ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಲಿಂದಲೂ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಪ್ರತಿಯೊಂದು ವರ್ಗವನ್ನು ಕೂಡ ಗಮನದಲ್ಲಿಟ್ಟುಕೊಂಡು ಅವರ ಭವಿಷ್ಯದ ಚಿಂತನೆ ನಡೆಸಿ ಅನುಕೂಲಕರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಅದರಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿಯೇ ಜಾರಿಗೆ ತಂದಿರುವ ಯೋಜನೆ ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ. ಈ ಯೋಜನೆಯಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕರಾದ ಟೈಲರ್ಗಳು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ದಿನಗೂಲಿ ಮಾಡುವವರು, ಚಮ್ಮಾರರು ಮತ್ತು ಸಣ್ಣಪುಟ್ಟ ತರಕಾರಿ ಹೂವು ದಿನಸಿ ವ್ಯಾಪಾರ ಮಾಡುವವರು ಸೇರುತ್ತಾರೆ.
ಇವರಿಗೆ 60 ವರ್ಷ ಆದಮೇಲೆ ಪೆನ್ಷನ್ ನೀಡುವಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ ಅದಕ್ಕಾಗಿ ಇರುವಂತಹ ಯೋಜನೆ ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ. ವಯಸ್ಸಾಗುತ್ತಿದ್ದಂತೆ ದುಡಿಯುವ ಶಕ್ತಿ ಕುಂದುತ್ತದೆ ಹಾಗೂ ದುಡಿಯಲು ಕೆಲಸವೂ ಇರದೇ ಹೋಗಬಹುದು. ಆ ಸಮಯದಲ್ಲಿ ಅವರ ಜೀವನ ನಿರ್ವಹಣೆಗೆ ಅನುಕೂಲತೆ ಆಗಲಿ ಎನ್ನುವ ಕಾರಣಕ್ಕಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರಕಿಸಿಕೊಡಲು ಈ ಯೋಜನೆಯನ್ನು ಜಾರಿಗೆ ತಂದಿದೆ.
ಆದರೆ ಇನ್ನೂ ದೇಶದಲ್ಲಿ ಅನೇಕರಿಗೆ ಈ ಯೋಜನೆ ಬಗ್ಗೆ ಮಾಹಿತಿ ತಲುಪಿಲ್ಲ. ಹಾಗಾಗಿ ಈ ಅಂಕಣದಲ್ಲಿ ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಯೋಜನೆಯ ಹೆಸರು:- ಶ್ರಮ ಯೋಗಿ ಮಂದನ್ ಯೋಜನೆ.
ಅರ್ಹತೆಗಳು:-
● 18 ವರ್ಷದಿಂದ 40 ವರ್ಷದ ವಯಸ್ಸಿನ ಒಳಗಿರಬೇಕು.
● ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಆಗಿರಬೇಕು.
● ಈ ಯೋಜನೆ ಖರೀದಿ ಮಾಡುವ ಕಾರ್ಮಿಕರ ಮಾಸಿಕ ಆದಾಯವು 15 ಸಾವಿರಕ್ಕಿಂತ ಹೆಚ್ಚಿರಬಾರದು.
● EPFO, ESIC ಮುಂತಾದ ಯೋಜನೆಗಳ ಭಾಗವಾಗಿರಬಾರದು.
ಯೋಜನೆಯ ಕುರಿತು ಪ್ರಮುಖ ಅಂಶಗಳು:-
● ಈ ಯೋಜನೆಯನ್ನು 18 ವರ್ಷದಿಂದ 40 ವರ್ಷದ ದುಡಿಯುವ ವರ್ಗದ ಯಾವುದೇ ಸಂಘಟಿತ ವಲಯದ ಕಾರ್ಮಿಕರು ಖರೀದಿಸಬಹುದು.
● ಆನ್ಲೈನ್ ಮೂಲಕ www.maandhan.in ಗೆ ಅರ್ಜಿ ಹಾಕಬಹುದು ಅಥವಾ ಆಫ್ಲೈನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ಹತ್ತಿರದ CSC ಕೇಂದ್ರಗಳಲ್ಲಿ ಅರ್ಜಿ ಹಾಕಬಹುದು.
● 60 ವರ್ಷ ತುಂಬುವವರಿಗೆ ಪ್ರತಿ ತಿಂಗಳು ಕೂಡ 55 ರಿಂದ ರೂ 200 ರವರೆಗೆ ಈ ಯೋಜನೆಯಲ್ಲಿ ಹಣ ಹೂಡಿಗೆ ಮಾಡಬೇಕಾಗುತ್ತದೆ.
● 60 ವರ್ಷ ತುಂಬಿದ ಬಳಿಕ 1500 ರಿಂದ 3000 ವರೆಗೆ ಕನಿಷ್ಠ ಖಾತರಿ ಪಿಂಚಣಿಯನ್ನು ಖರೀದಿದಾರರು ಪಡೆಯುತ್ತಾರೆ.
● ಒಂದು ವೇಳೆ ಖರೀದಿದಾರರು ಮೃತಪಟ್ಟ ಪಕ್ಷದಲ್ಲಿ ಆತನ ಸಂಗಾತಿಗೆ ಇದರ ಅರ್ಧದಷ್ಟು ಅಂದರೆ 1500 ಪ್ರತಿ ತಿಂಗಳು ಪೆನ್ಷನ್ ಬರುತ್ತದೆ.
ಶ್ರಮ ಯೋಗಿ ಮಂದನ್ ಯೋಜನೆಗೆ ಖರೀದಿಸಲು ಬೇಕಾಗಿರುವ ಅರ್ಹತೆಗಳು:-
● ಆಧಾರ್ ಕಾರ್ಡ್
● ಗುರುತಿನ ಚೀಟಿ
● ಬ್ಯಾಂಕ್ ಖಾತೆ ಪುಸ್ತಕ
● ಅಂಚೆ ವಿಳಾಸ
● ಮೊಬೈಲ್ ನಂಬರ್
● ಪಾಸ್ಪೋರ್ಟ್ ಸೈಜ್ ಫೋಟೋಗಳು
ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ತಿಳಿಯರಿ ಅಥವಾ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡಿ ಅಥವಾ ಈ ವಿಳಾಸವನ್ನು ಸಂಪರ್ಕಿಸಿ.
ಜಂಟಿ ಕಾರ್ಯದರ್ಶಿ,
ಮಹಾ ನಿರ್ದೇಶಕರು (ಕಾರ್ಮಿಕ ಕಲ್ಯಾಣ ಇಲಾಖೆ),
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ,
ಭಾರತ ಸರ್ಕಾರ.