ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ನಾಗರಿಕರಿಗೆ ರಾಜ್ಯ ಸರ್ಕಾರದ (government ) ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, 2024ರ ನಂತರ ಗ್ರಾಮೀಣ ಭಾಗದ ಜನತೆಗೆ ಗ್ರಾಮ ಪಂಚಾಯಿತಿಯೊಂದಿಗೆ (Grama Panchayath) ಎಲ್ಲಾ ಸೇವೆ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ವತಿಯಿಂದ ಸುತ್ತೋಲೆ ಹೊರಬಿದ್ದಿದ್ದು ಕಂದಾಯದ ಇಲಾಖೆಯು ಕೈಗೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ.
ವಿಚಾರ ಏನೆಂದರೆ ಇನ್ನು ಮುಂದೆ ಗ್ರಾಮೀಣ ಭಾಗದ ಜನರು ಇದುವರೆಗೆ ಗ್ರಾಮ ಒನ್, ಕರ್ನಾಟಕ ಒನ್ ಹಾಗು ಕಾಮನ್ ಸರ್ವಿಸ್ ಸೆಂಟರ್(CSC) ಕೇಂದ್ರಗಳು ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಪಡೆಯುತ್ತಿದ್ದ ಎಲ್ಲ ಸೇವಾ ಸೌಲಭ್ಯವನ್ನು ಇನ್ನು ಮುಂದೆ ನಿಮ್ಮ ಗ್ರಾಮ ಪಂಚಾಯತ್ ನ ಬಾಪೂಜಿ ಸೇವಾ ಕೇಂದ್ರದಲ್ಲಿಯೇ (Bapuji Sevakendra) ಪಡೆಯಬಹುದು ಎಂದು ತಿಳಿಸಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಕೆಲ ಸೇವೆಗಳನ್ನು ಪಡೆಯಬಹುದು, ಆದರೆ CSC ಕೇಂದ್ರಗಳಲ್ಲಿ ಇದಕ್ಕೆ ಸೇವಾ ಶುಲ್ಕವನ್ನು ಪಾವತಿಸಬೇಕಿತ್ತು. ಬಡ ಜನರಿಗೆ ಇದು ಹೊರೆಯಾಗಿತ್ತು ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳು ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿದ್ದರಿಂದ ಅಲ್ಲಿಯವರೆಗೂ ರೈತನು ತನ್ನ ಕೆಲಸ ಕಾರ್ಯ ಬಿಟ್ಟು ಹಣ ವ್ಯರ್ಥ ಮಾಡಿಕೊಂಡು ಕ್ಷುಲ್ಲಕ ಕಾರಣಗಳಿಗೂ ಅಲೆಯಬೇಕಾಗಿತ್ತು.
ಈ ಎಲ್ಲ ಸಮಸ್ಯೆಗೆ ಮುಕ್ತಿ ಹಾಡಲು ಇಂತಹದೊಂದು ಮಹತ್ವದ ನಿರ್ಧಾರವನ್ನು ಕಂದಾಯ ಇಲಾಖೆಗೆ ತೆಗೆದುಕೊಂಡಿದೆ ಮತ್ತು ಈ ನಿರ್ಧಾರವು ಸ್ವಾಗತಾರ್ಹವಾಗಿದೆ ಎಂದೇ ಹೇಳಬಹುದು. ಇದರಿಂದ ಗ್ರಾಮೀಣ ಭಾಗದ ಕೋಟ್ಯಂತರ ಜನರಿಗೆ ಅನುಕೂಲವಾಗುವುದಂತೂ ಗ್ಯಾರಂಟಿ.
ಪಂಚತಂತ್ರ 2.0 ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸಿಗುತ್ತಿದ್ದ ನಾಡಾ ಕಚೇರಿ ಸೇವೆಗಳನ್ನು ಒದಗಿಸುವ ಬಗ್ಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಕೆಲವು ಸೇವೆಗಳು ಸಂಪೂರ್ಣ ಉಚಿತವಾಗಿದ್ದು ಇನ್ನು ಕೆಲವು ಸೇವೆಗಳಿಗೆ ಅತಿ ಕಡಿಮೆ ಶುಲ್ಕವನ್ನು ಪಾವತಿಸಬೇಕು.
ಆದರೂ ರೈತರಿಗೆ ಆತನ ಸಮಯ ಹಾಗೂ ಹಣದ ಉಳಿತಾಯ ಆಗುತ್ತದೆ. ಹಾಗಾದರೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಸೇವಕೇಂದ್ರಗಳಲ್ಲಿ ಏನೆಲ್ಲಾ ಸೇವೆಗಳನ್ನು ಪಡೆಯಬಹುದು ಎನ್ನುವುದರ ಪಟ್ಟಿ ಹೀಗಿದೆ ನೋಡಿ.
* ಜಾತ ಮತ್ತು ಆದಾಯ ಪ್ರಮಾಣ ಪತ್ರ
* ವಾಸಸ್ಥಳ ದೃಡೀಕರಣ ಪತ್ರ
* ಗೇಣಿ ರಹಿತ, ಜೀವಂತ, ಬೇಸಾಯ ಕುಟುಂಬ ಸದಸ್ಯರ ದೃಢೀಕರಣ
* ಜಮೀನು ಇಲ್ಲದಿರುವಿಕೆ, ನಿರುದ್ಯೋಗಿ, ಕೃಷಿ ಕಾರ್ಮಿಕ, ಭೂಹಿಡುವಳಿ ಪ್ರಮಾಣಪತ್ರ
* ವಸತಿ, ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ
* ಅನುಕಂಪ ಆಧಾರದ ನೇಮಕಕ್ಕೆ ದೃಢೀಕರಣ
* ವಂಶವೃಕ್ಷ
* ಬೆಳೆ ಪ್ರಮಾಣ ಪತ್ರ
* ಅಂಗವೈಕಲ್ ವೇತನಕ್ಕೆ ಅರ್ಜಿ
* ವಿಧವಾ ವೇತನಕ್ಕೆ ಅರ್ಜಿ
* ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ
* ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ
* ವೃದ್ಧಾಪ್ಯ ವೇತನ ಅರ್ಜಿ
* ಮೈತ್ರಿ, ಮನಃಸ್ವಿನಿ ಯೋಜನೆಗೆ ಪ್ರಮಾಣ ಪತ್ರಗಳು ಮತ್ತು ಅರ್ಜಿ ಸಲ್ಲಿಕೆ
* ಕಟ್ಟಡ ನಿರ್ಮಾಣ ಪರವಾನಗಿ
* ನೀರಿನ ಸಂಪರ್ಕಕ್ಕೆ ಅರ್ಜಿ
* ಎಸ್ಕಾಂಗೆ ನಿರಾಕ್ಷೇಪಣೆ ಪತ್ರ
* ವಸತಿ ಯೋಜನೆಗೆ ಅರ್ಜಿ
* ಉಚಿತ ನಿವೇಶನ ಪಡೆಯಲು ಅರ್ಜಿ
* ಆಸ್ತಿ ತೆರಿಗೆ ಪಾವತಿ ಅರ್ಜಿ
* ಭೂಪರಿವರ್ತನೆ ಕೋರಿಕೆ ಅರ್ಜಿ
* ನೀರಿನ ಶುಲ್ಕ ಪಾವತಿ
* ಟ್ರೇಡ್ ಲೈಸೆನ್ಸ್ ಮತ್ತು ನವೀಕರಣ
* ಜಾಹೀರಾತು ಪರವಾನಗಿ
* ವಿದ್ಯಾರ್ಥಿಗಳಿಗೆ ದೂರ ಪ್ರಮಾಣಪತ್ರ
* ಬೀದಿದೀಪ ನಿರ್ವಹಣೆ ಜೀವ ವಿಮೆ
* ವಾಹನ ವಿಮೆ
* ವಿದ್ಯುತ್ ಬಿಲ್ ಪಾವತಿ
* ಮೊಬೈಲ್ ಮತ್ತು DTH ರೀಚಾರ್ಜ್
* ಬಸ್-ರೈಲು-ವಿಮಾನ ಬುಕ್ಕಿಂಗ್
* ಪಡಿತರ ಕಾರ್ಡ್ ಅರ್ಜಿ
* ಆಧಾರ್ ಕಾರ್ಡ್ ತಿದ್ದುಪಡಿ
* ಹಣ ವರ್ಗಾವಣೆ
* ವಿದ್ಯಾರ್ಥಿ ವೇತನಕ್ಕೆ ಅರ್ಜಿ
* ಇತ್ಯಾದಿ ಸೇವೆಗಳು.