ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಗಡಿ ಭದ್ರತಾ ಪಡೆ BSF ನಲ್ಲಿ ಉದ್ಯೋಗವಕಾಶಗಳು ಖಾಲಿ ಇದ್ದು, ಖಾಲಿ ಇರುವ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಕೂಡ ಹೊರಡಿಸಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಸುತ್ತೋಲೆಯಲ್ಲಿರುವ ನಿಯಮದ ಪ್ರಕಾರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ.
ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಅರ್ಜಿ ಸಲ್ಲಿಸುವವರು ತಿಳಿದು ಕೊಳ್ಳಲೇಬೇಕಾದ ಪ್ರಮುಖ ಮಾಹಿತಿಗಳಾದ ಒಟ್ಟು ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಾನ ಸಡಿಲಿಕೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ, ಇವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಹೇಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು.
ಇಲಾಖೆ ಹೆಸರು:- ಗಡಿ ಭದ್ರತಾ ಪಡೆ BSF
ಹುದ್ದೆಗಳ ಸಂಖ್ಯೆ:- 247
ಹುದ್ದೆಗಳ ವಿವರ:-
BSF ಹೆಡ್ ಕಾನ್ಸ್ಟೇಬಲ್ (ರೇಡಿಯೋ ಆಪರೇಟರ್) – 217
BSF ಹೆಡ್ ಕಾನ್ಸ್ಟೇಬಲ್ (ರೇಡಿಯೋ ಮೆಕಾನಿಕ್) – 30
ಅರ್ಹತೆ ಮಾನದಂಡಗಳು:-
● ಶೈಕ್ಷಣಿಕ ವಿದ್ಯಾರ್ಥಿಯಲ್ಲಿ ಕನಿಷ್ಠ 60% ಅಂಕ ಪಡೆದಿರುವುದು ಕಡ್ಡಾಯ.
● ಪುರುಷ ಅಭ್ಯರ್ಥಿಗಳು168 ಸೆಂಟಿಮೀಟರ್ ಎತ್ತರ ಇರಬೇಕು
● ಮಹಿಳಾ ಅಭ್ಯರ್ಥಿಗಳು 157 ಸೆಂಟಿಮೀಟರ್ ಎತ್ತರ ಇರಬೇಕು
ಶೈಕ್ಷಣಿಕ ವಿದ್ಯಾರ್ಹತೆ:-
● BSFಹೆಡ್ ಕಾನ್ಸ್ಟೇಬಲ್ ರೇಡಿಯೋ ಆಪರೇಟರ್
1. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣವಾಗಿರಬೇಕು.
2. ರೇಡಿಯೋ ಮತ್ತು ಟೆಲಿವಿಷನ್ / ಎಲೆಕ್ಟ್ರಾನಿಕ್ಸ್ಕಂಪ್ಯೂಟರ್ ಆಪರೇಟಿಂಗ್/ ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ ಟಾಟಾ ಆಪರೇಷನ್/ ಕಂಪ್ಯೂಟರ್ ಸಾಫ್ಟ್ವೇರ್/ ಜನರಲ್ ಎಲೆಕ್ಟ್ರಾನಿಕ್ಸ್/ ಡಾಟಾ ಎಂಟ್ರಿ ಟ್ರೇಡ್ ಅಲ್ಲಿ ಎರಡು ವರ್ಷದ ಐಟಿಐ ಉತ್ತೀರ್ಣವಾಗಿರಬೇಕು.
● BSF ಹೆಡ್ ಕಾನ್ಸ್ಟೇಬಲ್ ರೇಡಿಯೋ ಮೆಕಾನಿಕ್
1. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣವಾಗಿರಬೇಕು.
2. ರೇಡಿಯೋ ಮತ್ತು ಟೆಲಿವಿಷನ್ / ಎಲೆಕ್ಟ್ರಾನಿಕ್ಸ್ಕಂಪ್ಯೂಟರ್ ಆಪರೇಟಿಂಗ್/ ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ ಟಾಟಾ ಆಪರೇಷನ್/ ಕಂಪ್ಯೂಟರ್ ಸಾಫ್ಟ್ವೇರ್/ ಜನರಲ್ ಎಲೆಕ್ಟ್ರಾನಿಕ್ಸ್/ ಡಾಟಾ ಎಂಟ್ರಿ ಆಪರೇಟರ್/ ಫಿಟ್ಟರ್/ ಇನ್ಫರ್ಮಶನ್ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಮೆಂಟೇನೆನ್ಸ್/ ಕಂಪ್ಯೂಟರ್ ಹಾರ್ಡ್ವೇರ್/ ನೆಟ್ವರ್ಕ್ ಟೆಕ್ನಿಷಿಯನ್/ ಮೆಕಾನಿಕ್ ಟ್ರೇಡ್ ಅಲ್ಲಿ ಎರಡು ವರ್ಷದ ಐಟಿಐ ಉತ್ತೀರ್ಣವಾಗಿರಬೇಕು.
ವಯೋಮಿತಿ:-
● ಕನಿಷ್ಠ 18 ವರ್ಷ ಪೂರೈಸಿರಬೇಕು.
● ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷಗಳು.
● OBCಅಭ್ಯರ್ಥಿಗಳಿಗೆ 28 ವರ್ಷಗಳು.
● SC,ST ಅಭ್ಯರ್ಥಿಗಳಿಗೆ 30 ವರ್ಷಗಳು.
ವೇತನ ಶ್ರೇಣಿ:-
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪೇ ಮೆಟ್ರಿಕ್ ಲೆವೆಲ್ 4 ಪ್ರಕಾರ 25,500 – 81,100 ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
● ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಿರುವ ಪ್ರಿಂಟ್ ಪ್ರತಿ ತೆಗೆದು ಇಟ್ಟುಕೊಳ್ಳಬೇಕು ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬಹುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 22.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 12.05.2023.