್ನುವುದನ್ನು ಅವನು ತನ್ನ ಅಧಿಕಾರ ಅವಧಿಯಲ್ಲಿ ಸರಿಯಾದ ಕೆಲಸವನ್ನು ಮಾಡಿದರೆ ಆ ರೈತನಿಗೂ ಕೂಡ ಯಾವುದೇ ಸಮಸ್ಯೆ ಇರುವುದಿಲ್ಲ ನಂತರ ಉಳಿದ ಜಾಗವನ್ನು ಬೇರೆ ರೈತರಿಗೆ ಕೊಡಬಹುದು.
ಆದರೆ ಅವರು ಸರಿಯಾಗಿ ಕೆಲಸ ಮಾಡದೆ ಇದ್ದಂತಹ ಸಮಯದಲ್ಲಿ ಮೊದಲು ಪಡೆದ ರೈತನಿಗೂ ಹಾಗೂ ನಂತರ ಪಡೆದ ರೈತರಿಗೂ ಸಹ ತೊಂದರೆ ಉಂಟಾಗುತ್ತದೆ. ಇದರಿಂದ ಹಲವಾರು ಸಮಸ್ಯೆ ಎದುರಾಗಿ ಅವರಿಬ್ಬರೂ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಉನ್ನತ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಟ್ಟು ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ ಎಲ್ಲರಿಗೂ ಕೂಡ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.