ಕಾಂಗ್ರೆಸ್ ಪಕ್ಷದ ಮೊದಲನೇ ಗ್ಯಾರಂಟಿ ಆಗಿ ಘೋಷಣೆಯಾಗಿದ್ದ ಗೃಹಜ್ಯೋತಿ ಯೋಜನೆಯು ರಾಜ್ಯದಾದ್ಯಂತ ಜುಲೈ ತಿಂಗಳಲ್ಲಿ ಅನ್ವಯವಾಗುತ್ತದೆ. ಅಂದರೆ ಜುಲೈ ತಿಂಗಳಿನಲ್ಲಿ ಬಳಸಿದ್ದ ವಿದ್ಯುತ್ ಖರ್ಚಿಗೆ ಆಗಸ್ಟ್ ತಿಂಗಳಿನಲ್ಲಿ ಕಟ್ಟುತ್ತಿದ್ದ ಬಿಲ್ ಅನ್ನು ಇನ್ನು ಮುಂದೆ ಸರ್ಕಾರ ಹೇಳಿದ ಕಂಡಿಶನ್ ವ್ಯಾಪ್ತಿಯಲ್ಲಿ ಬಳಸಿದ್ದಲ್ಲಿ ಸರ್ಕಾರವೇ ಆ ಶುಲ್ಕ ಭರಿಸಲಿದೆ. ಕಳೆದ ತಿಂಗಳು ಜೂನ್ 18ರಿಂದಲೇ ಗೃಹಜ್ಯೋತಿ ಯೋಜನೆಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ.
ಪ್ರತಿ ತಿಂಗಳೂ ಕೂಡ 25ನೇ ತಾರೀಕಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ವಿದ್ಯುತ್ ಬಳಕೆ ಮಾಪನ ಮಾಡುವ ಕಾರಣವಾಗಿ ಜುಲೈ 25ರ ಒಳಗಡೆ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಮಾತ್ರ ಆಗಸ್ಟ್ ತಿಂಗಳಲ್ಲಿ ಕಟ್ಟುತ್ತಿದ್ದ ಬಿಲ್ ಫ್ರೀ ಎಂದು ಸರ್ಕಾರ ಹೇಳಿದೆ. ಹಾಗಾಗಿ ಯಾರು ಇನ್ನೂ ಸಹ ಅರ್ಜಿ ಸಲ್ಲಿಸಿಲ್ಲ ಅವರು ಜುಲೈ 25ರ ಒಳಗೆ ಅರ್ಜಿ ಸಲ್ಲಿಸಬೇಕು.
ಜುಲೈ 25ರ ನಂತರ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ ಆದರೆ ಅವರು ಸೆಪ್ಟೆಂಬರ್ ತಿಂಗಳಿಂದ ಅಂದರೆ ಆಗಸ್ಟ್ ತಿಂಗಳಿನ ಬಳಕೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಕಟ್ಟುತ್ತಿದ್ದ ಬಿಲ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದ ಆರಂಭಿಕ ದಿನಗಳಲ್ಲಿ ಗ್ರಾಹಕರಿಗೆ ಬಹಳ ಸಮಸ್ಯೆ ಆಗಿತ್ತು. ಸರ್ಕಾರವು ಆನ್ಲೈನಲ್ಲಿ ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.
ಅನೇಕರು ಮೊಬೈಲ್ ಮತ್ತು ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಇನ್ನು ಕೆಲವರು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಒಂದೇ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಅರ್ಜಿ ಹೋಗುತ್ತಿದ್ದ ಕಾರಣ ಸರ್ವರ್ ಮೇಲೆ ಒತ್ತಡವಾಗಿತ್ತು. ಅನೇಕರಿಗೆ ತಾಂತ್ರಿಕ ಸಮಸ್ಯೆಗಳಾಗಿ ಅರ್ಜಿ ಸಲ್ಲಿಕೆ ಆಗುವ ಸಮಯದಲ್ಲಿ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆಯಲಾಗಿರುವುದಿಲ್ಲ ಅಥವಾ ರೆಫರೆನ್ಸ್ ನಂಬರನ್ನು ಸಿಕ್ಕಿರುವುತ್ತಿಲ್ಲ.
ಈಗ ನಿಮಗೆ ನಿಮ್ಮ ಅರ್ಜಿ ಸಲ್ಲಿಕೆ ಪೂರ್ತಿ ಆಗಿದೆಯಾ ಇಲ್ಲವೇ, ಅರ್ಜಿ ಸಲ್ಲಿಕೆ ಆಗಿದ್ದರೆ ಈಗ ಅದು ಯಾವ ಸ್ಟೇಟಸ್ ಅಲ್ಲಿ ಇದೆ ಎನ್ನುವುದನ್ನು ಸರ್ಕಾರ ಸೂಚಿಸಿರುವ ಮತ್ತೊಂದು ವೆಬ್ಸೈಟ್ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಬಹುದು.
ನಿಮ್ಮ ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡುವ ವಿಧಾನ:-
● sevasindhu.karnataka.gov.in/StatusTrack/Track_Status ಈ ವೆಬ್ಸೈಟ್ಗೆ ಭೇಟಿ ಕೊಡಿ
● ನಿಮ್ಮ ESCOM ಸೆಲೆಕ್ಟ್ ಮಾಡಲು ತಿಳಿಸುತ್ತದೆ ಮತ್ತು ನಿಮ್ಮ ವಿದ್ಯುತ್ ಬಿಲ್ ನ ACC.ID ನಂಬರ್ ಹಾಕಲು ಕೇಳಲಾಗುತ್ತದೆ ಎರಡನ್ನು ಸರಿಯಾಗಿ ನಮೂದಿಸಿ, ಹಸಿರು ಬಣ್ಣದಲ್ಲಿ Check Status ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
● ನಿಮ್ಮ ಪೇಜ್ ಮೇಲೆ ನಿಮ್ಮ ರೆಫ್ರೆನ್ಸ್ ನಂಬರ್, ಅಕೌಂಟ್ ಐಡಿ, ಅರ್ಜಿ ಸಲ್ಲಿಸಿದ ದಿನಾಂಕದ ಜೊತೆಗೆ ಇಂಧನ ಇಲಾಖೆ ಒಂದು ಘೋಷಣೆ ಬರುತ್ತದೆ ಯುವರ್ ಅಪ್ಲಿಕೇಶನ್ ಇಸ್ ರಿಸೀವ್ಡ್ ಅಂಡ್ ಸೆಂ ಟು ಎಸ್ಕಾಂ ಫೋರ್ ಪ್ರೊಸೆಸಿಂಗ್ ಎಂದು ಬಂದರೆ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದೆ ಮತ್ತು ಅದು ಎಸ್ಕಾಂಗೆ ಪ್ರೋಸೆಸ್ ಆಗಿದೆ ಎಂದು ಅರ್ಥ.
● ಒಂದು ವೇಳೆ ಈ ರೀತಿ ಘೋಷಣೆ ಬಂದಿಲ್ಲ ಎಂದರೆ ನಿಮ್ಮ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಆಗಿರುತ್ತದೆ, ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.