ಆಸ್ತಿ ಎನ್ನುವುದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಎಂತಹದೇ ಆತ್ಮೀಯತೆ ಬಂಧದ ನಡುವೆ ಕೂಡ ಹುಳಿ ಹಿಂಡಿ ಬಿಡುತ್ತದೆ. ಮಹಾಭಾರತದ ಕಾಲದಲ್ಲಿ ದಾಯಾದಿಗಳ ನಡುವೆ, ಇತಿಹಾಸಗಳಲ್ಲಿ ರಾಜಾಧಿರಾಜರ ನಡುವೆ ಸಾಮ್ರಾಜ್ಯಕಾಗಿ ನಡೆಯುತ್ತಿದ್ದ ಕಾಳಗಗಳು ಇಂದು ಒಂದೇ ಕುಟುಂಬದಲ್ಲಿ ತಂದೆ ಮಕ್ಕಳ ನಡುವೆ ಅಣ್ಣತಮ್ಮಂದಿರ ನಡುವೆ ಗಂಡ ಹೆಂಡತಿಯರ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಹೋಗಿರುವುದು ನಿಜಕ್ಕೂ ಶೋಚನೀಯ.
ಇಂತಹ ಕಾಲಗಟ್ಟದಲ್ಲಿ ಒಮ್ಮೊಮ್ಮೆ ಪರಿಸ್ಥಿತಿ ಕೈಮೀರಿ ಅ’ನಾ’ಹು’ತ ನಡೆದು ಹೋದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಕಾನೂನಿನ ಬಗ್ಗೆ ಸ್ವಲ್ಪ ಜ್ಞಾನ ಇಟ್ಟುಕೊಳ್ಳುವುದು ಬಹಳ ಉತ್ತಮ. ಯಾಕೆಂದರೆ ಈಗಿರುವ ಕಾಲಮಾನದಲ್ಲಿ ಪ್ರತಿಯೊಂದಕ್ಕೂ ಕೂಡ ಕಾನೂನಿನಲ್ಲಿ ಪರಿಹಾರವಿದೆ. ಹಾಗಾಗಿ ಇಂತಹ ಯಾವುದೇ ಗೊಂದಲ ಅಥವಾ ಸಮಸ್ಯೆಗಳು ಬಂದಾಗ ಕಾನೂನಿನ ಪ್ರಕಾರ ನಡೆದುಕೊಂಡು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಾ ಬದುಕಿದರೆ ಒಳ್ಳೆಯದು.
ಹಾಗಾಗಿ ಕಾನೂನಿನ ಕುರಿತ ಪ್ರಮುಖ ವಿಚಾರಗಳಲ್ಲಿ ಒಂದಾದ ಆಸ್ತಿ ವಿಲ್ ಮಾಡುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಆಸ್ತಿ ವಿಲ್ ಎಂದರೆ ಒಂದು ಆಸ್ತಿಯ ಮಾಲೀಕನು ಆತನ ಆಸ್ತಿಯನ್ನು ತನ್ನ ನಂತರ ಯಾರಿಗೆ ಸೇರಬೇಕು ಎಂದು ಬರೆದಿಡುವುದನ್ನು ವಿಲ್ ಎನ್ನುತ್ತಾರೆ. ಆ ವ್ಯಕ್ತಿಯ ಮ.ರ.ಣ.ದ ನಂತರ ಮಾತ್ರ ಫಲಾನುಭವಿಗೆ ಆ ಆಸ್ತಿ ಹಕ್ಕು ದಕ್ಕುತ್ತದೆ ಹಾಗಾಗಿ ಇದನ್ನು ಮ.ರ.ಣಶಾಸನ ಎಂದು ಕೂಡ ಕರೆಯುತ್ತಾರೆ.
ಕಾನೂನಿನ ಪ್ರಕಾರವಾಗಿ ವಿಲ್ ಜಾರ ಹೆಸರಿಗೆ ಆಗಿದೆಯೋ ಆ ವ್ಯಕ್ತಿಗೆ ಮಾಹಿತಿಯೇ ಗೊತ್ತಿರಬಾರದು. ಆದರೆ ಈಗಿನ ಕಾಲದಲ್ಲಿ ಅದು ಸಾಧ್ಯವಿಲ್ಲ, ನಾನಾವಕಾರಣಗಳಿಂದಾಗಿ ವಿಷಯ ಅವರಿಗೆ ಮುಟ್ಟಿಯೇ ಇರುತ್ತದೆ. ವಿಲ್ ಹೀಗೆ ಇರಬೇಕು ಎನ್ನುವ ಕಟ್ಟುಪಾಡುಗಳು ಏನು ಇಲ್ಲ ಒಂದು ಬಿಳಿ ಹಾಳೆ ಮೇಲೆ ಮಾಲೀಕ ಹಾಗೂ ಆಸ್ತಿಯ ವಿವರವನ್ನು ಸ್ಪಷ್ಟವಾಗಿ ಬರೆದು ಸಾಕ್ಷಿಗಳ ಸಹಿ ಮಾಡಿಸಿ ಅಂದಿನ ದಿನಾಂಕವನ್ನು ತಪ್ಪದೆ ನಮೂದಿಸಿ ರಿಜಿಸ್ಟರ್ ಮಾಡಿಸಿ ಬಿಟ್ಟರೆ ಅದು ಮಾನ್ಯವಾಗುತ್ತದೆ.
ಒಮ್ಮೆ ಹೀಗೆ ವಿಲ್ ಬರೆದ ಮೇಲೆ ಅದನ್ನು ನಂತರ ಬದಲಾಯಿಸಲು ಅಥವಾ ಯಾರಿಗೆ ವಿಲ್ ಬರೆದಿದ್ದರೂ ಅವರು ಇವರಿಗೆ ವಿನಮ್ರವಾಗಿ ನಡೆದುಕೊಳ್ಳದೆ ಇದ್ದಾಗ ಅದನ್ನು ರ’ದ್ದು ಪಡಿಸುವ ಅಥವಾ ವಿಲ್ ಬರೆದ ಮೇಲೂ ವಿಲ್ ನಲ್ಲಿ ಬರೆದಿರುವ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಇರುತ್ತದೆಯೋ ಇಲ್ಲವೋ ಎನ್ನುವುದು ಅನೇಕರ ಪ್ರಶ್ನೆ, ಇಂತಹ ಗೊಂದಲ ನಿಮಗೂ ಇದ್ದರೆ ಉತ್ತರ ಇಲ್ಲಿದೆ ನೋಡಿ.
ಒಂದು ಬಾರಿ ಬಿಲ್ ಮಾಡಿಸಿದ ಮೇಲೆ ಆ ವ್ಯಕ್ತಿಯು ಎಷ್ಟು ಬಾರಿ ಬೇಕಾದರೂ ಅದನ್ನು ಬದಲಾಯಿಸಬಹುದು, ಕ್ಯಾನ್ಸಲ್ ಮಾಡಿ ಹೊಸ ವಿಲ್ ಬರೆಯಬಹುದು. ಹೊಸ ವಿಲ್ ಬರೆದ ಮೇಲೆ ಹಿಂದೆ ಬರೆದ ವಿಲ್ ಕ್ಯಾನ್ಸಲ್ ಆಗಿದೆ ಎಂದು ತಪ್ಪದೆ ನಮೂದಿಸಬೇಕು ಒಬ್ಬ ವ್ಯಕ್ತಿಯು ಅವರ ಜೀವಿತಾವಧಿಯಲ್ಲಿ ಒಂದೇ ಆಸ್ತಿಗೆ ಎಷ್ಟು ಬಾರಿ ಬೇಕಾದರೂ ಬಿಲ್ ಮಾಡಿಸಬಹುದು ಆತ ಕೊನೆ ಬಾರಿಗೆ ಯಾರ ಹೆಸರಿಗೆ ಮಾಡಿರುತ್ತಾರೋ ಅದು ಮಾತ್ರ ಮಾನ್ಯವಾಗುತ್ತದೆ.
ಜೊತೆಗೆ ಕೊನೆಯದಾಗಿ ವಿಲ್ ಮಾಡಿದ ಮೇಲೆ ಅದನ್ನು ರ’ದ್ದುಪಡಿಸಿದರೆ ಅವರು ಮೃ’ತ ಪಟ್ಟಿದರೆ ಆಗ ಯಾರ ಹೆಸರಿಗೂ ಆಗ ಅವರ ಎಲ್ಲಾ ವಾರಸುದಾರರಿಗೂ ಆ ಆಸ್ತಿಯಲ್ಲಿ ಭಾಗ ಇರುತ್ತದೆ. ಇನ್ನು ಒಮ್ಮೆ ವಿಲ್ ಮಾಡಿದ ಮೇಲೆ ಆ ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ಖಂಡಿತವಾಗಿಯೂ ವಿಲ್ ಕ್ಯಾನ್ಸಲ್ ಮಾಡಿ ಮಾರಾಟ ಮಾಡಬಹುದು ಆಗ ಫಲಾನುಭವಿಗೆ ವಿಲ್ ಮಾಡಿರುವ ವಿಷಯ ಗೊತ್ತಿದ್ದರೂ ಆತನಿಗೆ ಪ್ರಶ್ನೆ ಮಾಡಲು ಅಧಿಕಾರ ಇರುವುದಿಲ್ಲ.