ಕೇಂದ್ರ ಸರ್ಕಾರ ನೌಕರರಿಗೆ ಗ್ರಾಚ್ಯುಟಿ, ಪಿಂಚಣಿ ಹಾಗೂ EPF ಕುರಿತ ಹೊಸದೊಂದು ನಿಯಮ ಜಾರಿಗೆ ತಂದಿದೆ. ಈ ಆದೇಶದ ಪ್ರಕಾರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಮತ್ತು ಸರಕು ಮತ್ತು ಸೇವಾ ತೆರಿಗೆ (GST) ನ್ಯಾಯಮಂಡಳಿಯ ಸದಸ್ಯರಿಗೆ ಗ್ರಾಚ್ಯುಟಿ, ಪಿಂಚಣಿ ಮತ್ತು EPF ನ ಪ್ರಯೋಜನಗಳನ್ನು ಸಿಗುವುದಿಲ್ಲ.
ಈ ತಿದ್ದುಪಡಿಯನ್ನು ನಿಯಮ 13 ರ ಅಡಿಯಲ್ಲಿ ಮಾಡಲಾಗಿದೆ ಒಂದೇ ಸಮಯದಲ್ಲಿ ಎರಡು ಸೇವೆಗಳಲ್ಲಿ ಇರುವ ನೌಕರರಿಗೆ ಇದು ಶಾ’ಕಿಂ’ಗ್ ನ್ಯೂಸ್ ಆಗಿದ್ದು ಇನ್ನು ಮುಂದೆ ಈವರೆಗೂ ಇದ್ದ ಲಾಭ ತಪ್ಪಿ ಹೋಗಲಿದೆ. ಹೆಚ್ಚುವರಿಯಾಗಿ, ಟ್ರಿಬ್ಯೂನಲ್ ಸದಸ್ಯತ್ವವನ್ನು ಪೂರ್ಣ ಸಮಯದ ಉದ್ಯೋಗಿ ವರ್ಗದಲ್ಲಿ ಇರಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಅವರು ಎರಡರಲ್ಲಿ ಯಾವುದಾದರೂ ಒಂದು ಸೇವೆಗೆ ರಾಜೀನಾಮೆ ನೀಡಬೇಕು.
ಈವರೆಗೂ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರನ್ನು ಕೆಲವೊಮ್ಮೆ ತಮ್ಮ ಅಸ್ತಿತ್ವದಲ್ಲಿರುವ ಸೇವೆಯಲ್ಲಿರುವಾಗಲೇ ಅಧ್ಯಕ್ಷರು ಅಥವಾ ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಅದು ಸಾಧ್ಯವಾಗದೆ ಹೋಗಬಹುದು.
ಹಿಂದೆ ಅವರು ಪಿಂಚಣಿ ಮತ್ತು ಇತರ ಪ್ರಯೋಜನಗಳಿಗೆ ಅರ್ಹರಾಗಿದ್ದರು, ಆದರೆ ಈಗ ಯಾವುದೇ ನ್ಯಾಯಾಲಯದ ನ್ಯಾಯಾಧೀಶರು ಟ್ರಿಬ್ಯೂನಲ್‌ನ ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ನೇಮಕಗೊಂಡರೆ, ಅವರು ಟ್ರಿಬ್ಯೂನಲ್‌ಗೆ ಸೇರುವ ಮೊದಲು ರಾಜೀನಾಮೆ ಅಥವಾ ಸ್ವಯಂಪ್ರೇರಿತ ಸೇವೆಗೆ ರಾಜೀನಾಮೆ ನೀಡಬೇಕು ಅಥವಾ ನಿವೃತ್ತಿ ತೆಗೆದುಕೊಳ್ಳಬೇಕಾಗುತ್ತದೆ.
ಒಂದೇ ಸಮಯದಲ್ಲಿ ಎರಡರ ಲಾಭವನ್ನು ಪಡೆಯಲು ಇದ್ದ ಅನುಕೂಲತೆಯನ್ನು ಈ ಆದೇಶ ಮುರಿಯಲಿದೆ. ಬಾಕಿ ಇರುವ ತೆರಿಗೆ ಪ್ರಕರಣಗಳು ಮತ್ತು ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಕೇಂದ್ರವು GST ಮೇಲ್ಮನವಿ ನ್ಯಾಯಾಧಿಕರಣವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಇರುವಾಗಲೇ ಈ ಬದಲಾವಣೆಯು ಬಂದಿದೆ ಎಂದು ನಿಯಮ ತಿದ್ದುಪಡಿ ಮಾಡಿರುವ ನ್ಯಾಯಮಂಡಳಿ ನಿಯಮಗಳು ಹೇಳುತ್ತಿವೆ.
ಯಾವುದೇ ಒಬ್ಬ ಸದಸ್ಯ ಪಿಂಚಣಿ ಪಡೆಯಬಹುದು ಅಥವಾ ಗ್ರಾಚ್ಯುಟಿ EPF ಈ ರೀತಿಯ ಒಂದು ಅನುಕೂಲತೆಯನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಇನ್ನು ಮುಂದೆ ಹಿಂದಿನಂತೆ ಒಟ್ಟೊಟ್ಟಿಗೆ ಎಲ್ಲ ಅನುಕೂಲತೆಯನ್ನು ಬಯಸುವವರಿಗೆ ಅದು ಸಾಧ್ಯವಾಗುವುದಿಲ್ಲ. ಇವುಗಳಲ್ಲಿ ಅವರು ಆರಿಸಿಕೊಳ್ಳುವ ವೃತ್ತಿಗೆ ಸಂಬಂಧಿಸಿದಂತೆ ಒಂದು ಆಯ್ಕೆಯನ್ನು ಮಾತ್ರ ಅವರು ಪಡೆಯಲು ಅವಕಾಶ ಇರುತ್ತದೆ.
ಸರ್ಕಾರದ ಈ ನಿಲವು ಪ್ರಶಂಸನೀಯವಾಗಿದ್ದು ಈ ಒಂದು ಆದೇಶಕ್ಕೆ ಅನೇಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಹೊಗಳಿಕೆ ಮಾತು ಕೂಡ ಕೇಳಿ ಬಂದಿದೆ. ಸಾಮಾನ್ಯರಿಗೆ ಈ ನಿಯಮ ಮೊದಲಿನಿಂದಲೂ ಕೂಡ ಇದೆ ಸಂಘಟಿತ ವಲಯ ಅಸಂಘಟಿತ ವಲಯ ಎನ್ನುವ ವ್ಯತ್ಯಾಸವಿದ್ದು ಒಬ್ಬರಿಗೆ ಎಲ್ಲಾ ಅನುಕೂಲತೆಯು ಸಿಗುವುದಿಲ್ಲ.
ಆದರೆ ಈ ಹಿಂದೆ ಈ ಮೇಲೆ ತಿಳಿಸಿದ ವಿಭಾಗಗಳಲ್ಲಿ ಇದ್ದ ಅನುಕೂಲತೆಯು ಅಸಮಾನತೆ ಎನ್ನುವ ಭಾವನೆ ಅನೇಕರಿಗೆ ಇತ್ತು. ಈಗ ಸರ್ಕಾರ ಅಧಿಕೃತವಾಗಿ ಈ ಕುರಿತು ಆದೇಶ ಹೊರಡಿಸಿರುವುದು ಬಹಳ ಉತ್ತಮ ನಡೆಯಾಗಿದೆ.
ಸರ್ಕಾರದ ಈ ಆದೇಶದ ಕುರಿತು ಕೂಲಂಕುಶವಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಇಚ್ಛಿಸಿದರೆ ಸರ್ಕಾರ ಅಧಿಕೃತ ವೆಬ್ ಸೈಟ್ಗಳಿಗೆ ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ ಮತ್ತು ಅನೇಕರಿಗೆ ಇದು ಬಹಳ ಉಪಯುಕ್ತವಾದ ಮಾಹಿತಿ ಆಗಿದ್ದು ಆ ಕಾರಣಕ್ಕಾಗಿ ಇದನ್ನು ತಪ್ಪದೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.