ಸಾಮಾನ್ಯವಾಗಿ ಮಹಿಳೆಯರು ಗಂಡ ಹಾಗೂ ಗಂಡನ ಮನೆ ಮೇಲೆ ಕಂಪ್ಲೇಂಟ್ ಕೊಡುವಾಗ 498ಎ ಸೆಕ್ಷನ್ ಅಡಿ ಕೇಸ್ ಕೊಟ್ಟಿರುತ್ತಾರೆ. ಇದು ಗಂಡ ಹಾಗೂ ಗಂಡನ ಮನೆಯವರ ಮೇಲೆ ಕ್ರೌ’ರ್ಯ ಎಂದು ನೀಡಿರುವ ದೂರು ಆಗಿರುತ್ತದೆ. ಈ ರೀತಿ ದೂರು ದಾಖಲಾದ ಮೇಲೆ ಇನ್ವೆಸ್ಟಿಗೇಷನ್ ಶುರು ಆಗಿರುತ್ತದೆ ಈ ರೀತಿ FIR ಆದಾಗ ಗಂಡ ಹಾಗೂ ಗಂಡನ ಮನೆಯವರು ರೆಗುಲರ್ ಬೇಲ್, ಆಂಟಿಸೆಪ್ಟರಿ ಬೇಲ್ FIR quashing ಇವುಗಳನ್ನು ಪಡೆಯಬೇಕು ಇದಾದಮೇಲೆ ಕೋರ್ಟ್ ಗಳಲ್ಲಿ ವಿಚಾರಣೆ ನಡೆಯುತ್ತಿರುತ್ತದೆ.
ಆದರೆ ಆ ಮಹಿಳೆಯು ವಿ’ಚ್ಛೇ’ದ’ನ ಕೋರಿ ಅರ್ಜಿ ಹಾಕಿದ್ದರೆ ಸೆಟಲ್ಮೆಂಟ್ ಮಾಡಿಕೊಂಡು ಒಪ್ಪಂದದ ಮೇರೆಗೆ ಎಲ್ಲಾ ಕೇಸ್ ಗಳನ್ನು ವಿಥ್ ಡ್ರಾ ಮಾಡಿಕೊಳ್ಳುತ್ತಾರೆ, ಅಲ್ಲಿಗೆ ಆ ಕೇಸ್ ಮುಗಿಯುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಮಹಿಳೆಯರು ಈ ರೀತಿ 498 ಎ ನಡಿ ಪತಿ ಹಾಗೂ ಪತಿ ಕುಟುಂಬದವರ ಮೇಲೆ ಕ್ರೌ’ರ್ಯದ ಕೇಸ್ ಹಾಕಿ ಮತ್ತೊಂದೆಡೆ ಪತಿ ಬೇಕು ಪತಿಯ ಮೇಲೆ ಅಧಿಕಾರ ಬೇಕು, ಪತಿ ಜೊತೆ ಜೀವನ ಮಾಡಿಸಬೇಕು ಎಂದು ಕಾಂಜುಗಲ್ ಕೇಸ್ ಕೂಡ ಹಾಕುತ್ತಾರೆ.
ಇಂತಹದೇ ಒಂದು ಪ್ರಕರಣವು ಜಾರ್ಖಾಂಡ್ ಹೈ ಕೋರ್ಟ್ ಮೆಟ್ಟಿಲೇರಿದಾಗ ಆ ಪ್ರಕರಣದಲ್ಲಿ ಹೈಕೋರ್ಟ್ ಮಹಿಳೆಯ ಪರವಾಗಿ ತೀರ್ಪು ನೀಡಿತ್ತು ಒಂದು ವೇಳೆ ಬೇಲ್ ಬೇಕು ಎಂದರೆ ಹೆಂಡತಿಯನ್ನು ಮನೆ ಒಳಗಡೆ ಸೇರಿಸುತ್ತೇವೆ ಎಂದು ಒಪ್ಪಿಕೊಳ್ಳಬೇಕು ಎನ್ನುವ ಕಂಡೀಶನ್ ಗಳೆಲ್ಲ ಕೂಡ ಹಾಕಲಾಗಿತ್ತು. ಆದರೆ ಅದರ ವಿರುದ್ಧ ಪತಿ ಕುಟುಂಬದವರು ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋಗಿದ್ದರು.
ಈ ಕುನಾಲ್ ಚೌಧರಿ v/s ಜಾರ್ಖಾಂಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ರೀತಿ ಮಹಿಳೆಯು ಪತಿ ಕುಟುಂಬದ ಮೇಲೆ ಕ್ರೌ’ರ್ಯ’ದ ಕೇಸ್ ಹಾಕಿ ನಂತರ ಪತಿ ಬೇಕು ಎಂದು ಆತನ ಮನೆಯಲ್ಲಿ ಹೋಗಿ ನೆಲೆಸುತ್ತೇನೆ ಎಂದು ಹೇಳಿದಾಗ ಕಂಡೀಶನ್ ಹಾಕಿ ಒಪ್ಪಿಕೊಂಡರೆ ಮಾತ್ರ ಬೇಲ್ ಕೊಡುತ್ತೇವೆ ಎಂದು ಹೈಕೋರ್ಟ್ ಗಳು ಹೇಳುವುದು ತಪ್ಪಾಗುತ್ತದೆ.
ಈ ರೀತಿ ಕ್ರೌ’ರ್ಯ’ದ ಕೇಸ್ ಹಾಕಿದ ಮೇಲೆ ಹೆಂಡತಿಯನ್ನು ಮನೆ ಒಳಗೆ ಸೇರಿದರೆ ಮಾತ್ರ ಬೇಲ್ ನೀಡುವುದು ಎಂದು ತಾಕೀತು ಮಾಡುವಂತಿಲ್ಲ ಎನ್ನುವ ತೀರ್ಪನ್ನು ನೀಡಿದೆ. ಅದೇ ರೀತಿಯಾಗಿ ಹೆಂಡತಿಯು ಕೂಡ ಈಗಾಗಲೇ ಪತಿ ಹಾಗೂ ಪತಿ ಕುಟುಂಬದ ಮೇಲೆ 498ಎ ಸೆಕ್ಷನ್ ನಲ್ಲಿ ಕ್ರೌ’ರ್ಯ’ದ ಕೇಸ್ ಹಾಕಿದ ಮೇಲೆ ಮತ್ತೆ ಕಾಂಜುಗೇಟ್ ಕೇಸ್ ಹಾಕಿ ಅಲ್ಲೇ ಹೋಗಿ ನೆಲೆಸುತ್ತೇನೆ, ಪತಿ ಬೇಕು ಎಂದು ಹೇಳುವುದು ಅರ್ಥಹೀನವಾದ ಮಾತಾಗುತ್ತದೆ ಎಂದೇ ಹೇಳಬಹುದು.
ಇಷ್ಟು ಆರೋಪಗಳು ಇದ್ದಮೇಲೆ ಅವರು ಆ ರೀತಿ ವರ್ತಿಸಿದ ಮೇಲೆ ಅಲ್ಲಿ ಹೋಗಿರುತ್ತೇನೆ ಎನ್ನುವುದರಲ್ಲಿ ಅರ್ಥ ಇಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ ಮತ್ತು ಒಂದು ವೇಳೆ ಮುಂದೆ ಅವರ ಮೇಲೆ ಕೂಡಿ ಬಾಳುವ ಇಚ್ಛೆ ಇದ್ದಲ್ಲಿ ಕಂಪ್ಲೇಂಟ್ ಕೊಡುವ ಮುನ್ನವೇ ಯೋಚನೆ ಮಾಡಬೇಕಾಗುತ್ತದೆ ಯಾಕೆಂದರೆ ಒಮ್ಮೆ ಕಂಪ್ಲೇಂಟ್ ಕೊಟ್ಟು FIR ಆದಮೇಲೆ ಅದನ್ನು ಹಿಂಪಡೆದುಕೊಳ್ಳುವುದು ಅಸಾಧ್ಯ.
ಕೋರ್ಟಲ್ಲಿ ಸೆಟಲ್ಮೆಂಟ್ ಆದಾಗ ಇತ್ಯರ್ಥವಾಗುತ್ತದೆ ಇಲ್ಲವಾದಲ್ಲಿ ಯಾವುದೇ ಹಂತದಲ್ಲಿ ಕೂಡ ಕೇಸ್ ವಾಪಸ್ ತೆಗೆದುಕೊಳ್ಳುವುದು ಕ’ಷ್ಟ’ವೇ. ಹಾಗಾಗಿ ಸುಳ್ಳು ಕಂಪ್ಲೇಂಟ್ ಕೊಡಬೇಡಿ ಅಥವಾ ಮುಂದಿನ ನಿರ್ಧಾರದ ಮೇಲೆ ಯೋಚಿಸಿ ನಿಮ್ಮ ಉದ್ದೇಶದ ಆಧಾರಿತವಾಗಿ ದೂರು ಕೊಟ್ಟು ಸಮಸ್ಯೆ ಬಗ್ಗೆ ಹರಿಸಿಕೊಂಡು ಸಂಸಾರ ಸರಿಪಡಿಸಿಕೊಳ್ಳಿ.