ಕಾನೂನಿನಲ್ಲಿ ಅಡ್ವರ್ಡ್ ಪೊಸೆಷನ್ ಎನ್ನುವ ಒಂದು ಅವಕಾಶ ಇದೆ, ಇದನ್ನು ಕನ್ನಡದಲ್ಲಿ ಪ್ರತಿಕೂಲ ಸ್ವಾಧೀನತೆ ಎನ್ನುತ್ತಾರೆ. ಪ್ರತಿಕೂಲಕ್ಕ ಸ್ವಾಧೀನತೆ ಎಂದರೆ ಒಂದು ಆಸ್ತಿಯ ಓನರ್ ಬೇರೆ ಇರುತ್ತಾರೆ, ಆ ಮಾಲೀಕರಿಗೆ ಗೊತ್ತಿರುವಂತೆ ನೀವು ಅವರ ಜಾಗವನ್ನು ಸ್ವಾದೀನ ಪಡಿಸಿಕೊಂಡರು ಉದಾಹರಣೆಗೆ ಹೇಳುವುದಾದರೆ ಒಂದು ಜಮೀನಿನಲ್ಲಿ ನೀವು ಉಳುಮೆ ಮಾಡಿ ಬೆಳೆಯನ್ನು ಪಡೆದುಕೊಳ್ಳುತ್ತಿರುತ್ತೀರಿ ಆದರೆ ಆ ಜಮೀನಿನ ಮಾಲಿಕ ಬೇರೆಯವರಾಗಿರುತ್ತಾರೆ,
ಆ ಮಾಲೀಕನಿಗೆ ನೀವು ಅಲ್ಲಿ ಉಳುಮೆ ಮಾಡುತ್ತಿರುವುದು ಬೆಳೆ ತೆಗೆಯುತ್ತಿರುವುದು ಅಥವಾ ಆ ಜಮೀನಿನಲ್ಲಿ ಮರಗಳನ್ನು ಬೆಳೆಸಿ ಅವುಗಳನ್ನು ಕಟಾವು ಮಾಡಿ ಅದರ ಪ್ರಯೋಜನ ಪಡೆಯುತ್ತಿರುವುದು ಎಲ್ಲವೂ ತಿಳಿದಿರುತ್ತದೆ. ನಿಮ್ಮ ಮತ್ತು ಅವರ ಮಧ್ಯೆ ಯಾವುದೇ ಗುತ್ತಿಗೆ ರೀತಿ ಒಪ್ಪಂದ ಆಗಿರುವುದಿಲ್ಲ ಎಂದರೆ ಸತತ 12 ವರ್ಷಗಳವರೆಗೆ ಆ ಜಮೀನು ನಿಮ್ಮ ಸ್ವಾದೀನದಲ್ಲಿದ್ದರೆ ಅದನ್ನು ನಿಮ್ಮ ಸ್ವಂತ ಜಾಗವೇ ಮಾಡಿಕೊಳ್ಳಬಹುದು.
ಮೇಲಿನ ಉದಾಹರಣೆಯಲ್ಲಿ ಆ ಜಮೀನಿನ ಪಹಣಿ, ಕಾಗದ ಪತ್ರಗಳು ಎಲ್ಲವೂ ಸಹ ಆ ಮಾಲೀಕನ ಹೆಸರಿನಲ್ಲಿ ಇರುತ್ತದೆ. ಆದರೆ 12 ವರ್ಷಗಳಿಂದ ನೀವು ಈ ಸ್ವತ್ತಿನ ಪ್ರಯೋಜನವನ್ನು ಪಡೆಯುತ್ತಿರುತ್ತೀರಿ. ಸತತವಾಗಿ 12 ವರ್ಷಗಳ ಕಾಲ ನೀವು ಅದನ್ನು ವಶಪಡಿಸಿಕೊಂಡಿರುವುದರಿಂದ ಅದರ ಮೇಲೆ ಹಕ್ಕು ಸಾಧಿಸಬಹುದು. ನ್ಯಾಯಾಲಯದಲ್ಲಿ ಪ್ರತಿಕೂಲ ಸ್ವಾಧೀನತೆ ಮೇಲೆ ದಾವೆ ಹಾಕುವ ಮೂಲಕ ಆ ಸ್ವತ್ತನ್ನು ವಶಪಡಿಸಿಕೊಳ್ಳಬಹುದು.
ಆದರೆ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸುವ ಮುನ್ನ 5 ಪ್ರಮುಖ ಅಂಶಗಳನ್ನು ನೀವು ಅರಿತುಕೊಂಡಿರಬೇಕು. ಆ ಐದು ಕಂಡಿಶನ್ ಪ್ರಖಾರವೇ ನೀವು 12 ವರ್ಷಗಳಿಂದ ಅಲ್ಲಿ ಇದ್ದು ಅನುಕೂಲತೆ ಪಡೆದಿದ್ದರೆ ಅದನ್ನು ಸಾಬೀತು ಮಾಡಿ ಕೋರ್ಟಿಗೆ ತಿಳಿಸಿದರೆ ಮುಂದೆ ನೀವೇ ಅದರ ಮಾಲೀಕರಾಗಬಹುದು.
ಆ ಐದು ಪ್ರಮುಖ ಅಂಶಗಳು:-
● ಮೊದಲನೆಯದಾಗಿ ನೀವು ಯಾವ ಜಾಗವನ್ನು ಪ್ರತಿಕೂಲ ಸ್ವಾಧಿನತೆಗೆ ವಶಪಡಿಸಿಕೊಳ್ಳಬೇಕು ಎಂದು ಇದ್ದೀರೋ, ಆ ಜಮೀನಿನ ಮಾಲೀಕನಿಗೆ ನೀವು ಆ ಜಮೀನಿನಲ್ಲಿ ವ್ಯವಹಾರ ಮಾಡುತ್ತಾ ಇರುವುದು ತಿಳಿದಿರಬೇಕು ಅದು ಅವರ ಅರಿವಿಗೆ ಬಂದಿರಬೇಕು.
● ಈ ರೀತಿ ಮಾಲೀಕರಿಗೆ ನೀವು ಅಲ್ಲಿ ಆ ಜಮೀನಿನ ಅನುಕೂಲತೆ ಪಡೆಯುತ್ತಿದ್ದೀರಾ ಎಂದು ಗೊತ್ತಿದ್ದರೂ ಕೂಡ ಅವರು ನಿಮ್ಮನ್ನು ಡಿಸ್ಟರ್ಬ್ ಮಾಡಿರಬಾರದು, ಈ ವಿಚಾರವಾಗಿ ನಿಮ್ಮ ಮಧ್ಯೆ ಯಾವುದೇ ಮನಸ್ತಾಪ, ಗಲಾಟೆಗಳು ಅಥವಾ ನ್ಯಾಯಾಲಯದಲ್ಲಿ ಪೊಲೀಸ್ ಠಾಣೆಯಲ್ಲಿ, ಪ್ರಕರಣಗಳು ದಾಖಲಾಗಿರಬಾರದು.
● ನೀವು ಆ ಜಮೀನಿನಲ್ಲಿ ಏನೇ ಕೆಲಸ ಮಾಡುತ್ತಿದ್ದರು ಕೂಡ ಅದು ಕಳ್ಳತನವಾಗಿರಬಾರದು, ಸ್ಪಷ್ಟವಾಗಿ ಅಕ್ಕ ಪಕ್ಕದವರು, ಮಾಲೀಕರು ಎಲ್ಲರಿಗೂ ಗೊತ್ತಿರುವಂತೆ ನೀವು ಆ ಜಮೀನಿನಲ್ಲಿ ಇದ್ದಿರಬೇಕು.
● ಸತತವಾಗಿ 12 ವರ್ಷಗಳ ಕಾಲ ನೀವು ಆ ಜಮೀನಿನಲ್ಲಿ ಉಳಿಮೆ ಅಥವಾ ಜಮೀನಿನ ಇನ್ಯಾವುದೇ ಚಟುವಟಿಕೆಯಲ್ಲಿ ತೊಡಗಿರಬೇಕು.
ಆದರೆ ಈ 12 ವರ್ಷಗಳಲ್ಲಿ ಮಾಲೀಕರು ಎಂದು ಕೂಡ ತಕರಾರು ತೆಗೆದಿರಬಾರದು ಅಥವಾ ನೀವು ಒಪ್ಪಂದ ಮಾಡಿಕೊಂಡಿರಬಾರದು. ಇದು ಸತತವಾಗಿರಬೇಕು ಆರು ವರ್ಷಗಳ ಕಾಲ ನಿಮ್ಮ ಸ್ವಾಧೀನ ಎರಡು ವರ್ಷಗಳ ಕಾಲ ಮಾಲೀಕನ ಸ್ವಾಧೀನ ಈ ರೀತಿ ಮಧ್ಯೆ ಇದು ಅಡಚಣೆ ಆಗಿದ್ದಲ್ಲಿ 1963 ರಲ್ಲಿ ಜಾರಿಗೆ ಬಂದ ಕಾಲಮಿತಿ ಕಾಯ್ದೆ ಪ್ರಕಾರ ಅಡ್ವರ್ಡ್ ಪೊಸೆಷನ್ ಗೆ ಅಡ್ಡಿಯಾಗುತ್ತದೆ.
● ಮತ್ತೊಂದು ಮುಖ್ಯವಾದ ಅಂಶ ಏನೆಂದರೆ ಖಾಸಗಿಯವರ ಒಡೆತನದಲ್ಲಿರುವ ಜಮೀನಾಗಿದ್ದರೆ ಇದು 12 ವರ್ಷಗಳು, ಒಂದು ವೇಳೆ ಇದು ಸರ್ಕಾರದ ಜಮೀನು ಆಗಿದ್ದರೆ 30 ವರ್ಷಗಳು ಆಗಿರುತ್ತದೆ. 30 ವರ್ಷಗಳ ವರೆಗೆ ಸತತವಾಗಿ ನೀವೇ ಜಮೀನಿನನ್ನು ಸ್ವಾಧಿನಕ್ಕೆ ಪಡೆದಿದ್ದರೆ, ಕೋರ್ಟಿನಲ್ಲಿ ದಾವೇ ಹೂಡಿ ಸಾಬೀತುಪಡಿಸಿದರೆ, ಆ ವೇಳೆಯಲ್ಲಿ ಮಾಲೀಕರು ಅವರ ಸ್ವಾಧೀನತೆಯನ್ನು ಸಾಬೀತುಪಡಿಸಲು ವಿಫಲವಾದರೆ ಕೋರ್ಟ್ ಇದನ್ನು ಪರಿಶೀಲನೆ ನಡೆಸಿ ಪ್ರತಿಕೂಲ ಸ್ವಾಧೀನತೆ ಬಗ್ಗೆ ಘೋಷಣೆ ಮಾಡುತ್ತದೆ.