IAS ಆಗುವ ಕನಸು ಬಹುಶಃ ಪದವಿ ಮುಗಿಸುವ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಾಮಾನ್ಯರಿಗೆ ಪದವಿ ಮುಗಿಸುವುದಕ್ಕೆ 20 ರಿಂದ 21 ವರ್ಷ ಬೇಕಾಗುತ್ತದೆ. ಅಂತಹದರಲ್ಲಿ ಆ ವಯಸ್ಸಿಗೆ ಏಷ್ಯಾದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡ UPSC ಭೇದಿಸಿ IAS ಆಫೀಸರ್ ಆಗುವುದು ಸುಲಭದ ಮಾತಲ್ಲ.
ಎಷ್ಟೋ ಜನ ಪದವಿಗೆ ತಯಾರಿ ಆರಂಭಿಸಿದಿಂದಲೇ ತಮ್ಮ ಕೊನೆಯ ಅಟ್ಟೆಂಪ್ಟ್ ವರೆಗೂ ಪ್ರಯತ್ನಿಸಿ ಕನಸನ್ನು ಕೈಗೂಡಿಸಿಕೊಳ್ಳಲಾರರು ಬಹುತೇಕ ಎಲ್ಲಾ ಭಾರತೀಯರ ಪಾಲಿಗೆ ಕಬ್ಬಿಣದ ಕಡಲೆಯಂತೆ ಕಾಣುವ ಈ ಪರೀಕ್ಷೆಯನ್ನು ಅತ್ಯಂತ ಕಿರಿಯ ವಯಸ್ಸಿಗೆ ಪಾಸ್ ಮಿಡಿದ ಸಾಧಕಿಯೊಬ್ಬರ ಬಗ್ಗೆ ಈ ಅಂಕಣದಲ್ಲಿ ಪರಿಚಯಲಿಸಲು ಇಚ್ಛಿಸುತ್ತಿದ್ದೇವೆ.
ಅಯೋಧ್ಯೆಯ ವಿದುಷಿ ಸಿಂಗ್ ಎನ್ನುವ ಯುವತಿಯು ಕೇವಲ ತನ್ನ 21 ವಯಸ್ಸಿನಲ್ಲಿಯೇ ಯಾವುದೇ ತರಬೇತಿ ಇಲ್ಲದೆ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆ ಎದುರಿಸಿ IAS ಆಗಿ ಆಯ್ಕೆ ಆಗಿದ್ದಾರೆ. ಆದರೆ ಕುತೂಹಲಕಾರಿಯಾಗಿ ವಿಷಯವೇನೆಂದರೆ, ಅವರು IAS ಬದಲು IFS ಆಗಲು ಬಯಸಿದ್ದಾರೆ. ಇವರಿಗೆ ಇದಕ್ಕೆ ಸ್ಪೂರ್ತಿ ಕುಟುಂಬದಲ್ಲಿಯೇ ಇತ್ತು. ಸಿಬಿ ಮುತ್ತಮ್ಮ ಭಾರತದ ಮೊದಲ ವೃತ್ತಿಜೀವನದ ರಾಜತಾಂತ್ರಿಕ ಮಹಿಳೆ.
ಈ ಸುದ್ದಿ ಓದಿ:- ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…
ಆ ದಿನಗಳಲ್ಲಿ ಮಹಿಳೆಯರಿಗೆ ರಾಯಭಾರಿ ಹುದ್ದೆ ಸಿಗುತ್ತಿರಲ್ಲಿಲ್ಲ, ಆದರೂ ಮುತ್ತಮ್ಮ ಅದಕ್ಕಾಗಿ ಸಾಕಷ್ಟು ಹೋರಾಟ ನಡೆಸಿ ಗೆದ್ದರು. ತಮ್ಮ ಕುಟುಂಬದವರೇ ಆತ ಸಿಬಿ ಮುತ್ತಮ್ಮ ರವರನ್ನು ಆದರ್ಶವಾಗಿಟ್ಟುಕೊಂಡು ವಿದುಷಿ IAS ಪಯಣ ಆರಂಭಿಸಿದ್ದರು. ತಮ್ಮ ಈ ಗೆಲುವಿನ ಪಾಲನ್ನು ಕುಟುಂಬದವರ ಜೊತೆ ಹಂಚಿಕೊಳ್ಳಲು ಅವರು ಮರೆಯುವುದಿಲ್ಲ.
ತಮ್ಮ ಈ ನಿರ್ಧಾರಕ್ಕೆ ಕುಟುಂಬವೇ ದೊಡ್ಡ ಶಕ್ತಿ ಎನ್ನುತ್ತಾರಿವರು. ನನ್ನ ಕುಟುಂಬ ನನಗಾಗಿ ಎಲ್ಲವನ್ನೂ ಮಾಡಿದೆ, ನಾನು ಮೊದಲ ಕೋವಿಡ್ ಲಾಕ್ಡೌನ್ನಲ್ಲಿ ಸಮಯದಲ್ಲಿ ಕಾಲೇಜು ಮುಗಿಸಿ ಮನೆಗೆ ಬಂದು ಪರೀಕ್ಷೆ ತಯಾರಿ ಆರಂಭಿಸಿದೆ.
ನನ್ನ ಮನೆಯವರು ನನಗೆ ಯಾವುದಕ್ಕೂ ತೊಂದರೆ ಕೊಡದೇ ಪ್ರೋತ್ಸಾಹಿಸಿದರು, ಓದುವುದು ನನ್ನ ಏಕೈಕ ಕೆಲಸವಾಗಿತ್ತು ನನ್ನ ಆಸಕ್ತಿ ಮತ್ತು ಏಕಾಗ್ರತೆಯಿಂದ ಇದು ಸಾಧ್ಯವಾಯಿತು ಎಂದು ಹೇಳಿಕೊಳ್ಳುತ್ತಾರೆ. ಉತ್ತರ ಪ್ರದೇಶದ ಅಯೋಧ್ಯೆ ಇವರ ವಾಸ್ತವ್ಯವಾಗಿದ್ದರು ಇವರು ಜನಿಸಿದ್ದು ರಾಜಸ್ಥಾನದ ಜೋಧಪುರದಲ್ಲಿ. ತಂದೆ UPCL ನಲ್ಲಿ ಇಂಜಿನಿಯರ್ ಆಗಿದ್ದರೆ, ತಾಯಿ Phd ಪಡೆದು ಶಾಲಾ ಶಿಕ್ಷಕಿಯಾಗಿದ್ದಾರೆ.
ಈ ಸುದ್ದಿ ಓದಿ:- ಯುವನಿಧಿ ಯೋಜನೆ ಫಲಾನುಭವಿಗಳೇ ಇಲ್ಲಿ ಗಮನಿಸಿ… ನಿಮಗೆ ಹಣ ಬರಬೇಕಾದ್ರೆ ಪ್ರತಿ ತಿಂಗಳು ಈ ದಾಖಲೆ ಸಲ್ಲಿಸಬೇಕು.!
ಕುಟುಂಬದ ಈ ಓದಿನ ವಾತಾವರಣ ಅವರನ್ನು ಬಾಲ್ಯದಿಂದಲೇ ಗಟ್ಟಿಗೊಳಿಸಿತ್ತು. ಬಾಲ್ಯದಲ್ಲಿ ಇತಿಹಾಸ ಇವರ ನೆಚ್ಚಿನ ವಿಷಯವಾಗಿದ್ದರೆ ಬೆಳೆಯುತ್ತಾ ಅರ್ಥಶಾಸ್ತ್ರವನ್ನು ಅರಿತುಕೊಂಡರು. ಬಾಲ್ಯದಿಂದಲೂ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದ ವಿದುಷಿ ಅದರ ಬಗ್ಗೆ ಸ್ಪಷ್ಟವಾದ ಮನಸ್ಥಿತಿಯನ್ನು ಹೊಂದಿದ್ದರು. ಹೆಸರಿಗೆ ತಕ್ಕ ಹಾಗೆ ಸಾಧನೆ ಮಾಡಿ ತೋರಿಸಿದರು.
ವಿದುಷಿ ಎನ್ನುವ ಹೆಸರಿನ ಅರ್ಥವು ಬುದ್ಧಿವಂತ ಮಹಿಳೆ ಎನ್ನುವ ಅರ್ಥವನ್ನು ಕೊಡುತ್ತದೆ. ಹಿಂದೂ ಧರ್ಮದಲ್ಲಿ ಜ್ಞಾನದ ದೇವತೆ ಎಂದು ಪರಿಗಣಿಸಲಾಗಿರುವ ಸರಸ್ವತಿ ದೇವಿಯ ಮತ್ತೊಂದು ಹೆಸರು ಎಂದು ಕರೆಯಲಾಗುತ್ತದೆ. ಬಹುಶಃ ಕುಟುಂಬಸ್ಥರು ಕೂಡ ಈ ಹೆಸರನ್ನು ಇಡುವ ಸಮಯದಲ್ಲಿ ತಮ್ಮ ಮಗಳು ಕೂಡ ಈ ಮಟ್ಟದ ಜ್ಞಾನವಂತೆ ಆಗುತ್ತಾಳೆ ಬುದ್ಧಿವಂತೆ ಆಗುತ್ತಾಳೆ ಎಂದು ಖಾತರಿ ಇಟ್ಟುಕೊಂಡಿರಲಿಲ್ಲ ಎನಿಸುತ್ತದೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಮಲಗಿರುವ ಯುವ ಜನತೆ ನಡುವೆ ಅಪ್ರತಿಮ ಸುಂದರಿ ಆಗಿದ್ದರು ಕೂಡ ವಿದುಷಿ ಸಿಂಗ್ ಮನೋರಂಜನೆಗಳಿಗೆ ಮನಸೋಲದೆ ತಾವು ಬಾಲ್ಯದಿಂದಲೂ ಕಟ್ಟಿದ್ದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.