ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ:-
● ಮೊದಲಿಗೆ ಗೂಗಲ್ ಗೆ ಹೋಗಿ www.ahara.kar.nic.in ವೆಬ್ ಸೈಟ್ ಗೆ ಭೇಟಿ ಕೊಡಿ.
● ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಇ-ಸೇವೆಗಳು ಎಂದು ಇರುವ ಆಪ್ಷನ್ ಅನ್ನು ಆಯ್ಕೆ ಮಾಡಿ.
● ಈ ಸೇವೆಗಳು ಆಯ್ಕೆ ಕ್ಲಿಕ್ ಮಾಡಿದ ಮೇಲೆ ಮೆನುಬಾರ್ ನ ಮೂರು ಲೈನ್ಗಳು ಕಾಣುತ್ತವೆ, ಅದರ ಮೇಲೆ ಕ್ಲಿಕ್ ಮಾಡಿದರೆ ಇನ್ನಷ್ಟು ಸೇವೆಗಳ ಆಪ್ಷನ್ಗಳು ಕಾಣುತ್ತವೆ.
● ಅದರಲ್ಲಿ ಇ-ಸ್ಥಿತಿ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಹೊಸ ಮತ್ತು ಹಾಲಿ ಕಾರ್ಡ್ ಗಳ ಸ್ಥಿತಿ ಎನ್ನುವ ಮತ್ತೊಂದು ಆಪ್ಷನ್ ಕಾಣುತ್ತದೆ ಅದನ್ನು ಸಹ ಕ್ಲಿಕ್ ಮಾಡಿ.
● ಆಗ ಮತ್ತೊಂದು ಪೇಜ್ ಕಾಣುತ್ತದೆ ಅದರಲ್ಲಿ ಹಲವಾರು ಲಿಂಕ್ ಗಳು ಇರುತ್ತವೆ. ನಿಮ್ಮ ಜಿಲ್ಲೆಯ ಅನುಸಾರ ಪ್ರತಿ ಜಿಲ್ಲೆಗೂ ಕೂಡ ಪ್ರತ್ಯೇಕ ಲಿಂಕ್ ಗಳು ಇರುತ್ತವೆ ನಿಮ್ಮ ಜಿಲ್ಲೆಯ ಯಾವುದು ಅದರ ಸಂಬಂಧಿತ ಲಿಂಕ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
● ಹೊಸ ಪಡಿತರ ಚೀಟಿ ಅರ್ಜಿ ಸ್ಥಿತಿ ಮತ್ತು ಹಾಲಿ ಪಡಿತರ ಚೀಟಿಯ ವಿವರಣೆ ಪಡೆಯುವ ಅಂತರ್ಜಾಲ ಪುಟ ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಎಡಭಾಗದ ಮೆನು ಅಲ್ಲಿ ಎರಡನೇ ಆಪ್ಷನ್ ನಲ್ಲಿ ಸ್ಟೇಟಸ್ ಆಫ್ ಆಪರೇಷನ್ ಕಾರ್ಡ್ ಎನ್ನುವ ಆಪ್ಶನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಇದರ ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಬಹುದು. ಮುಂದುವರಿಯಲು ವಿಥ್ OTP ಅಥವಾ ವಿಥೌಟ್ ಔಟ್ OTP ಎನ್ನುವ ಎರಡು ಆಪ್ಷನ್ ಇರುತ್ತದೆ.
● ವಿಥೌಟ್ OTP ಅಲ್ಲಿ ಚೆಕ್ ಮಾಡಿದರೆ ಎಷ್ಟು ಸದಸ್ಯರು ಕಾರ್ಡ್ ಅಲ್ಲಿ ಇದ್ದಾರೆ, ಎಷ್ಟು ಜನರ ಆಧಾರ್ ಕಾರ್ಡ್ ಲಿಂಕ್ ಆಗಿದೆ, ಎಷ್ಟು ಸದಸ್ಯರ ಇ-ಕೆವೈಸಿ ಆಗಿದೆ ಎನ್ನುವ ಸಂಖ್ಯೆ ಮಾತ್ರ ತೋರಿಸುತ್ತದೆ ವಿತ್ OTP ಜೊತೆ ನೋಡಿದರೆ ಪೂರ್ತಿ ವಿವರ ಬರುತ್ತದೆ.
● ವಿಥ್ OTP ಕ್ಲಿಕ್ ಮಾಡಿ ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳುತ್ತದೆ, ಅದನ್ನು ನಮೂದಿಸಿ GO ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
● ಮುಂದಿನ ಹಂತದಲ್ಲಿ ಸದಸ್ಯರ ಹೆಸರನ್ನು ಕೇಳುತ್ತದೆ ನೀವು ನಿಮ್ಮ ರೇಷನ್ ಕಾರ್ಡ್ ಅಲ್ಲಿ ಇರುವ ಯಾವ ಸದಸ್ಯರ ಹೆಸರನ್ನು ಸೆಲೆಕ್ಟ್ ಮಾಡುತ್ತಿರೋ ಅವರ ಆಧಾರ್ ಕಾರ್ಡ್ ಅಲ್ಲಿ ಇರುವ ಸಂಖ್ಯೆಗೆ OTP ಹೋಗುತ್ತದೆ ಮತ್ತು ಅದರ ಪಾಪ್ ಆಫ್ ಮೆಸೇಜ್ ಬರುತ್ತದೆ.
● OTP ಬಂದ ತಕ್ಷಣ ಅದನ್ನು ಎಂಟ್ರಿ ಮಾಡಿ GO ಎಂದು ಕ್ಲಿಕ್ ಮಾಡಿ.
● ಆಗ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಅಲ್ಲಿರುವ ಸದಸ್ಯರ ಹೆಸರು ಅವರ ಕೊನೆಯ ನಾಲ್ಕು ಆಧಾರ್ ಸಂಖ್ಯೆ ಮತ್ತು ಇ-ಕೆವೈಸಿ ಆಗಿದ್ದರೆ YES ಎಂದು ಅವರ ಹೆಸರಿನ ಸಾಲಿನ ಮುಂದೆ ಬರೆದಿರುತ್ತದೆ. ಒಂದು ವೇಳೆ NO ಎಂದು ಬಂದಿದ್ದರೆ ನೀವು ಅವರ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಿ ಈ ಕೆವೈಸಿ ಅಪ್ಡೇಟ್ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವ ವಿಧಾನ:-
● ಆಧಾರ್ ಕಾರ್ಡ್ ಲಿಂಕ್ ಮಾಡಲು ನೀವು ಮತ್ತೆ ಮೊದಲಿನಿಂದ ಪೇಜ್ ಓಪನ್ ಮಾಡಿ ಇ-ಸೇವೆಗಳು ಎಂದು ಇರುವಲ್ಲಿ ಕ್ಲಿಕ್ ಮಾಡಿ, ಎಡ ಭಾಗದಲ್ಲಿ ಬರುವ ಮೆನು ಬಾರ್ ಅಲ್ಲಿ UID ಲಿಂಕ್ ಮಾಡಿ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ. ಜಿಲ್ಲಾವಾರು ಪ್ರತ್ಯೇಕ ಲಿಂಕ್ ಗಳು ಇರುತ್ತವೆ, ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
● UID ಲಿಂಕ್ ಫಾರ್ RC ಮೆಂಬರ್ ಎನ್ನುವ ಒಪ್ಶನ್ ಕಾಣುತ್ತದೆ, ಅದನ್ನು ಓಕೆ ಮಾಡಿ.
● ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೇಳುತ್ತದೆ ಅದನ್ನು ಎಂಟ್ರಿ ಮಾಡಿ GO ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಗೆ OTP ಹೋಗಿರುತ್ತದೆ. ಅದನ್ನು ಹಾಕಿ GO ಕ್ಲಿಕ್ ಮಾಡಿ ವೆರಿಫಿಕೇಶನ್ ಸಕ್ಸಸ್ ಆಗಿರುವ ಮೆಸೇಜ್ ಬರಬೇಕು.
● ಆಗ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಗೋ ಕ್ಲಿಕ್ ಮಾಡಿದರೆ ಆಹಾರ ಇಲಾಖೆಯ ವೆಬ್ಸೈಟ್ ಹೇಳುತ್ತಿದೆ ಆಧಾರ್ ಲಿಂಕ್ ಸಕ್ಸಸ್ಫುಲ್ ಆಗಿದೆ ಎನ್ನುವ ಪಾಪ್ ಆಫ್ ಮೆಸೇಜ್ ಬರುತ್ತದೆ.
● ನೀವು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಯಲ್ಲೂ ಕೂಡ ಆಫ್ ಲೈನ್ ಅಲ್ಲಿ ಈ ರೀತಿ ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಬಹುದು.