ದೂರದೃಷ್ಟಿ, ಅತ್ತಿರ ದೃಷ್ಟಿ, ಕಣ್ಣಿನಲ್ಲಿ ಪೊರೆ, ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರು ಈ ನಾಟಿ ಔಷಧಿ ಒಮ್ಮೆ ತಗೊಂಡ್ರೆ ಸಾಕು ಎಲ್ಲಾ ರೀತಿ ಸಮಸ್ಯೆ ನಿವಾರಣೆಯಾಗುತ್ತದೆ.

 

ಕಣ್ಣು ಒಬ್ಬ ಮನುಷ್ಯನ ಜೀವನದ ಅತಿ ಮುಖ್ಯ ಅಂಗ. ಕಣ್ಣು ಎನ್ನುವುದಕ್ಕಿಂತ ದೃಷ್ಟಿ ಎಂದರೆ ಇದು ಸರಿಯಾಗಿ ಹೊಂದಬಹುದು. ದೃಷ್ಟಿ ದೋಷವಿದ್ದರೆ ಅಥವಾ ದೃಷ್ಟಿ ಇಲ್ಲದವರ ಬದುಕು ಪೂರ್ತಿ ಕತ್ತಲು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣದಿಂದ ದೃಷ್ಟಿಗೆ ಸಂಬಂಧಪಟ್ಟ ಹಾಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಣ್ಣಿನಲ್ಲಿ ಪೊರೆ ಬರುವುದು, ಕಣ್ಣಿನ ಪಾಪೇ ಬಿಳಿ ಆಗುವುದು, ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು, ನರ ದೌರ್ಭಲ್ಯದಿಂದ ದೃಷ್ಟಿಕುಂದುವುದು, ಇರುಳು ಕುರುಡುತನ ಮುಂತಾದ ಕಣ್ಣಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿವೆ. ಇವುಗಳಿಗೆ ಆಸ್ಪತ್ರೆಗೆ ಹೋದರೆ ಶಸ್ತ್ರ ಚಿಕಿತ್ಸೆಯನ್ನು ರೆಫರ್ ಮಾಡುತ್ತಾರೆ.

ಆದರೆ ಅನೇಕರಿಗೆ ಶಸ್ತ್ರ ಚಿಕಿತ್ಸೆ ಆದರೂ ಕೂಡ ಪರಿಣಾಮಕಾರಿಯಾಗಿ ಇದು ಗುಣವಾಗುವುದಿಲ್ಲ ಆದ್ದರಿಂದ ಕೆಲವರು ನಾಟಿ ಔಷಧಿಯ ಕಡೆ ಮುಖ ಮಾಡುತ್ತಾರೆ. ಕಲ್ಬುರ್ಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ವರನಾಳ ಎನ್ನುವ ಗ್ರಾಮದಲ್ಲಿ ಗುರಪ್ಪ ಎನ್ನುವ ನಾಟಿ ವೈದ್ಯರಿದ್ದಾರೆ. ಇವರು ಕಣ್ಣಿನ ಎಲ್ಲಾ ರೀತಿ ಸಮಸ್ಯೆಗೂ ಕೂಡ ನಾಟಿ ಔಷಧಿ ನೀಡುತ್ತಾರೆ.

ಗುಲ್ಬರ್ಗದಿಂದ ವರನಾಳ ಗ್ರಾಮಕ್ಕೆ 40 ಕಿಲೋಮೀಟರ್ ದೂರವಿದ್ದು, ಬಸ್ ವ್ಯವಸ್ಥೆ ಕೂಡ ಇದೆ. ಪ್ರತಿ ಭಾನುವಾರದಂದು ಮಾತ್ರ ಇವರು ಔಷಧಿಯನ್ನು ಕೊಡುತ್ತಾರೆ. ಈ ಔಷಧಿ ಪಡೆಯಲು ಕರ್ನಾಟಕ ಆಂಧ್ರ ಮಹಾರಾಷ್ಟ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಗುರಪ್ಪ ಅವರ ಕುಟುಂಬ ಮೂರು ತಲೆಮಾರುಗಳಿಂದ ಈ ರೀತಿ ದೃಷ್ಟಿದೋಷ ಸಮಸ್ಯೆಗೆ ನಾಟಿ ಔಷಧಿ ಕೊಡುತ್ತಾ ಬಂದಿದ್ದಾರೆ.

ಇದುವರೆಗೆ ಗುರಪ್ಪ ಅವರೇ ಒಂದು ಲಕ್ಷದಿಂದ ಎರಡು ಲಕ್ಷ ಜನರ ಸಮಸ್ಯೆಗೆ ಔಷಧಿ ಕೊಟ್ಟಿರುವ ಉದಾಹರಣೆ ಇದೆ. ಗುರಪ್ಪ ಅವರು ಇಲ್ಲಿ ಆಂಜನೇಯನ ಪುಟ್ಟ ವಿಗ್ರಹ ಇಟ್ಟಿದ್ದಾರೆ. ಮೊದಲಿಗೆ ಭಾನುವಾರ ಬೆಳಿಗ್ಗೆ ಬಂದು ಆಂಜನೇಯನ ದರ್ಶನ ಮಾಡಿ ಅವರೇ ಹೋಗಿ ಅವರ ತೋಟ,ಗದ್ದೆ ಮತ್ತು ಹೊರಗೆಲ್ಲಾ ಸುತ್ತಾಡಿ ಅವರ ಔಷಧಿಗೆ ಬೇಕಾದ ಸಸ್ಯಗಳನ್ನು ತಂದು ಔಷಧಿ ಮಾಡಿಕೊಳ್ಳುತ್ತಾರೆ.

ಬಳಿಕ ದಿನಪೂರ್ತಿ ತಮ್ಮಲ್ಲಿ ಚಿಕಿತ್ಸೆ ಬರುವವರ ಜೊತೆ ಸ್ಪಂದಿಸುತ್ತಾರೆ. 15 ದಿನಗಳ ಮಗುವಿನಿಂದ ಕೂಡ ಇವರು ನಾಟಿ ಔಷಧಿ ನೀಡಿ ಸಮಸ್ಯೆ ಪರಿಹಾರ ಮಾಡಿದ್ದಾರೆ. ಹಾಗೆಯೇ 15 ದಿನಗಳ ಮಗುವಿನಿಂದ ಹಿಡಿದು ನೂರು ವರ್ಷದವರೆಗಿನ ಎಲ್ಲಾ ವಯಸ್ಕರು ಕೂಡ ಇವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಇವರಿಂದ ತೆಗೆದುಕೊಂಡ ಚಿಕಿತ್ಸೆಗೆ ಯಾವುದೇ ಪಥ್ಯೆ ಇರುವ ಅವಶ್ಯಕತೆ ಇಲ್ಲ. ಆದರೆ ಐದು ದಿನಗಳವರೆಗೆ ಮುಟ್ಟಾದ ಮಹಿಳೆಯರನ್ನು ಮುಟ್ಟಿಸಿಕೊಳ್ಳದೇ ಇರಲು ಸೂಚಿಸುತ್ತಾರೆ.

ಒಂದು ರೂಪಾಯಿ ಕೂಡ ಇವರು ಕಾಣಿಕೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಬಹಳ ವಿಶೇಷ. ಆದರೆ ಇಲ್ಲಿರುವ ಆಂಜನೇಯನ ಸ್ವಾಮಿ ಗುಡಿಗೆ ಬಂದು ಅವರು ಎಲೆ ಅಡಿಕೆ ಅರ್ಪಿಸಿ ಒಂದು ಕಾಯಿ ಹೊಡೆದು ಹೋಗಬೇಕು. ಆಗಿದ್ದಲ್ಲಿ ಮಾತ್ರ ಆ ಚಿಕಿತ್ಸೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ಇವರ ನಂಬಿಕೆ.

ಆಂಜನೇಯನ ಪರಮ ಭಕ್ತರಾಗಿರುವ ಇವರು ಅವರನ್ನೇ ನಂಬಿ ಚಿಕಿತ್ಸೆ ಕೊಡುತ್ತಾರೆ ಆದರೆ ಇದುವರೆಗೆ ಒಂದು ಕೂಡ ಅಡ್ಡ ಪರಿಣಾಮ ಆಗಿ ದೂರು ದಾಖಲಾಗಿರುವ ಉದಾಹರಣೆಗೆ ಇಲ್ಲ. ಇಲ್ಲಿಗೆ ದೂರದ ಊರುಗಳಿಂದ ಕೂಡ ಚಿಕಿತ್ಸೆಗೆ ಜನ ಬರುತ್ತಾರೆ. ಅವರಿಗೆ ಮರಳಿ ಹೋಗಲು ಸಾಧ್ಯವಿಲ್ಲದೆ ಇದ್ದರೆ ಊಟ ಹಾಗೂ ಆಶ್ರಯದ ವ್ಯವಸ್ಥೆಯನ್ನು ಕೂಡ ಅವರ ಕುಟುಂಬಸ್ಥರೇ ಮಾಡಿದ್ದಾರೆ.

ಪ್ರತಿ ಭಾನುವಾರವು ಜಾತ್ರೆಗೆ ಸೇರುವಷ್ಟು ಜನ ಇಲ್ಲಿ ಸೇರಿರುತ್ತಾರೆ ನಿಮಗೂ ಕೂಡ ದೃಷ್ಟಿ ದೋಷಕ್ಕೆ ಸಂಬಂಧಪಟ್ಟ ಏನೇ ಸಮಸ್ಯೆ ಇದ್ದರೂ ಒಂದು ಬಾರಿ ಇವರನ್ನು ಭೇಟಿಯಾಗಿ, ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

%d bloggers like this: