ನಿವೃತ್ತಿ ಎನ್ನುವುದು ಬದುಕಿನ ಒಂದು ಕಡೆಯ ಘಟ್ಟ. ನಿವೃತ್ತಿ ನಂತರದ ಬದುಕಿನ ಬಗ್ಗೆ ಅನೇಕರಿಗೆ ನಿರೀಕ್ಷೆಗಳು ಇರುತ್ತವೆ. ಏಕೆಂದರೆ ವಿದ್ಯಾಭ್ಯಾಸ ಮುಗಿಸಿದಾಗಲಿಂದ 60 ವರ್ಷ ಆಗುವವರೆಗೂ ಕೂಡ ತನಗಾಗಿ ತನ್ನ ಕುಟುಂಬಕ್ಕಾಗಿ ದುಡಿದವರು ವಿಶ್ರಾಂತಿ ತೆಗೆದುಕೊಳ್ಳುವ ಜೀವನದ ಸಂಧ್ಯಾಕಾಲ.
60 ವರ್ಷಕ್ಕೆ ನಿವೃತ್ತಿ ಹೊಂದುವುದು ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳ ನಿಯಮ ಆದರೆ ವ್ಯಾಪಾರ ವಹಿವಾಟು ಮಾಡುವವರಿಗೆ ಈ ನಿಯಮಗಳು ಏನು ಇಲ್ಲ. ಈಗಿನ ಕಾಲದಲ್ಲಂತೂ 60 ವರ್ಷದವರೆಗೆ ಅನೇಕರು ಕಾಯುವುದೇ ಇಲ್ಲ ಬಹಳ ಬೇಗ ದುಡಿದು ಬೇಗ ಸೆಟಲ್ ಆಗಿ ಹಾಕಿ ಲೈಫ್ ಎಂಜಾಯ್ ಮಾಡಬೇಕು ಎನ್ನುವ ಪ್ಲಾನಿಂಗ್ ನಲ್ಲಿ ಇರುತ್ತಾರೆ.
ಆದರೆ ಸಾಧ್ಯವಾದಷ್ಟು ಶಕ್ತಿ ಇರುವವರೆಗೆ, ನಮಗೆ ಮಾರ್ಕೆಟ್ ನಲ್ಲಿ ಬೇಡಿಕೆ ಇರುವವರಿಗೆ ದುಡಿಯುವುದು ಕುಟುಂಬಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು. ಅದೇನೇ ಇರಲಿ ರಿಟೈರ್ಮೆಂಟ್ ಆದ ನಂತರ ಹಣಕಾಸಿನ ವಿಷಯದಲ್ಲಿ ನಾವು ಭದ್ರತೆಯಿಂದ ಇರಬೇಕಾದದ್ದು ಬಹಳ ಮುಖ್ಯ. ಸರ್ಕಾರಿ ಹುದ್ದೆಯಲ್ಲಿ ಇರುವವರಿಗಾದರೆ ಖಂಡಿತವಾಗಿಯೂ ಸಂಬಳದ ಅಲ್ಪ ಭಾಗ ಪಿಂಚಣಿಯಾಗಿ ಬರುತ್ತದೆ.
ಅವರ ಜೀವನ ಹೇಗೋ ನಡೆಯುತ್ತದೆ, ಆದರೆ ಖಾಸಗಿ ಉದ್ಯೋಗಗಳನ್ನು ಮಾಡುವವರು ಕೂಡ 60ರ ನಂತರ ಬದುಕಬೇಕಲ್ಲವೇ ಹಾಗಾಗಿ ಸರ್ಕಾರಿ ಹುದ್ದೆ ಇಲ್ಲದಿದ್ದರೂ ಕೂಡ ಪ್ರತಿಯೊಬ್ಬ ವ್ಯಕ್ತಿಯು ಆತ ರೈತನಾಗಿರಲಿ ವ್ಯಾಪಾರಿ ಆಗಿರಲಿ ಮತ್ತೇನೇ ಆಗಿರಲಿ ಆತನು ಪ್ರತಿ ತಿಂಗಳು ತನಗೆ ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು.
ಅದು ಹೇಗೆ ಎನ್ನುವ ಬಹಳ ಕುತೂಹಲಕಾರಿಯಾದ ವಿಷಯದ ಬಗ್ಗೆ ಇಂದು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರೂ ಕೂಡ ಎಚ್ಚರಿಕೆಯಿಂದ ಇರಲಿ ಎನ್ನುವುದಷ್ಟೇ ನಮ್ಮ ಈ ಅಂಕಣದ ಆಶಯ ನೀವು ದುಡಿಯುವ ವಯಸ್ಸಿನಲ್ಲಿ ನಿಮ್ಮ ನಿವೃತ್ತಿಗಾಗಿ ಹಣವನ್ನು ಉಳಿಸಬೇಕು.
ಆರ್ಥಿಕ ತಜ್ಞರು ಹೇಳುವ ಪ್ರಕಾರ ನಿಮ್ಮ ದುಡಿಮೆ 15% ಹಣವನ್ನು ನಿಮ್ಮ ರಿಟೈರ್ಮೆಂಟ್ ಜೀವನಕ್ಕಾಗಿ ಈಗಿನಿಂದಲೇ ಉಳಿತಾಯ ಮಾಡಬೇಕು, ಸಾಧ್ಯವಾಗದಿದ್ದರೆ 5%-10% ಆದರೂ ಮಾಡಲೇಬೇಕು, ಇದು ಈಗ 20ರಿಂದ 30ನೇ ವಯಸ್ಸಿನಲ್ಲಿ ಇದ್ದು 60 ವರ್ಷಕ್ಕೆ ನಿವೃತ್ತಿ ಆಗುತ್ತೇನೆ ಎಂದುಕೊಳ್ಳುವವರಿಗೆ ಇರುವ ಪ್ಲಾನಿಂಗ್ ಆದರೆ ನೀವು ಈಗಾಗಲೇ 50ರ ಗಡಿ ದಾಟಿದ್ದೀರಾ ರಿಟೈರ್ಮೆಂಟ್ ಗೆ ಹತ್ತಿರವಾಗಿದ್ದೀರ.
ಎಂದರೆ ನೀವು ಇನ್ನು ನಿವೃತ್ತಿ ನಂತರದ ಹಣಕಾಸಿನ ಸ್ಥಿತಿ ಬಗ್ಗೆ ಚಿಂತಿಸಿಲ್ಲ ಎಂದರೆ ಬಹಳ ಕ’ಷ್ಟ ನೀವು ಬಹಳ ರಿಸ್ಕ್ ತೆಗೆದುಕೊಂಡು ಈ ಸಮಯದಲ್ಲಿ ಹೆಚ್ಚಿನ ಮೊತ್ತದ ಹಣವನ್ನು ನಂತರದ ಜೀವನಕ್ಕಾಗಿ ಎತ್ತಿಡಲೇಬೇಕು. ಹಣವನ್ನು ಉಳಿಸುತ್ತೇವೆ ಆದರೆ ಯಾವ ರೀತಿ ಉಳಿಸಬೇಕು ಎನ್ನುವ ಪ್ರಶ್ನೆ ಇದ್ದರೆ ನೀವು ಕಡಿಮೆ ವಯಸ್ಸಿಗೆ ನಿವೃತ್ತಿಗಾಗಿ ಹಣ ಉಳಿಸುತ್ತಿದ್ದೀರ ನೀವು ರಿಟೈಡ್ ಆಗುವ ಸಮಯ ಇನ್ನು ದೂರದಲ್ಲಿದೆ ಎಂದರೆ ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್ ಇವುಗಳು ಧೀರ್ಘಾವಧಿಯಲ್ಲಿ ಲಾಭ ಕೊಡುವ ಸಂಗತಿಗಳಾಗಿವೆ.
ಇವುಗಳಲ್ಲಿ ಹೂಡಿಕೆ ಮಾಡಿ ಅಥವಾ ನೀವು ನಿವೃತ್ತಿಗೆ ಹತ್ತಿರವಾಗಿದ್ದರೆ ನೀವು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂದು ಹಣಕಾಸು ತಜ್ಞರ ಅಭಿಪ್ರಾಯ ಕೇಳಿ ಮುಂದುವರೆಯಿರಿ. ನೀವು ಆದಷ್ಟು ಹಣಕ್ಕೆ ಭದ್ರತೆ ಇರುವ FDಗಳು, ಗೋಲ್ಡ್ ಅಥವಾ ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಜೊತೆಗೆ ಯಾರೇ ಆದರೂ ದುಡಿಯಲು ಆರಂಭಿಸಿದಾಗಲೇ ಹೆಲ್ತ್ ಇನ್ಸೂರೆನ್ಸ್ ಹಾಗೂ ಲೈಫ್ ಇನ್ಶೂರೆನ್ಸ್ ಗಳನ್ನು ಮಾಡಿಸಿದರೆ ಅದು ಕೂಡ ನಿಮ್ಮ ನಿವೃತ್ತಿ ಜೀವನದ ನಂತರ ನಿಮಗೆ ಹಣಕಾಸಿನ ನೆರವಿಗೆ ಬರುತ್ತದೆ.
NPS, ಲೈಫ್ ಇನ್ಶುರೆನ್ಸ್ ಕಮ್ ಪೆನ್ಷನ್ ಸ್ಕೀಮ್, ಕೆಲವು ಖಾಸಗಿ ಕಂಪನಿಗಳಲ್ಲಿ ನೀಡುವ EPF ಇವುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾ ಬಂದಿದ್ದರೆ ಇದು ಕೂಡ ಬೆಸ್ಟ್ ನೀವು ನಿವೃತ್ತಿ ನಂತರ ಎಷ್ಟು ಹಣ ಹೊಂದಿರಬೇಕು ಎನ್ನುವುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಯಾಕೆಂದರೆ ನಿವೃತ್ತಿ ನಂತರ ಯಾವ ರೀತಿ ಜೀವನವನ್ನು ನಡೆಸಲು ಇಷ್ಟಪಡುತ್ತೀರಾ ಎನ್ನುವುದರ ಮೇಲೆ ನಿಮಗೆ ಎಷ್ಟು ರಿಟರ್ನ್ ಬರುವ ತರ ನೀವು ಹೂಡಿಕೆ ಮಾಡಬೇಕು ಎನ್ನುವುದು ನಿರ್ಧಾರ ಆಗುತ್ತದೆ.