ಮನುಷ್ಯನಿಗೆ ಭಗವಂತನ ಅನುಗ್ರಹ ಬಹಳ ಮುಖ್ಯ. ದೈವ ರಕ್ಷೆ ಇದ್ದರೆ ಮನುಷ್ಯ ಎಂತಹ ಕಷ್ಟವನ್ನು ಕೂಡ ಗೆದ್ದು ಸಾಧನೆ ಮಾಡಬಲ್ಲ. ಮನುಷ್ಯನಿಗೆ ಆತನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅನೇಕ ದಾರಿಗಳು ಇದ್ದರೂ ಕೂಡ ಹಣದಿಂದಾಗಲಿ ಅಥವಾ ಅನುಕೂಲದಿಂದಾಗಲಿ ಪರಿಹಾರ ಮಾಡಿಕೊಳ್ಳಲಾಗದ ಸಮಸ್ಯೆ ಬಂದಾಗ ಆತ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ.
ನಮ್ಮ ನೆಲದಲ್ಲಿ ಅನೇಕ ದೇವರುಗಳು ಅವತಾರ ತಾಳಿದ್ದಾರೆ. ಇನ್ನು ಕೂಡ ಅನೇಕ ದೇವಾಲಯಗಳಲ್ಲಿ ದೈವ ಸ್ವರೂಪದಲ್ಲಿ ದೇವರು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಪುರಾಣ ಪ್ರಸಿದ್ಧವಾದ ಈ ರೀತಿ ಹಿನ್ನಲೆ ಉಳ್ಳುವ ಪ್ರತಿಯೊಂದು ದೇವಾಲಯಗಳಿಗೂ ಕೂಡ ಅದರದ್ದೇ ಆದ ವಿಶೇಷತೆ ಇರುತ್ತದೆ. ಈ ದೇವಾಲಯಗಳಲ್ಲಿ ಇರುವ ಪದ್ಧತಿ ಪ್ರಕಾರ ನಡೆದುಕೊಂಡರೆ ಎಂತಹ ಕಷ್ಟವನ್ನು ಕೂಡ ಪರಿಹರಿಸಿಕೊಳ್ಳಬಹುದು.
ಅಂತಹದೇ ಒಂದು ವಿಶೇಷ ದೇವಾಲಯದ ಬಗ್ಗೆ ನಾವು ತಿಳಿಸಿ ಕೊಡುತ್ತಿದ್ದೇವೆ. ಬೆಂಗಳೂರಿನ ಹೊರವಲಯದಲ್ಲಿರುವ ತಾವರೆಕೆರೆ ಸಮೀಪದ ಕಾಳಪ್ಪನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ತಾಯಿ ಭದ್ರಕಾಳೇಶ್ವರಿ ತಾಯಿ ಪೀಠದ ವಿಶೇಷತೆ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಶಿವ ಮತ್ತು ಶಕ್ತಿ ಒಂದೇ ಲಿಂಗದ ಮೂಲಕ ನೆಲೆಸಿರುವ ಏಕೈಕ ದೇವಸ್ಥಾನ ಇದು ಎಂದು ಹೇಳಲಾಗುತ್ತದೆ.
ಈ ದೇವಸ್ಥಾನದಲ್ಲಿ ತಾಯಿ ಆದಿಶಕ್ತಿಯು ಶಕ್ತಿ ಸ್ವರೂಪಿಣಿಯಾಗಿ ದಿನನಿತ್ಯ ತನ್ನ ನಂಬಿ ಬರುವ ಭಕ್ತಾದಿಗಳ ಕ’ಷ್ಟ’ಕ್ಕೆ ತಾಯಿಯಂತೆ ಕಾಯ್ದು ಪರಿಹಾರ ನೀಡಿ ರಕ್ಷಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಈ ದೇವಸ್ಥಾನಕ್ಕೆ ಭಕಾತಹಾಗರ ಹರಿದು ಬರುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆ ಇರುವವರು ಕೂಡ ಈ ದೇವಸ್ಥಾನಕ್ಕೆ ಬಂದು ಗುಣಮುಖರಾಗಿರುವ ಉದಾಹರಣೆಯು ಕೂಡ ಇದೆ.
ಮೂರು ರೂಪಾಯಿಯಲ್ಲಿ ಹರಕೆ ಕಟ್ಟಿಕೊಳ್ಳುವುದು ಈ ದೇವಸ್ಥಾನದ ವಿಶೇಷ. ಯಾವುದೇ ರೀತಿ ಆರೋಗ್ಯ ಸಮಸ್ಯೆಗಳಿಂದಲೂ ಕೂಡ 3 ರೂಪಾಯಿಯಲ್ಲಿ ಹರಕೆ ಮಾಡಿಕೊಂಡು ಅದು ಈಡೇರಿದ ಬಳಿಕ ಕೂಷ್ಮಾಂಡ ಅಂದರೆ ಕುಂಬಳಕಾಯಿಯಲ್ಲಿ ದೀಪ ಹಚ್ಚಿ ಹರಕೆ ಅರ್ಪಿಸಿದರೆ ಸಾಕು ತಾಯಿ ಪ್ರಸನ್ನರಾಗುತ್ತಾರೆ. ಇಲ್ಲಿ ಮಾಡುವ ಯಾವುದೇ ಆಚರಣೆಗಳಿಗಾಗಲಿ ಪೂಜೆಗಳಿಗಾಗಲಿ ಅತಿಹೆಚ್ಚಿನ ಹಣವನ್ನು ಡಿಮ್ಯಾಂಡ್ ಮಾಡುವುದಿಲ್ಲ.
ಬದಲಾಗಿ ತಾಯಿ ಕೊಟ್ಟಿರುವ ಆಜ್ಞೆಯಂತೆ ಬಂದ ಭಕ್ತಾದಿಗಳಿಗೆ ಪರಿಹಾರ ತೋರುವುದು ನಮ್ಮ ಕರ್ತವ್ಯ ಎಂದು ಅರ್ಚಕರು ನಡೆದುಕೊಳ್ಳುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಪ್ರತ್ಯಂಗಿರಿ ದೇವಿಯ ವಿಗ್ರಹ ಕೂಡ ಇದೆ. ಹರಕೆ ಕಟ್ಟಿಕೊಳ್ಳುವವರಿಗೆ ಅವರ ಹರಕೆಯ ಪ್ರಕಾರವಾಗಿ ಅರಿಶಿಣದ ನೀರು ಅಥವಾ ವನಸಿರಿ ನೀರನ್ನು ಹಾಕಿ ಪ್ರತ್ಯಂಗಿನಿ ದೇವಿ ವಿಗ್ರಹವನ್ನು ತಲೆ ಮೇಲೆ ಇಟ್ಟು ಅವರ ಕೋರಿಕೆ ಅನುಸಾರವಾಗಿ ಪ್ರದಕ್ಷಿಣೆ ಹಾಕಲು ಸೂಚಿಸಲಾಗುತ್ತಿದೆ.
ಅಲ್ಲಿನ ಆಚರಣೆ ಪ್ರಕಾರವಾಗಿ ಸಮಸ್ಯೆ ಇರುವವರು ಭಕ್ತಿಯಿಂದ ತಾಯಿಯೇ ನಂಬಿ ನಡೆದುಕೊಂಡರೆ ಸಾಕು ಕಲ್ಲಂತೆ ಬಂದ ಕ’ಷ್ಟ’ಗ’ಳು ಕೂಡ ಮಂಜಿನ ರೀತಿ ಪರಿಹಾರವಾಗುತ್ತದೆ. ಇಲ್ಲಿ ಅನೇಕ ಹೋಮಗಳನ್ನು ಕೂಡ ಮಾಡಲಾಗುತ್ತದೆ. ಸಾಮೂಹಿಕವಾಗಿ ಹೋಮ ನಡೆಸಿ ಭಕ್ತಾದಿಗಳ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ.
ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ಪೂಜೆಗಳು ಇಲ್ಲಿ ಬಹಳ ವಿಶೇಷ ಹಾಗೆ ಹರಕೆ ಕಟ್ಟಿಕೊಳ್ಳುವವರಿಗೆ 5 ವಾರ 9 ವಾರ ಈ ರೀತಿಯಾಗಿ ಆಚರಣೆ ಮಾಡಲು ಸೂಚಿಸಲಾಗುತ್ತದೆ. ಆ ರೀತಿ ನಡೆದುಕೊಂಡರೆ ಗುಣಮುಖರಾಗಿ ಬದುಕಿನಲ್ಲಿ ಹೊಸ ಭರವಸೆಯನ್ನು ಕಾಣುತ್ತಾರೆ ಹಾಗಾಗಿ ಆರೋಗ್ಯ ಕೊಡುವ ದೇಬಿ ಎಂದು ಈಕೆಯನ್ನು ಪೂಜಿಸಲಾಗುತ್ತದೆ. ಈ ಮಹಾತಾಯಿಯ ಶಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.