ಕೇವಲ 5 ನಿಮಿಷದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ವಿಧಾನ…

 

ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಪಡೆಯಲು ಹಾಗೂ ಸರ್ಕಾರಿ ಹುದ್ದೆಗಳಲ್ಲಿಗೆ ಮೀಸಲಾತಿ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಯಾಗಿ ಬೇಕು. ಇದಕ್ಕಾಗಿ ನೀವು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದರೆ ಆ ಪ್ರೋಸೆಸ್ ತಡ ಆಗಬಹುದು. ತಾಲೂಕು ಕಛೇರಿ ಅಥವಾ ನಾಡಕಛೇರಿಗಳ ಕೆಲಸಗಳಿಗಾಗಿ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದಲ್ಲಿ ನಾಡಕಚೇರಿ ವೆಬ್ ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದು.

ಈ ಅಂಕಣದಲ್ಲಿ ನಾವು ಮನೆಯಲ್ಲಿ ಕೂತು ನಿಮ್ಮ ಮೊಬೈಲ್ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕ ಯಾವ ರೀತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

● ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಗೂಗಲ್ ಗೆ ಹೋಗಿ ಸರ್ಚ್ ಎಂಜಿನ್ ಮೂಲಕ nadakacheri.karnataka.gov.in ಎಂದು ಟೈಪ್ ಮಾಡಿ ಎಂಟರ್ ಕೊಟ್ಟರೆ ಬಂದು ವಿಂಡೋ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ OTP ಬರುತ್ತದೆ, ಅದನ್ನು ಕೂಡ ಎಂಟ್ರಿ ಮಾಡಿ ಲಾಗಿನ್ ಆಗಿ.

● ಓಪನ್ ಆಗುವ ಪೇಜ್ ಅಲ್ಲಿ ಹಲವು ಆಯ್ಕೆಗಳನ್ನು ಕೇಳಲಾಗಿರುತ್ತದೆ. ಅದರಲ್ಲಿ ಹೊಸ ಅರ್ಜಿ ಸಲ್ಲಿಕೆ ಎನ್ನುವಲ್ಲಿ ಕ್ಲಿಕ್ ಮಾಡಿದರೆ ಹಲವು ಅರ್ಜಿಗಳ ಆಯ್ಕೆ ಇರುತ್ತದೆ. ಅದರಲ್ಲಿ ಆದಾಯ ಪ್ರಮಾಣ ಪತ್ರ ಎನ್ನುವುದನ್ನು ಸೆಲೆಕ್ಟ್ ಮಾಡಿ. ಒಂದು ವೇಳೆ ನೀವು ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂದರೆ ಅದಕ್ಕೂ ಕೂಡ ಇದೇ ಕ್ರಮ ಅನ್ವಯವಾಗುತ್ತದೆ ಆಗ ನೀವು ಜಾತಿ ಪ್ರಮಾಣ ಪತ್ರ ಎನ್ನುವುದನ್ನು ಸೆಲೆಕ್ಟ್ ಮಾಡಬೇಕು.

● ಮುಂದಿನ ಹಂತದಲ್ಲಿ ನಿಮಗೆ ಎರಡು ಆಯ್ಕೆಯನ್ನು ಕೊಡಲಾಗಿರುತ್ತದೆ. ಆಧಾರ್ ಕಾರ್ಡ್ ಮೂಲಕ ಅರ್ಜಿ ಹಾಕುವುದು ಅಥವಾ ರೇಷನ್ ಕಾರ್ಡ್ ಮೂಲಕ ಅರ್ಜಿ ಹಾಕುವುದು ನಿಮಗೆ ಯಾವುದು ಅನುಕೂಲ ಅದನ್ನು ಸೆಲೆಕ್ಟ್ ಮಾಡಿ.
● ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಬಳಿಕ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿಕೊಳ್ಳಿ.

● ನೀವು ರೂರಲ್ ಆರ್ ಹರ್ಬನ್ ಎಂದು ಕೇಳಲಾಗುತ್ತದೆ ಅದನ್ನು ಕೂಡ ಸೆಲೆಕ್ಟ್ ಮಾಡಿ, ನಿಮಗೆ ಸರ್ಟಿಫಿಕೇಟ್ ಕನ್ನಡ ಅಥವಾ ಇಂಗ್ಲಿಷ್ ಯಾವ ಭಾಷೆಯಲ್ಲಿ ಬೇಕು ಎಂದು ಕೇಳಲಾಗುತ್ತದೆ ಅದನ್ನು ಕೂಡ ಸೆಲೆಕ್ಟ್ ಮಾಡಿ. ಯಾರ ಹೆಸರಿನಲ್ಲಿ ಈ ಜಾತಿ ಅಥವಾ ಆದಾಯ ಪ್ರಮಾಣ ಪತ್ರ ಬೇಕು ಅವರ ಹೆಸರನ್ನು ಹಾಕಿ. ನಿಮ್ಮ ತಂದೆ ಅಥವಾ ವಿವಾಹವಾಗಿರುವವರು ಮಹಿಳೆಯರು ಅಪ್ಲೈ ಮಾಡಿದರೆ ಗಂಡನ ಹೆಸರನ್ನು ಎಂಟ್ರಿ ಮಾಡಿ.

● ಜಾತಿ ಪ್ರಮಾಣ ಪತ್ರ ಪಡೆಯುವಾಗ ನಿಮ್ಮ ಜಾತಿ ಯಾವ ಕೆಟಗರಿಗೆ ಬರುತ್ತದೆ ಎಂದು ಕೇಳಲಾಗುತ್ತದೆ, ಆಪ್ಷನ್ ನಲ್ಲಿ ನಿಮ್ಮ ಜಾತಿಯ ಕೆಟಗರಿಯನ್ನು ಆಯ್ಕೆ ಮಾಡಿ.
● ಇಷ್ಟಾದ ಮೇಲೆ ಪ್ರಿಂಟ್ ಕನ್ಸೆಂಟ್ ಎನ್ನುವ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ. ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಒಪ್ಪಿಗೆ ಪತ್ರ ಎಂದು ಒಂದು ಪೇಜ್ ಬರುತ್ತದೆ ಅದಕ್ಕೆ ನೀವು ಸಿಗ್ನೇಚರ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು ಅಥವಾ ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಬಹುದು. ಈ ಪ್ರಕ್ರಿಯೆ ಪೂರ್ತಿಗೊಳಿಸಲಾಗಿದೆಯೇ ಎಂದು ಒಂದು ಚಿಕ್ಕ ಚೆಕ್ ಬಾಕ್ಸ್ ಆಪ್ಷನ್ ಅಲ್ಲಿ ಕೇಳಲಾಗುತ್ತದೆ ಅದಕ್ಕೆ ರೈಟ್ ಎಂದು ಕ್ಲಿಕ್ ಮಾಡಿದರೆ ಮುಂದಿನ ಹಂತಕ್ಕೆ ಹೋಗುತ್ತದೆ.

● ಪ್ರಿಂಟ್ ಕನ್ಸೆಂಟ್ ಆಪ್ಷನ್ ಪಕ್ಕ ಸರ್ಚ್ ಎಂದು ಒಂದು ಬಾಕ್ಸ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿದರೆ ಈ ಹೆಸರಿನಲ್ಲಿ ಹಾಗೂ ಈ ಮಾಹಿತಿಯಲ್ಲಿ ಈ ಹಿಂದೆಯೇ ಆದಾಯ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ ಎಂದು ಸರ್ಚ್ ಮಾಡಬಹುದು. ಒಂದು ಪಾಪ್ ಅಪ್ ಮೆಸೇಜ್ ಬರುತ್ತದೆ. ಅದರಲ್ಲಿ ಈಗಾಗಲೇ ಸರ್ಟಿಫಿಕೇಟ್ ಇದ್ದರೆ ಅಥವಾ ಇಲ್ಲದಿದ್ದರೂ ಕೂಡ ತಿಳಿಸಲಾಗುತ್ತದೆ. ಇಲ್ಲ ಎಂದು ಮೆಸೇಜ್ ಬಂದಿದ್ದಲ್ಲಿ ಅದನ್ನು ಓಕೆ ಮಾಡಿ ಮುಂದಿನ ಪೇಜಿಗೆ ಹೋದರೆ ಒಂದು ಅಪ್ಲಿಕೇಶನ್ ಫಾರಂ ಕಾಣುತ್ತದೆ.

● ಅದರಲ್ಲಿ ಅರ್ಜಿ ಸಲ್ಲಿಸುವವರ ಹುಟ್ಟಿದ ದಿನಾಂಕದಿಂದ ಎಲ್ಲಾ ಮಾಹಿತಿಯನ್ನು ಕೂಡ ಕೇಳಲಾಗುತ್ತದೆ ಅದರಲ್ಲಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ ಮತ್ತು ಕೆಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ತಿಳಿಸಲಾಗುತ್ತದೆ ಅವುಗಳನ್ನು ಕೂಡ ಪೂರೈಸಿ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಲು ಆನ್ಲೈನ್ ಪೇಮೆಂಟ್ ಆಪ್ಷನ್ ಇರುತ್ತದೆ. ಅದನ್ನು ಪೂರ್ತಿಗೊಳಿಸಿ ಸಬ್ಮಿಟ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕೃತಿ ಪ್ರತಿ ಬರುತ್ತದೆ. ಅದರಲ್ಲಿ ರೆಫರೆನ್ಸ್ ನಂಬರ್ ಎಲ್ಲವೂ ಕೂಡ ಇರುತ್ತದೆ ಅದನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ ಮುಂದೆ ಇದು ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಅನುಕೂಲಕ್ಕೆ ಬರುತ್ತದೆ. ಈ ರೀತಿ ಬಂದರೆ ನಿಮ್ಮ ಅರ್ಜಿ ಸಲ್ಲಿಕೆ ಪೂರ್ತಿ ಆಗಿದೆ ಎಂದು ಅರ್ಥ.

Leave a Comment

%d bloggers like this: