ಭಾರತ ಸರ್ಕಾರವು (Indian government) ಸೃಷ್ಟಿಸುವ ಉದ್ಯೋಗವಕಾಶಗಳಲ್ಲಿ ಅಂಚೆ ಕಚೇರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಅತಿ ಹೆಚ್ಚಿನ ಉದ್ಯೋಗವಕಾಶವಿರುತ್ತದೆ ಎಂದು ಹೇಳಬಹುದು ಪ್ರತಿ ವರ್ಷವೂ ಕೂಡ ಈ ನೇಮಕಾತಿಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಉದ್ಯೋಗ ಪಡೆಯುತ್ತಾರೆ.
ಅಂತೆಯೇ ಈ ವರ್ಷವೂ ಕೂಡ ಅಂಚೆ ಇಲಾಖೆಯಿಂದ (Indian post department) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಇಲಾಖೆ ವತಿಯಿಂದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದ್ದು ಭಾರತದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.
ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ನೇಮಕಾತಿ ಅಧಿಸೂಚನೆಯಲ್ಲಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸಿದ್ದೇವೆ.
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ.
ಒಟ್ಟು ಹುದ್ದೆಗಳ ಸಂಖ್ಯೆ:-
* ಭಾರತದಲ್ಲಿ 1899 ಹುದ್ದೆಗಳು
* ಕರ್ನಾಟಕಕ್ಕೆ 94 ಹುದ್ದೆಗಳು.
ಹುದ್ದೆಗಳ ವಿವರ:-
* ಪೋಸ್ಟಲ್ ಅಸಿಸ್ಟೆಂಟ್
* ಸಾರ್ಟಿಂಗ್ ಅಸಿಸ್ಟೆಂಟ್
* ಪೋಸ್ಟ್ ಮ್ಯಾನ್
* ಮೇಲ್ ಗಾರ್ಡ್
* ಮಲ್ಟಿ ಟಾಸ್ಕಿಂಗ್ ಸ್ಟಾಫ್
ಉದ್ಯೋಗ ಸ್ಥಳ:- ಭಾರತದಾದ್ಯಂತ
ವೇತನ ಶ್ರೇಣಿ:-
* ಪೋಸ್ಟಲ್ ಅಸಿಸ್ಟೆಂಟ್ ರೂ.25,500 ರಿಂದ 81,000
* ಸಾರ್ಟಿಂಗ್ ಅಸಿಸ್ಟೆಂಟ್ ರೂ.25,500 ರಿಂದ 81,000
* ಪೋಸ್ಟ್ ಮ್ಯಾನ್ ರೂ.21,700 ರಿಂದ 69,100
* ಮೇಲ್ ಗಾರ್ಡ್ ರೂ.21,700 ರಿಂದ 69,100
* ಮಲ್ಟಿ ಟಾಸ್ಕಿಂಗ್ ಸ್ಟಾಫ್ ರೂ.18,000 ರಿಂದ 56,900
ಶೈಕ್ಷಣಿಕ ವಿದ್ಯಾರ್ಹತೆ:-
* ಪೋಸ್ಟಲ್ ಅಸಿಸ್ಟೆಂಟ್ – ಯಾವುದೇ ವಿಷಯದಲ್ಲಿ ಪದವಿ.
* ಸಾರ್ಟಿಂಗ್ ಅಸಿಸ್ಟೆಂಟ್ – ಯಾವುದೇ ವಿಷಯದಲ್ಲಿ ಪದವಿ.
* ಪೋಸ್ಟ್ ಮ್ಯಾನ್ – 12ನೇ ತರಗತಿ
* ಮೇಲ್ ಗಾರ್ಡ್ – 12ನೇ ತರಗತಿ ಮತ್ತು ವಾಹನ ಚಾಲನ ಪರವಾನಗಿ
* ಮಲ್ಟಿ ಟಾಸ್ಕಿಂಗ್ ಸ್ಟಾಫ್ – 10ನೇ ತರಗತಿ
ವಯೋಮಿತಿ:-
* ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ
1. ಪೋಸ್ಟಲ್ ಅಸಿಸ್ಟೆಂಟ್ 27 ವರ್ಷಗಳು
2. ಸಾರ್ಟಿಂಗ್ ಅಸಿಸ್ಟೆಂಟ್27 ವರ್ಷಗಳು
3. ಪೋಸ್ಟ್ ಮ್ಯಾನ್27 ವರ್ಷಗಳು
4. ಮೇಲ್ ಗಾರ್ಡ್27 ವರ್ಷಗಳು
5. ಮಲ್ಟಿ ಟಾಸ್ಕಿಂಗ್ ಸ್ಟಾಫ್ 25 ವರ್ಷಗಳು
ವಯೋಮಿತಿ ಸಡಿಲಿಕೆ:-
* Sc/ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
ಅರ್ಜಿ ಶುಲ್ಕ:-
* Sc/ST, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
* ಉಳಿದ ಅಭ್ಯರ್ಥಿಗಳಿಗೆ ರೂ. 100
* ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
* ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
* ಅರ್ಜಿಶುಲ್ಕ ಸಲ್ಲಿಸಬೇಕಾಗಿದ್ದಲ್ಲಿ ಶುಲ್ಕ ಪಾವತಿ ಮಾಡಿ ಇ-ರಶೀದಿ ಪಡೆದುಕೊಳ್ಳಬೇಕು ಮತ್ತು ಅರ್ಜಿ ಸಲ್ಲಿಕೆ ಪೂರ್ತಿ ಆದ ಮೇಲೆ ತಪ್ಪದೆ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
* ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಕ್ರೀಡಾ ಅರ್ಹತೆಯ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಲಾಗುವುದು.
* ಕೊನೆಯ ಹಂತದಲ್ಲಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10.11.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 09.12.2023