ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರವು
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (PTCL Amendment Bill) 2023 ನ್ನು ಜಾರಿಗೆ ತಂದಿತು. 20 ಜುಲೈ, 2023ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ (Revenue Minister Krishna Bairegowda) ಈ ಅಮೆಂಡ್ ಮೆಂಟ್ ಮಂಡಿಸಿದ್ದರು.
ಇದು ಹೇಳುವುದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸರ್ಕಾರದಿಂದ ಜೀವನಕ್ಕಾಗಿ ಮಂಜೂರಾಗಿರುವ ಕೃಷಿ ಭೂಮಿಯನ್ನು ಯಾವುದೇ ವ್ಯಕ್ತಿ ಅಥವಾ ಕಂಪನಿ ಖರೀದಿಸುವಂತಿಲ್ಲ. ಒಂದು ವೇಳೆ ಮೋ’ಸದಿಂದ ವಂಚಿಸಿ ಅಥವಾ ಬಲತ್ಕಾರದಿಂದ ಹೆದರಿಸಿ ಬರೆಸಿಕೊಂಡಿದ್ದೇ ಆದರೂ ಈ ಆಸ್ತಿ ಹಕ್ಕು ವರ್ಗಾವಣೆ ಸಾಧ್ಯವಾಗುವುದಿಲ್ಲ.
ಮೂಲತಃ ಗ್ರಾಂಟಿಗಳು ಯಾವಾಗ ಬೇಕಾದರೂ ಇದನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ವಾಪಸ್ ಪಡೆಯಬಹುದು ಎನ್ನುವುದಾಗಿತ್ತು. ಈ ಕಾಯ್ದೆ PTCL Act – 1978 ನೆನಪಿಸುತ್ತದೆ. ಅದೇನೆಂದರೆ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಉಳುವವನೇ ಭೂಮಿ ಒಡೆಯ ಎನ್ನುವ ಕಾನೂನನ್ನು ಜಾರಿಗೆ ತಂದಿದ್ದರು.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
ಆ ಸಂದರ್ಭದಲ್ಲಿ ಅನೇಕರಿಗೆ ಸರ್ಕಾರದ ಕಡೆಯಿಂದ ದಮನಿತ ವರ್ಗಕ್ಕೆ ಕೃಷಿ ಭೂಮಿ ಹಂಚಿಕೆ ಆಗಿತ್ತು ಇದಾದ ನಂತರ ಅವಿದ್ಯವಂತರಾಗಿದ್ದ ಮುಗ್ಧರಾಗಿದ್ದ ಈ ವರ್ಗಕ್ಕೆ ಸೇರಿದ ಜನರಿಗೆ ಸ್ವಲ್ಪ ಹಣ ಕೊಟ್ಟು ಮೋ’ಸ ಮಾಡಿ ಗ್ರಾಂಟ್ ಆಗಿರುವ ಆಸ್ತಿಯನ್ನು ಉಳ್ಳವರು ಕ್ರಯ ಮಾಡಿಸಿಕೊಳ್ಳುತ್ತಿದ್ದರು ಮತ್ತು ಕೆಲವರು ಅವರಿಗೆ ಗೊತ್ತೇ ಆಗದಂತೆ ಅವರ ಆಸ್ತಿಯನ್ನು ಸಹಿ ಮಾಡಿಸಿಕೊಂಡು ಅಥವಾ ಹೆಬ್ಬೆಟ್ಟು ಹಾಕಿಸಿಕೊಂಡು ಕಬಳಿಸುತ್ತಿದ್ದರು ಇದಕ್ಕೆಲ್ಲ ಕಡಿವಾಣ ಹಾಕಲು ಇಂತಹದೊಂದು ಮಹತ್ವದ ಕಾಯ್ದೆಯನ್ನು ರಾಜ್ಯ ಸರ್ಕಾರ ಕಳೆದ ವರ್ಷ ಹೊರಡಿಸಿತು.
ಈ ಕಾಯ್ದೆ ಯಾರಿಗೆಲ್ಲ ಅನ್ವಯಿಸುತ್ತದೆ ಎಂದರೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಈಗಾಗಲೇ ಕೋರ್ಟು ಕಚೇರಿಗಳಲ್ಲಿ ಪೆಂಡಿಂಗ್ ಇರುವ ಕೇಸ್ ಗಳಿಗೂ ಕೂಡ ಈ ಹೊಸ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ. ಹಾಗಾದರೆ SC / STಗಳ ಯಾವುದೇ ಜಮೀನು ಖರೀದಿಸಲು ಸಾಧ್ಯವಿಲ್ಲವೇ ಎಂದರೆ ಸರ್ಕಾರದಿಂದ ಗ್ರಾಂಟ್ ಆಗಿರುವ ಯಾವುದೇ ಭೂಮಿಯನ್ನು ಕೂಡ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ ಖರೀದಿಸಲು ಸಾಧ್ಯವಿಲ್ಲ ಆದರೆ ಅವರು ಬೇರೆಯವರಿಂದ ಖರೀದಿಸಿದಂತಹ ಸ್ವಯಾರ್ಜಿತ ಭೂಮಿ ಅಥವಾ ಪಿತ್ರಾರ್ಜಿತವಾಗಿ ಅವರು ಕಬಸಿಕೊಂಡಿದ್ದ ಭೂಮಿಯನ್ನು ಖರೀದಿಸಬಹುದು ಎಂದು ಅವಕಾಶ ನೀಡಲಾಗಿದೆ ಹಾಗೂ ಒಂದು ವೇಳೆ ಗ್ರಾಂಟ್ ಆಗಿದ್ದ ಭೂಮಿಯನ್ನು ಕ್ರಯ ಮಾಡಿಕೊಂಡಿದ್ದೆ ಆದರೆ ಯಾವುದೇ ಟೈಮ್ ಲಿಮಿಟ್ ಇಲ್ಲದೆ ಯಾವಾಗ ಬೇಕಾದರೂ ಅವರು ತಮ್ಮ ಜಮೀನನ್ನು ವಾಪಸ್ಸು ಪಡೆಯಬಹುದಾಗಿದೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
ದಾವಣಗೆರೆ ಮೂಲದ ರಾಮಪ್ಪ ವರ್ಸಸ್ ನೀಲಕಂಠಿ ರಾಮಲಕ್ಷ್ಮಿ ಪ್ರಕರಣವು ಈ ವಿಚಾರ ಬಗ್ಗೆ ಹೆಚ್ಚು ಸುದ್ದಿಯಲ್ಲಿತ್ತು. ಸರ್ಕಾರದ ಗ್ರಾಂಟ್ ನಿಂದ ಪಡೆದಿದ್ದ ಆಸ್ತಿಯನ್ನು ರಾಮಪ್ಪ ಎನ್ನುವವರು ನರಸಿಂಹ ಎನ್ನುವ ವ್ಯಕ್ತಿಗೆ ಮಾರಾಟ ಮಾಡಿದ್ದರು ಮತ್ತು ನರಸಿಂಹ ಅವರಿಂದ ನೀಲಕಂಠ ರಾಮಲಕ್ಷ್ಮಿ ಎನ್ನುವವರು ಖರೀದಿಸಿದ್ದರು.
ಜಿಲ್ಲಾಧಿಕಾರಿಗಳ ಬಳಿ ರಾಮಪ್ಪರವರು ತಮಗೆ ಗ್ರಾಂಡ್ ಆಗಿರುವ ಭೂಮಿ ತಮಗೆ ಬರಬೇಕು ಎಂದು ದೂರು ಸಲಿಸಿದ್ದರು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ರಾಮಲಕ್ಷ್ಮಿಯವರು ನಾನು ಈಗಾಗಲೇ ಕೊಂಡುಕೊಂಡಿದ್ದೇನೆ ಇದು ನನಗೆ ಸೇರಬೇಕು ಎಂದು ಹೇಳಿದ್ದರು.
ಹೈಕೋರ್ಟ್ ನಲ್ಲಿ ರಾಮಪ್ಪ ಅವರ ಪರವಾಗಿಯೇ ತೀರ್ಪು ಆಗಿತ್ತು, ಸುಪ್ರೀಂಕೋರ್ಟ್ ಗೆ ಅಪೀಲು ಹೋದಾಗಲೂ ಸುಪ್ರೀಂ ಕೋರ್ಟ್ ಇದಕ್ಕೆ ಯಾವುದೇ ಟೈಮ್ ಲಿಮಿಟ್ ಎನ್ನುವುದು ಇಲ್ಲ ಯಾವಾಗ ಬೇಕಾದರೂ ಈ ರೀತಿ ವಾಪಸ್ ಪಡೆದುಕೊಳ್ಳಲು ಅವರು ಅರ್ಹರಿರುತ್ತಾರೆ ಎನ್ನುವ ಜಡ್ಜ್ಮೆಂಟ್ ನೀಡಿತ್ತು. ಅದಾದ ಬಳಿಕ ದೇಶದಲ್ಲಿ ಹಲವಾರು ಕಡೆಗಳಲ್ಲಿ ಜನರು ಜಾಗೃತರಾದರು.