ಜಮೀನನ್ನು ಸರ್ವೇ (land survey) ಮಾಡುವುದು ರೈತನಿಗೆ ಬಹಳ ಮುಖ್ಯ. ಯಾಕೆಂದರೆ ಆತನ ಜಮೀನಿನ ಗಡಿ ಎಷ್ಟಿದೆ ಎನ್ನುವುದರ ನಿಖರವಾದ ಅಳತೆ ಗೊತ್ತಾಗುತ್ತದೆ. ಹೀಗಾಗಿ ಅಕ್ಕಪಕ್ಕದ ಜಮೀನ್ದಾರರು ಒತ್ತುವರಿ ಮಾಡಿದ ತಿಳಿದುಕೊಳ್ಳಬಹುದು ಮತ್ತು ತನಗೆ ಎಷ್ಟು ಜಮೀನಿದೆ ಎನ್ನುವುದರ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮತ್ತು ಜಮೀನಿನ ವ್ಯಾಪ್ತಿಗೆ ಒಳಪಡುವ ಯಾವುದೇ ಮರ ಗಿಡಗಳು ಮುಂತಾದವುಗಳನ್ನು ಕೂಡ ಸೇರಿಸಬಹುದಾದ ಕಾರಣ ಪ್ರತಿಯೊಬ್ಬರ ಈ ಸರ್ವೇ ಮಾಡಿಸುತ್ತಾರೆ. ಯಾವುದೇ ಜಮೀನನ್ನು ಕ್ರಯ ಅಥವಾ ವಿಭಾಗ ಅಥವಾ ಮಾರಾಟ ಮಾಡಬೇಕು ಎಂದರು ಕೂಡ ಸರ್ವೇ ಮಾಡಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು.
ಜಮೀನಿನ ಸರ್ವೆ ಯಾವಾಗಲೂ ಕಾನೂನಿನ ಪ್ರಕಾರವೇ ಆಗಬೇಕು. ಹೀಗಾಗಿ ರೈತ ಅರ್ಜಿ ಸಲ್ಲಿಸಿ ಸರ್ಕಾರದ ಮೋಜಣಿ ಮಾಡಿಸಿ ಸರ್ವೆಯರ್ (Survey officer) ಕಡೆಯಿಂದ ಅಳತೆ ಮಾಡಿಸಬೇಕು. ಇದಕ್ಕೇಂದೆ ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಸರ್ವೆ ಇಲಾಖೆಯನ್ನು (government Survey department ) ನೇಮಕ ಮಾಡಲಾಗಿದೆ.
ಸರ್ಕಾರದಿಂದ ನೇಮಕವಾದ ಭೂಮಾಪಕರು ಬಂದು ಸರ್ವೆ ಕಾರ್ಯ ನಡೆಸುತ್ತಾರೆ ಅಂತಹ ಸಂದರ್ಭಗಳಲ್ಲಿ ಅರ್ಜಿ ಸಲ್ಲಿಸುವ ರೈತನ ಪಾತ್ರ ಏನು ಮತ್ತು ಈ ಕಾರ್ಯ ಹೇಗೆ ನಡೆಯುತ್ತದೆ ಎನ್ನುವ ಮಾಹಿತಿಯನ್ನು ಪ್ರತಿಯೊಬ್ಬ ರೈತನು ಕೂಡ ತಿಳಿದುಕೊಂಡಿರಬೇಕು ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ. ಪ್ರತಿಯೊಬ್ಬ ರೈತನಿಗೂ ಕೂಡ ಉಪಯುಕ್ತವಾಗುವ ಮಾಹಿತಿ ಇದಾಗಿತ್ತು ತಪ್ಪದೇ ಇದನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
* ರೈತ ತನ್ನ ಜಮೀನಿಗೆ ಸರ್ವೆ ಮಾಡಿಸಲು ನಾಡಕಚೇರಿಗೆ ಹೋಗಿ ಅರ್ಜಿ ಹಾಕಬೇಕು. ಅರ್ಜಿಪರಿಶೀಲನೆಯಾದ ನಂತರ ಈ ಎಲ್ಲಾ ಅರ್ಜಿಗಳು ಆಟೋಮೆಟಿಕ್ ಆಗಿ ತಂತ್ರಾಂಶಗಳ ಮೂಲಕ ಸರ್ಕಾರಿ ಭೂಮಾಪಕರಿಗೆ ವರ್ಗಾವಣೆಯಾಗುತ್ತದೆ. ಅಲಾಟ್ಮೆಂಟ್ ಆದ ತಕ್ಷಣ ಭೂ ಮಾಪನದ ಜವಾಬ್ದಾರಿ ಅವರದ್ದಾಗಿರುತ್ತದೆ
* ಸರ್ವೆಯರ್ ಮೊದಲಿಗೆ ಜಮೀನಿನ ನಕ್ಷೆ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲನೆ ಮಾಡಿ ಜಮೀನಿನ ಮಾಲೀಕರಿಗೆ ತಿಳುವಳಿಕೆ ಚೀಟಿ ವಿತರಿಸುವ ಒಂದು ನೋಟಿಸ್ ತಯಾರು ಮಾಡುತ್ತಾರೆ.
* ಆ ನೋಟಿಸಿನಲ್ಲಿ ಸರ್ವೇ ನಂಬರ್ ನ ಮಾಲಿಕರಿಗೆ ದಿನಾಂಕ ತಿಳಿಸಿ ಜಮೀನು ಅಳತೆ ಮಾಡುವ ಸಂದರ್ಭದಲ್ಲಿ ನಿಮ್ಮ ಜಮೀನಿನಲ್ಲಿ ಹಾಜರಿರಬೇಕು ಎಂಬ ವಿಷಯವನ್ನು ನೋಟಿಸಿನಲ್ಲಿ ಬರೆಯಲಾಗುತ್ತದೆ.
* ಆ ದಿನ ಸರ್ವೆಯರ್ ಆ ಒಂದು ಸರ್ವೆ ನಂಬರಿನ ಗಡಿಯನ್ನು ಗುರುತಿಸಿ, ಅಲ್ಲಿ ಗಡಿ ಗುರುತಿಸಲು ಹೂತಿರುವ ಕಲ್ಲನ್ನು ಪತ್ತೆ ಹಚ್ಚಿ ಜಮೀನಿನ ಅಳತೆಯನ್ನು ವ್ಯವಸ್ಥಿತವಾಗಿ ಮಾಡಿ ಜಮೀನಿನ ಗಡಿಯನ್ನು ಕಂಡು ಹಿಡಿದು ಯಾವುದಾದರೂ ವ್ಯತ್ಯಾಸ ಕಂಡು ಬಂದಲ್ಲಿ ಅದನ್ನು ಯಥಾವತ್ತಾಗಿ ತಿಳಿಸುತ್ತಾರೆ ಇದರಿಂದ ಬೇರೆಯವರು ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ತೀಕ್ಷ್ಣವಾಗಿ ತಿಳಿದು ಬರುತ್ತದೆ.
* ಇದಾದ ನಂತರ ಸ್ಥಳದಲ್ಲಿದ್ದ ಕೆಲವು ರೈತರ ಸಹಿಯನ್ನ ಸಾಕ್ಷಿಯಾಗಿ ಹಾಕಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾರೆ.
* ಅಳತೆ ಕಾರ್ಯ ಮುಗಿದ ನಂತರ ಸರ್ವೆಯರ್ ನಿಗದಿತ ನಮೂನೆಯಲ್ಲಿ ನಕ್ಷೆ ಸಹಿತ ಎಲ್ಲಾ ವಿವರಗಳನ್ನು ದಾಖಲಿಸುತ್ತಾರೆ * ಅವರಿಗೆ ಇಲಾಖೆಯಿಂದ ಕೊಟ್ಟಿರುವ ಸಿಸ್ಟಮ್ ನಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ ಇದಾದ ನಂತರ ರೈತರು ಹದ್ದುಬಸ್ತಿಗೆ ಹಾಕಿರುವ ಅರ್ಜಿಯ ಜೊತೆಗೆ ನಾಡ ಕಚೇರಿಗೆ ಹೋಗಿ ಹದ್ದುಬಸ್ತಿನ ಅಳತೆ ಮಾಡಿರುವ ನಕ್ಷೆಯನ್ನು ತೆಗೆದುಕೊಳ್ಳಬೇಕು ಈ ನಕ್ಷೆಯ ಮೂಲಕ ತಮ್ಮ ಜಮೀನಿಗೆ ರೈತರು ಬೌಂಡರಿಯನ್ನು ಹಾಕಿಕೊಳ್ಳಬಹುದು.
ರೈತನು ತನ್ನ ಜಮೀನಿನ ಅಳತೆ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ಜಮೀನಿನ ರೈತರಿಗೆ ಹಾಜರಿರಲು ರೈತ ಮಾಹಿತಿ ಕೊಡಬೇಕು. ಇಲ್ಲವಾದರೆ ಸರಿಯಾದ ರೀತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನ ಅವರಿಂದ ಬಿಡಿಸಿಕೊಳ್ಳಲು ಕಷ್ಟವಾಗುತ್ತದೆ. ಈ ಮಾಹಿತಿಯನ್ನು ಅಕ್ಕಪಕ್ಕದ ರೈತರಿಗೆ ತಿಳಿಸುವ ಜವಾಬ್ದಾರಿ ಅರ್ಜಿ ಸಲ್ಲಿಸುವ ರೈತನದ್ದೇ ಆಗಿರುತ್ತದೆ.
ಆತನೇ ಹೇಳಬಹುದು ಅಥವಾ ಬೇರೆಯವರ ಮೂಲಕ ತಿಳಿಸಬಹುದು. ಅಷ್ಟೇ ಅಲ್ಲದೆ ಒತ್ತುವರಿ ಭೂಮಿಯನ್ನು ಬಿಡದೆ ಇದ್ದಂತಹ ಸಂದರ್ಭದಲ್ಲಿ ಈ ಸರ್ವೆಯರ್ ಬಿಡಿಸಲು ಆಗುವುದಿಲ್ಲ. ನೀವು ಆಗ ಆ ರೈತನ ಮೇಲೆ ನಾಯಾಲಯದಲ್ಲಿ ದಾವೆ ಹೂಡಿ ಸಮಸ್ಯೆಯನ್ನು ಕೋರ್ಟ್ ಮೂಲಕ ಬಗೆಹರಿಸಿಕೊಳ್ಳಬೇಕು.