ಅಣ್ಣ ತಂಗಿ ನಡುವೆ ಆಸ್ತಿ ಹಂಚಿಕೆ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್, ಆಸ್ತಿ ಭಾಗ ಮಾಡಿಕೊಳ್ಳಬೇಕು ಅಂತ ಅಂದುಕೊಂಡವರು ತಪ್ಪದೆ ನೋಡಿ

ಒಬ್ಬ ವಿವಾಹಿತ ಸಹೋದರಿಗೆ ಆಕೆಯ ಪತಿಯ ಕಡೆಯಿಂದ ಬಂದಿರುವ ಆಸ್ತಿಗೆ ಆಕೆಯ ಸಹೋದರ ಅಥವಾ ಆಕೆಯ ಕುಟುಂಬದವರು ಉತ್ತರಾಧಿಕಾರಿ ಆಗಲು ಸಾಧ್ಯವಿಲ್ಲ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕರಣ ಒಂದರಲ್ಲಿ ನೀಡಿದೆ. ಪ್ರಸ್ತುತವಾಗಿ ಹಿಂದೂ ಉತ್ತರಾಧಿತ್ವದ ಕಾಯಿದೆ ಅನುಸಾರ ಒಬ್ಬ ವಿವಾಹಿತ ಮಹಿಳೆಯ ವಾರಸುದಾರನಾಗಿ ಆಕೆಯ ಸಹೋದರ ಬರಲು ಸಾಧ್ಯವಿಲ್ಲ.

ಆತ ಆಕೆಯ ಕುಟುಂಬದ ಸದಸ್ಯನಾಗುವುದಿಲ್ಲ ಹಾಗಾಗಿ ಆಕೆ ಆಸ್ತಿಯ ಮೇಲೆ ಆತನಿಗೆ ಯಾವುದೇ ಹಕ್ಕು ಇರುವುದಿಲ್ಲ ಎನ್ನುವುದನ್ನು ಕೋರ್ಟ್ ಹೇಳಿದೆ. ಒಬ್ಬ ವಿವಾಹಿತ ಮಹಿಳೆಯು ತನ್ನ ಗಂಡನಿಂದ ಅಥವಾ ತನ್ನ ಗಂಡನ ತಂದೆ-ತಾಯಿ ಅಂದರೆ ಆಕೆ ಅತ್ತೆ-ಮಾವನ ಕಡೆಯಿಂದ ಆಸ್ತಿಯನ್ನು ಪಡೆದಿದ್ದರೆ ಅಂತಹ ಆಸ್ತಿಯ ಮೇಲೆ ಆಕೆ ಸಹೋದರರಿಗೆ ಹಕ್ಕು ಇರುವುದಿಲ್ಲ ಎನ್ನುವುದನ್ನು ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ.

2015ರಲ್ಲಿ ನಡೆದ ಪ್ರಕರಣವೊಂದರಲ್ಲಿ ಉತ್ತರಖಂಡ್ ಹೈಕೋರ್ಟ್ ಈ ಬಗ್ಗೆ ಒಂದು ತೀರ್ಪು ನೀಡಿತ್ತು. ಡೆಹರಾಡೂನ್ ನಲ್ಲಿ ವಾಸವಾಗಿದ್ದ ಲಲಿತ ಎನ್ನುವ ಮಹಿಳೆಯ ಸಹೋದರ ದುರ್ಗಾ ಪ್ರಸಾದ್ ಆಕೆ ಮರಣದ ನಂತರ ಅವರು ವಾಸವಿದ್ದ ಮನೆಯು ತನಗೆ ಸೇರಿದ್ದು ಎಂದು ಘೋಷಿಸಿಕೊಂಡಿದ್ದರು. ನಂತರ ಅದನ್ನು ಹೈಕೋರ್ಟ್ ತನಕ ತಂದಿದ್ದರು.

ಹೈಕೋರ್ಟ್ ನಲ್ಲಿ ಈ ಆಸ್ತಿಯಲ್ಲಿ ದುರ್ಗಾ ಪ್ರಸಾದ್ ಗೆ ಯಾವುದೇ ಹಕ್ಕು ಇರುವುದಿಲ್ಲ ಎನ್ನುವುದನ್ನು ಹಿಂದು ಉತ್ತರಾಧಿಕಾರತ್ವದ ಕಾಯಿದೆ ಸೆಕ್ಷನ್ 15 (2) ಬಿ ಯಲ್ಲಿ ತಿಳಿಸಲಾಗಿದೆ ಎಂದು ಹೇಳಿತ್ತು. ಆದರೂ ಕೂಡ ವ್ಯಕ್ತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಈಗ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ಭಾನುಮತಿ ಅವರ ನ್ಯಾಯಪೀಠ ಉತ್ತರಖಂಡ್ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.

1940 ರಲ್ಲಿ ಲಲಿತಾ ಅವರ ಮಾವ ಈ ಮನೆಯನ್ನು ಖರೀದಿಸಿದ್ದರು, ಲಲಿತ ಅವರ ವಿವಾಹದ ಬಳಿಕ ಲಲಿತಾ ಅವರ ಪತಿಗೆ ಈ ಮನೆಯನ್ನು ನೀಡಿದ್ದರು. ಹಲವು ವರ್ಷಗಳ ಕಾಲ ಲಲಿತ ಮತ್ತು ಪತಿ ಅದೇ ಮನೆಯಲ್ಲಿ ವಾಸವಿದ್ದರೂ ಬಳಿಕ ಲಲಿತಾ ಅವರ ಪತಿ ಮರಣ ಹೊಂದಿದ್ದರು. ಆಗ ಆ ಆಸ್ತಿಯು ಲಲಿತ ಅವರ ಹೆಸರಿಗೆ ಬಂದಿತ್ತು, ಲಲಿತಾ ಅವರ ಮರಣದ ನಂತರ ಆಸ್ತಿ ಉತ್ತರಾಧಿಕತ್ವ ಯಾರಿಗೆ ಸೇರಿದ್ದು ಎನ್ನುವುದು ಪ್ರಶ್ನೆಯಾಗಿತ್ತು.

ಲಲಿತಾ ಸಹೋದರ ದುರ್ಗಾ ಪ್ರಸಾದ್ ಈ ಆಸ್ತಿ ತನ್ನ ನನಗೆ ಸೇರಿದ್ದು ಎಂದು ಘೋಷಿಸಿದ್ದ. ಆದರೆ ಈ ಬಗ್ಗೆ ಆರ್ಟಿಕಲ್ 15 ಒಬ್ಬ ಮಹಿಳೆಯು ಗಂಡನಿಂದ ಅಥವಾ ಗಂಡನ ತಂದೆ ತಾಯಿಯಿಂದ ಅಂದರೆ ಅತ್ತೆ ಮಾವನಿಂದ ಪಡೆದ ಆಸ್ತಿ ಆಕೆಯ ಮ.ರಣ ನಂತರ ಆಕೆಯ ವಾರಸುದಾರರಿಗೆ ಸೇರಬೇಕು ಎಂದು ಹೇಳುತ್ತದೆ. ಆದರೆ ವಿವಾಹಿತ ಮಹಿಳೆಯು ಗಂಡನ ಮನೆಯಿಂದ ಪಡೆದ ಆಸ್ತಿಗಳಿಗೆ ಆಕೆಯ ಸಹೋದರರು ವಾರಸುದಾರರು ಆಗುವುದಿಲ್ಲ, ಆತ ಆಕೆಯ ಕುಟುಂಬ ಸದಸ್ಯನಾಗುವುದು ಇಲ್ಲ ಎನ್ನುವುದು ಕಾನೂನಿನಲ್ಲಿದೆ.

ಆದ್ದರಿಂದ ಈ ಆಸ್ತಿಗೆ ಸಂಬಂಧಪಟ್ಟ ಅರ್ಜಿಯನ್ನು ಸಲ್ಲಿಸಿದ್ದ ದುರ್ಗಾ ಪ್ರಸಾದ್ ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕಾನೂನು ಪ್ರಕಾರವಾಗಿ ಈಗ ಲಲಿತ ಅವರ ಹೆಸರಿನಲ್ಲಿ ಇರುವ ಮನೆ ಅಥವಾ ಆಸ್ತಿಗೆ ಅವರ ಮಕ್ಕಳು ವಾರಸುದಾರರಾಗುತ್ತಾರೆ. ಒಂದು ವೇಳೆ ಮಕ್ಕಳು ಇಲ್ಲದೆ ಇದ್ದ ಸಂದರ್ಭದಲ್ಲಿ ಪತಿಯ ಕಡೆಯವರೇ ಆಸ್ತಿಗೆ ವಾರಸುದಾರರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

Leave a Comment

%d bloggers like this: