ಕೆನರಾ ಬ್ಯಾಂಕ್ (Canara Bank) ಭಾರತೀಯರು ಅತಿ ಹೆಚ್ಚು ವಿಶ್ವಾಸ ಹೊಂದಿರುವ ಬ್ಯಾಂಕ್ ಗಳ ಸಾಲಿನಲ್ಲಿ ನಂಬರ್ 1, ಸ್ಥಾನ ಗಿಟ್ಟಿಸಿಕೊಂಡಿದೆ. ಸದಾ ಕಾಲ ತನ್ನ ಗ್ರಾಹಕರ ಅವಶ್ಯಕತೆಗೆ ತಕ್ಕ ಹಾಗೆ ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುವ ಬ್ಯಾಂಕ್ ಕಳೆದ 19 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದೆ ಎನ್ನುವ ಕಾರಣದಿಂದಾಗಿ ಪ್ರತಿ ವರ್ಷವೂ ಕೂಡ ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಈಗಾಗಲೇ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಕೆನರಾ ಬ್ಯಾಂಕ್ ನಲ್ಲಿ ಇತರ ಬ್ಯಾಂಕ್ ಗಳಿಗೆ ಹೋಲಿಸಿದರೆ ಬಹಳ ವಿಶೇಷವೆನಿಸುವ ಕೆಲವು ವಿಭಿನ್ನ ಯೋಜನೆಗಳಿವೆ. ಈಗ ಇದೇ ಪಟ್ಟಿಗೆ ಹೊಸದೊಂದು ಯೋಜನೆಯು ಈ ವರ್ಷ ಸೇರ್ಪಡೆಯಾಗುತ್ತಿದ್ದು, ಸಾಮಾನ್ಯಕ್ಕಿಂತ ಹೆಚ್ಚಿನ ರೂಪದ ಆದಾಯವನ್ನು ಠೇವಣಿ ಯೋಜನೆಗಳಿಗೆ ಒದಗಿಸಿಕೊಡುವ ಉದ್ದೇಶದಿಂದಲೇ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.
ಬ್ಯಾಂಕ್ ಗಳಲ್ಲಿ ನಾವು ಖಾತೆ ತೆರೆದು ಹಣ ಇಡುವುದು ಮತ್ತು ಅವಶ್ಯಕತೆ ಇದ್ದಾಗ ವೈಯಕ್ತಿಕ ಸಾಲ, ವಾಹನ ಸಾಲ, ಚಿನ್ನ ಸಾಲ ಅಥವಾ ಗೃಹ ನಿರ್ಮಾಣಕ್ಕೆ ಸಾಲ ಪಡೆಯುವುದು ಮಾತ್ರವಲ್ಲದೆ ಹೂಡಿಕೆ ಮಾಡಿ ಹೆಚ್ಚಿನ ರೂಪದ ಲಾಭವನ್ನು ಪಡೆಯುವ ಉದ್ದೇಶದಿಂದ ಕೂಡ ಬ್ಯಾಂಕ್ ಸೇವೆಗಳನ್ನು ಬಳಸಿಕೊಳ್ಳಬಹುದು.
ಈ ಸುದ್ದಿ ಓದಿ:- 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್, ಇನ್ಮುಂದೆ ಬಸ್ ಪ್ರಯಾಣ ಸಂಪೂರ್ಣ ಉಚಿತ.!
ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಲು ಇಚ್ಛಿಸುವವರು ತಮ್ಮ ಹಣ ಉಳಿತಾಯ ಖಾತೆಗಿಂತ ವೇಗವಾಗಿ ಲಾಭ ಕೊಡಬೇಕು ಎಂದು ಬಯಸುವುದಾದರೆ ಸದರಿ ಬ್ಯಾಂಕ್ ಗಳು ಪರಿಚಯಿಸುವ ವಿಶೇಷ ಯೋಜನೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಬೇಕು. ಇಂತಹ ಹೂಡಿಕೆ ಯೋಜನೆಗಳಲ್ಲಿ ಠೇವಣಿ ಯೋಜನೆಗಳು (FD Schemes) ಹೆಚ್ಚು ಫೇಮಸ್ ಆಗಿವೆ.
ಈ ಯೋಜನೆಯಲ್ಲಿ ನಿಗದಿತ ಸಮಯದ ವರೆಗೆ ನಿಮ್ಮ ಹಣವನ್ನು ಇಡುವುದಾದರೆ ಅದಕ್ಕೆ ಅನ್ವಯವಾಗುವ ಬಡ್ಡಿ ಆಧಾರದ ಮೇಲೆ ನಿಮಗೆ ಯೋಜನೆ ಮೆಚುರಿಟಿ ವೇಳೆಗೆ ಒಂದು ಉತ್ತಮ ಮೊತ್ತದ ಹಣವು ನಿಮ್ಮ ಕೈ ಸೇರುತ್ತದೆ. ಒಂದು ವೇಳೆ ನೀವು ಇದನ್ನು ಮುಂದುವರಿಸಲು ಇಚ್ಚಿಸಿದರೆ ಅವಕಾಶವಿದೆ ಅಥವಾ ನಿಮಗೆ ಬೇಕಾದ ಯೋಜನೆಗೆ ಇದನ್ನು ಪರಿವರ್ತಿಸಿಕೊಳ್ಳಬಹುದು.
ಈ ಠೇವಣಿ ಯೋಜನೆಗಳಲ್ಲಿ ಒಂದು ವಾರದಿಂದ ಹಿಡಿದು 10 ವರ್ಷಗಳವರೆಗೆ ವಿವಿಧ ಅವಧಿಗೆ ವಿವಿಧ ಬಡ್ಡಿ ದರದಲ್ಲಿ ಠೇವಣಿ ಇಡಲಾಗುತ್ತದೆ ಮತ್ತು ಈ ಸಮಯಾವಕಾಶವು ಹೆಚ್ಚು ಇದ್ದಂತೆ ಬಡ್ಡಿದರವು ಹೆಚ್ಚಿನ ಮೊತ್ತದಲ್ಲಿಯೇ ಇರುತ್ತದೆ. ಆದರೆ ಗ್ರಾಹಕನು ಯೋಚಿಸುವ ಪ್ರಕಾರ ತನಗೆ ಅಗತ್ಯ ಬಿದ್ದಾಗ ಹಣ ಹಿಂಪಡೆಯಲು ಸಮಸ್ಯೆ ಆಗಬಹುದು ಎನ್ನುವ ಉದ್ದೇಶದಿಂದ ಕಡಿಮೆ ಅವಧಿಯ ಠೇವಣಿ ಯೋಜನೆಗಳನ್ನು ಆರಿಸಿಕೊಳ್ಳುತ್ತಾನೆ.
ಈ ಸುದ್ದಿ ಓದಿ:- ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..
ನೀವು ಸಹ ಇಂತಹ ಸಂದರ್ಭದಲ್ಲಿ ಗೊಂದಲಕ್ಕೆ ಸಿಲುಕಿದರೆ ಕೆನರಾ ಬ್ಯಾಂಕ್ ನೀಡುತ್ತಿರುವ ಈ ಹೊಸ ಯೋಜನೆಯಲ್ಲಿ ಠೇವಣಿ ಇಡಿ, ಯಾಕೆಂದರೆ ಕೇವಲ 444 ದಿನಗಳ ಠೇವಣಿಗೆ 7% ಬಡ್ಡಿದರವನ್ನು ಕೆನರಾ ಬ್ಯಾಂಕ್ ನೀಡುತ್ತಿದೆ, ಹಿರಿಯ ನಾಗರಿಕರು ಇದೇ ಯೋಜನೆಗೆ 0.50% ಹೆಚ್ಚಿನ ಬಡ್ಡಿ ಪಡೆಯಬಹುದು.
ಲಾಕ್ ಡೌನ್ ಅವಧಿ ಬಳಿಕ ದೇಶದ ಆರ್ಥಿಕತೆಯಲ್ಲಿ ಉಂಟಾದ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಕಾರಣ ರೆಪೋ ದರ ಇಳಿಕೆಯಾಗಿ ಗಳಿಕೆಯು ಕೂಡ ಇಳಿಮುಖವಾಗಿತ್ತು ಆದರೆ ಶೀಘ್ರವಾಗಿ ಇದು ಚೇತರಿಕೆ ಕಾಣುತ್ತಿದ್ದು ಕೆನರಾ ಬ್ಯಾಂಕ್ ನಲ್ಲೂ ಕೂಡ ಕೆಲವು ವಿಶೇಷ ಯೋಜನೆಗಳ ಬಡ್ಡಿದರ ಏರಿಕೆಯಾಗಿದೆ.
ಆ ಪ್ರಕಾರವಾಗಿ ಈ ಮೇಲೆ ತಿಳಿಸಿದಂತಹ ಯೋಜನೆಗೆ ಉದಾಹರಣೆಗೆ ನೀವು 3 ಲಕ್ಷ ಉಳಿತಾಯ ಇಡುವುದಾದರೆ 444 ದಿನಗಳಾದ ಬಳಿಕ 3,27,000 ಪಡೆಯಬಹುದು, ನೀವು ಹಿರಿಯ ನಾಗರಿಕರಾಗಿದ್ದರೆ 3,29,000ಗಳನ್ನು ಪಡೆಯಬಹುದು. ಇಂತಹ ಅತ್ಯುತ್ತಮ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.