ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಅದರಲ್ಲೂ ಭಾರತದಲ್ಲಿ ಬೆಳೆಯಲಾಗುವ ಸಾಂಬಾರ ಪದಾರ್ಥಗಳಿಗೆ ಮೊದಲಿನಿಂದಲೂ ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಪೋರ್ಚುಗೀಸರು ಭಾರತಕ್ಕೆ ಜಲಮಾರ್ಗ ಕಂಡು ಹಿಡಿದಿದ್ದು ಹಾಗೂ ನಮ್ಮ ಈ ಅದ್ದೂರಿತನ ಮಸಾಲೆ ವ್ಯಾಪಾರಕ್ಕಾಗಿ ಬಂದ ಉದ್ದೇಶಿಗರ ಕಣ್ಣು ಕುಕ್ಕಿ ಭಾರತ ನೂರಾರು ವರ್ಷಗಳವರೆಗೆ ಕಾಲ ವಿದೇಶಗರ ಕಪಿಮುಷ್ಟಿಯಲ್ಲಿ ಇರುವಂತೆ ಆಗಿದ್ದು.
ಈಗಲೂ ಸಹ ನಮ್ಮ ದೇಶದಲ್ಲಿನ ಮಸಾಲ ಪದಾರ್ಥಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಇಷ್ಟೇ ಬೆಲೆ ಇದೆ. ಪ್ರಪಂಚದಾದ್ಯಂತ ಬಳಕೆಯಾಗುವ ಮಸಾಲ ಪದಾರ್ಥಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ದೇಶ ಭಾರತವೇ ಆಗಿದೆ. ಹಾಗಾಗಿ ಇಂತಹ ಸಾಂಬರ್ ಪದಾರ್ಥಗಳ ಕೃಷಿಯು ರೈತನಿಗೆ ಖಚಿತವಾದ ಆದಾಯ ನೀಡುವುದಲ್ಲದೆ ಯಾವುದೇ IT ಉದ್ಯೋಗಕ್ಕೂ ಕಡಿಮೆ ಇಲ್ಲದ ಆದಾಯ ನೀಡುತ್ತದೆ ಎಂದು ಹೇಳಬಹುದು.
ಇಂತಹ ಮಸಾಲ ಪದಾರ್ಥಗಳ ಕೃಷಿಯಲ್ಲಿ ದಾಲ್ಚಿನ್ನಿ ಕೃಷಿ ಮಾಡುವುದು ಇನ್ನು ಅನುಕೂಲಕರ. ಯಾಕೆಂದರೆ ಕೆಲಸ ಕಡಿಮೆ ಆದಾಯ ಹೆಚ್ಚು, ದಾಲ್ಚಿನ್ನಿ ಕೃಷಿ ಮಾಡಲು ಹೆಚ್ಚಿನ ಆಳುಕಾಳುಗಳ ಅವಶ್ಯಕತೆಯೂ ಇಲ್ಲ ಹಾಗೂ ಒಮ್ಮೆ ದಾಲ್ಚಿನ್ನಿ ಕೃಷಿ ಮಾಡಿದರೆ ಅದು ಹೂಡಿಕೆ ಇದ್ದಂತೆ ನಂತರ ಹಲವು ವರ್ಷಗಳ ವರೆಗೆ ಅದನ್ನು ಉಳಿಸಿಕೊಂಡು ನೋಡಿಕೊಂಡು ಹೋದರೆ ಸಾಕು, ಸಾಕಷ್ಟು ವರ್ಷಗಳವರೆಗೆ ಹಣ ಮಾಡಬಹುದು.
ಇದಕ್ಕೆ ಯಾವುದೇ ರಾಸಾಯನಿಕ ರಸಗೊಬ್ಬರಗಳ ಅಥವಾ ಕ್ರಿಮ ಕೀಟನಾಶಕಗಳ ಬಳಸದೆ ಇರುವುದರಿಂದ ಅದರ ಖರ್ಚು ಕೂಡ ತಗ್ಗುತ್ತದೆ. ಫಲವತ್ತಾದ ಮಣ್ಣು ಅಥವಾ ಹೆಚ್ಚಿನ ಕೃಷಿ ಭೂಮಿ ಬೇಕಾದ ಅಗತ್ಯವೂ ಇಲ್ಲ ನಿಮಗಿರುವಷ್ಟು ಜಾಗದಲ್ಲಿಯೇ ವ್ಯವಸ್ಥಿತವಾಗಿ ದಾಲ್ಚಿನ್ನಿ ಕೃಷಿ ಮಾಡಿದರೆ ನೀವು ನಿಶ್ಚಿತವಾಗಿ ಯಶಸ್ವಿ ಆಗಬಹುದು.
ನಿಮಗೆ ಒಂದು ಎಕರೆ ಜಮೀನಿದ್ದರೆ ಅಲ್ಲಿ ಒಂಬತ್ತು ಅಡಿ ಅಂತರದಲ್ಲಿ ಒಂದು ಗಿಡಗಳನ್ನು ನೆಟ್ಟು ದಾಲ್ಚಿನ್ನಿ ಬೆಳೆಯಬಹುದು. ಒಂದು ಎಕರೆಗೆ 75೦ ಗಿಡಗಳನ್ನು ಹಾಕಬಹುದು. ದಾಲ್ಚಿನ್ನಿ ಗಿಡವನ್ನು ಎರಡು ರೀತಿಯಲ್ಲಿ ಬೆಳೆಯಬಹುದು ಅದರಲ್ಲಿ ಮೊದಲನೆಯದು ಬೀಜವನ್ನು ನೆಟ್ಟು ಅದನ್ನು ಆರೈಕೆ ಮಾಡುವುದು.
ಎರಡನೆಯದು ಡೊಂಗೆ ಕೃಷಿ. ಡೊಂಗೆ ಕೃಷಿ ಎಂದರೆ ಸಣ್ಣ ಟೊಂಗೆಯನ್ನು ಎರಡು ಇಂಚಿನಷ್ಟು ಸೀಳಿ ಅದರ ಮೇಲಿನ ಭಾಗಕ್ಕೆ ಮಣ್ಣಿನ ಉಂಡೆಯ ಸಪೋರ್ಟ್ ಹಾಡಬೇಕು. ಹೀಗೆ ಮಾಡಿದ ನಾಲ್ಕು ತಿಂಗಳ ಒಳಗೆ ಅದು ಬೇರು ಬಿಡುತ್ತದೆ. ನಂತರ ಅದನ್ನು ಭೂಮಿಯಲ್ಲಿ ನೆಟ್ಟು ಬೆಳೆಸಬೇಕು. ನಮ್ಮ ಆಡುಭಾಷೆಯಲ್ಲಿ ಹೇಳಬೇಕು ಎಂದರೆ ನಾವು ಗುಲಾಬಿ ಕಡ್ಡಿಯನ್ನು ಹಾಕಿದ ರೀತಿ ಎನ್ನಬಹುದು. ಸಾಮಾನ್ಯವಾಗಿ ರೈತರು ದಾಲ್ಚಿನ್ನಿ ಬೀಜಕ್ಕಿಂತ ಟೊಂಗೆ ಕೃಷಿಯನ್ನು ಹೆಚ್ಚು ಅವಲಂಬಿಸುತ್ತಾರೆ
ದಾಲ್ಚಿನ್ನಿ ಎಲೆಗಳಿಗೂ ಕೂಡ ಬಹಳ ಬೇಡಿಕೆ ಇದ್ದು, ಇದನ್ನು ಬೇಸಿಗೆಯಲ್ಲಿ ತೆಗೆದು ಒಣಗಿಸಿ ಇಡಬೇಕು. ದಾಲ್ಚಿನ್ನಿಯ ತೊಗಟೆಯನ್ನು ಕೂಡ ಬೇಸಿಗೆ ಕಾಲದಲ್ಲಿ ಮಾತ್ರ ತೆಗೆಯಬೇಕು. ನಂತರ ಸರಿಯಾಗಿ ಒಣಗಿಸಿ ಮಾರಾಟ ಮಾಡಬೇಕು. ತೊಗಟೆ ತೆಗೆದರೆ ದಾಲ್ಚಿನ್ನಿ ಗಿಡ ಅಥವಾ ಮರ ಹಾಳಾಗುತ್ತದೆ ಎಂದು ಎಂದು ಚಿಂತಿಸುವ ಅಗತ್ಯವಿಲ್ಲ.
ದಾಲ್ಚಿನ್ನಿಯು ಒಮ್ಮೆ ಗಟ್ಟಿಯಾಗಿ ಬೇರು ಕೊಟ್ಟ ನಂತರ ವರ್ಷದಿಂದ ವರ್ಷಕ್ಕೆ ಹೆಮ್ಮರಾಗಿ ಬೆಳೆಯುತ್ತದೆ. ಲಾಭದ ಅಂಶ ಲೆಕ್ಕ ಹಾಕುವುದಾದರೆ, ನೀವು ಒಂದು ಎಕರೆ ಪ್ರದೇಶದಲ್ಲಿ ದಾಲ್ಚಿನ್ನಿ ಕೃಷಿಯನ್ನು ಮಾಡಿದರೆ ಒಂದು ವರ್ಷಕ್ಕೆ 18-2೦ ಲಕ್ಷ ರೂ. ಖಚಿತ ಆದಾಯ ಗಳಿಸಬಹುದು. ಅಲ್ಲದೆ ದಾಲ್ಚಿನ್ನಿಯ ಮಧ್ಯದಲ್ಲಿ ಸ್ಥಳವಿರುವುದರಿಂದ ಅಲ್ಲಿಯೂ ಬೇರೆ ಬೇರೆ ಗಿಡಗಳನ್ನು ಬೆಳೆಸಿ ಅದರಿಂದಲೂ ಆದಾಯ ಗಳಿಸಬಹುದು.